BBK 10: ಎಷ್ಟೇ ದಬ್ಬೆ ಕಟ್ಟಿದ್ರು ನಾಯಿ ಬಾಲ ಡೊಂಕು.. ಹಾಗೆ ವಿನಯ್ ಬುದ್ದಿಯೂ ಎಂದು ಕಿಡಿಕಾರಿದ ನೆಟ್ಟಿಗರು!

By Shruthi Harishgowda

ಬಿಗ್ ಬಾಸ್ ಮನೆಗೆ ಬಂದಾಗಿನಿಂದ ವಿನಯ್ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿಯೇ ಇದ್ದಾರೆ. ಕೆಲವೊಂದು ಬಾರಿ ಅವರ ದುರಹಂಕಾರದ ಮಾತುಗಳಿಂದ ಸುದ್ದಿ. ಆದರೆ ಇನ್ನೂ ಕೆಲವು ಬಾರಿ ಹೆಣ್ಣು ಮಕ್ಕಳಿಗೆ ಗೌರವ ಕೊಡದೆ ಮಾತನಾಡುವುದರಿಂದ ಸುದ್ದಿ ಆಗುತ್ತಿದ್ದಾರೆ. ಈ ಮೊದಲು ಸಂಗೀತಾ ಜೊತೆಯಲ್ಲಿ ಜೋರಾಗಿ ಜಗಳವನ್ನು ಆಡಿದ್ದರು. ಕೆಲವೊಂದು ಬಾರಿ ತನಿಷಾ ಜೊತೆಗೂ ಕೂಡ ಜಗಳ ಮಾಡಿಕೊಂಡಿದ್ದರು. ಈಗ ತನಿಷಾ ಏನೋ ಮಾತನಾಡುತ್ತಿದ್ದಾಗ ರಿಯಾಕ್ಟ್ ಮಾಡಿದ್ದಾರೆ. ಈ ವೇಳೆ ತನಿಷಾ ನಾನು ಮಾತನಾಡುದನ್ನು ಮೊದಲು ಕೇಳಿ ಅನಂತರ ಮಾತನಾಡಿ ಎಂದು ಹೇಳಿದಾಗ, ಮಧ್ಯೆ ಮಾತನಾಡಿದ ವಿನಯ್ ನಾನು ಹುಳದ ಜೊತೆ ಮಾತನಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಿಚ್ಚ ಸುದೀಪ್ ಪಂಚಾಯಿತಿ ಮಾಡಿದ ಮೇಲೆ ವಿನಯ್ ಒಳ್ಳೆಯ ಬುದ್ದಿ ಕಲಿಯುತ್ತಾರೆ. ನಡುವೆ ಎಲ್ಲೂ ಮಾತನಾಡದೆ ಚೆನ್ನಾಗಿ ಆಟವನ್ನು ಮಾತ್ರ ಆಡುತ್ತಾರೆ ಎಂದು ಜನರು ಅಂದುಕೊಂಡಿದ್ದರು. ಆದರೆ ಈಗ ವಿನಯ್ ಮತ್ತೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಇದಕ್ಕೆ ನೆಟ್ಟಿದರು ನಾಯಿ ಬಾಲಕ್ಕೆ ದಬ್ಬೆ ಕಟ್ಟಿದರೆ ಅದೇನು ನೆಟ್ಟಗೆ ಆಗುತ್ತಾ ಅದೇ ರೀತಿ ವಿನಯ್‌ಗೆ ಎಷ್ಟೇ ಬುದ್ಧಿ ಹೇಳಿದರು ಅವರು ಸಹ ಕೇಳೋದಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಇಷ್ಟು ದಿನ ಸಂಗೀರಾ ಮೇಲೆ ವಿನಯ್ ಅಟ್ಯಾಕ್ ಮಾಡುತ್ತಿದ್ದರು ಈಗ ತನಿಷಾ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.

Colors kannada Bigg boss season 10 Written Update on 07th November

ಇನ್ನು ತಮ್ಮ ಸಂಗಡಿಗರಿಗೂ ಕೂಡ ಅದೇ ಬುದ್ಧಿಯನ್ನು ಹೇಳಿಕೊಡುತ್ತಿದ್ದಾರೆ. ಇದಕ್ಕಾಗಿ ಪದೇ ಪದೇ ಸಂಗೀತಾ ಹಾಗೂ ಟೀಮ್ ಮೇಲೆ ದಾಳಿಯನ್ನು ಮಾಡುತ್ತಿದ್ದಾರೆ ಎಂಬ ಆರೋಪವು ಸಹ ವಿನಯ್ ಗುಂಪಿನ ಮೇಲೆ ಕೇಳಿ ಬಂದಿದೆ. ಇನ್ನು ಇದೆಲ್ಲದರ ಜೊತೆಗೆ ಯಾವಾಗಲೂ ನಮ್ರತಾ ವಿನಯ್ ಜೊತೆಗೆ ಇದ್ದು ವಿನಯ್ ಏನಾದರೂ ಮಾಡಿದರೆ ಸಾಕು ನಗೋದಕ್ಕೆ ಶುರು ಮಾಡುತ್ತಾರೆ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ‌. ನಮ್ರತಾಗೆ ಚಮಚ ಕೊಡಬಾರದಿತ್ತು ಬಕೆಟ್ ಅನ್ನು ಕೊಡಬೇಕಿತ್ತು. ಅವರು ಅಲ್ಲಿ ಆಟವಾಡಲು ಹೋಗಿದ್ದಾರಾ ಅಥವಾ ಸುಮ್ಮನೆ ಚಮಚಾಗಿರಿ ಮಾಡಲು ಹೋಗಿದ್ದಾರಾ ಯಾವುದು ಸಹ ತಿಳಿಯುತ್ತಿಲ್ಲ. ವಿನಯ್ ಜೊತೆ ಯಾವಾಗಲೂ ಇದ್ದುಕೊಂಡು ಅವರಿಗೆ ಸಪೋರ್ಟ್ ಮಾಡುತ್ತಾ ಬಾಲವಾಗಿದ್ದಾರೆ ಎಂದಿದ್ದಾರೆ.

ಹಿಂದಿನ ಚಾಳಿ ಬಿಡದ ವಿನಯ್, ನಾಯಿ ಬಾಲ ಡೊಂಕು ಎಂದ ನೆಟ್ಟಿಗರು

ವಿನಯ್ ಇಷ್ಟು ದಿನ ಸಂಗೀತಾ ಜೊತೆಗೆ ಜಗಳ ಮಾಡಿಕೊಳ್ಳುತ್ತಾ ಇದ್ದರು ಆದರೆ ಈಗ ತನಿಷಾ ಸರದಿ ಬಂದಿದೆ. ತನಿಷಾ ಮಾತನಾಡುವಾಗ ಮಧ್ಯೆ ಬಾಯಿ ಹಾಕಿದ ವಿನಯ್ ನಾನು ಹುಳು ಜತೆ ಮಾತನಾಡುತ್ತಾ ಇದ್ದೇನೆ ಎಂದು ಹೇಳಿದ್ದಾರೆ. ಈ ಮಾತನ್ನ ಕೇಳಿದಾ ತನಿಷಾ ಕೆಂಡಮಂಡಲರಾಗಿದ್ದಾರೆ. ತನಿಷಾ ಜೊತೆ ವಿನಯ್ ನಡೆದುಕೊಂಡ ರೀತಿ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಿನಯ್ ಗೆ ಎಷ್ಟೇ ಬುದ್ಧಿ ಹೇಳಿದರು ಅಷ್ಟೇ ಅವರು ಯಾರ ಮಾತನ್ನು ಕೇಳೋದೇ ಇಲ್ಲ ಎಂದು ಅನಿಸುತ್ತದೆ ಇದಕ್ಕಾಗಿ ತಮ್ಮ ಹಿಂದಿನ ಚಾಳಿಯನ್ನೇ ಮುಂದುವರಿಸಿಕೊಂಡು ಬರುತ್ತಾ ಇದ್ದಾರೆ ಎಂದಿದ್ದಾರೆ.

Colors kannada Bigg boss season 10 Written Update on 07th November

ನಮ್ರತಾ ಚಮಚ ಅಲ್ಲ ಬಕೆಟ್ ಅಂತೆ..!

ನಮ್ರತಾ ಯಾವಾಗಲೂ ವಿನಯ್ ಜೊತೆಯಲ್ಲಿ ಇದ್ದು ವಿನಯ್‌ನನ್ನು ಹೊಗಳುಕೊಂಡು ಅವರ ಜೊತೆಯಲ್ಲಿಯೇ ಚಮಚಾಗಿರಿ ಮಾಡುತ್ತಾರೆ ಎಂಬ ಮಾತನ್ನು ಪ್ರೇಕ್ಷಕರು ಹೇಳಿದ್ದರು. ಈ ಬಾರಿಯೂ ಸಹ ಅದು ಪ್ರೋವ್ ಆಗಿದೆ. ವಿನಯ್ ತನಿಷಾ ಜೊತೆಗೆ ಮಾತನಾಡುವಾಗ ನಮ್ರತಾ ಜೋರಾಗಿ ನಕ್ಕಿದ್ದಾರೆ. ಇದು ಕೂಡ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು ನಮ್ರತಾ ಚಮಚ ಅಲ್ಲ ಅವರಿಗೆ ಒಂದು ಬಕೆಟ್ ಅನ್ನು ಈ ಬಾರಿ ಕಳಿಸಿ ಕೊಡಬೇಕು. ಆ ರೀತಿ ಬಿಗ್ ಬಾಸ್ ಮನೆಯಲ್ಲಿ ಆಟವಾಡುತ್ತಾ ಇದ್ದಾರೆ. ಸ್ವಂತ ಪರಿಶ್ರಮದಿಂದ ಆಟವಾಡುವುದನ್ನು ಬಿಟ್ಟು ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಮೊದಲು ಅವರು ಬಿಡಬೇಕು ಎಂದು ಪ್ರೇಕ್ಷಕರು ನಮ್ರತಾಗೆ ಕಿವಿಮಾತು ಹೇಳಿದ್ದಾರೆ.

More from Filmibeat

English summary
Bigg boss season 10 Written Update on 07th November.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X