BBK 11: ಸುದೀಪ್ ಮುಂದೆ ಜಗದೀಶ್ ಬಗ್ಗೆ ಉದ್ದುದ್ದ ದೂರು ನೀಡಿದ ಸದಸ್ಯರು!
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈ ಒಂದು ವಾರದಿಂದ ಸದಸ್ಯರ ಅವಾಂತರ, ಅವತಾರ, ಜಗಳ ನೋಡಿ ನೋಡಿ ಬೇಸತ್ತಿದ್ದ ಬಿಗ್ ಬಾಸ್ ವೀಕ್ಷಕರು ಶನಿವಾರ ಯಾವಾಗ ಬರುತ್ತೋ ಎಂದು ಕಾಯುತ್ತಿದ್ದರು. ಯಾಕಂದ್ರೆ ಇಡೀ ಮನೆ ರಣರಂಗವಾಗಿತ್ತು. ಒಬ್ಬೊಬ್ಬರು ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದರು. ಹೀಗಾಗಿ ಸುದೀಪ್ ಅವರ ಪಂಚಾಯ್ತಿಯಲ್ಲಿ ಯಾರಿಗೆಲ್ಲಾ ಕ್ಲಾಸ್ ಸಿಗಲಿದೆ ಎಂಬ ಕುತೂಹಲದಿಂದ ಕಾಯುತ್ತಿದ್ದರು.
ನಿರೀಕ್ಷೆಯಂತೆ ಕಿಚ್ಚನ ಪಂಚಾಯ್ತಿಯಲ್ಲಿ ಒಂದಷ್ಟು ಪ್ರಶ್ನೆಗಳಿಗೂ ಉತ್ತರ ಪಡೆಯುವ ಪ್ರಯತ್ನವಾಗಿದೆ. ಅದರಲ್ಲೂ ಜಗದೀಶ್ ಅವರ ವಿಚಾರದಲ್ಲಿ ಸುದೀಪ್ ಅವರು ಮನೆ ಮಂದಿಗೂ ಬುದ್ದಿ ಹೇಳಿದ್ದಾರೆ. ಅವರು ಪ್ರವೋಕ್ ಮಾಡಿದಾಗ ನೀವ್ಯಾಕೆ ಆಗಬೇಕಿತ್ತು ಎಂದು ಕಿವಿ ಮಾತು ಹೇಳಿದ್ದಾರೆ. ಹಾಗೇ ಜಗದೀಶ್ ಅವರ ಬಗ್ಗೆ ಒಬ್ಬೊಬ್ಬರಿಂದಾನೇ ಅಭಿಪ್ರಾಯ ತಿಳಿದುಕೊಂಡಿದ್ದಾರೆ.

ಅನುಷಾ ರೈ ಹೇಳಿದ್ದೇನು..?
ಕಿಚ್ಚ ಸುದೀಪ್ ತನ್ನ ಪಂಚಾಯ್ತಿಯಲ್ಲಿ ಜಗದೀಶ್ ವಿಚಾರವನ್ನು ತೆಗೆದಿದ್ದಾರೆ. ಮನೆಯ ಪ್ರತಿಯೊಬ್ಬರ ಬಳಿ ಜಗದೀಶ್ ಬಗ್ಗೆ ಕೇಳಿದ್ದಾರೆ. ಅನುಷಾ ರೈ ತಮ್ಮ ಅಭಿಪ್ರಾಯ ಹೇಳಿ, ಅವರು ಒಳ್ಳೆಯ ಮೂಡಲ್ಲಿದ್ದಾಗ ಎಲ್ಲಾ ಮಾತುಗಳನ್ನು ಕೇಳುತ್ತಿದ್ದರು. ಆದರೆ ಅವರಿಗೆ ಕೋಪ ಬಂದಾಗ ರೈಸ್ ಆಗ್ತಾ ಇದ್ರು. ಅದನ್ನು ನಾನು ಅರ್ಥ ಮಾಡಿಕೊಂಡಿದ್ದ ಕಾರಣ, ಕೋಪದಲ್ಲಿದ್ದಾಗ ದೂರ ಇರುತ್ತಿದ್ದೆ ಎಂದಿದ್ದಾರೆ. ಮೋಕ್ಷಿತಾ ಮಾತನಾಡಿ, ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಾ ಇದ್ರು. ಒಮ್ಮೊಮ್ಮೆ ಬಾತ್ ರೂಮ್ ಎಲ್ಲಾ ಒಬ್ಬರೇ ಕ್ಲೀನ್ ಮಾಡ್ತಾ ಇದ್ರು. ಆ ಮುಖವನ್ನು ನೋಡಿದ್ದೀವಿ, ಈ ಮುಖವನ್ನು ನೋಡಿದ್ದೀವಿ ಎಂದಿದ್ದಾರೆ.
ನನಗೂ ಖುಷಿ ಎಂದ ಐಶ್ವರ್ಯಾ
ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಜಗಳವಾಗಿದ್ದು ಉಗ್ರಂ ಮಂಜು ಹಾಗೂ ಲಾಯರ್ ಜಗದೀಶ್ ನಡುವೆ. ಇಬ್ಬರ ನಡುವಿನ ಕೋಪ ಅತಿರೇಕಕ್ಕೆ ಹೋಗಿರುವುದು ಇದೆ. ಇದೀಗ ಕಿಚ್ಚನ ಮುಂದೆ ಹೇಳಿರುವ ಉಗ್ರಂ ಮಂಜು, ಆ ವ್ಯಕ್ತಿಯ ನಡೆ ಸರಿ ಇರಲಿಲ್ಲ. ಇಲ್ಲಿಂದ ಹೋಗಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದಿದ್ದಾರೆ. ಹಾಗೇ ಐಶ್ವರ್ಯಾ ಕೂಡ, ಆರಂಭದಲ್ಲಿ ನನ್ನ ಮಗಳೇ ಅಂತಾನೇ ಅಂತಾ ಇದ್ರು. ಆದರೆ ಅವರು ಹೆಣ್ಣು ಮಕ್ಕಳ ವಿಚಾರದಲ್ಲಿ ತುಂಬಾ ಕೆಟ್ಟದಾಗಿ ಮಾತಾಡ್ತಾ ಇದ್ರು ಎಂಬ ಮಾತನ್ನ ಹೇಳಿದ್ದಾರೆ.
ಪಂಚಾಯ್ತಿ ಕಟ್ಟೇಲಿ ನ್ಯಾಯ ಎತ್ತಿ ಹಿಡಿದ ಕಿಚ್ಚ!
— Colors Kannada (@ColorsKannada) October 19, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/hlpGSm2BvY
ಹೆಣ್ಣು ಮಕ್ಕಳಿಗೆ ಕೆಟ್ಟ ಪದದಿಂದ
ಅದರಲ್ಲೂ ಜಗದೀಶ್ ಹಾಗೂ ಮಾನಸ ನಡುವೆ ದೊಡ್ಡ ಯುದ್ಧವೇ ನಡೆದಿತ್ತು. ಜಗದೀಶ್ ಬಗ್ಗೆ ಮಾನಸ ಬಳಿ ಕೇಳಿದಾಗ, 'ಅವರಿಗೆ ಆರಂಭದಿಂದಾನೂ ನಾನೇ ಟಾರ್ಗೆಟ್ ಆಗಿದ್ದೆ. ಬಹುತೇಕರ ವಿಚಾರದಲ್ಲಿ ಪರ್ಸನಲಿ ಟಾರ್ಗೆಟ್ ಮಾಡ್ತಾ ಇದ್ರು. ಟ್ರಿಗರ್ ಮಾಡೋದಕ್ಕೆ ಏನು ಬೇಕೋ ಅದನ್ನ ಮಾಡ್ತಾ ಇದ್ರು. ಯಾರಾದರೂ ಗಲಾಟೆ ಮಾಡ್ಲಿ ಅಂತಾನೇ ಕಾಯ್ತಾ ಇದ್ರು. ತುಂಬಾ ಕೆಟ್ಟದಾಗಿ ಮಾತಾಡ್ತಾ ಇದ್ರು' ಎಂದಿದ್ದಾರೆ. ಗೌತಮಿ ಕೂಡ ಜಗದೀಶ್ ವಿರುದ್ಧವೇ ಮಾತನಾಡಿದ್ದು, ಸರಿಯಾದ ಶಿಕ್ಷೆಯಾಗಿದೆ ಎಂದಿದ್ದಾರೆ. ಕೆಟ್ಟ ಮಾತಲ್ಲಿ ಬೈಯ್ಯೋದು, ಸಾರಿ ಕೇಳೋದು ಮಾಡ್ತಾ ಇದ್ರು. ಅವರು ಹೋಗಿದ್ದು ಮನೆಗೆ ಒಳ್ಳೆದಾಯ್ತು ಎಂದು ಶಿಶಿರ್ ಕೂಡ ಹೇಳಿದ್ದಾರೆ.
ಲಾಯರ್ ಜಗದೀಶ್ ಪರ ಫ್ಯಾನ್ಸ್
ಜಗದೀಶ್ ಮನೆಯಿಂದ ಎಲಿಮಿನೇಟ್ ಆದ ಮೇಲೆ ಅವರ ಫಾಲೋವರ್ಸ್, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರುವುದಕ್ಕೆ ಶುರು ಮಾಡಿದರು. ಜಗದೀಶ್ ಅವರನ್ನು ಟಾರ್ಗೆಟ್ ಮಾಡಿದರು ಎಂದೆಲ್ಲಾ ಹೇಳಿದರು. ಆದರೆ ಸುದೀಪ್ ಪಂಚಾಯ್ತಿಯಲ್ಲಿ ಹೆಣ್ಣು ಮಕ್ಕಳು ತಮಗಾದ ನೋವನ್ನ ಹೇಳಿಕೊಂಡಿದ್ದಾರೆ.


Click it and Unblock the Notifications











