BBK 10: ತುಕಾಲಿ ಸಂತೋಷ್‌ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು: ಅಳಿಸಿ ನಗಿಸೋದು ಧರ್ಮವಲ್ಲ ಎಂದು ಪ್ರತಾಪ್ ಬಗ್ಗೆ ಸಾಫ್ಟ್ ಕರ್ನರ್!
ಡ್ರೋನ್ ಪ್ರತಾಪ್ ಬಿಗ್ ಬಾಸ್‌ಗೆ ಬಂದಿದ್ದಾರೆ. ಅವರು ಹಲವಾರು ಸುಳ್ಳುಗಳನ್ನ ಹೇಳುವ ಮೂಲಕ ತಮ್ಮನ್ನು ತಾವು ಯುವ ವಿಜ್ಞಾನಿ ಎಂದು ಕರೆದುಕೊಂಡಿದ್ದರು. ಇದರಿಂದ ಸಾಕಷ್ಟು ಟೀಕೆಗೂ ಸಹ ಒಳಗಾಗಿದ್ದರು. ಅವರು ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್‌ನಲ್ಲಿ ಟ್ರೋಲ್ ಹಾಗೂ ಟೀಕೆಗಳ ಬಗ್ಗೆ ಮೌನ ಮುರಿದು ಮಾತನಾಡಿದರು. ಬಿಗ್ ಬಾಸ್ ಮನೆಯೊಳಗೆ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ಸ್ನೇಹಿತ್ ಇವರೆಲ್ಲರೂ ಸಹ ಡ್ರೋನ್ ಪ್ರತಾಪ್‌ರನ್ನು ಟಾರ್ಗೆಟ್ ಮಾಡಿಕೊಂಡಿದ್ದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಅತಿ ಹೆಚ್ಚಾಗಿ ತುಕಾಲಿ ಸಂತೋಷ್ ಅವರನ್ನ ಜನರು ಬಯ್ಯುತ್ತಾ ಇದ್ದಾರೆ. ಹೊರಗೊಂದು ರೀತಿ ಒಳಗೊಂದು ರೀತಿ ಇರಬಾರದು. ನೇರವಾಗಿ ಮನುಷ್ಯ ಇರಬೇಕು ಅದು ಆಟವೇ ಆಗಲಿ ಜಗಳವೇ ಆಗಿರಲಿ ಎಂದು ಹೇಳಿದ್ದಾರೆ. ಮನುಷ್ಯ ತಪ್ಪು ಮಾಡಿದ್ದಾನೆ ಎಲ್ಲರೂ ತಪ್ಪು ಮಾಡುವುದು ಸಹಜ ಆದರೆ ಅವರ ತಪ್ಪನ್ನೇ ಪದೇಪದೇ ಎತ್ತಿ ತೋರಿಸುವುದು ಸರಿಯಲ್ಲ. ಅದು ಅಲ್ಲದೆ ವಿಕೃತವಾಗಿ ನಗುವುದು ಸರಿಯಲ್ಲ ಎಂದು ತುಕಾಲಿ ಸಂತೋಷ್‌ಗೆ ಕ್ಲಾಸ್ ತೆಗೆದುಕೊಳ್ಳುತ್ತಾ ಇದ್ದಾರೆ. ಒಬ್ಬರ ತಪ್ಪನ್ನು ಎತ್ತಿ ತೋರಿಸಿ ಅದನ್ನೇ ತಮಾಷೆಯಾಗಿ ಪ್ರತಿ ಸಲ ಮಾಡುವುದು ಎಷ್ಟು ಸರಿ ನೀವು ಸರಿಯಾಗಿದ್ದೀರಾ, ನೋಡಿಕೊಳ್ಳಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಕೆಲವರು ನಿಮ್ಮನ್ನು ತುಕಾಲಿ ಎಂದು ಸರಿಯಾಗಿಯೇ ಕರೆಯುತ್ತಾ ಇದ್ದಾರೆ ನಿಮ್ಮ ಕ್ಯಾರೆಕ್ಟರ್ ಸಹ ಅದೇ ರೀತಿ ಇದೆ ಎಂದು ಹೇಳಿದ್ದಾರೆ. ನೀವು ನೀವಾಗಿ ಇಲ್ಲ ಬಿಗ್ ಬಾಸ್ ಮನೆಯಲ್ಲಿ ನೀವು ಬೇರೆಯದ್ದಾಗೇ ಇದ್ದೀರಾ. ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಾ ಇದ್ದೀರಾ ಇದು ಯಾವುದಕ್ಕೂ ಶೋಭೆ ತರುವುದಿಲ್ಲ ಇನ್ನಾದರೂ ಬದಲಾಗಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ವಾರದ ಕಥೆ ಕಿಚ್ಚನ ಜೊತೆ ಶೋನಲ್ಲಿ ಸುದೀಪ್ ಅವರು ಸಹ ತುಕಾಲಿ ಸಂತೋಷ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯಲ್ಲ ಇನ್ಮುಂದೆಯಾದರೂ ನಿಮ್ಮ ನಡವಳಿಕೆಯನ್ನ ಸರಿ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ.
ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ತುಕಾಲಿ ಸಂತೋಷ್
ವಿನಯ್, ಸಂತೋಷ್‌ಗೂ ಬುದ್ಧಿ ಹೇಳಿದ ಪ್ರೇಕ್ಷಕರು
ಡ್ರೋನ್ ಪ್ರತಾಪ್ ಅವರಿಗೆ ತುಕಾಲಿ ಸಂತೋಷ್ ಹಾಗೂ ವಿನಯ್, ವರ್ತೂರು ಸಂತೋಷ್ ಮೂವರು ಸಹ ಬೇಕಾಬಿಟ್ಟಿಯಾಗಿ ಮಾತನಾಡುತ್ತಾ ಡ್ರೋನ್ ಬಗ್ಗೆ ಅಪಹಾಸ್ಯ ಮಾಡುತ್ತಾ ಅವರ ಕಣ್ಣೀರಿಗೂ ಸಹ ಕಾರಣರಾಗಿದ್ದಾರೆ. ಇದೆಲ್ಲವನ್ನು ಸಹ ಪ್ರೇಕ್ಷಕರು ಗಮನಿಸುತ್ತಾ ಇದ್ದಾರೆ. ಇನ್ನು ಈ ಮೂವರ ವರ್ತನೆಗೆ ಬೇಸರ ಹೊರಹಾಕಿದ್ದಾರೆ. ಮನುಷ್ಯ ತಪ್ಪು ಮಾಡೋದು ಸಹಜ ಅದನ್ನ ತಿದ್ದುಕೊಳ್ಳಲು ಅವಕಾಶವನ್ನು ನೀಡಬೇಕು ಅದು ಬಿಟ್ಟು ಇನ್ನೊಬ್ಬರ ಮನಸ್ಸು ನೋಯಿಸುವುದು ಸರಿಯಲ್ಲ ಎಂದು ಟ್ರೋಲ್ ಮಾಡುವ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿನಯ್ ಸರಿಯಾದ ರೀತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಆಟವಾಡಿದರೆ ಫೈನಲ್ ತನಕ ಬರಬಹುದು. ಆ ಕೆಪಾಸಿಟಿ ಅವರಿಗೆ ಇದೆ ಅದು ಬಿಟ್ಟು ಈ ರೀತಿ ಕಾಲಹರಣ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇನ್ನು ತುಕಾಲಿ ಸಂತೋಷ್ ಅವರಿಗೂ ಸಹ ಬುದ್ಧಿವಾದ ಹೇಳಿದ್ದಾರೆ. ಈ ರೀತಿಯ ಬುದ್ದಿಯೆಲ್ಲ ಬಿಟ್ಟು ವಿಕೃತ ಮನಸ್ಸನ್ನು ಇಟ್ಟುಕೊಳ್ಳದೆ ಸ್ವಚ್ಛ ಮನಸ್ಸಿನಿಂದ ಆಟವಾಡಿ ಎಂದು ಕಿವಿ ಮಾತು ಹೇಳಿದ್ದಾರೆ.
ಓವರ್ ಬಿಲ್ಡಪ್ ನಿಲ್ಲಿಸ್ಬೇಕಂತೆ..?
ಓವರ್ ಆಗಿ ಎಲ್ಲರ ಜೊತೆಗೆ ತುಕಾಲಿ ಸಂತೋಷ್ ಮಾತನಾಡುತ್ತಾ ಓವರ್ ಬಿಲ್ಡಪ್ ಕೊಡುವುದನ್ನು ಮೊದಲು ನಿಲ್ಲಿಸಬೇಕು ಎಂದಿದ್ದಾರೆ. ಸುಖಾಸುಮ್ಮನೆ ಕಾಮಿಡಿ ಮಾಡುತ್ತಾ ಬೇಜಾನ್ ಬಿಲ್ಡಪ್ ಕೊಡುವುದನ್ನು ನಿಲ್ಲಿಸಿ ಎಂದು ಹೇಳುತ್ತಾ ಇದ್ದಾರೆ. ಮನೆಗೆ ಬಂದಿದ್ದ ಬಿಗ್ ಬಾಸ್ ಪ್ರಥಮ್ ಸಹ ತುಕಾಲಿ ಸಂತೋಷ್‌ಗೆ ಬುದ್ದಿ ಮಾತು ಹೇಳುತ್ತಾ ಮನೆಯಿಂದ ಹೋಗಿದ್ದಾರೆ.


Click it and Unblock the Notifications











