BBK 11 : ಸ್ಪರ್ಧಿಗಳ ಜಗಳ.. ನಾ ಆಟಕ್ಕಿಲ್ಲ.. ನಾ ಕ್ಯಾಪ್ಟನ್ ಆಗಲ್ಲ ಎಂದ ಹನುಮಂತ..!

By ಎಸ್ ಸುಮಂತ್

ಈ ಬಾರಿಯ ಬಿಗ್ ಬಾಸ್ ಸೀಸನ್ ಹೇಳಿಕೊಳ್ಳುವಷ್ಟು ಫ್ಯಾನ್ ಫಾಲೋವರ್ಸ್ ನ ಪಡೆದಿಲ್ಲ. ಇಷ್ಟು ಸೀಸನ್ ನೋಡಿಕೊಂಡು ಬಂದವರಲ್ಲಿ ಈ ಸೀಸನ್ ನೋಡದೆ ಹೋದವರು ಇದ್ದಾರೆ. ಇದೇ ಸೀಸನ್ ಮೊದಲ ವಾರದಲ್ಲೇ ಟಿಆರ್ಪಿ ಕಿತ್ಕೊಂಡು ಹೋಗಿತ್ತು. ಆದರೆ ನೋಡ್ತಾ ನೋಡ್ತಾ ಈ ಸೀಸನ್ ಹಲವರಿಗೆ ಬೇಸರ‌ ಮೂಡಿಸಿದೆ. ಬಿಗ್ ಬಾಸ್ ನಲ್ಲಿ ಬರೀ ಹೊಡೆದಾಟ, ಜಗಳ ಇದೇ ಆಗಿದೆ. ಈ ಜಗಳದಿಂದಾನೇ ಇಬ್ಬರು ಸ್ಪರ್ಧಿಗಳು ಔಟ್ ಕೂಡ ಆಗಿದ್ದಾರೆ.

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಇರುತ್ತೆ. ಆದರೆ ಈ ಬಾರಿಯ ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಬೇಗ ಆಗಿದೆ. ಸರಿಗಮಪ ಶೋ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದಂತ ಹನುಮಂತ ಈಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಮುಗ್ಧತೆಯ ಪ್ರತೀಕ ಈ ಹನುಮಂತ ಅಂತಾನೇ ಹೇಳಬಹುದು. ಆದರೆ ಹನುಮಂತನನ್ನು ಕಂಡು ಮನೆಯವರು ಕೆಂಡಕಾರುವುದಕ್ಕೆ ಶುರು ಮಾಡಿದ್ದಾರೆ.

Colors kannada bigboss Written Update on Bigboss season 11 October 21st episode

ರಿಸ್ಕ್ ಇಲ್ಲದೆ ಕ್ಯಾಪ್ಟನ್ ಆದ ಹನುಮಂತು

ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಹನಮಂತ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಆರಂಭದಲ್ಲಿಯೇ ಬಿಗ್ ಬಾಸ್ ಹನುಮಂತನನ್ನು ಕ್ಯಾಪ್ಟನ್ ಆಗಿ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕೆಂದರೆ ಬಿಗ್ ಬಾಸ್ ಕೊಡುವ ಟಾಸ್ಕ್ ಗಳಲ್ಲಿ ಭಾಗಿಯಾಗಲೇಬೇಕು. ಹೀಗಾಗಿ ಏನು ಮಾಡದೆ ಈಸಿಯಾಗಿ ಕ್ಯಾಪ್ಟನ್ ಆದಂತ ಹನುಮಂತನನ್ನು ಕಂಡು ಮನೆ ಮಂದಿ ಕೆಂಡಾಮಂಡಲರಾಗಿದ್ದಾರೆ.

ನಂಬರ್ ಗೇಮ್ ನಲ್ಲಿ ಯಾರಿಗೆ ಎಷ್ಟನೇ ಸ್ಥಾನ

ಬಿಗ್ ಬಾಸ್ ಒಂದು ನಂಬರ್ ಗೇಮ್ ಅನ್ನ ಆಡಿಸಿದೆ. ಅದರಲ್ಲಿ ಯಾರಿಗೆ ಯಾವ ಸ್ಥಾನ ಕೊಡಬೇಕು ಎಂಬುದನ್ನು ಹನುಮಂತು ನಿರ್ಧಾರ ಮಾಡಬೇಕಿದೆ. ಅದನ್ನೇ ಹನುಮಂತು ಮಾಡಿದ್ದಾರೆ. ಅದರಂತೆ ಹನುಮಂತು ಶಿಶಿರ್ ಮೊದಲು, ಸತ್ಯ ಸೆಕೆಂಡ್, ಮೋಕ್ಷಿತಾ, ಐಶ್ವರ್ಯಾ, ಧನಂಜಯ್, ಉಗ್ರಂ ಮಂಜು, ಭವ್ಯಾ, ಅನುಷಾ ರೈ, ಧರ್ಮ, ಮಾನಸ, ಹಂಸ, ತ್ರಿವಿಕ್ರಮ್, ಚೈತ್ರಾ ಹಾಗೂ ಸುರೇಶ್ ಹೀಗೆ ನಿಲ್ಲಿಸಿದ್ದಾರೆ.

ಕೆಂಡಕಾರಿದ ಧರ್ಮ, ಅನುಷಾ, ವಿವರಣೆ ಕೇಳಿದ ಚೈತ್ರಾ

ಈ ಸ್ಥಾನ ಕೊಟ್ಟ ಮೇಲೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅನುಷಾ ರೈ ತನಗೆ ಸಿಕ್ಕ 7 ನಂಬರ್ ಬಗ್ಗೆ ಯಾಕೆ ಎಂಬ ಪ್ರಶ್ನೆ ಎತ್ತಿದ್ದಾರೆ. ಇನ್ನು ಧರ್ಮ ಕೂಡ ನಾನಿಲ್ಲಿ ಲವ್ ಮಾಡ್ಕೊಂಡು, ಚಪಾತಿ ಮಾಡೋದಕ್ಕೆ ಬಂದಿಲ್ಲ ಎಂದಿದ್ದಾರೆ.ಇನ್ನು ಚೈತ್ರಾ ಹೌಹಾರಿ ಬಿದ್ದಿದ್ದಾರೆ. 13 ನಂಬರ್ ಚೈತ್ರಾಗೆ ಕೋಪ ತರಿಸಿದೆ.

ತಲೆ ಮೇಲೆ ಕೈಹೊತ್ತು ಕುಳಿತ ಹನುಮಂತ

ಮನೆ ಮಂದಿಯ ಜಗಳ ನೋಡಿ ಹನುಮಂತು ಸುಸ್ತಾಗಿದ್ದಾರೆ. ತನಗೆ ಅನ್ನಿಸಿದ್ದನ್ನು ಆಯ್ಕೆ ಮಾಡಿ ಆಗಿದೆ. ಬಿಗ್ ಬಾಸ್ ಮನೆ ಮಂದಿಯ ಕಾಟಕ್ಕೆ ತಲೆ ಮೇಲೆ ಕೈ ಹೊತ್ತು ಕುಳಿತ ಹನುಮಂತು, 'ಜಗಳ ಹತ್ತೈತೆ ಬಂದ್ರಪ್ಪ ಇಲ್ಲಿ. ಅವ್ವಾ.. ಹಿಂಗ್ ಜಗಳ ಆಡ್ತಾ ಇದ್ರೆ ನಾನ ಬರ್ತಿದ್ದೆ ಇಲ್ಲ ಇಲ್ಲಿ. ನಾ ಈ ಆಟದಲ್ಲಿಲ್ಲ ಕ್ಯಾನ್ಸಲ್.. ಕ್ಯಾಪ್ಟನ್ ಕ್ಯಾನ್ಸಲ್' ಅಂತ ಬಿಗ್ ಬಾಸ್ ಕ್ಯಾಮರಾಗೆ ತಿಳಿಸಿದ್ದಾರೆ. ಸ್ಪರ್ಧಿಗಳ ವಿಚಿತ್ರ ನಡವಳಿಕೆಗೆ ಹನುಮಂತು ತಲೆ ಕೆಡಿಸಿಕೊಂಡು ಕೂತವ್ರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X