ಕ್ಯಾಪ್ಟನ್ ಆಗಬೇಕೆಂದು ತಮ್ಮ ತಂಡದ ವಿರುದ್ಧವೇ ತಿರುಗಿಬಿದ್ದ ಕಾರ್ತಿಕ್..! ಮಜಾ ತಗೆದುಕೊಂಡ ಎದುರಾಳಿಗಳು..!

By Shruthi Harishgowda

ಸಂಗೀತಾ ತಮ್ಮ ಟೀಮ್ ಬಿಟ್ಟು ಹೋದ ಮೇಲೆ ಸಂಗೀತಾ ಮೇಲಿರುವ ಕೋಪವನ್ನೆಲ್ಲ ತಮ್ಮ ತಂಡದ ಸದಸ್ಯರ ಮೇಲೆ ತೋರಿಸುತ್ತಾ ಇದ್ದಾರೆ ಕಾರ್ತಿಕ್. ಇದು ಮೊನ್ನೆಯಿಂದಲೂ ಪ್ರಕಟವಾಗುತ್ತಲೇ ಇದೆ ಸಣ್ಣ ಪುಟ್ಟ ವಿಚಾರಕ್ಕೆಲ್ಲ ಕಾರ್ತಿಕ್ ಅತಿ ಬೇಗ ರಿಯಾಕ್ಟ್ ಮಾಡುತ್ತಾ ಇದ್ದಾರೆ. ಇಂದು ತಮ್ಮ ತಂಡದ‌ ಸದಸ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಗ್ ಬಾಸ್ ಇಂದು ಒಂದು ಹೊಸ ಟಾಸ್ಕ್‌ನ್ನು ಕಾರ್ತಿಕ್ ತಂಡಕ್ಕೆ ನೀಡಿದ್ದಾರೆ. ಸಂಪತ್ತಿಗೆ ಸವಾಲ್ ತಂಡದಲ್ಲಿ ಇಬ್ಬರು ಸದಸ್ಯರನ್ನು ಹೊರತುಪಡಿಸಿ ನಾಲ್ವರು ಸದಸ್ಯರು ಆಡಬಹುದು ಎಂದು ಬಿಗ್ ಬಾಸ್ ಹೇಳಿದ್ದಾರೆ. ಆದರೆ ಕಾರ್ತಿಕ್ ನಾನು ಕೂಡ ಟಾಸ್ಕ್ ಆಡುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ದಿನದಿನಕ್ಕೂ ಹೊಸ ಹೊಸ ಟಾಸ್ಕ್ ನೀಡಲಾಗುತ್ತದೆ ಅದು ಪ್ರತ್ಯೇಕವಾಗಿರಬಹುದು ಅಥವಾ ತಂಡದ ಸದಸ್ಯರು ಆಡುವಂತಿರಬಹುದು. ಇನ್ನೂ ಕೆಲವೊಂದು ಬಾರಿ ಉತ್ತಮವಾದ ನಿರ್ಧಾರವನ್ನು ತಗೆದುಕೊಳ್ಳುವಂತಹ ಮಾತನ್ನು ಬಿಗ್ ಬಾಸ್ ನೀಡುತ್ತಾರೆ. ‌ಇಂದು ಅಂತಹದ್ದೇ ಒಂದು ನಿರ್ಧಾರವನ್ನು ತಗೆದುಕೊಳ್ಳುವ ಮಾತನ್ನು ಬಿಗ್ ಬಾಸ್ ಹೇಳಿದ್ದಾರೆ. ಆದರೆ ಕಾರ್ತಿಕ್ ಮಾತ್ರ ತಮ್ಮದೇ ತಂಡದ ಸದಸ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ ಅದು ಯಾಕೆಂದರೆ ತಾನು ಮತ್ತೊಮ್ಮೆ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇದ್ದು, ನಾನೇ ಕ್ಯಾಪ್ಟನ್ ಆಗುತ್ತೇನೆ ಎಂದು ಕಾರ್ತಿಕ್ ಹೇಳಿರುವುದು ತಂಡದ ಸದಸ್ಯರಿಗೆ ಅಸಮಾಧಾನ ತಂದಿದೆ.

Colors kannada Bigg boss season 10 Update: Karthik fighting with his own team

ಕಾರ್ತಿಕ್ ತಮ್ಮ ಸ್ವಾರ್ಥವನ್ನು ಬಿಟ್ಟು ತಮ್ಮದೇ ತಂಡದ ಸದಸ್ಯರ ಹಿತವನ್ನ ಬಯಸುವುದಾಗಿದ್ದರೆ ಇದುವರೆಗೂ ಕ್ಯಾಪ್ಟನ್ ಆಗದ ವರ್ತೂರು ಸಂತೋಷ್, ತುಕಾಲಿ ಸಂತೋಷ್, ನೀತು ಹಾಗೂ ತನಿಷಾಗೆ ಒಂದು ಚಾನ್ಸ್ ಕೊಟ್ಟು ನೋಡಬಹುದಾಗಿತ್ತು. ಮೈಕಲ್ ಈಗಾಗಲೇ ಕ್ಯಾಪ್ಟನ್ ಆಗಿದ್ದು ಅವರು ಮಾತನಾಡಿಲ್ಲ ಆದರೆ ಕಾರ್ತಿಕ್ ಸ್ವಾರ್ಥದಿಂದ ನಾನು ಸಹ ಇವತ್ತು ಆಡುತ್ತೇನೆ ನನ್ನಿಂದಲೂ ಸಹ ತಂಡ ಗೆದ್ದಿದೆ ಎಂಬ ಮಾತನ್ನು ಆಡಿದ್ದಾರೆ. ಇದು ತುಕಾಲಿ ಸಂತೋಷ್‌ಗೆ ಯಾಕೋ ಇಷ್ಟವಾಗಿಲ್ಲ ಅದಕ್ಕಾಗಿ ಕಾರ್ತಿಕ್ ಹೇಳಿದ ಮಾತನ್ನು ತಿರಸ್ಕಾರ ಮಾಡಿದ್ದಾರೆ. ತಮ್ಮದೇ ತಂಡದ ಸದಸ್ಯರ ವಿರುದ್ಧ ಕಾರ್ತಿಕ್ ಮಾತನಾಡಿರುವುದು ಎದುರು ಟೀಂನವರಿಗೆ ಬಹಳಷ್ಟು ಮಜಾವನ್ನು ಕೊಟ್ಟಿದ್ದು ಕಾರ್ತಿಕ್ ಜಗಳ ಮಾಡುತ್ತಿರುವುದಕ್ಕೆ ಖುಷಿಪಟ್ಟಿದ್ದಾರೆ.

ಸ್ವಾರ್ಥದಿಂದ ನಡೆದುಕೊಂಡ್ರಾ ಕಾರ್ತಿಕ್?

ಮತ್ತೊಮ್ಮೆ ಕ್ಯಾಪ್ಟನ್ ಆಗುತ್ತಾರಾ?

ಸಂಪತ್ತಿಗೆ ಸವಾಲ್ ತಂಡ ಗಜಕೇಸರಿ ತಂಡವನ್ನ ಮಣಿಸಿ ಸಾಕಷ್ಟು ಟಾಸ್ಕ್‌ಗಳನ್ನ ಗೆದ್ದಿದೆ. ಇದಕ್ಕಾಗಿ ಬಿಗ್ ಬಾಸ್ ಸಂಪತ್ತಿಗೆ ಸವಾಲ್ ತಂಡಕ್ಕೆ ಒಂದು ಆಫರ್ ಕೊಟ್ಟಿದ್ದಾರೆ. ಸಂಪತ್ತಿಗೆ ಸವಾಲ್ ತಂಡದಲ್ಲಿರುವ ಸದಸ್ಯರು ಆರು ಮಂದಿ ಆಗಿದ್ದು ಅದರಲ್ಲಿ ಇಬ್ಬರನ್ನು ಹೊರತುಪಡಿಸಿ ನಾಲ್ಕು ಮಂದಿ ಮಾತ್ರ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು ಎಂದು ಹೇಳಿದ್ದಾರೆ. ಆ ಇಬ್ಬರನ್ನು ಗುರುತು ಮಾಡಬೇಕು ಎಂದು ಹೇಳಿದ್ದರು. ಈಗಾಗಲೇ ಮೈಕಲ್ ಹಾಗೂ ಕಾರ್ತಿಕ್ ಇಬ್ಬರು ಸಹ ಕ್ಯಾಪ್ಟನ್ ಆಗಿದ್ದು ನೀತು, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ತನಿಷಾ ಮಾತ್ರ ಕ್ಯಾಪ್ಟನ್ ಆಗಿಲ್ಲ. ಇಬ್ಬರನ್ನು ಬಿಟ್ಟರೆ ಈ ನಾಲ್ಕು ಮಂದಿ ಆಡಲು ಅರ್ಹರಾಗಿದ್ದರು.

Colors kannada Bigg boss season 10 Update: Karthik fighting with his own team

ಆದರೆ ಕಾರ್ತಿಕ್ ತಾನು ಮತ್ತೊಮ್ಮೆ ಕ್ಯಾಪ್ಟನ್ ಆಗಬೇಕು ಎಂದು ನಾನು ಸಹ ಕ್ಯಾಪ್ಟನ್ ಟಾಸ್ಕ್ ಆಡುವೆ ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ವಿರೋಧ ವ್ಯಕ್ತಪಡಿಸಿದ್ದಾರೆ. ನಿನ್ನ ಒಬ್ಬನಿಂದಲೇ ನಾವ್ಯಾರು ಟಾಸ್ಕ್‌ಗಳನ್ನ ಗೆಲ್ಲಿಲ್ಲ ತಂಡದ ಸದಸ್ಯರು ಆಡಿದ್ದಕ್ಕೆ ಎಲ್ಲಾ ಟಾಸ್ಕ್‌ಗಳಲ್ಲೂ ವಿನ್ ಆಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ಕಾರ್ತಿಕ್ ಸ್ವಾರ್ಥದಿಂದ ನನ್ನಿಂದಲೇ ಆಟ ಗೆದ್ದಿದ್ದು ಎಂದು ಹೇಳಿದ್ದಾರೆ. ಟಾಸ್ಕ್‌ಗಾಗಿ ನಾನು ಸಹ ತಲೆ ಬೋಳಿಸಿಕೊಂಡಿದ್ದೇನೆ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ. ತುಕಾಲಿ ಸಂತೋಷ್‌ಗೆ ಕಾರ್ತಿಕ್ ಬೈದಿದ್ದಾರೆ.

ಜಗಳ ನೋಡಿ ಮಜಾ ತಗೆದುಕೊಂಡ ಎದುರಾಳಿಗಳು

ಇಲ್ಲಿ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಜಗಳ ಮಾಡುತ್ತಿದ್ದರೇ, ಎದುರಾಳಿ ತಂಡದ ಸದಸ್ಯರು ಇವರನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ತನಿಷಾ ಹಾಗೂ ವರ್ತೂರು ಸಂತೋಷ್ ನಾವು ಕ್ಯಾಪ್ಟೆನ್ಸಿ ಟಾಸ್ಕ್ ಆಡುತ್ತೇವೆ ಎಂದು ಕಾರ್ತಿಕ್ ಬಳಿಯಲ್ಲಿ ಹೇಳಿದ್ದಾರೆ. ಈಗ ಯಾರು ಯಾರು ಕ್ಯಾಪ್ಟೆನ್ಸಿ ಟಾಸ್ಕ್ ಆಡುತ್ತಾರೆ ಎಂದು ನೋಡಬೇಕಾಗಿದೆ. ಆದರೆ ಕಾರ್ತಿಕ್ ತೆಗೆದುಕೊಂಡಿರುವ ನಿರ್ಧಾರ ಮಾತ್ರ ಸ್ವಾರ್ಥದಿಂದ ಕೂಡಿದ್ದು ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ.

More from Filmibeat

English summary
Colors kannada Bigg boss: Karthik fighting with his own team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X