Sangeetha Sringeri: ಕಳಪೆ ಪಟ್ಟಿ ಹೊತ್ತು ಜೈಲಿಗೆ ಹೋದ ಸಂಗೀತಾ: ವಿನಯ್ ತಂಡದ ಟಾರ್ಗೆಟ್‌ಗೆ ಗುರಿಯಾದ 'ಸತಿ'..!
ಬಿಗ್ ಬಾಸ್ ಮನೆಯೊಳಗೆ ಬಂದಾಗಿನಿಂದ ಸಂಗೀತಾ ತಮ್ಮ ಕೆಲವೊಂದು ಮಾತಿನಿಂದ ಹಾಗೂ ಆಟಗಳಲ್ಲಿ ಗೆಲುವು ಪಡೆಯುವ ಮೂಲಕ ಒಳ್ಳೆಯ ಸ್ಪರ್ಧಿ ಎನಿಸಿಕೊಂಡಿದ್ದರು. ಇನ್ನೂ ಸಂಗೀತಾಗೂ ಕೂಡ ಅಷ್ಟೇ ಚೆನ್ನಾಗಿ ಪ್ರೇಕ್ಷಕರು ವೋಟ್ ನೀಡುವ ಮುಖಾಂತರ ಸಂಗೀತ ರನ್ನ ಬೆಂಬಲಿಸಿದರು. ಆದರೆ ಈ ವಾರ ನಡೆದ ಎಲ್ಲಾ ಟಾಸ್ಕ್‌ನಲ್ಲಿಯೂ ಕೂಡ ಸಂಗೀತಾ ಚೆನ್ನಾಗಿಯೇ ಪ್ರದರ್ಶನ ನೀಡಿದ್ದರು. ಆದರೂ ಕೂಡ ಅವರ ಕತ್ತಿಗೆ ಕಳಪೆ ಪ್ರದರ್ಶನದ ಪಟ್ಟಿ ಬಿದ್ದಿದೆ. ಇದರಿಂದ ಸಂಗೀತಾ ಈಗ ಜೈಲಿಗೆ ಹೋಗಿದ್ದಾರೆ. ಅವರು ಜೈಲಿನೊಳಗಡೆ ಹೋಗಿದ್ದು ಕಾರ್ತಿಕ್ ಜೊತೆಯಲ್ಲಿ ನನಗೆ ಯಾಕೆ ಕಳಪೆ ಪ್ರದರ್ಶನ ಕೊಟ್ಟಿದ್ದಾರೆ ನನಗಂತೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ವಿನಯ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಒಂದೇ ದಿನದೊಳಗೆ ಸಂಗೀತಾ ಮೇಲೆ ವಿನಯ್ ತಂಡದಲ್ಲಿದ್ದವರೆಲ್ಲಾ ಮುಗಿಬಿದ್ದಿದ್ದಾರೆ. ವಿನಯ್ ಕ್ಯಾಪ್ಟನ್ ಆದಾಗ ಎಲ್ಲರಿಗೂ ಕುತೂಹಲವಿತ್ತು ಸಂಗೀತಾಗೆ ಏನೋ ಕಾದಿದೆ ಎಂದು ಅದಕ್ಕೆ ತಕ್ಕನಾಗಿಯೇ ಈಗ ಎಲ್ಲರೂ ಸಂಗೀತಾ ಮೇಲೆ ಒಮ್ಮೆಗೆ ಮುಗಿದಿದ್ದಾರೆ. ಸಂಗೀತಾಗೆ ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬ ಪಟ್ಟವನ್ನು ಕೊಟ್ಟಿದ್ದಾರೆ. ಸಂಗೀತಾ ಎಲ್ಲರ ಮಾತನ್ನು ಬಹಳಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ನಾನು ಚೆನ್ನಾಗಿಯೇ ಪ್ರದರ್ಶನ ನೀಡಿದರು ಸಹ ಇವರೆಲ್ಲರೂ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಕಾರ್ತಿಕ್ ಜೊತೆ ಹೇಳಿದ್ದಾರೆ.

ವಿನಯ್ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದಾಗ ಸಂಗೀತಾ ನಾನೇನು ಆನೆಗೆ ಹೆದರೋದಿಲ್ಲ ಎಂಬ ಮಾತನ್ನು ಹೇಳಿದ್ದರು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡ ವಿನಯ್ ತಮ್ಮ ತಂಡದವರಿಂದಲೇ ಸಂಗೀತಾರನ್ನು ಟಾರ್ಗೆಟ್ ಮಾಡಿದ್ರಾ ಎಂಬ ಅನುಮಾನಗಳು ಪ್ರೇಕ್ಷಕರನ್ನು ಕಾಡುತ್ತಿದೆ. ಎಲ್ಲರೂ ಸಂಗೀತಾ ಚೆನ್ನಾಗೆ ಪ್ರದರ್ಶನ ನೀಡಿದ್ದಾರೆ ಆದರೂ ಸಹ ಅವರಿಗೆ ಕಳಪೆ ಪಟ್ಟ ಏಕೆ ಬಂದಿತ್ತು ಗೊತ್ತಿಲ್ಲ ಎಂದು ಸಂಗೀತಾಗೆ ಸಪೋರ್ಟ್ ಮಾಡುತ್ತಾ ಇದ್ದಾರೆ. ಸಂಗೀತಾ ಜೈಲಿನೊಳಗೆ ಹೋಗಿದ್ದು ವಿನಯ್ ಜೈಲಿಗೆ ಬೀಗವನ್ನು ಹಾಕಿದ್ದಾರೆ.
ರಕ್ಷಕ್, ನಮ್ರತಾ, ತುಕಾಲಿಯ ಟಾರ್ಗೆಟ್ ಆದ ಸಂಗೀತಾ
ಸಂಗೀತಾ ಬಗ್ಗೆ ಈ ಮಂದಿಗೆ ಯಾಕೆ ಇಷ್ಟು ಕೋಪ..?
ರಕ್ಷಕ್, ಸಂಗೀತಾ ಅವರ ಪರ್ಸನಾಲಿಟಿ ಬಗ್ಗೆ ಮಾತನಾಡಿದ್ದಾರೆ. ಆಟ ಒಂದೇ ಮುಖ್ಯವಾಗುವುದಿಲ್ಲ ಮನೆಯಲ್ಲಿ ಪರ್ಸನಾಲಿಟಿಯು ಸಹ ಮುಖ್ಯವಾಗುತ್ತದೆ. ಆದ್ದರಿಂದ ನಾನು ಸಂಗೀತಾ ಅವರಿಗೆ ಕಳಪೆ ಎಂಬ ಪಟ್ಟಿಯನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಹಾಗೂ ನಮ್ರತಾ ನಡುವೆ ಒಂದು ಸಣ್ಣ ಮನಸ್ತಾಪ ಏರ್ಪಟ್ಟಿತ್ತು. ಈ ವೇಳೆ ಸಂಗೀತಾಗೆ ನಮ್ರತಾ ಹೋಗೆ ಎಂದು ಅಂದಿದ್ದರು ನಂತರ ಸಂಗೀತಾ ಕೂಡ ಅದೇ ರೀತಿಯ ಮಾತುಗಳನ್ನು ಆಡಿದ್ದರು. ಅದಕ್ಕಾಗಿ ನಾನು ಅವರಿಗೆ ಕಳಪೆ ಪಟ್ಟ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ತುಕಾಲಿ ಸಂತೋಷ್ ಸಂಗೀತಾನೇ ತೆಗೆದುಕೊಂಡಿದ್ದಾರೆ. ಹೆಣ್ಣು ಸ್ನೇಹಿತರಿಂದಲೇ ಮನೆಯ ವಾತಾವರಣ ಹಾಳಾಗುತ್ತಿದೆ ಎಂಬ ಮಾತನ್ನು ಹೇಳಿದ್ದಾರೆ ಇವರೆಲ್ಲರೂ ಸಹ ವಿನಯ್ ತಂಡದಲ್ಲೇ ಇರುವವರು ಈಗ ಸಂಗೀತಾರನ್ನ ಟಾರ್ಗೆಟ್ ಮಾಡುತ್ತಾ ಮಾತನಾಡಿದ್ದಾರೆ. ಇನ್ನು ವಿನಯ್ ಸಹ ಸಂಗೀತವನ್ನು ನಾನು ನಾಮಿನೇಟ್ ಮಾಡುತ್ತೇನೆ ಅವರು ಯಾರಿಗೂ ಸಹ ರೆಸ್ಪೆಕ್ಟ್ ಕೊಡೋದಿಲ್ಲ ಎಂದಿದ್ದಾರೆ. ಸಂಗೀತಾ ಕಾರ್ತಿಕ್ ಜೊತೆ ಮಾತನಾಡುತ್ತಾ ನಾನು ಈಗ ಮನೆಯವರ ಮುಂದೆ ಕೆಟ್ಟವಳಾಗಿದ್ದೇನೆ. ನಮ್ರತಾ ಆ ರೀತಿ ಮಾತನಾಡಿದ್ದಕ್ಕೆ ನಾನು ಹೋಗೆಲ್ಲೇ ಎಂದು ಹೇಳಿದೆ ಎಂದು ಹೇಳುತ್ತಿದ್ದಾರೆ.

ಇಡೀ ಮನೆ ನನ್ನ ವಿರೋಧಿಸುತ್ತಿದೆ ಎಂದ ಸಂಗೀತಾ
ಸಂಗೀತಾಗೆ ಎಲ್ಲರೂ ಕಳಪೆ ಪಟ್ಟ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ವಿನಯ್ ಕ್ಯಾಪ್ಟನ್ ಆದ ಮೇಲಂತೂ ವಿನಯ್‌ನ ಹಿಂಬಾಲಕರಾದ ತುಕಾಲಿ ಸಂತೋಷ್, ರಕ್ಷಕ್, ನಮ್ರತಾ ಹಲವು ಮಂದಿಗೆ ಸಂಗೀತಾ ಮೇಲೆ ಕೋಪ ಬಂದಿದೆ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇದಕ್ಕಾಗಿ ಸಂಗೀತಾ ನನ್ನ ವಿರುದ್ಧ ಇಡೀ ಮನೆಯೇ ನಿಂತಿದೆ ಎಂದು ನನಗೆ ಅನಿಸುತ್ತಿದೆ ಎಂದು ಕಾರ್ತಿಕ್ ಬಳಿಯಲ್ಲಿ ಹೇಳಿ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ಸಹ ಇಷ್ಟು ಮಂದಿ ಸಂಗೀತಾಗೆ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಸಂಗೀತಾ ಮೇಲೆ ಕನಿಕರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











