BBK 10: ನಮ್ರತಾಗೆ ಸಿಕ್ತು ಚಮಚಾಗಿರಿ ಗಿಫ್ಟ್..! ಸಂತೋಷ್, ವಿನಯ್‌ಗೆ ಜನರ ಬುದ್ಧಿವಾದವೇನು?
ಬಿಗ್ ಬಾಸ್ ಮನೆಯೊಳಗೆ ನಮ್ರತಾ ವಿನಯ್‌ಗೆ ಸಪೋರ್ಟ್ ಮಾಡುತ್ತಾ ಆಡುತ್ತಿದ್ದರೆ... ಸಂಗೀತಾ ಕಾರ್ತಿಕ್‌ಗೆ ಸಪೋರ್ಟ್ ಮಾಡುತ್ತಿದ್ದಾರೆ. ಇನ್ನು ಈಶಾನಿ, ಸಂತೋಷ್ ಸೇರಿದಂತೆ ಹಲವರು ತಮ್ಮದೇ ಆದಂತಹ ಒಂದು ಸಿದ್ಧಾಂತವನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ. ಈಗ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ನೀತು ಮತತ್ಉ ಮೈಕಲ್ ಈ ವಾರದ ಉತ್ತಮರು ಎಂದು ಅನಿಸಿಕೊಂಡಿದ್ದಾರೆ. ಸ್ನೇಹಿತ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬ ಬಿರುದನ್ನು ಪಡೆದಿದ್ದಾರೆ. ಈಗ ನಮ್ರತಾ ತಮ್ಮ ಆಟವನ್ನು ಚಾಲೋ ಮಾಡಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ಚನ್ನಾಗಿ ತಂದಿಟ್ಟು ತಮಾಷೆ ನೋಡುವ ಕೆಲಸ ಮಾಡುತ್ತಾ ಇದ್ದಾರೆ.
ಇಂದು ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚನ ಜೊತೆ ಶುರು ಮಾಡಲಿದ್ದಾರೆ. ಎಲ್ಲರಿಗೂ ಸಹ ಗ್ರಹಚಾರ ಕಾದಿದೆ ಎಂದೆನಿಸುತ್ತಿದೆ. ಸ್ಪರ್ಧಿಗಳು ಮಾಡುತ್ತಿರುವ ತಪ್ಪುಗಳನ್ನು ಸುದೀಪ್ ಎತ್ತಿ ಹಿಡಿಯಲಿದ್ದಾರೆ. ಇನ್ನು ಈ ಮೊದಲೇ ಪ್ರೇಕ್ಷಕರು ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿರುವ ತಮ್ಮ ನೆಚ್ಚಿನ ಕಂಟೆಸ್ಟೆಂಟ್‌ಗಳಿಗೆ ಗಿಫ್ಟನ್ನು ಸಹ ಕಳಿಸಿದ್ದಾರೆ. ಅದರಲ್ಲಿ ಅವರವರ ಯಾವ ಭಾವಕ್ಕೆ ತಕ್ಕಂತೆ ಹಾಗೂ ಬಿಗ್ ಬಾಸ್ ಮನೆಯಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿಗೆ ತಕ್ಕಂತೆ ಕಳುಹಿಸಿದ್ದಾರೆ. ಇಂದು ಎಲಿಮಿನೇಷನ್ ಸಹ ಇದು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವುದು ಯಾರು ಎಂಬುದರ ಬಗ್ಗೆಯೂ ತೀರ್ಮಾನವಾಗಲಿದೆ.

ಪ್ರೇಕ್ಷಕರು ನಮ್ರತಾ ಹಾಗೂ ವಿನಯ್ ಮೇಲೆ ಕಿಡಿ ಕಾರುತ್ತಿದ್ದಾರೆ ವಿನಯ್‌ಗೆ ದುರಹಂಕಾರ ಹೆಚ್ಚಾಗಿದೆ ಅದಕ್ಕಾಗಿ ಈ ರೀತಿಯೆಲ್ಲ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕಾರ್ತಿಕ್ ಚೆನ್ನಾಗಿ ಆಟವಾಡಬಹುದು ಸ್ವಲ್ಪ ಸೋಮಾರಿತನವನ್ನು ಬಿಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮ ಪ್ರಸಂಗಗಳು ಕೂಡ ನಡೆಯುತ್ತಿವೆ ಯಾರಿಗೆ ಯಾರ ಮೇಲೆ ಫ್ರೆಶ್ ಆಗಿದೆ ಎಂಬುದನ್ನ ಇನ್ನೂ ಸಹ ಹೇಳಲು ಆಗುತ್ತಿಲ್ಲ ಫ್ರೆಂಡ್ ಫ್ರೆಂಡ್ ಎಂದುಕೊಂಡೇ ಮುಂದೆ ಮುಂದೆ ಸಾಗುತ್ತಾ ಇದ್ದಾರೆ.
ನಮ್ರತಾಗೆ ಸಿಕ್ತು ಚಮಚಾಗಿರಿ ಗಿಫ್ಟ್, ಮಾಡುತ್ತಿರುವುದನ್ನೇ ಕೊಟ್ಟಿದ್ದಾರೆ ಎಂದ ಕಿಚ್ಚ!
ಬಿಗ್ ಬಾಸ್ ಮನೆನಲ್ಲಿ ನಮ್ರತಾ ಅದ್ಯಾವ ಸ್ಟ್ಯಾಟಜಿ ಇಟ್ಟುಕೊಂಡು ಆಟವಾಡುತ್ತಿದ್ದಾರೆ ತಿಳಿಯುತ್ತಿಲ್ಲ. ಒಬ್ಬರಿಗೊಬ್ಬರಿಗೆ ತಂದು ಹಾಕುವ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದಾರೆ.ಇದಕ್ಕಾಗಿ ಪ್ರೇಕ್ಷಕರು ನಮ್ರತಾಗೆ ಚಮಚಗಿರಿ ಗಿಫ್ಟ್ ನೀಡಿದ್ದಾರೆ. ಪ್ರೇಕ್ಷಕರು ನೀಡಿದ ಉಡುಗೊರೆಯನ್ನ ಕಂಡು ನಮ್ರತಾ ಬೇಸರ ಮಾಡಿಕೊಂಡಿದ್ದಾರೆ. ನಿಮಗೆ ದಾದಾಗಿರಿ ಮಾಡಲು ಬಂದಿಲ್ಲ ಎಂದರು ಚಮಚಾಗಿರಿ ಮಾತ್ರ ಮಾಡಬೇಡಿ ಎಂದು ನಮೃತಾಗೆ ಪ್ರೇಕ್ಷಕರು ಲೆಟರ್ ಮೂಲಕ ಕಿವಿಮಾತು ಹೇಳಿದ್ದಾರೆ.

ನಮ್ರತಾ ಜನತೆ ಕಳಿಸಿರುವ ಲೆಟರ್ ಅನ್ನ ಕಿಚ್ಚ ಸುದೀಪ್ ಮುಂದೆ ಓದಿದ್ದಾರೆ. ನಾನು ಇಲ್ಲಿಗೆ ಚಮಚಾಗಿರಿ ಮಾಡಲು ಬಂದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ನೀವು ಏನು ಮಾಡುತ್ತಿದ್ದೀರಾ ಎಂಬುದನ್ನ ಜನ ನೋಡಿದ್ದಾರೆ. ಅದನ್ನೇ ನಿಮಗೆ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ಈಗ ನಮ್ರತಾಗೆ ತಾವು ಏನು ಮಾಡುತ್ತಿದ್ದೇನೆ ಎಂಬ ತಪ್ಪಿನ ಅರಿವಾಗಿ ಮತ್ತೆ ಆಟದಲ್ಲಿ ತೊಡಗಿಸಿಕೊಳ್ಳುತ್ತಾರಾ ಎಂದು ನೋಡಬೇಕಾಗಿದೆ.
ವಿನಯ್‌ಗೆ ಆನೆ ಗಿಫ್ಟ್ ಕಳುಹಿಸಿ ಬುದ್ಧಿ ಹೇಳಿದ ಜನತೆ
ತುಕಾಲಿ ಸಂತೋಷ್‌ಗೆ ಲೌಡ್ ಸ್ಪೀಕರ್ ಸಿಕ್ಕಿದೆ, ಅದರಲ್ಲಿ ಜನರು ಏನು ಹೇಳಿದ್ದಾರೆ ಗೊತ್ತಾ.. ನೀವು ಎಲ್ಲರ ಬಳಿಯೂ ನೇರವಾಗಿ ಮಾತನಾಡುತ್ತೀರಾ ಆದರೆ ವಿನಯ್ ಗೆ ಯಾಕೆ ಏನನ್ನು ಹೇಳೋದಿಲ್ಲ ಅವರ ತಪ್ಪನ್ನು ಅವರಿಗೆ ಅರಿವು ಮಾಡಿಸಿ ಎಂದು ಹೇಳಿದ್ದಾರೆ. ಇನ್ನು ವಿನಯ್‌ಗೆ ಆನೆಯನ್ನು ಗಿಫ್ಟ್ ಕಳಿಸಿ ನೀವು ಸಲಗ ಎಂದುಕೊಂಡು ದಿಕ್ಕನ್ನು ಮಾತ್ರ ತಪ್ಪಬೇಡಿ ದಿಕ್ಕ ತಪ್ಪೋದು ತುಂಬಾ ಡೇಂಜರ್ ಎಂದು ಹೇಳಿದ್ದಾರೆ.

ಯಾವಾಗಲೂ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕುವ ಡ್ರೋನ್ ಪ್ರತಾಪ್ ಗೆ ಕರ್ಚಿಫ್‌ನ್ನು ಜನತೆ ಕಳುಹಿಸಿದ್ದಾರೆ. ರಕ್ಷಕ್ ಬುಲೆಟ್‌ಗೆ ಸೈಕಲ್ ಅನ್ನು ಗಿಫ್ಟ್‌ನ್ನು ಕಳುಹಿಸಿದ್ದಾರೆ. ಇನ್ನೂ ನೀತುಗೆ ಒಂದು ವಾಲಿಬಾಲ್ ಕಳುಹಿಸಿದ್ದಾರೆ. ಮೈಕಲ್ ಗೆ ಮೆದುಳನ್ನ ಕಳುಹಿಸಿದ್ರೆ, ಭಾಗ್ಯಶ್ರೀಗೆ ಹೂಕೋಸನ್ನು ಕಳಿಸುವ ಮೂಲಕ ಜನತೆ ತಮ್ಮ ತಮ್ಮ ಅಭಿಪ್ರಾಯವನ್ನು ಹೊರಗೆ ಹಾಕಿದ್ದಾರೆ. ಈ ಮೂಲಕವಾದರೂ ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿರುವ ಸ್ಪರ್ಧಿಗಳಿಗೆ ತಮ್ಮ ತಪ್ಪಿನ ಅರಿವಾಗುತ್ತಾ ನೋಡಬೇಕಿದೆ.


Click it and Unblock the Notifications











