BBK10: ಗಂಧರ್ವರು- ರಾಕ್ಷಸರು ತಂಡಗಳ ನಡುವೆ ಭಾರೀ ಕಿರಿಕ್: ಸ್ನೇಹಿತ್ ವಿರುದ್ಧ ಮನೆಮಂದಿ ಕೆಂಡಾಮಂಡಲ

By Shruthi Harishgowda

ಬಿಗ್ ಬಾಸ್ ಕನ್ನಡ ಸಂಥಿಂಗ್ ಸ್ಪೆಷಲ್ ಸೀಸನ್ ಒಂಭತ್ತನೇ ವಾರಕ್ಕೆ ಕಾಲಿಟ್ಟಿದೆ. ವಾರದ ಮೊದಲ ಟಾಸ್ಕ್‌ಗಳು ಎದುರಾಗಿತ್ತು. ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿತ್ತು.ಈಗ ಹೊಸ ಟಾಸ್ಕ್ ನೀಡಿದ್ದು ಗಂಧರ್ವರು ಹಾಗೂ ರಾಕ್ಷಸರ ನಡುವೆ ದೊಡ್ಡದೊಂದು ಕಂದಕ ಸೃಷ್ಟಿ ಆಗಿದೆ. ರಾಕ್ಷಸರು, ಗಂಧರ್ವರ ವಿರುದ್ಧ ಹೋರಾಡಿ ಟಾಸ್ಕ್ ಗೆಲ್ಲುವ ಅನಿವಾರ್ಯತೆ ಎದುರಾಗಿದೆ.

ಸ್ನೇಹಿತ್ ಕ್ಯಾಪ್ಟನ್ ಆಗಿದ್ದು, ರಾಕ್ಷಸರು ಮಾಡುತ್ತಿರುವುದು ಸರಿಯಿಲ್ಲ ಎಂದಾಗ ಅದನ್ನು ಖಂಡಿಸುವ ಅಧಿಕಾರವನ್ನು ಕೊಟ್ಟಿದೆ . ಆದರೆ ಸ್ನೇಹಿತ್ ಇಲ್ಲಿ ಪಕ್ಷಪಾತ ಮಾಡುತ್ತಾ ಇರುವುದು ಕಂಡು ಬರುತ್ತಿದೆ. ಸ್ನೇಹಿತ್ ರಾಕ್ಷಸರ ಗಣಕ್ಕೆ ಮಾಡಿದ ಮೋಸಕ್ಕೆ ರೀವೇಂಜ್ ತೀರಿಸಿಕೊಳ್ಳಲೇಬೇಕು ಎಂದು ಪಣತೊಟ್ಟಂತೆ ಇದೆ. ಕಾರ್ತಿಕ್ ಇದಕ್ಕಾಗಿ ಯಾವುದೇ ಟಾಸ್ಕ್ ನೀಡಿದರು ಆಗ್ರೆಸ್ಸೀವ್ ಆಗಿ ಆಟವಾಡಿ ತಂಡದ ಗೆಲುವಿಗೆ ಕಾರಣವಾಗಬೇಕು ಎಂದುಕೊಂಡಿದ್ದಾರೆ.

Colors kannada bigboss Written Update on new Bigboss season 10

ಸಂಗೀತಾ, ತನಿಷಾ, ಕಾರ್ತಿಕ್ ಮೂವರು ಬಹಳ ಬುದ್ದಿವಂತಿಕೆಯಿಂದ ಆಟವಾಡುತ್ತಾ ಇದ್ದಾರೆ.‌ ಹೇಗಾದರೂ ಮಾಡಿ ಸ್ಟ್ರಾಂಗ್ ಟೀಂ ಎನಿಸಿಕೊಂಡಿರುವ ಟೀಂಗೆ ಚಳ್ಳೆಹಣ್ಣು ತಿನ್ನಿಸಲೇಬೇಕು ಎಂದು ಕಾಯುತ್ತಿದ್ದಾರೆ. ಈಗ ರಾಕ್ಷಸರು ಏನೇ ಮಾಡಿದರು ಗಂಧರ್ವರು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ನಮಗೂ ಕಾಲ ಬರುತ್ತದೆ ಎಂದು ವಿನಯ್ ಸಹ ಕಾಯುತ್ತಾ ಇದ್ದಾರೆ.‌

ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರಿಗೆ ಹೊಸ ಟಾಸ್ಕ್ ‌ನೀಡಲಾಗಿದೆ. ಕುರ್ಚಿಯ ಮೇಲೆ ಕುಳಿತುಕೊಳ್ಳುವ ಗಂಧರ್ವರನ್ನು ಮೇಲೆ ಎಬ್ಬಿಸುವ ಕೆಲಸವನ್ನು ರಾಕ್ಷಸರು ಮಾಡಬೇಕಾಗಿದೆ. ‌ಮೊದಲೇ ನಾವೇ ಗೆಲ್ಲಬೇಕು ಎಂದುಕೊಂಡಿರುವ ಗಂಧರ್ವರು ಸ್ಟ್ರಾಂಗ್ ಎನಿಸಿಕೊಂಡಿರುವ ಮೈಕಲ್ , ವಿನಯ್, ವರ್ತೂರು ಸಂತೋಷ್ ಹಾಗೂ ಪವಿ ಮೇಲೆ ನೀರನ್ನು ಎರಚುತ್ತಿದ್ದಾರೆ. ಈ ವೇಳೆ ಸ್ನೇಹಿತ್ ತಗೆದುಕೊಂಡ ನಿರ್ಧಾರ ಕಾರ್ತಿಕ್ ಹಾಗೂ ಸಂಗೀತಾರನ್ನು ಕೆರಳಿಸಿದೆ. ಮನೆಯ ಕ್ಯಾಪ್ಟನ್ ಸ್ನೇಹಿತ್ ವಿರುದ್ದ ಜಗಳಕ್ಕೆ ಸಂಗೀತಾ ಹಾಗೂ ಕಾರ್ತಿಕ್ ನಿಂತುಕೊಂಡಿದ್ದು ಜೋರಾಗಿ ಬೈದಾಡಿಕೊಂಡಿದ್ದಾರೆ.

ಟಾಸ್ಕ್ ಗೆಲ್ಲುತ್ತಾರಾ ರಾಕ್ಷಸರ ಟೀಂ?

ರಾಕ್ಷಸ ಗಣ ಹೇಗಾದರೂ ಮಾಡಿ ಟಾಸ್ಕ್ ಗೆಲ್ಲಲೇಬೇಕು ಎಂದು ಪಣತೊಟ್ಟು ನಿಂತಿದೆ. ಶಕ್ತಿ ಮೀರಿ ಶ್ರಮವನ್ನು ಹಾಕುತ್ತಾ ಎದುರಾಳಿ ತಂಡವನ್ನು ಸೋಲಿಸಲು ಸಜ್ಜಾಗಿದೆ. ಈಗ ಹೊಸ ಟಾಸ್ಕ್ ಕೊಟ್ಟಿದ್ದು ಕಲರ್ಸ್ ಕನ್ನಡ ಪ್ರೋವೋ ರಿಲೀಸ್ ಮಾಡಿದೆ. ಅದರಲ್ಲಿ ಗಂಧರ್ವರು ಕುಳಿತುಕೊಂಡಿರುವ ಚೇರ್‌ ಮೇಲಿಂದ ರಾಕ್ಷಸರು ಎದ್ದೇಳಿಸಬೇಕಾಗಿದೆ. ಈ ವೇಳೆ ಕಾರ್ತಿಕ್ ಜೋರಾಗಿ ಎಲ್ಲರ ಮೇಲೂ ನೀರು ಎರಚಿದ್ದಾರೆ. ಇದೇ ವೇಳೆ ಗಂಧರ್ವರ ಟೀಮ್‌ನಲ್ಲಿದ್ದ ಒಬ್ಬರು ಸ್ವಲ್ಪ ಮೇಲಿದ್ದಿದ್ದಾರೆ. ಕಾರ್ತಿಕ್ ಮೇಲೆದ್ದರು ಎಂದು ವಾದ ಮಾಡಿದರು ಕೂಡ ಸ್ನೇಹಿತ್ ಮೇಲೆ ಹೇಳುವಂತೆ ಮಾಡಬೇಕು ಎಂದು ಹೇಳಿದ್ದಾರೆ.

Colors kannada bigboss Written Update on new Bigboss season 10

ಸ್ನೇಹಿತ್ ತಗೆದುಕೊಂಡ ನಿರ್ಧಾರಕ್ಕೆ ಬೇಸರ

ರಕ್ಷಸರ ಟೀಮ್‌ನಲ್ಲಿರುವವರು ಕೋಪ ತೋರಿಸಿದ್ದಾರೆ. ಸ್ನೇಹಿತ್ ಮಾಡುತ್ತಿರುವುದೆಲ್ಲವೂ ಮೋಸ ನಾವು ಹೇಳಿದಂತೆ ಯಾವುದನ್ನು ಮಾಡುತ್ತಿಲ್ಲ, ತಮ್ಮ ಟೀಮಿಗೆ ಫೇವರ್ ಆಗಿ ಆಟ ಆಡಿಸುತ್ತಾ ಇದ್ದಾರೆ, ಇದು ಅನ್ ಫೇರ್ ಎಂದೆಲ್ಲಾ ಕಿರುಚಾಡಿದ್ದಾರೆ. ಕಾರ್ತಿಕ್ ಒಂದು ಕೈ ಮುಂದೆ ಹೋಗಿ ಇದೆಲ್ಲವೂ ಕೂಡ ಮೋಸ, ನಾವು ಏನೇ ಮಾಡಿದರು ಅದು ಇಲ್ಲಿ ನಡೆಯುತ್ತಿಲ್ಲ. ನೀನು ಯಾವ ಕ್ಯಾಪ್ಟನ್ ಎಂದೆಲ್ಲ ಮಾತನಾಡಿದ್ದಾರೆ. ಸಂಗೀತಾ ಕೂಡ ಸ್ನೇಹಿತ್ ಮೇಲೆ ಜಗಳವಾಡಿದ್ದಾರೆ.

ನಮ್ರತಾ ಹೇಳಿದಂತೆ ನಡೆಯುತ್ತಿದ್ಯಾ...?

ಸ್ನೇಹಿತ್, ಕಾರ್ತಿಕ್ ಹಾಗೂ ಸಂಗೀತಾ ಜಗಳವಾಡುತ್ತಾ ಇದ್ದಾಗ ನಮ್ಮ ಟೀಂನವರು ಮೇಲೆ ಎದ್ದಿಲ್ಲ ಎಂದು ನಮ್ರತಾ ಜೋರಾಗಿ ಕಿರುಚಿದ್ದಾರೆ. ಇದನ್ನೇ ಮನಸ್ಸಿಗೆ ತೆಗೆದುಕೊಂಡ ಸ್ನೇಹಿತ್, ಅವರು ಮೇಲಕ್ಕೆ ಎದ್ದಿಲ್ಲ ಎಂದಿದ್ದಾರೆ. ನಮೃತಾ ಹೇಳಿದಂತೆ ಇಲ್ಲಿ ಸ್ನೇಹಿತ್ ಇದ್ದಾರೆ. ನಮ್ರತಾಗೋಸ್ಕರ ಬಿಗ್ ಬಾಸ್ ಮನೆಗೆ ಬಂದು ಆಟವಾಡುತ್ತಿದ್ದಾರೆ ಎಂದಯ ತನಿಷಾ ಹೇಳಿದ್ದಾರೆ.

ನಮ್ರತಾ ಹೇಳಿದಂತೆ ಎಂದ ತನಿಷಾ

ತನಿವಾ ಮಾತಿಗೆ ನಮ್ರತಾ ಕೋಪ ಮಾಡಿಕೊಂಡು ಹೌದು, ನನಗೋಸ್ಕರ ಸ್ನೇಹಿತ್ ಆಟವಾಡುತ್ತಾ ಇದ್ದಾರೆ ಎಂದಿದ್ದಾರೆ. ನಮ್ರತಾ ಹೇಳಿದ ಮೇಲೆ ಮುಗಿಯಿತು, ಸ್ನೇಹಿತ್ ಅದೇ ರೀತಿ ನಡೆದುಕೊಳ್ಳುತ್ತಾರೆ ಎಂದು ತನಿಷಾ ಹೇಳಿದಾಗ ಇಲ್ಲಿ ನಮ್ರತಾ ಇಂಪಾರ್ಟ್ಮೆಂಟ್ ಇದ್ದಾಳೆ ಎಂದು ಕಿರುಚಿದ್ದಾರೆ‌. ಗಂಧರ್ವರು- ರಾಕ್ಷಸರ ನಡುವೆ ರೋಚಕ ಯುದ್ಧ ನಡೆಯುತ್ತಿದೆ. ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋನ 24 ಗಂಟೆ ಉಚಿತವಾಗಿ ನೋಡುವ ಅವಕಾಶವಿದೆ.

More from Filmibeat

English summary
Colors kannada bigboss Written Update on Bigboss season 10 Here is the details about bigboss goddess and monsters fight for win the task
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X