BBK 10: ರಿಯಲ್ ಬಿಗ್ ಬಾಸ್.. ರಿಯಲ್ ಕಾಮಿಡಿ.. ಹಿಂಗಿರ್ಬೇಕು ಅಂತಿದ್ದಾರೆ ಜನ..!
ಬಿಗ್ ಬಾಸ್ ಅಂದ್ರೆ ಮನರಂಜನೆಯ ಜೊತೆಗೆ ಗೆಲ್ಲಬೇಕು ಎಂಬ ಹಂಬಲ. ಮನೆಯೊಳಗಿರುವ ಮಂದಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ನಡವಳಿಕೆ. ಜಗಳ, ಮನಸ್ತಾಪ ಇದ್ದೆ ಇರುತ್ತದೆ. ಆದರೆ ಅದರ ನಡುವೆಯೇ ಜನರಿಗೆ ಇಷ್ಟವಾಗಬೇಕಾಗುತ್ತದೆ.
ಬಿಗ್ ಬಾಸ್ ಸೀಸನ್10 ಶುರುವಾಗಿ ಮೂರು ವಾರ ಕಳೆದಿದೆ. ಆದರೆ ಮೊದಲೆರಡು ವಾರ ಬರೀ ಬೋರ್ ಎನಿಸಿತ್ತು. ಆಮೇಲೆ ಬರೀ ಜಗಳ, ಸಂತೂ ಕಾಮಿಡಿ ಬಿಟ್ಟರೆ ಅಲ್ಲಿ ಬೇರೆ ಯಾವ ಮನರಂಜನೆಯೂ ಸಿಕ್ಕಿರಲಿಲ್ಲ. ಅದಷ್ಟೇ ಅಲ್ಲ, ಟಾಸ್ಕ್ ಗಳಲ್ಲೂ ಅಷ್ಟೇನೂ ಆಕ್ಟೀವ್ ಆಗಿರಲಿಲ್ಲ. ಆದರೆ ಇವತ್ತಿನ ಎಪಿಸೋಡ್ ಬಹಳ ಅದ್ಭುತವಾಗಿದೆ ಎನಿಸದೆ ಇರದು. ಇನ್ನು ಒಂದು ವಾರಗಳ ಕಾಲ ಈ ಮನರಂಜನೆ ಮಿಸ್ ಆಗಲ್ಲ.

ಭಜರಂಗಿ ಎದುರು ಗೆದ್ದ ಉಗ್ರಂ
ಎರಡು ಟಾಸ್ಕ್‌ನಲ್ಲೂ ಉಗ್ರಂ ವಿನ್
ಬಿಗ್ ಬಾಸ್ ಮನೆಯಲ್ಲಿ ಎರಡು ಟೀಂ ಮಾಡಿಕೊಳ್ಳುವುದಕ್ಕೆ ಸೂಚನೆ ನೀಡಿತ್ತು. ಅದರಲ್ಲಿ ತನಿಶಾ ಹಾಗೂ ನಮ್ರತಾದೇ ಒಂದು ಟೀಂ ಆಗಿದೆ. ಸದ್ಯಕ್ಕೆ ಬಿಗ್ ಬಾಸ್ ಒಂದೊಂದೆ ಟಾಸ್ಕ್ ಕೊಡುತ್ತಾ ಹೋಗುತ್ತಿದೆ. ಅದರಲ್ಲಿ ಮೊದಲಿಗೆ ಒಂದು ಬಾಕ್ಸ್ ಮೇಲೆ ಕೂತು ಉರುಳಿಸುವಾಗ, ಬ್ಯಾಲೆನ್ಸ್ ಮಾಡುತ್ತಾ, ರಿಂಗ್ ಹಾಕುವುದು. ಈ ಟಾಸ್ಕ್ ನಲ್ಲೂ ಉಗ್ರಂ ಗೆದ್ದಿದೆ. ಮತ್ತೊಂದು ಎಲ್ಲರೂ ಕಾಲಿನಲ್ಲಿ ಡಬ್ಬ ಬ್ಯಾಲೆನ್ಸ್ ಮಾಡುವುದು. ಸಾಕ್ಸ್ ಹಾಕಿರಬೇಕು. ಕೈ ಬಳಸದೆ ಒಬ್ಬೊಬ್ಬರೇ ಸಾಕ್ಸ್ ತೆಗೆಯಬೇಕು. ಇದರಲ್ಲೂ ಉಗ್ರಂ ಗೆದ್ದಿದೆ.
ಟಾಸ್ಕ್ ಗೆದ್ದು ವಿಶೇಷ ಅವಕಾಶ ಪಡೆದ ಉಗ್ರಂ
ಸ್ನೇಹಿತ್ ಅಂಡ್ ಮೈಕೆಲ್ ಟಾಸ್ಕ್‌ನಿಂದ ಹೊರಗೆ
ಭಜರಂಗಿ ಟೀಂ ಹಾಗೂ ಉಗ್ರಂ ಟೀಂ ಆಟ ಆಡುವಾಗ ಯಾವುದೇ ಟೀಂ ಗೆದ್ದರು ಅವರಿಗೊಂದು ವಿಶೇಷ ಅಧಿಕಾರ ನೀಡಿದೆ. ಅದುವೇ ಎದುರುಗಡೆ ಇದ್ದ ಟೀಂ ನಲ್ಲಿ ಯಾರನ್ನಾದರೂ ಹೊರಗಿಡಬಹುದು. ಮೊದಲ ಟಾಸ್ಕ್ ವಿನ್ ಆದಾಗಲೇ ಉಗ್ರಂ ಟೀಂನವರು ಮೈಕೆಲ್ ಅನ್ನು ಹೊರಗಿಟ್ಟರು. ಯಾಕಂದ್ರೆ ಬಲಿಷ್ಠ ಎನಿಸಿಕೊಂಡಿರುವುದು ಮೈಕೆಲ್. ಎರಡನೇ ಟಾಸ್ಕ್ ಗೆದ್ದಾಗ ಬುದ್ದಿವಂತ ಎನಿಸಿಕೊಂಡಿರುವ ಸ್ನೇಹಿತ್ ನನ್ನು ಹೊರಗೆ ಇಟ್ಟರು.
ವಿನಯ್ ಮತ್ತು ಕಾರ್ತಿಕ್ ನಿಂದ ರೋಸ್ಟ್ ಆಗಿ, ಸಂತೋಷ್ ಅಂಡ್ ಟೀಂ ಗೋಳಾಟ
ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಸಂತೋಷ್ ಕಾಮಿಡಿಯನ್ನಷ್ಟೇ ಕೇಳುವಂತೆ ಇತ್ತು. ಆದರೆ ಬಿಗ್ ಬಾಸ್ ನೀಡಿದ ಈ ಒಂದು ಟಾಸ್ಕ್, ಆದ ಎರಡು ಟೀಂನಿಂದ ಯಾರಲ್ಲು ಯಾವೆಲ್ಲ ಬೇರೆ ಬೇರೆ ಟ್ಯಾಲೆಂಟ್ ಇದೆ ಅನ್ನೋದು ಗೊತ್ತಾಗಿದೆ. ಕಾರ್ತಿಕ್ ಬರೀ ಸಂಗೀತಾ ಹಿಂದೆ ಸುತ್ತುತ್ತಾ ಇದ್ದರು. ವಿನಯ್ ಗಡಸು ಧ್ವನಿಯಲ್ಲೇ ಭಯ ಹುಟ್ಟಿಸೋರು. ಆದರೆ ಇವತ್ತಿನ ಟೀಂನ ಎರಡು ಗೆಲುವು ಇಬ್ಬರಲ್ಲೂ ಹೊಸದೊಂದು ಬದಲಾವಣೆ ತಂದಿತ್ತು. ವಿನಯ್ ಅಂಡ್ ಕಾರ್ತಿಕ್ ಫುಲ್ ಖುಷಿಯಾಗಿದ್ದರು. ಸಂತೋಷ್ ನಂತು ಸಿಕ್ಕಾಪಟ್ಟೆ ಗೋಳೊಯ್ದುಕೊಂಡಿದ್ದಾರೆ.

ಸಂಗೀತಾಗೆ ಉರಿಸಲು ನಮ್ರತಾ & ಕಾರ್ತಿಕ್ ಯತ್ನ
ಫೇಕ್ ಮಾತಿಗೆ ಕಾರ್ತಿಕ್ ಬೇಸರ
ಸಂಗೀತಾಗೆ ತನ್ನನ್ನು ಆಯ್ಕೆ ಮಾಡಲಿಲ್ಲ ಎಂಬ ಬೇಸರದ ಜೊತೆಗೆ ನಮ್ರತಾರನ್ನ ಆಯ್ಕೆ ಮಾಡಿದ್ದು ಯಾಕೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡಿದೆ. ಹೀಗಾಗಿ ಕಾರ್ತಿಕ್ ಬಳಿ ಕೇಳಿ ತಿಳಿದುಕೊಳ್ಳುವ ಪ್ರಯತ್ನವೂ ನಡೆದಿದೆ. ಉತ್ತರ ಮಾತ್ರ ಸಿಗಲಿಲ್ಲ. ಇತ್ತ ಕಾರ್ತಿಕ್ ಹಾಗೂ ನಮ್ರತಾ ಇಬ್ಬರು ಸೇರಿ ಸಂಗೀತಾರನ್ನು ರೇಗಿಸಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಕಾರ್ತಿಕ್, ಸಂಗೀತಾಗೆ ಸಮಾಧಾನ ಮಾಡಲು ಹೋಗಿದ್ದಾರೆ. ಆ ವೇಳೆ ಫೇಕ್ ಎಂಬ ಪದ ಬಂದಿದ್ದು ಅಷ್ಟೇ, ಕಾರ್ತಿಕ್ ಮನಸ್ಸಿಗೆ ತುಂಬಾ ನೋವಾಗಿದೆ.


Click it and Unblock the Notifications











