Bigg boss Elimination: ಈ ವಾರ ದೊಡ್ಮನೆಯಿಂದ ಹೊರ ಹೋಗೋರು ಯಾರು..? ಯಾರಿಗೆ ಬೆಳಕು, ಯಾರಿಗೆ ಕತ್ತಲು?

By Shruthi Harishgowda

ಬಿಗ್ ಬಾಸ್ ಸೀಸನ್ 10 ಈಗ 5ನೇ ವಾರಕ್ಕೆ ಕಾಲಿಟ್ಟಿದ್ದು ಒಟ್ಟು ಏಳು ಮಂದಿಯನ್ನು ನಾಮಿನೇಟ್ ಮಾಡಲಾಗಿದೆ. ವೋಟ್ ಮಾಡಲು ವೀಕ್ಷಕರಿಗೆ ಒಂದೇ ಒಂದು ದಿನ ಕಾಲಾವಕಾಶವನ್ನು ನೀಡಲಾಗಿತ್ತು. ಈಗ ಏಳು ಮಂದಿ ನಾಮಿನೇಟ್ ಆಗಿದ್ದು ನಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಯಾರು ಅತೀ ಹೆಚ್ಚು ವೋಟ್ ಮಾಡಿದ್ದಾರೆ ಎಂಬುದು ಇಂದು ಕಿಚ್ಚನ ಪಂಚಾಯಿತಿಯಲ್ಲಿ ಗೊತ್ತಾಗಲಿದೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ ಮೂರು ಮಂದಿ ಸದಸ್ಯರು ಹೊರಗೆ ಹೋಗಿದ್ದಾರೆ. ಮೊದಲ ವಾರ ಸ್ನೇಕ್ ಶ್ಯಾಮ್, ಎರಡನೇ ವಾರ ಗೌರೀಶ್ ಅಕ್ಕಿ ಹಾಗೂ ಮೂರನೇ ವಾರ ಭಾಗ್ಯಶ್ರೀ ಅವರು ದಸರಾದಿಂದಾಗಿ ಉಳಿದುಕೊಂಡರು. ನಂತರ ನಾಲ್ಕನೇ ವಾರ ರಕ್ಷಕ್ ಬುಲೆಟ್ ತಮ್ಮ ಪ್ರಯಾಣ ಮುಗಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದರು.

ಈಗ ಮತ್ತೊಬ್ಬರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ. ಇಶಾನಿ, ನಮ್ರತಾ ಗೌಡ, ಸ್ನೇಹಿತ್, ನೀತು, ವರ್ತೂರು ಸಂತೋಷ್, ತುಕಾಲಿ ಸಂತು, ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಈಗ ಯಾರು ಈ ವಾರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎಂಬುದೇ ಕುತೂಹಲವಾಗಿದೆ ವೀಕ್ಷಕ ಮಹಾಪ್ರಭು ಯಾರ ಕೈ ಹಿಡಿದಿದ್ದಾರೆ ಯಾರಿಗೆ ಗೇಟ್ಪಾಸನ್ನ ಕೊಟ್ಟಿದ್ದಾರೆ ಇದೆಲ್ಲವನ್ನು ಕೂಡ ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹೇಳಲಿದ್ದಾರೆ. ಮನೆಯಲ್ಲಿ ಭಾಗ್ಯಶ್ರೀ ಅವರನ್ನ ಈ ವಾರ ಎಲಿಮಿನೇಟ್ ಆಗಬಹುದು ಎಂದು ಲೆಕ್ಕಾಚಾರವನ್ನು ಹಾಕಿದ್ದರು ಆದರೆ ಡ್ರೋನ್ ಪ್ರತಾಪ್ ಭಾಗ್ಯಶ್ರೀಯನ್ನು ನಾಮಿನೇಷನ್ ನಿಂದ ಸೇವ್ ಮಾಡಿದ್ದಾರೆ.‌ ಹೀಗಾಗಿ ಈ ವಾರವು ಸಹ ಭಾಗಶ್ರೀ ಅವರು ನಾಮಿನೇಷನ್ ನಿಂದ ಸೇಫ್ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವಂತಾಗಿದೆ.

Colors kannada Bigg boss season 10 Written Update on Elimination Prediction

ಪ್ರತಾಪ್ ಸಕ್ಕತ್ ಸೇಫ್ ಆಗಿ ಆಟವನ್ನ ಆಡುತ್ತಿದ್ದಾರೆ ಗಂಧದ ಗುಡಿ ತಂಡ ತಮ್ಮ ಆಟವನ್ನು ಡ್ರಾ ಮಾಡಿಕೊಂಡ ಕಾರಣ ಮೂರು ತಾಸ್ ಗಳನ್ನು ಗೆದ್ದಿತು. ಇದರಿಂದಾಗಿ ಮೂವರನ್ನ ಲ್ಯಾಮಿನೇಷನ್ ನಿಂದ ಪಾರು ಮಾಡುವ ಅಧಿಕಾರವನ್ನು ಡ್ರೋನ್ ಪ್ರತಾಪ್ ಗೆ ಬಿಗ್ ಬಾಸ್ ನೀಡಿದ್ದರು ತಮಗೆ ಸಿಕ್ಕ ಅಧಿಕಾರವನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಪ್ರತಾಪ್ ಭಾಗ್ಯಶ್ರೀ ಹಾಗೂ ಸಂಗೀತ ಅವರನ್ನ ಸೇವ್ ಮಾಡಿದ್ದಾರೆ. ಇವರ ಡ್ರಾನ್ ಪ್ರತಾಪ್ ನಿಂದಾಗಿ ಈ ಮೂವರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ ಇಲ್ಲವಾಗಿದ್ದರೆ ಇವರು ಕೂಡ ನಾಮಿನೇಷನ್ ಹಂತಕ್ಕೆ ಬಂದು ನಿಂತುಕೊಳ್ಳುತ್ತಿದ್ದರು ಈ ವಾರ ದೀಪಾವಳಿ ಯಾರ ಪಾಲಿಗೆ ಬೆಳಕಾಗಲಿದೆ ಎಂಬುದನ್ನು ನೋಡಬೇಕು.


ಸ್ಪರ್ಧಿಗಳ ಎದೆಯಲ್ಲಿ ಢವ ಢವ

ಮನೆಯಿಂದ ಹೊರ ಹೋಗುವವರು ಯಾರು?

ನಾಮಿನೇಟ್ ಆಗಿರುವ ಸ್ಪರ್ಧಿಗಳ ಎದೆಯಲ್ಲಿ ಈಗಾಗಲೇ ಢವ ಢವ ಶುರುವಾಗಿದೆ. ಈ ವಾರದ ಕ್ಯಾಪ್ಟನ್ ಆಗಿ ಮೈಕಲ್ ಆಯ್ಕೆಯಾಗಿದ್ದಾರೆ. ಪ್ರತಾಪ್ ಮಹಾ ಪ್ರದರ್ಶನ ನೀಡಿದರು ಎಂಬಂತಹ ಬಿರುದನ್ನ ಪಡೆದುಕೊಂಡರೆ ನೀತು ಹಾಗೂ ಈಶಾನಿ ಇಬ್ಬರು ಸಹ ಕಳಪೆ ಪ್ರದರ್ಶನವನ್ನ ನೀಡಿ ಜೈಲಿಗೆ ಹೋಗಿದ್ದಾರೆ. ಇನ್ನು ನೀತು ತಮಗೆ ಕಳಪೆ ಪಟ್ಟ ನೀಡಿದ ವಿನಯ್ ವಿರುದ್ಧ ಗರಂ ಕೂಡ ಆಗಿದ್ದರು ಜೊತೆಗೆ ಇದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿದರು ಎಂದು ನೀತು ಬೇಸರವನ್ನ ವ್ಯಕ್ತಪಡಿಸಿದರು. ಈ ವಾರ ನೀತು ಹಾಗೂ ಈಶಾನಿ ಇಬ್ಬರೂ ಕೂಡ ಎಲಿಮಿನೇಷನ್ ಆಗಿದ್ದು ಯಾರು ಉಳಿದುಕೊಳ್ಳುತ್ತಾರೆ ಎಂಬ ಕುತೂಹಲ ಸಹ ಹೆಚ್ಚಾಗಿದೆ.

Colors kannada Bigg boss season 10 Written Update on Elimination Prediction

ಬಿಗ್ ಬಾಸ್ ಮನೆಯಲ್ಲಿ ಗುಂಪುಗಳಾಗಿದ್ದು ಆ ಗುಂಪುಗಳಲ್ಲಿ ಒಳ ಜಗಳ ಶುರು ಆಗಿದೆ. ಇನ್ನೂ ಸಂಗೀತ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ತಿಕ್ ಹಾಗೂ ತನಿಷಾ ಮಾತನಾಡಿಕೊಂಡಿದ್ದಾರೆ. ಇಬ್ಬರೂ ಕೂಡ ಸಂಗೀತ ಬಗ್ಗೆ ಮಾತನಾಡಿದ್ದಾರೆ ಸಂಗೀತ ಕೂಡ ಎರಡು ಮೂರು ದಿನದಿಂದಲೂ ವಿನಯ್ ಜೊತೆ ಚೆನ್ನಾಗಿಯೇ ಇದ್ದಾರೆ. ಯಾವುದೇ ಜಗಳ ಮಾಡಿಕೊಳ್ಳದೆ ಸ್ನೇಹಿತರಂತೆ ವರ್ತಿಸುತ್ತಿದ್ದಾರೆ. ಮೊದಲಿನಿಂದಲೂ ಜಗಳ ಮಾಡಿಕೊಂಡೆ ಬಂದಿದ್ದ ಸಂಗೀತ ಹಾಗೂ ವಿನಯ್ ಏನಾದರೂ ಒಪ್ಪಂದ ಮಾಡಿಕೊಂಡು ಬಿಟ್ರಾ ಎಂದು ವೀಕ್ಷಕರು ಅಂದುಕೊಂಡಿದ್ದಾರೆ.

ಏಳು ಮಂದಿಯಲ್ಲಿ ಯಾರಿಗೆ ಗೇಟ್ ಪಾಸ್

ಇಶಾನಿ, ನಮ್ರತಾ ಗೌಡ, ಸ್ನೇಹಿತ್, ನೀತು, ವರ್ತೂರು ಸಂತೋಷ್, ತುಕಾಲಿ ಸಂತು, ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಏಳು ಮಂದಿಯಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಕಿಚ್ಚನ ಪಂಚಾಯಿತಿಯಲ್ಲಿ ಯಾರು ಹೊರಗೆ ಹೋಗುತ್ತಾರೆ ಯಾರು ಮನೆಯಲ್ಲಿ ಉಳಿಯುತ್ತಾರೆ ಎಂಬುದಕ್ಕೆಲ್ಲ ಉತ್ತರ ಸಿಗಲಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಅತಿ ಹೆಚ್ಚು ವೋಟ್ ಮಾಡಿ ಯಾರು ಉಳಿಸಿಕೊಂಡಿದ್ದಾರೆ ಎಂಬ ಎಲ್ಲದಕ್ಕೂ ಸಹ ಇಂದು ಕಿಚ್ಚ ತಿಳಿಸಲಿದ್ದಾರೆ.

More from Filmibeat

English summary
Bigg boss kannada 5th week elimination prediction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X