ದೊಡ್ಮನೆಯಲ್ಲಿ ಗುಂಪುಗಾರಿಕೆ: ನಾವು ಮನುಷ್ಯರೇ ಅಣ್ಣಾ ಎನ್ನುತ್ತಾ ಸ್ನೇಹಿತ್‌ಗೆ ಚಾಟಿ ಬೀಸಿದ ಡ್ರೋನ್ ಪ್ರತಾಪ್..!
ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಬುದ್ಧಿವಂತಿಕೆಯಿಂದ ಆಟವಾಡುತ್ತಾ ಇದ್ದಾರೆ. ಯಾರ ಮೇಲೂ ಸಹ ಜಗಳವನ್ನು ಮಾಡಿಕೊಳ್ಳುವುದಿಲ್ಲ ಕಿರುಚಾಡುವುದಿಲ್ಲ . ಆದರೆ ಅಂತಹ ಡ್ರೋನ್ ಪ್ರತಾಪ್ ಗೆ ಗುಂಪು ಕಟ್ಟಿಕೊಂಡಿರುವವರು ತೊಂದರೆ ನೀಡುತ್ತಿದ್ದಾರೆ. ಪ್ರತಾಪ್ ತಮ್ಮ ಕೈಲಿ ಟಾಸ್ಕ್ ಮಾಡಲು ಆಗುತ್ತದೆ ಎಂದರೆ ಮಾತ್ರ ಅಂಥ ಟಾಸ್ಕ್‌ಗಳಲ್ಲಿ ಭಾಗವಹಿಸಿ ತಂಡದ ಗೆಲುವಿಗೆ ಕಾರಣವೂ ಸಹ ಆಗಿದ್ದಾರೆ. ಆದರೆ ಅಂತಹ ಡ್ರೋನ್ ಪ್ರತಾಪ್ ಮೇಲೆ ಕೆಲವರು ಸವಾರಿ ಮಾಡಲು ಹೊರಟಿದ್ದಾರೆ.
ಪ್ರತಾಪ್‌ಗೆ ಹಲವು ಬಾರಿ ಸ್ನಾನದ ಮನೆಯನ್ನು ಕೆಲವರು ಬಿಟ್ಟು ಕೊಡೋದೇ ಇಲ್ಲ ಅಂತಹ ಸನ್ನಿವೇಶ ಕೂಡ ಇಂದು ನಡೆದಿದೆ. ಸ್ನೇಹಿತ್ ವಿನಯ್ ಗೋಸ್ಕರ ಬಚ್ಚಲು ಮನೆಯಲ್ಲೇ ಕುಳಿತುಕೊಂಡಿದ್ದಾರೆ. ವಿನಯ್ ಬಂದು ಸ್ನಾನದ ಮನೆಗೆ ಹೋಗಿದ್ದಾರೆ. ಆದರೆ ಕಾಯುತ್ತಿದ್ದ ಪ್ರತಾಪ್ ಕೇಳಿದ್ದಕ್ಕೆ ನನ್ನ ಕೆಲಸ ಆಗಿರಲೇ ಇಲ್ಲ ಎಂದು ಉಡಾಫೆಯಿಂದ ಉತ್ತರ ನೀಡಿದ್ದಾರೆ. ಪ್ರತಾಪ್ ತುಂಬಾ ಹೊತ್ತಿನಿಂದ ಕಾಯುತ್ತಿದ್ದರು. ಆದರೆ ಗುಂಪು ಕಟ್ಟಿಕೊಂಡಿರುವ ವಿನಯ್, ಸ್ನೇಹಿತ್ ಕೂಡ ತಮ್ಮ ಕೆಲಸ ಆಗುವವರೆಗೂ ಬೇರೊಬ್ಬರಿಗೆ ಯಾವುದನ್ನು ಬಿಟ್ಟು ಕೊಡಬಾರದು ಎಂಬಂತೆ ಆಡುತ್ತಿದ್ದಾರೆ. ಇದರಿಂದಾಗಿ ಡ್ರೋನ್ ಪ್ರತಾಪ್‌ಗೆ ಸ್ನಾನದ ಮನೆಯನ್ನೇ ಬಿಟ್ಟು ಕೊಟ್ಟಿಲ್ಲ. ಸ್ನೇಹಿತ್ ಆದಮೇಲೆ ವಿನಯ್ ಸ್ನಾನಕ್ಕೆ ಹೋಗಿದ್ದು ಪ್ರತಾಪ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ನೇಹಿತ್ ಮೊದಲು ಸ್ನಾನಕ್ಕೆ ಹೋಗಿದ್ದರು ನಂತರ ವಿನಯ್ ಬಂದು ಕಾಯುತ್ತಾ ಕುಳಿತಿದ್ದರು ಅದಕ್ಕೂ ಮೊದಲು ಪ್ರತಾಪ್ ಅಲ್ಲಿಯೇ ಇದ್ದರು. ಇದೆ ವೇಳೆ ಸ್ನೇಹಿತ್ ಹೊರಗಡೆ ಬಂದ ಕೂಡಲೇ ವಿನಯ್ ಸ್ನಾನದ ಮನೆಯ ಒಳಗೆ ಹೋಗಿದ್ದಾರೆ. ಡ್ರೋನ್ ಪ್ರತಾಪ್ ಸ್ನೇಹಿತ್‌ನನ್ನು ನೀವು ಯಾಕೆ ಈ ರೀತಿ ಮಾಡಿದ್ರಿ ಎಂದು ಕೇಳಿದ್ದಕ್ಕೆ ನನ್ನ ಕೆಲಸವೇ ಮುಗಿದರೆಲಿಲ್ಲ, ನಾನು ಟವಲ್ ತೆಗೆದುಕೊಂಡು ಬರಲು ಹೋಗಿದ್ದೆ ಎಂದು ಉತ್ತರ ನೀಡಿದ್ದಾರೆ. ದಕ್ಕೆ ಪ್ರತಾಪ್ ಸಮಾಧಾನದಿಂದಲೇ ಉತ್ತರ ನೀಡಿದ್ದಾರೆ ನೀವೇನು ಮೇಲಿನಿಂದ ಇಳಿದು ಬಂದವರಲ್ಲ ಎಂಬ ಮಾತು ಹೇಳಿದ್ದಕ್ಕೆ ಸ್ನೇಹಿತ್ ಇವಾಗ ಏನು ಎಂದು ದುರಾಹಂಕಾರದಿಂದ ಮಾತಾಡಿದ್ದಾರೆ.
ಗುಂಪುಗಾರಿಕೆ ಬಗ್ಗೆ ತಿರುಗಿ ಬೀಳ್ತಾರ ಪ್ರತಾಪ್?
ಪ್ರತಾಪ್ ಸ್ನಾನದ ಮನೆಗೆ ಹೋದಾಗ ಸ್ನೇಹಿತ್ ಹಾಗೂ ವಿನಯ್ ಇಬ್ಬರು ಕೂಡ ಪ್ರತಾಪ್ ಗೆ ಕೋಪ ಬರಿಸುವ ಕೆಲಸ ಮಾಡಿದ್ದಾರೆ. ಸ್ನೇಹಿತ್ ಹೋದ ಮೇಲೆ ವಿನಯ್ ಸ್ನಾನದ ಮನೆಗೆ ಹೋಗಿದ್ದು ಪ್ರತಾಪ್‌ಗೆ ಯಾಕೋ ಇಷ್ಟವಾಗಿಲ್ಲ. ನಾನು ಮೊದಲಿನಿಂದಲೂ ಕಾಯುತ್ತಿದ್ದು ಸ್ನೇಹಿತ್ ನೋಡಿದರೆ ವಿನಯ್ ಗೆ ಬಾತ್ರೂಮ್ ಬಿಟ್ಟುಕೊಟ್ಟರು ಎಂದು ಪ್ರತಾಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟ ಬಂದ ರೀತಿ ಎಲ್ಲಿ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಅಣ್ಣ ಎಂದು ಪ್ರತಾಪ್ ನಯವಾಗಿಯೇ ಸ್ನೇಹಿತ್‌ಗೆ ತಿವಿದಿದ್ದಾರೆ.

ಆದರೆ ಸ್ನೇಹಿತ ಮಾತ್ರ ನನ್ನ ಕೆಲಸ ಮುಗಿದಿರಲೇ ಇಲ್ಲ ಅದಕ್ಕೆ ನಾನು ಹೊರಗೆ ಬಂದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ ಈ ಮಾತು ಡ್ರೋನ್ ಪ್ರತಾಪ್ ಅವರ ಕೋಪಕ್ಕೆ ಕಾರಣವಾಗಿದೆ ಇದಕ್ಕೆ ಪ್ರತಾಪ್ ಅವರು ನೀವೇನು ಮೇಲಿನಿಂದ ಇಳಿದು ಬಂದಿಲ್ಲ ಎಂದು ಹೇಳಿದ್ದಾರೆ. ನಾವು ಸಹ ನಿಮ್ಮಂತೆ ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಈ ರೀತಿಯಲ್ಲ ಬಿಗ್ ಬಾಸ್ ಮನೆಯಲ್ಲಿ ಗುಂಪು ಕಟ್ಟಿಕೊಂಡು ನಡೆದುಕೊಳ್ಳುವ ರೀತಿ ಕೈ ಇಲ್ಲ ಅಣ್ಣ ಎಂದು ಸ್ನೇಹಿತ್‌ಗೆ ಪ್ರತಾಪ್ ಮಾತಿನಲ್ಲಿಯೇ ಚಾಟಿಯನ್ನು ಬೀಸಿದ್ದಾರೆ.
ಫಿನಾಲೆವರೆಗೂ ಇರ್ತಾರಾ ಪ್ರತಾಪ್..?
ಇನ್ನು ಪ್ರತಾಪ್ ಜೊತೆ ಮಾತುಕತೆ ನಡೆಸಿದ ಸ್ನೇಹಿತ್ ಹೊರಗಡೆ ಹೋಗಿದ್ದಾರೆ. ಇದೇ ವೇಳೆ ನಮ್ರತಾ ಹಾಗೂ ಸಂಗೀತ, ಮೈಕಲ್, ವಿನಯ್ ಎಲ್ಲರೂ ಕೂಡ ಪ್ರತಾಪ್ ಅಂದ ಮಾತಿನ ಬಗ್ಗೆ ಡಿಸ್ಕಸ್ ಮಾಡುತ್ತಿದ್ದಾರೆ. ಇದೇ ವೇಳೆ ನಮ್ರತಾ ಅವನು ಈ ಮಾತನ್ನ ಫಿನಾಲೆ ವರೆಗೂ ಬಿಡುವುದೇ ಇಲ್ಲ ಎಂದು ಹೇಳಿದ್ದಾರೆ. ಈಗಾಗಲೇ ನಾಮಿನೇಟ್ ಆಗಿರುವ ಪ್ರತಾಪ್ ಫಿನಾಲೆವರೆಗೂ ಬರ್ತಾರೆ ಎಂಬುವುದು ನಮ್ರತಾ ಅಭಿಪ್ರಾಯವಾಗಿದೆ. ಹಾಗಾದರೆ ಪ್ರತಾಪ್ ಫಿನಾಲೆವರೆಗೂ ಬರ್ತಾರಾ ಎಂಬ ಪ್ರಶ್ನೆ ಸಹ ವೀಕ್ಷಕರಲ್ಲಿ ಮೂಡಿದೆ.
ಇನ್ನು ಸಂಗೀತ ಪ್ರತಾಪ್ ಒಂದು ಮಾತಿಗೆ ಕಚ್ಚಿಕೊಂಡು ಬಿಟ್ಟರೆ ಮುಗಿಯಿತು ಅದನ್ನೇ ಮಾತನಾಡುತ್ತಾ ಇರುತ್ತಾರೆ ಎಂದು ಹೇಳಿದ್ದಾರೆ. ಆದರೆ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ನೇರವಂತಿಕೆಯಿಂದಲೇ ಆಟವನ್ನ ಆಡಬೇಕು ಎಂದು ವೀಕ್ಷಕರು ಪ್ರತಾಪ್ ಮಾತಿಗೆ ಸಪೋರ್ಟ್ ಮಾಡಿದ್ದಾರೆ. ನಾಮಿನೇಟ್ ಆಗಿರುವ ಪ್ರತಾಪ್ ಈ ವಾರವು ಸಹ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.


Click it and Unblock the Notifications











