Bigg Boss 10: ಕಾರ್ತಿಕ್‌ಗೆ ಸಿಕ್ತು ಸಪ್ರೈಸ್ ಗಿಫ್ಟ್... ಲವ್ಲಿ ಗಿಫ್ಟ್ ಅಂದ್ರು ಕಿಚ್ಚ ಸುದೀಪ್..!

By Shruthi Harishgowda

ಕಿಚ್ಚ ಸುದೀಪ್ ಅವರು ಶನಿವಾರವೇ ಮನೆಯ ಸದಸ್ಯರಿಗೆ ಸರಿಯಾದ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಸಂಗೀತಾ, ಕಾರ್ತಿಕ್ ಹಾಗೂ ತನಿಷಾ ಮೂವರು ಸ್ನೇಹಿತರಾಗಿದ್ದು, ಈಗ ಯಾಕೆ ಜಗಳವಾಡಿಕೊಳ್ತೀರಾ ಎಂದು ಬುದ್ದಿ ಹೇಳಿದ್ದರು. ಮನೆಯ ಸದಸ್ಯರು ಒಬ್ಬರಿಗೊಬ್ಬರಿಗೆ ಎಷ್ಟರಮಟ್ಟಿಗೆ ತಿಳಿದುಕೊಂಡಿದ್ದಾರೆ ಎಂಬುದಕ್ಕೆ ಒಂದಷ್ಟು ಟಾಸ್ಕ್ ನೀಡಿ ಯಾರ ಮೇಲೆ ಯಾರಿಗೆ ಎಂತಹ ಅಭಿಪ್ರಾಯವಿದೆ ಎಂಬುದನ್ನು ಹೊರ ಹಾಕಿಸಿದರು. ಈಗ ಮನೆಯಲ್ಲಿ ಯಾರು ಒರಿಜಿನಲ್ ಎಂಬ ಚರ್ಚೆಯು ನಡೆದಿದ್ದು ವಿನಯ್‌ಗೆ ಅತಿಹೆಚ್ಚು ವೋಟು ಬಿದ್ದಿದೆ ತುಕಾಲಿ ಸಂತೋಷ್ ಕೂಡ ವಿನಯ್ ವಿರುದ್ಧ ಮಾತನಾಡಿದ್ದಾರೆ.

ಇನ್ನು ಕಿಚ್ಚ ಸುದೀಪ್ ಸ್ನೇಹಿತ್‌ಗೂ ಕೂಡ ಚೆನ್ನಾಗಿ ಚಳಿ ಬಿಡಿಸಿದ್ದಾರೆ. ಪದೇ ಪದೇ ಭಾಗ್ಯಶ್ರೀ ಅವರನ್ನ ಟಾರ್ಗೆಟ್ ಮಾಡುವುದು ಸರಿಯಲ್ಲ ನೀವು ಭಾಗ್ಯಶ್ರೀ ಅವರನ್ನ ಟಾರ್ಗೆಟ್ ಮಾಡುತ್ತಿರುವುದು ತಪ್ಪು ಎಂದು ಹೇಳಿದ್ದಾರೆ. ಆ ತಪ್ಪನ್ನು ಸ್ನೇಹಿತ್ ಮತ್ತೊಮ್ಮೆ ಮಾಡದಂತೆಯೂ ಹೇಳಿದ್ದಾರೆ. ಇದೇ ವೇಳೆ ಭಾಗ್ಯಶ್ರೀ ಅವರಿಗೆ ನೀವು ಯಾವ ಕಾರಣಕ್ಕೆ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ರಿ ಎಂಬುದರ ಬಗ್ಗೆಯೂ ಕೇಳಿದ್ದರು. ಇದೆಲ್ಲವಾದ ನಂತರ ಶನಿವಾರದ ಕಥೆಯನ್ನ ಮುಗಿಸಿ ಇಶಾನಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಿದ್ದರು. ಇಂದು ಈಶಾನಿ ಮನೆಯ ಎಲ್ಲರಿಗೂ ವಿದಾಯ ಹೇಳಿ ನಿರ್ಗಮಿಸಿದ್ದಾರೆ.

Colors kannada Bigg boss season 10 : kichcha sudeeps gift for kartik

ಸೂಪರ್ ಸಂಡೇ ವಿಥ್ ಸುದೀಪ ಕಾರ್ಯಕ್ರಮ ಶುರು ಮಾಡಿದ ಸುದೀಪ್ ರವರು ಮನೆಯ ಸದಸ್ಯರನ್ನು ನಕ್ಕು ನಗಿಸಿದ್ದಾರೆ. ಹುಡುಗರದ್ದೇ ಒಂದು ಟೀಮ್ ಹಾಗೂ ಮಹಿಳೆಯರದೇ ಒಂದು ಟೀ ಮಾಡಿ ಒಂದಷ್ಟು ಟಾಸ್ಕ್ ನೀಡಿದ್ದಾರೆ. ಗೆದ್ದವರಿಗೆ ಒಂದು ಸರ್ಪ್ರೈಸ್ ಗಿಫ್ಟ್ ಇದೆ ಎಂದು ಹೇಳಿದ್ದಾರೆ. ಇನ್ನು ಹೆಣ್ಣುಮಕ್ಕಳಂತೂ ನಾವು ಯಾರಿಗೂ ಕಮ್ಮಿ ಇಲ್ಲ ನಾವು ಮೇಲುಗೈ ಸಾಧಿಸುತ್ತೇವೆ ಎಂದು ಹೇಳಿದ್ದರು. ಆದರೆ ಹುಡುಗರ ಮುಂದೆ ಮಹಿಳೆಯರ ಕೈ ಕೆಳಗಾಗಿದ್ದು ವಿನಯ್ ಅಂಡ್ ಟೀಂ ಗೆಲುವನ್ನು ಸಾಧಿಸಿದೆ. ಅತಿ ಹೆಚ್ಚು ಉತ್ತರ ನೀಡಿದಕ್ಕಾಗಿ ಸುದೀಪ್ ಅವರು ಕಾರ್ತಿಕ್‌ಗೆ ಒಂದು ಸಪ್ರೈಸ್ ಫೋಟೋವನ್ನು ಕಳುಹಿಸಿದ್ದಾರೆ.

ಕಾರ್ತಿಕ್‌ಗೆ ಸಿಕ್ತು ಬಿಗ್ ಸರ್ಪ್ರೈಸ್

ತಂಗಿ ಭಾವನ ಫೋಟೋ ನೋಡಿ ಖುಷಿ

ಬಿಗ್ ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಆಗಿರುವ ಕಾರ್ತಿಕ್ ಜನರ ಆಶೀರ್ವಾದದಿಂದಾಗಿ ಎಲಿಮಿನೇಷನ್ ನಿಂದ ಪಾರಾಗಿದ್ದಾರೆ. ಕಿಚ್ಚ ಸುದೀಪ್ ರವರು ತಾವು ಅಭಿನಯಿಸಿದ ಚಿತ್ರಗಳ ಫೋಟೋಗಳನ್ನ ಬೇರೆ ರೀತಿಯಲ್ಲಿ ಕೇಳಿದರು ಆ ಫೋಟೋಗಳ ಚಿತ್ರ ಯಾವುದು ಎಂದು ಪ್ರಶ್ನೆ ಮಾಡಿದ್ದರು ಇದೇ ವೇಳೆ ಕಾರ್ತಿಕ್ ವಿನಯ್ ಹಾಗೂ ಹಲವರು ಬಹಳ ಚೆನ್ನಾಗಿ ಉತ್ತರವನ್ನು ನೀಡಿದ್ದಾರೆ ಇದಕ್ಕಾಗಿ ಕಾರ್ತಿಕ್‌ಗೆ ಸುದೀಪ್ ಸರ್ಪ್ರೈಸ್ ಕೊಟ್ಟಿದ್ದಾರೆ. ಕಾರ್ತಿಕ್ ಅವರ ಅಮ್ಮ ತಂಗಿ ಹಾಗೂ ಬಾವನ ಫೋಟೋ ತೋರಿಸಿ ಕಾರ್ತಿಕ್ ಮುಖದಲ್ಲಿ ಕಿರುನಗೆ ಮೂಡುವಂತೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ನಿಮ್ಮ ತಂಗಿಗೆ ಏನಾದರೂ ಹೇಳೋದು ಇದ್ದರೆ ಹೇಳಿ ಎಂದು ಸುದೀಪ್ ಕೇಳಿದಾಗ, '‌ನಾನು ಆಟವಾಡುವುದನ್ನು ನೀವೆಲ್ಲರೂ ನೋಡುತ್ತಾ ಇದ್ದೀರಾ ಈಗ ನನಗೆ ಖುಷಿಯಾಗಿದೆ. ನಿಮ್ಮೆಲ್ಲರ ಫೋಟೋ ನೋಡಿ ನನಗೆ ಇನ್ನಷ್ಟು ಹುಮ್ಮಸ್ಸು ಬಂದಿದೆ. ನಾನು ಸಾಕಷ್ಟು ದಿನ ಬಿಗ್ ಬಾಸ್ ಮನೆಯಲ್ಲೇ ಇದ್ದು ಗೆಲ್ಲಲು ಪ್ರಯತ್ನ ಮಾಡುತ್ತೇನೆ.‌ ನೀವು ಹೊರಗಡೆ ಇದ್ದು ನನ್ನ ಆಟವನ್ನು ನೋಡುತ್ತಾ ಇರಿ. ಬಂದ ಕೂಡಲೇ ನಿನ್ನ ಮಗುವನ್ನ ಎತ್ತಿಕೊಂಡು ನಾನು ಮುದ್ದಾಡುತ್ತೇನೆ ಪುಟ್ಟಿ' ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

Colors kannada Bigg boss season 10 : kichcha sudeeps gift for kartik

ಗುಂಪು ಕಟ್ಟಿಕೊಳ್ಳಬೇಡಿ ಎಂದ ಸುದೀಪ್

ಇನ್ಮೇಲಾದರೂ ಬದಲಾಗುತ್ತಾರಾ ಮನೆಯ ಮಂದಿ

ಮನೆಯಲ್ಲಿರುವ ಎಲ್ಲಾ ಸದಸ್ಯರು ತಮ್ಮದೇ ಗುಂಪನ್ನು ಕಟ್ಟಿಕೊಂಡು ಆಟವಾಡುತ್ತಾ ಇದ್ದೀರಾ ಎಂಬ ಎಚ್ಚರಿಕೆಯ ಮಾತನ್ನ ಸುದೀಪ್ ಹೇಳಿದ್ದಾರೆ. ಆಟ ಬಂದ ಮೇಲೆ ಗುಂಪು ಕಟ್ಟಿಕೊಳ್ಳಬೇಕು ನಂತರ ಒಬ್ಬೊಬ್ಬರೇ ಆಡಬೇಕು. ಆದರೆ ಇಲ್ಲಿ ನನ್ನ ತಂಡ ನನ್ನ ತಂಡ ಎಂಬ ಮಾತು ಕೇಳಿ ಬರುತ್ತಿದೆ.‌ಇದು ಅಷ್ಟು ಒಳ್ಳೆಯದಲ್ಲ ಎಂದು ಸುದೀಪ್ ಹೇಳಿದ್ದಾರೆ.

ಇನ್ನು ವಿನಯ್‌ಗೆ ಎಲ್ಲರೂ ಫೇಕ್ ಎಂಬ ಹಣೆಪಟ್ಟಿ ಕೊಟ್ಟಿದ್ದಕ್ಕೆ ಬಹಳಷ್ಟು ಕೋಪ ಬಂದಿದೆ. ನಾನು ಇಷ್ಟು ದಿನ ಬೇರೆಯ ರೀತಿಯಲ್ಲಿ ಆಟ ಆಡುತ್ತಿದ್ದೆ. ಆದರೆ ಇನ್ಮೇಲೆ, 2.0 ವರ್ಷನ್ ಆಟವನ್ನು ನಾನು ಶುರು ಮಾಡೇ ಮಾಡುತ್ತೇನೆ ಎಂದು ಸಿರಿ ಹಾಗೂ ನಮ್ರತಾ ಬಳಿಯಲ್ಲಿ ವಿನಯ್ ಹೇಳಿದ್ದಾರೆ. ಕಿಚ್ಚ ಸುದೀಪ್ ರವರ ಮಾತನ್ನ ಸೀರಿಯಸ್ಸಾಗಿ ಮನೆ ಸದಸ್ಯರು ತೆಗೆದುಕೊಂಡು ತಮ್ಮ ಪಾಡಿಗೆ ತಾವು ಆಟವನ್ನು ಮುಂದುವರಿಸುತ್ತಾರಾ ನೋಡಬೇಕಾಗಿದೆ.

More from Filmibeat

English summary
Colors kannada Bigg boss Written Update on weekend with sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X