BBK 10: ವಿನಯ್ ಮೇಲೆ ಕಿಡಿ ಕಾರೋದೇಕೆ ಸಂಗೀತ ಶೃಂಗೇರಿ..! ಇಬ್ಬರ ನಡುವೆ ಇದ್ಯಾ ಮನಸ್ತಾಪ..?

By Shruthi Harishgowda

ಸಂಗೀತ ಶೃಂಗೇರಿ ಹರ ಹರ ಮಹಾದೇವ ಧಾರಾವಾಹಿಯ ಮೂಲಕ ಮನೆ ಮಾತಾದವರು. ಪ್ರೇಕ್ಷಕರು ಸತಿಯನ್ನ ತಮ್ಮ ಮನೆಯ ಮಗಳಂತೆ ಕಾಣುತ್ತಿದ್ದರು. ಸಂಗೀತಾರನ್ನು ಸತಿ ಎಂದೇ ಫೇಮಸ್ ಮಾಡಿದ್ದರು. ಅಷ್ಟರಮಟ್ಟಿಗೆ ಅವರ ಆಕ್ಟಿಂಗ್ ಇತ್ತು. 2016ರಲ್ಲಿ ಈ ಹರಹರ ಮಹಾದೇವ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವನ್ನ ಕಾಣುತ್ತಿತ್ತು. ಇನ್ನು ಇದೇ ವೇಳೆ ಮಹಾದೇವನಾಗಿ ವಿನಯ್ ಪಾತ್ರ ನಿರ್ವಹಿಸಿದ್ದರು. ಸತಿಯಾಗಿ ಸಂಗೀತ ಶೃಂಗೇರಿ ತಮ್ಮ ಪಾತ್ರ ನಿರ್ವಹಣೆ ಮಾಡಿದ್ದರು. ಇಲ್ಲಿಂದ ಅವರಿಬ್ಬರೂ ಗೆಳೆತನದಲ್ಲಿದ್ದರೂ ಕೂಡ ಬಿಗ್ ಬಾಸ್‌ಗೆ ಬಂದಮೇಲೆ ಶತ್ರುಗಳಂತೆ ಆಡುತ್ತಿದ್ದಾರೆ.

ಬಿಗ್ ಬಾಸ್‌ನಲ್ಲಿ ಯಾವಾಗಲೂ ಸಂಗೀತ ಶೃಂಗೇರಿ ವಿನಯ್ ಮೇಲೆ ಕೋಪ ಮಾಡಿಕೊಳ್ಳುತ್ತಾ ಇದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನನಗೆ ವಿನಯ್‌ ಅವರ ದನಿಯನ್ನು ಕೇಳಿದರೆ ಭಯವಾಗುತ್ತದೆ ಎಂದು ಸಹ ಹೇಳಿದ್ದಾರೆ. ನಾಮಿನೇಷನ್ ವಿಷಯ ಬಂದಾಗ ಇವರಿಬ್ಬರ ನಡುವೆ ಎಂಥ ದ್ವೇಷವಿದೆ ಎಂಬುವುದು ಎಲ್ಲರಿಗೂ ಸಹ ತಿಳಿದಿದೆ. ವಿನಯ್ ಏನೇ ಹೇಳಿದರು ಸಹ ಅದನ್ನ ಸಂಗೀತ ಪರ್ಸನಲ್ ಆಗಿ ತೆಗೆದುಕೊಂಡು ಅವರ ಜೊತೆ ಜಗಳಕ್ಕೆ ನಿಂತುಕೊಳ್ಳುತ್ತಿದ್ದಾರೆ. ವಿನಯ್ ಎಷ್ಟೇ ಹೇಳಿದರೂ ಸಹ ಸಂಗೀತ ಯಾಕೋ ಅವರ ಮೇಲೆ ಪ್ರತಿಯೊಂದಕ್ಕೂ ಕಿಡಿ ಕಾರುತ್ತಿದ್ದಾರೆ.

Colors kannada Bigg Boss 10 Written Update on sangeetha sringeri, vinay fight

ಬಿಗ್ ಬಾಸ್‌ ಪ್ರಾರಂಭವಾದ ಮೊದಲ ವಾರದಿಂದಲೂ ಸಹ ಸಂಗೀತ ಹಾಗೂ ವಿನಯ್ ನಡುವೆ ಕಿರಿಕಿರಿ ಉಂಟಾಗುತ್ತಲೇ ಇದೆ. ಮೊದಲ ವಾರದಲ್ಲಿ ಸಂಗೀತ ಕುರ್ಚಿಯ ಮೇಲೆ 30 ಸೆಕೆಂಡ್ ಕುಳಿತುಕೊಂಡಿದ್ದನ್ನೇ ತಪ್ಪು ಎಂದು ವಿನಯ್ ತೋರಿಸಿದಾಗ ಸಂಗೀತ ಕೆಂಡಮಂಡಲರಾದರು. ನೀವೇನು ಹೇಳೋದು ನಾನು ತಪ್ಪು ಮಾಡಿದರೆ ಬಿಗ್ ಬಾಸ್ ಹೇಳುತ್ತಾರೆ. ನೀವು ಬಿಗ್ ಬಾಸ್‌ನಂತೆ ನಡೆದುಕೊಳ್ಳಬೇಡಿ ಎಂದು ವಿನಯ್‌ಗೆ ಹೇಳುವ ಮೂಲಕ ಎಚ್ಚರಿಕೆಯನ್ನ ಕೊಟ್ಟಿದ್ದರು. ಅಲ್ಲಿಂದ ಇಲ್ಲಿತನಕ ಒಂದು ದಿನವೂ ವಿನಯ್ ಹಾಗೂ ಸಂಗೀತ ಸ್ನೇಹದಿಂದ ನಡೆದುಕೊಂಡಿಲ್ಲ.

ಸ್ನೇಹಿತರು ಎಂದುಕೊಂಡಿದ್ದ ಸಂಗೀತ ವಿನಯ್ ಮದುವೆ ಇದ್ಯಾ ದ್ವೇಷ..?

ಸಂಗೀತ ಹಾಗೂ ವಿನಯ್ ನಡುವೆ ದ್ವೇಷ ಏನಾದರೂ ಇದ್ಯಾ ಎಂಬ ಪ್ರಶ್ನೆ ಈಗ ಪ್ರೇಕ್ಷಕರ ನಡುವೆ ಉದ್ಭವವಾಗಿದೆ. ಯಾಕೆಂದರೆ ಒಂದೇ ಸೀರಿಯಲ್‌ನಲ್ಲಿ ನಟನೆ ಮಾಡಿದವರು ಒಂದೇ ಕುಟುಂಬದವರಂತೆ ಇರುತ್ತಾರೆ ಹಾಗೂ ಸ್ನೇಹದಿಂದ ವರ್ತಿಸುತ್ತಾರೆ. ಇವರಿಬ್ಬರೂ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಾಗ ಸ್ನೇಹದಿಂದ ಇದ್ದು ಎಲ್ಲಾ ಟಾಸ್ಕ್‌ಗಳಲ್ಲೂ ಸಹ ಸೌಹಾರ್ದತೆ ತೋರಿ ವಿನ್ ಆಗುತ್ತಾರೆ ಎಂದುಕೊಂಡಿದ್ದರು. ಆದರೆ ಸಂಗೀತ ನಡೆದುಕೊಳ್ಳುತ್ತಿರುವ ವರ್ತನೆ ಪ್ರೇಕ್ಷಕರಲ್ಲಿ ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ.

ವಿನಯ್ ಸಹ ಸಂಗೀತಾಗೆ ಯಾವುದೇ ರೀತಿಯ ಸಪೋರ್ಟ್ ಮಾಡುತ್ತಿಲ್ಲ ಬದಲಾಗಿ ಕಾರ್ತೀಕ್ ಸಂಗೀತಾಗೆ ಸಪೋರ್ಟ್ ಮಾಡುತ್ತಿದ್ದಾರೆ. ಇಬ್ಬರು ಸಹ ಬೇರೆ ಬೇರೆ ಬಣಗಳಾಗಿ ಆಟ ಆಡುತ್ತಾ ಇದ್ದಾರೆ. ಇವರಿಬ್ಬರ ನಡುವಳಿಕೆ ಪ್ರೇಕ್ಷಕರಲ್ಲಿ ನಿಜವಾಗಿಯೂ ಇವರ ನಡುವೆ ಏನಾದರೂ ಜಗಳ ನಡೆದಿದ್ಯಾ ಎಂಬ ಅನುಮಾನ ಬರುವಂತೆ ಮಾಡಿದೆ.

Colors kannada Bigg Boss 10 Written Update on sangeetha sringeri, vinay fight

ಎಲ್ಲವನ್ನು ಪರ್ಸನಲ್ ಆಗಿ ತೆಗೆದುಕೊಳ್ಳುವ ಸಂಗೀತ

ಸಂಗೀತ ಮುಂಗೋಪಿ ಎಲ್ಲವನ್ನು ಸಹ ಪರ್ಸನಲ್ ಆಗಿ ತೆಗೆದುಕೊಳ್ಳುತ್ತಾ ಇದ್ದಾರೆ. ನಾಮಿನೇಷನ್ ಎಂದು ಬಂದಾಗ ಯಾರು ಯಾರನ್ನು ಬೇಕಾದರೂ ನ್ಯಾಮಿನೇಟ್ ಮಾಡಬಹುದು. ಸಂಗೀತರನ್ನು ವಿನಯ್ ನ್ಯಾಮಿನೇಟ್ ಮಾಡಿದಾಗಲೂ ವಿನಯ್ ಮಾತುಗಳನ್ನ ಪರ್ಸನಲ್ ಆಗಿ ತೆಗೆದುಕೊಂಡಿದ್ದರು.

ಇನ್ನು ಪ್ರೇಕ್ಷಕರು ಸಹ ಸಂಗೀತ ಸಾಕಷ್ಟು ತಾಳ್ಮೆಯಿಂದ ಇದ್ದು ಟಾಸ್ಕ್‌ಗಳಲ್ಲಿ ಗೆಲುವು ಸಾಧಿಸಲಿ. ಅದು ಬಿಟ್ಟು ವಿನಯ್ ಜೊತೆ ಜಗಳವಾಡಿ ನಿಂತುಕೊಳ್ಳುವುದು ಸೂಕ್ತವಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಯಾರೇ ನಾಮಿನೇಟ್ ಮಾಡಿದರು ಸಹ ಅದಕ್ಕೆ ಸಂಗೀತ ವ್ಯತಿರಿಕ್ತವಾಗಿ ರಿಯಾಕ್ಟ್ ಮಾಡದೆ ಆಟವಾಡಬೇಕು ಎಂದು ಹೇಳಿದ್ದಾರೆ.

More from Filmibeat

English summary
Bigg Boss 10 Written Update on sangeetha sringeri, vinay fight details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X