Bigg Boss: ಈ ವಾರ ಮೊದಲು ಸೇಫ್ ಆಗಿದ್ದು ಯಾರು..? ಯಾರ ಪಾಲಾಯ್ತು ಕಿಚ್ಚನ ಚಪ್ಪಾಳೆ?
ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿರುವ ಸ್ಪರ್ಧಿಗಳು ಹಲವು ರೀತಿಯಲ್ಲಿ ವಿಶೇಷವಾಗಿದ್ದಾರೆ. ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಈ ಸೀಸನ್‌ನಲ್ಲಿ ತುಕಾಲಿ ಬೆಸ್ಟ್ ಕಾಮಿಡಿಯನ್ ಎಂದರೆ ತಪ್ಪಾಗಲಾರದು.
ಈ ಸೀಸನ್‌ನಲ್ಲಿ ಕಂಟೆಸ್ಟೆಂಟ್‌ಗಳು ಅಗ್ರೇಸಿವ್ ಆಗಿಯೂ ಆಡುತ್ತಾರೆ, ಕೆಲವೊಮ್ಮೆ ಕಾಮಿಡಿಯೂ ಮಾಡುತ್ತಾರೆ. ಸ್ಪರ್ಧಿಗಳ ಮನಸ್ಥಿತಿ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.

ಈ ಸೀಸನ್‌ನಲ್ಲಿ ಒಂದು ಬಾರಿಯೂ ಲಕ್ಷುರಿ ಬಜೆಟ್ ಅನ್ನು ಪಡೆಯದೆಯೇ ಸೀಸನ್ ಮುಗಿಯುವುದರಲ್ಲಿ ಅನುಮಾನವೇ ಇಲ್ಲ. ಸೀಸನ್ 10 ಲಕ್ಷುರಿ ಬಜೆಟ್ ಯಾರಿಗೂ ಸಿಕ್ಕಿಲ್ಲ.
2 ಕಾರಣಕ್ಕೆ ಮಿಸ್ ಆಯ್ತು ಲಕ್ಷುರಿ ಬಜೆಟ್
ಬಿಗ್ ಬಾಸ್ ಸ್ಪರ್ಧಿಗಳು ಲಕ್ಷುರಿ ಬಜೆಟ್ ಅನ್ನು ಬಹಳ ಸುಲಭವಾಗಿ ಕಳೆದುಕೊಂಡಿದ್ದಾರೆ. ಇದರಿಂದ ಮನೆಯವರೆಲ್ಲರೂ ಬೇಸರ ಮಾಡಿಕೊಂಡಿದ್ದಾರೆ. ಈ ವಾರದ ಲಕ್ಷುರಿ ಬಜೆಟ್ ಅನ್ನು 2 ಕಾರಣಕ್ಕೆ ಕಳೆದುಕೊಂಡರು. ಮೊದಲನೆಯದಾಗಿ ಜೈಲಿನಲ್ಲಿ ತುಕಾಲಿ ಇರುವಾಗ ತನಿಷಾ ತರಕಾರಿಯನ್ನು ಕಟ್ ಮಾಡಿದ್ದಾರೆ. ಮತ್ತೊಂದು ಕಾರಣವೆಂದರೆ, ಚಿಕನ್ ಮತ್ತು ತುಪ್ಪಾ ಖರೀದಿಸಲು ಲೆಕ್ಕಾಚಾರ ಮಾಡುವಾಗಲೂ ತನಿಷಾ ತಪ್ಪಾಗಿ ಲೆಕ್ಕ ಹಾಕಿದ್ದಾರೆ. ಮನೆಯವರೆಲ್ಲಾ ಅದೇ ಸರಿ ಎಂದು ತಪ್ಪಾಗಿ ಲೆಕ್ಕ ಮಾಡಿದ್ದಾರೆ. ಇದರಿಂದ ಟೋಟಲ್ ಹಣ ತಪ್ಪಾಗಿದ್ದು, ಬಿಗ್ ಬಾಸ್ ಲಕ್ಷುರಿ ಬಜೆಟ್ ಅನ್ನು ಮನೆಗೆ ನೀಡಿಲ್ಲ. ಇದಕ್ಕೆ ತನಿಷಾ ಮನೆಯವರ ಬಳಿ ಕ್ಷಮೆ ಕೂಡ ಕೇಳಿದ್ದಾರೆ.
ಮೊದಲು ಸೇಫ್ ಆದ ನಮ್ರತಾ
ಬಿಗ್ ಬಾಸ್ ಸೀಸನ್ 10 ಆರಂಭವಾಗಿ 15 ವಾರಗಳಾಗಿವೆ. ಈ ವಾರ ತುಕಾಲಿ ಸಂತೋಷ್, ತನಿಷಾ, ವಿನಯ್, ಕಾರ್ತಿಕ್, ವರ್ತೂರ್ ಸಂತೋಷ್ ಹಾಗೂ ನಮ್ರತಾ ಅವರು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದರು. ಆದರೆ, ವಾರದ ಕತೆ ಕಿಚ್ಚನ ಜೊತೆಗೆ ಕಾರ್ಯಕ್ರಮದಲ್ಲಿ ಈ ವಾರ ಮೊದಲು ಸೇಫ್ ಆದ ಕಂಟೆಸ್ಟ್ ನಮ್ರತಾ. ಆಕೆ ಸೇಫ್ ಆಗಿರುವುದಕ್ಕೆ ಎಲ್ಲರೂ ಖುಷಿಪಟ್ಟಿದ್ದಾರೆ. ಅಲ್ಲದೇ, ಈ ವಾರದ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ನಮ್ರತಾ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಟಾಪ್ ಮೂರನೇ ಸ್ಥಾನವನ್ನು ಪಡೆದಿದ್ದರು. ವಾರ ಪೂರ್ತಿ ಆಟವಾಡಿ ಎಲಿಮಿನೇಷನ್ ಎಂಬ ಭೂತದಿಂದ ಮೊದಲೇ ಪಾರಾಗಿ ಬಿಟ್ಟಿದ್ದಾರೆ.

ಈ ವಾರದ ಕಿಚ್ಚನ ಚಪ್ಪಾಳೆ ಡ್ರೋನ್ ಪ್ರತಾಪ್ ಪಾಲಾಗಿದೆ. ಟಿಕೆಟ್ ಟು ಟಾಸ್ಕ್ ಎಂಬ ಈ ವಾರದ ಆಟದಲ್ಲಿ ಅದ್ಭುತವಾಗಿ ಆಟ ವಾಡಿ 420 ಸ್ಕೋರ್ ಪಡೆದು ಎಲ್ಲರಿಗಿಂತ ಎತ್ತರದ ಸ್ಥಾನಕ್ಕೇರಿದ್ದರು. ಆದರೆ, ಕೊನೆ ಕ್ಷಣದಲ್ಲಿ ವೋಟ್ ಮೂಲಕ ಫಿನಾಲೆ ಟಿಕೆಟ್ ಅನ್ನು ನೀಡಿದ್ದರಿಂದ ಪ್ರತಾಪ್ ಕ್ಯಾಪ್ಟನ್ ಆಗುವ ಆಸೆಯನ್ನು ಕಳೆದುಕೊಂಡು ಬೇಸರ ಮಾಡಿಕೊಂಡಿದ್ದರು. ಪ್ರತಾಪ್‌ಗೆ ಈ ವಾರ ಅತೀ ಉತ್ತಮ ಎಂಬ ಬಿರುದು ಕೂಡ ಸಿಕ್ಕಿದೆ. ಅಲ್ಲದೇ, ಈಗ ಕಿಚ್ಚನ ಚಪ್ಪಾಳೆ ಕೂಡ ಪ್ರತಾಪ್ ಪಡೆದಿದ್ದಾರೆ.
ಫಿನಾಲೆ ಲೆಕ್ಕಾಚಾರ ತಪ್ಪಾಗಿದ್ಯಾ..?
ಕಿಚ್ಚ ಸುದೀಪ್ ಯಾರು ಫಿನಾಲೆಗೆ ಹೋಗಬಹುದು, ಯಾರು ಹೋಲ್ಡ್‌ನಲ್ಲಿ ಇರಬೇಕು. ಮತ್ತು ಯಾರು ಅರ್ಹರಲ್ಲ ಎಂಬ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರತಿಯೊಬ್ಬ ಸ್ಪರ್ಧಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ವಿನಯ್ ಫಿನಾಲೆಗೆ ತಲುಪಲು ಅರ್ಹನಿದ್ದಾನೆ ಎಂದು ಮೂರು ವೋಟ್‌ಗಳನ್ನು ನೀಡಿದ್ದು, ಕಾರ್ತಿಕ್‌ಗೆ ವೋಟ್ ಸಿಕ್ಕಿಲ್ಲ. ನಮ್ರತಾಗೆ ಎರಡು ವೋಟ್ ಸಿಕ್ಕಿವೆ. ಇನ್ನು ಆಶ್ಚರ್ಯಕರವಾಗಿ ಪ್ರತಾಪ್, ವರ್ತೂರ್ ಸಂತೋಷ್ ಅವರು ಫಿನಾಲೆಗೆ ಹೋಗಬಹುದು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ಮನೆಯ ಸದಸ್ಯರ ಲೆಕ್ಕಾಚಾರ ತಪ್ಪಾಗಿದ್ಯಾ ಇಲ್ಲ. ಅವರ ಲೆಕ್ಕಾಚಾರವೇ ಫೈನಲ್ ಆಗುತ್ತಾ ಅನ್ನೋ ಕುತೂಹಲ ಮೂಡಿದೆ. ಇನ್ನು ನಾಳಿನ ಕಾರ್ಯಕ್ರಮದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ? ಯಾರು ಸೇಫ್ ಆಗುತ್ತಾರೆ? ಹಾಗೂ ಮುಂದಿನ ವಾರದ ಆಟ ಯಾರೆಲ್ಲಾ ಆಡಲಿದ್ದಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾತುರರಾಗಿದ್ದಾರೆ. 24 ಗಂಟೆಗಳ ಕಾಲ ಜಿಯೋ ಸಿನಿಮಾದಲ್ಲಿ ಶೋ ಉಚಿತವಾಗಿ ವೀಕ್ಷಿಸಬಹುದಾಗಿದೆ.


Click it and Unblock the Notifications











