ಪದೇ ಪದೇ ನಾಮಿನೇಟ್ ಆಗುತ್ತಿರುವ ನೀತು- ತುಕಾಲಿ ಸಂತೋಷ್: ಈ ವಾರ ಮನೆಯಿಂದ ಹೊರಗೆ ಹೋಗೋದ್ಯಾರು?

By Shruthi Harishgowda

ಬಿಗ್ ಬಾಸ್ ಮನೆಯಲ್ಲಿ ಈಗ ಎಲ್ಲವೂ ಕೂಡ ಬದಲಾಗಿದೆ. ಮೊದಲು ಮಾವ ಅಳಿಯ ಅನ್ನುತ್ತಿದ್ದವರು ಈಗ ಶತ್ರುಗಳಾಗಿದ್ದಾರೆ. ಕೆನ್ನೆಗೆ ಮುತ್ತು ಕೊಟ್ಟು ಬಹುಪರಾಕ್ ಹಾಕಿದವರು ಈಗ ಶತ್ರುಗಳಂತೆ ವರ್ತಿಸುತ್ತಾ ಇದ್ದಾರೆ. ವಿನಯ್‌ಗೆ ತುಕಾಲಿ ಸಂತೋಷ್‌ ವರ್ತನೆ ಬೇಸರವನ್ನು ತರಿಸಿದರೆ, ತುಕಾಲಿ ಸಂತೋಷ್‌ಗೆ ವಿನಯ್ ವರ್ತನೆ ಇನ್ನಷ್ಟು ಬೇಸರ ತರಿಸಿ ಇಬ್ಬರ ಕೋಪ ಆಗಾಗ ಸ್ಫೋಟಗೊಳ್ಳುತ್ತಲೇ ಇದೆ. ತುಕಾಲಿ ಸಂತೋಷ್ ಅನ್ನು ವಿನಯ್ ಟಾರ್ಗೆಟ್ ಮಾಡಿದ್ರೆ, ತುಕಾಲಿ ಸಂತೋಷ್ ವಿನಯ್ ರನ್ನು ಟಾರ್ಗೆಟ್ ಮಾಡುತ್ತಾ ಇದ್ದಾರೆ. ಅದು ಎಲಿಮಿನೇಷನ್ ಪ್ರಕ್ರಿಯೆ ಆಗಲಿ ಅಥವಾ ಕ್ಯಾಪ್ಟನ್ಸಿ ಟಾಸ್ಕ್ ಆಡುವ ವಿಚಾರದಲ್ಲಿ ಈಗಾಗಲೇ ಪ್ರೋವ್ ಆಗಿದೆ.

ಮನೆಯ ಸದಸ್ಯರಲ್ಲಿ ಒಂಬತ್ತು ಜನ ಈ ಬಾರಿ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಸಿರಿ ಹಾಗೂ ಪ್ರತಾಪ್ ನಾಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ಸಿರಿ ಹಾಗೂ ಪ್ರತಾಪ್ ಕೂಡ ನಾಮಿನೇಟ್ ಆಗಿದ್ದಾರೆ. ಈ ಮೂಲಕ 9 ಜನರು ಮನೆಯಲ್ಲಿ ಹೋಗುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಸ್ಪರ್ಧಿಗಳಿಗೆ ವೋಟ್ ಮಾಡುವ ಮೂಲಕ ಯಾರನ್ನು ವೀಕ್ಷಕರು ಉಳಿಸಿಕೊಳ್ಳುತ್ತಾರೆ ನೋಡಬೇಕಾಗಿದೆ. ಪದೇ ಪದೇ ಕಾರ್ತಿಕ್ ನಾಮಿನೇಟ್ ಆಗುತ್ತಿದ್ದರು ಕ್ಯಾಪ್ಟನ್ ಆಗಿದ್ದರಿಂದ ಕಾರ್ತಿಕ್ ಅವರು ಈ ಬಾರಿ ನಾಮಿನೇಟ್ ಆಗಿಲ್ಲ.

colors-kannada-bigg-boss-season-10

ಮೊದಲ ವಾರ ಸ್ನೇಕ್ ಶ್ಯಾಮ್, ಎರಡನೇ ವಾರ ಗೌರೀಶ್ ಅಕ್ಕಿ ಮನೆಯಿಂದ ಹೊರ ಹೋಗಿದ್ದರು. ನಂತರ ಮನೆಯಿಂದ ರಕ್ಷಕ್ ಬುಲೆಟ್ ಹಾಗೂ ಈ ವಾರ ಭಾಗ್ಯಶ್ರೀ ಹಾಗೂ ಇಶಾನಿ ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋಗಿದ್ದಾರೆ. ಇಶಾನಿಗೆ ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದು ಇಷ್ಟವಿರಲಿಲ್ಲ. ಇದಕ್ಕೆ ಕಿಚ್ಚ ಸುದೀಪ್ ಬಳಿಯಲ್ಲಿ ನಾನು ಇನ್ನೂ ಸ್ವಲ್ಪ ದಿನಾ ಬಿಗ್ ಬಾಸ್ ಮನೆಯಲ್ಲಿ ಇರುತ್ತೇನೆ ನಾನು ಆಟ ಬಿಟ್ಟು ಹೊರಗೆ ಹೋಗಲ್ಲ ಎಂದು ಕಣ್ಣೀರು ಹಾಕಿದ್ದರು. ಆದರೆ ಕಿಚ್ಚ ಸುದೀಪ್ ನೀವು ಅಲ್ಲಿದ್ದಾಗಲೇ ಎಲ್ಲವನ್ನ ಮಾಡಬೇಕಾಗಿತ್ತು ಎಂದು ಸಮಾಧಾನವನ್ನು ಮಾಡಿದ್ದರು. ಭಾಗ್ಯಶ್ರೀ ನಾನು ಬಿಗ್ ಬಾಸ್ ಗೆ ಬಂದಿದ್ದು ಖುಷಿ ಕೊಟ್ಟಿದೆ ಎಂದು ಹೇಳಿ ನಗುತ್ತಲೇ ಹೊರಗೆ ಬಂದಿದ್ದರು.

ಮನೆಯಿಂದ ಹೊರಗೆ ಹೋಗೋದು ಯಾರು?

ಬಿಗ್ ಬಾಸ್ ಮನೆಯಲ್ಲಿರುವ ಒಂಬತ್ತು ಮಂದಿ ಸದಸ್ಯರು ಈ ವಾರ ನಾಮಿನೇಟ್ ಆಗಿದ್ದಾರೆ. ಕಳೆದ ಬಾರಿ ನಾಮಿನೇಟ್ ಆಗಿದ್ದವರೇ ಈ ವಾರವು ನಾಮಿನೇಟ್ ಆಗಿದ್ದಾರೆ .ಆದರಲ್ಲಿ ಕಾರ್ತಿಕ್ ಅನ್ನು ಹೊರತುಪಡಿಸಿ ಇಬ್ಬರು ಹೊಸ ಸೇರ್ಪಡೆಯಾಗಿದ್ದಾರೆ. ಅದು ಯಾರೆಂದರೆ ಸಿರಿ ಹಾಗೂ ಡ್ರೋನ್ ಪ್ರತಾಪ್. ಪ್ರತಾಪ್ ಕಳೆದ ಎರಡು ವಾರಗಳಿಂದ ನಾಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ನಾಮಿನೇಟ್ ಆಗಿದ್ದಾರೆ.

colors-kannada-bigg-boss-season-10

ನಮ್ರತಾ, ವಿನಯ್, ಪ್ರತಾಪ್, ಸಿರಿ, ತುಕಾಲಿ ಸಂತೋಷ್, ನೀತು, ಸಂಗೀತಾ, ತನಿಷಾ, ಸ್ನೇಹಿತ್ ಈ ವಾರ ನಾಮಿನೇಟ್ ಆಗಿರುವ ಸ್ಪರ್ಧಿಗಳು. ನಮ್ರತಾ, ವಿನಯ್, ತುಕಾಲಿ ಸಂತೋಷ್, ನೀತು, ಸ್ನೇಹಿತ್ , ತನಿಷಾ ಕಳೆದ ವಾರವು ಸಹ ನಾಮಿನೇಟ್ ಆಗಿದ್ದರು. ಸದ್ಯಕ್ಕೆ ಅವರೆಲ್ಲರೂ ಸಹ ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಉಳಿದುಕೊಂಡಿದ್ದರು. ಆದರೆ ಈ ವಾರ ಬಿಗ್ ಬಾಸ್ ಮನೆ ಬಿಟ್ಟು ಹೊರಡೋದು ಯಾರು ಎಂಬುದನ್ನ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ತಿಳಿಸುತ್ತಾರೆ. ಕಳೆದ ವಾರ ಸರ್ಪ್ರೈಸ್ ಆಗಿ ಡಬಲ್ ಎಲಿಮಿನೇಷನ್ ಮಾಡಿ ಬಿಗ್ ಬಾಸ್ ಮನೆಯಿಂದ ಇಬ್ಬರೂ ಹೊರಗೆ ಹೋದರು.

ಎಲ್ಲರನ್ನೂ ಸೇವ್ ಮಾಡುತ್ತಿದ್ದ ಪ್ರತಾಪನನ್ನು ಕೂಡ ಮನೆಯ ಸದಸ್ಯರು ನಾಮಿನೇಟ್ ಮಾಡಿದ್ದಾರೆ. ಎರಡು ಮೂರು ಸಲ ಪ್ರತಾಪ್ ಅವರು ತಮಗೆ ಇಷ್ಟ ಬಂದವರನ್ನು ನಾಮಿನೇಷನ್‌ನಿಂದ ಪಾರು ಮಾಡಿದ್ದರು. ಇದರಲ್ಲಿ ಭಾಗ್ಯಶ್ರೀ ಸಹ ಹಲವಾರು ಬಾರಿ ಪಾಲು ಪಡೆದಿದ್ದರೂ ಕೊನೆಗೂ ಭಾಗ್ಯಶ್ರೀ ಅವರಿಗೆ ಯಾವ ಲಕ್ ಕೈ ಹಿಡಿಯದೆ ಮನೆಯಿಂದ ನಿರ್ಗಮಿಸಿದ್ದಾರೆ. ಈ ವಾರ ನೀತು ಅಥವಾ ಸಿರಿ ಇಬ್ಬರಲ್ಲಿ ಯಾರಾದರೂ ಹೊರಗೆ ಹೋಗುತ್ತಾರೆ ಎಂದು ವೀಕ್ಷಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅಂತಿಮವಾಗಿ ವೋಟ್‌ಗಳ ಮೇಲೆ ಯಾರು ಹೊರಗೆ ಹೋಗುತ್ತಾರೆ ಎಂಬುದು ನಿರ್ಣಯವಾಗುತ್ತದೆ.

More from Filmibeat

English summary
Bigg boss season 10: This week nominated contestant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X