Bigg Boss 10: ವಿನಯ್‌ಗೆ ಬುದ್ದಿ ಹೇಳಬೇಕಾಗಿತ್ತಂತೆ ಕಿಚ್ಚ: ಬಿಗ್ ಬಾಸ್ ಮನೆಯ ಡವ್ ರಾಣಿಯಂತೆ ನಮ್ರತಾ!
ಬಿಗ್ ಬಾಸ್ ಸೀಸನ್ 10 ಗೆ ಬಂದಿರುವ ವಿನಯ್ ತಮ್ಮ ಮನಸ್ಸಿಗೆ ಬಂದಂತೆ ಇದ್ದಾರೆ. ಮಾತಿನಲ್ಲೂ ಸಹ ಅಷ್ಟೇ ಫಿಲ್ಟರ್ ಇಲ್ಲ ಎಲ್ಲದಕ್ಕೂ ಮೂಗು ತೋರಿಸಿಕೊಂಡು ಹೋಗುತ್ತಾರೆ. ದುರಹಂಕಾರ ಜಾಸ್ತಿಯಾಗಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಎಲ್ಲಾ ಟಾಸ್ಕ್‌ಗಳನ್ನು ಗೆಲ್ಲುತ್ತೇವೆ ಎಂದು ಓವರ್ ಕಾನ್ಫಿಡೆನ್ಸ್‌ನಿಂದ ಹೋಗುತ್ತಾರೆ. ಆದರೆ ಅವರು ಈ ಬಾರಿ ಸೋತಿದ್ದು ಇದರಿಂದ ಸಾಕಷ್ಟು ಪಾಠ ಕಲಿಯಬಹುದಾಗಿತ್ತು. ಆದರೆ ಅವರು ಅದನ್ನು ಮಾಡಿಲ್ಲ. ಅಲ್ಲೂ ಸಹ ದುರಹಂಕಾರವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ. ವಿನಯ್ ಇದೇ ರೀತಿ ತಮ್ಮ ಆಟಿಟ್ಯೂಡ್ ತೋರಿಸುತ್ತಾ ಇದ್ದರೆ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಅನಿಸುತ್ತಿದೆ.
ಇಲ್ಲಿ ಪ್ರೇಕ್ಷಕರ ವೋಟ್ ಅಂತಿಮ ನಿರ್ಧಾರವಾಗಿದೆ. ಹಾಗಾಗಿ ಪ್ರೇಕ್ಷಕರು ವಿನಯ್‌ಗೆ ಕಿವಿಮಾತನ್ನ ಹೇಳುತ್ತಿದ್ದಾರೆ. ಅವರು ಸ್ವಭಾವವನ್ನ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಾರೆ ಎಂದು ಅಂದಿದ್ದಾರೆ. ವಿನಯ್, ಮೈಕಲ್ ಹಾಗೂ ಸಂತೋಷ್, ನಮ್ರತಾ ಇವರದೇ ಒಂದು ಗುಂಪಾಗಿದೆ. ಇಲ್ಲಿ ಮೈಕಲ್ ಸ್ವಲ್ಪ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ಅನಿಸುತ್ತದೆ. ಇದರಿಂದಾಗಿ ಈ ವಾರದ ಉತ್ತಮ ಪ್ರದರ್ಶನ ನೀಡಿದವರಲ್ಲಿ ಒಬ್ಬರಾಗಿದ್ದಾರೆ. ಆದರೆ ವಿನಯ್ ಮಾತ್ರ ತಮ್ಮ ಓವರ್ ಕಾನ್ಫಿಡೆನ್ಸ್ ನಿಂದ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ನಮ್ರತಾ ಗೌಡ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆಯೂ ಚೆನ್ನಾಗಿ ಇರುವಂತೆ ಆಕ್ಟಿಂಗ್ ಮಾಡುತ್ತಾ ಒಬ್ಬರಿಂದ ಒಬ್ಬರಿಗೆ ತಂದಿಟ್ಟು ತಮಾಷೆ ಮಾಡುವ ಕೆಲಸವನ್ನು ಮಾಡುತ್ತಾ ಇದ್ದಾರೆ. ತುಕಾಲಿ ಸಂತು ಎಲ್ಲರ ಜೊತೆಯೂ ಸಹ ಚೆನ್ನಾಗಿಯೇ ಇದ್ದಾರೆ ಆದರೆ ಮನೆಯಲ್ಲಿರುವ ಡ್ರೋನ್ ಪ್ರತಾಪ್ ಇನ್ನೂ ಮತ್ತಿತರನ್ನು ಕಾಲೆಳೆಯುತ್ತಾ ಮಜಾ ತೆಗೆದುಕೊಳ್ಳುತ್ತಾ ಇದ್ದಾರೆ. ಇದಕ್ಕಾಗಿ ಸುದೀಪ್ ಸಾಕಷ್ಟು ಬಾರಿ ತುಕಾಲಿ ಸಂತೋಷ್‌ಗೆ ಬೈದಿದ್ದಾರೆ. ಈ ವಾರವು ಅಷ್ಟೇ ಗ್ರೌಂಡ್ ಪ್ರತಾಪ್ ಮೇಲೆ ಕೆಲವರು ಮುಗಿಬಿದ್ದಿದ್ದರು. ಇನ್ನು ಸುದೀಪ್ ಡ್ರೋನ್ ಪ್ರತಾಪ್ ಬಗ್ಗೆ ಮಾತನಾಡಿ ಎಂದು ತುಕಾಲಿ ಸಂತೋಷ್ ಬಳಿ ಕೇಳಿದಾಗ ಅವರು ಏನನ್ನು ಮಾತನಾಡದೆ ಸುಮ್ಮನೆ ನಿಂತುಕೊಂಡಿದ್ದಾರೆ. ಈ ವೇಳೆ ಮೈಕ್ ಆಫ್ ಆಯ್ತ ಎಂದು ಸುದೀಪ್ ಆಡಿಕೊಂಡಿದ್ದಾರೆ.
ವಿನಯ್‌ಗೆ ಬುದ್ಧಿವಾದ ಹೇಳಬೇಕಾಗಿತ್ತಂತೆ ಸುದೀಪ್
ಕಿಚ್ಚ ಪ್ರಶ್ನೆ ಮಾಡದೆ ಇರುವುದರಿಂದ ಪ್ರೇಕ್ಷಕರ ಬೇಸರ
ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ವಿನಯ್ ಗೆ ಸುದೀಪ ಬುದ್ಧಿವಾದ ಹೇಳುತ್ತಾರೆ ಎಂದು ಪ್ರೇಕ್ಷಕರು ಕಾಯುತ್ತಿದ್ದರು. ಆದರೆ ಸುದೀಪ್ ರವರು ವಿನಯ್‌ಗೆ ಏನು ಹೇಳಲೇ ಇಲ್ಲ ಜನರು ನಿಮ್ಮನ್ನು ಯಾವ ರೀತಿ ಟ್ರೀಟ್ ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಾಗುತ್ತಿದ್ಯ ಎಂದಷ್ಟೇ ಕೇಳಿದ್ದಾರೆ. ಆದರೆ, ಪ್ರೇಕ್ಷಕರು ಮಾತ್ರ ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ವಿನಯ್‌ಗೆ ಕಿಚ್ಚ ಬುದ್ಧಿವಾದ ಹೇಳುತ್ತಾರೆ ಎಂದು ಕೊಂಡರೆ ಅವರು ಸುಮ್ಮನೆ ಏಕೆ ಬಿಟ್ಟರು ಗೊತ್ತಿಲ್ಲ ಎಂದುಕೊಂಡಿದ್ದಾರೆ.
ಪ್ರತಾಪ್‌ಗೆ ವಿನಯ್ ಮುಚ್ಚಿಕೊಂಡು ಇರು ಎಂದು ಹೇಳಿದ್ದರು ಇದನ್ನಾದರೂ ಕೇಳಬಹುದಿತ್ತು. ಆದರೆ ಇದನ್ನು ಸಹ ಕೇಳಿಲ್ಲ ಕಿಚ್ಚ ಕೇಳಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದುರಹಂಕಾರ ಹೆಚ್ಚಾಗಿದೆ ಅದನ್ನ ಇಳಿಸಿಕೊಳ್ಳಬೇಕು ಎಂದು ಪ್ರೇಕ್ಷಕರು ಅಭಿಪ್ರಾಯವನ್ನು ತಿಳಿಸಿದ್ದಾರೆ. ವಿನಯ್ ಗೆ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟು ಮಾತನಾಡಲು ಬರುತ್ತಿಲ್ಲ ಎಲ್ಲರನ್ನೂ ಸಹ ಏಕವಚನದಲ್ಲಿಯೇ ಮಾತನಾಡಿಸುತ್ತಾ ಇದ್ದಾರೆ ಎಂದು ಹೇಳಿದ್ದಾರೆ. ನೀವು ಏಕೆ ವಿನಯ್ ಗೆ ಕ್ಲಾಸ್ ತೆಗೆದುಕೊಂಡಿಲ್ಲ ಇದು ಯಾಕೋ ಸರಿಯಾದ ಕ್ರಮವಲ್ಲ ಎಂದು ಕಿಚ್ಚ ಸುದೀಪ್ ರನ್ನೇ ಪ್ರಶ್ನೆ ಮಾಡುತ್ತಿದ್ದಾರೆ.

ಬಿಗ್ ಬಾಸ್‌ನ ಡವ್ ರಾಣಿಯಂತೆ ನಮ್ರತಾ
ನಮ್ರತಾ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ಸೇಫ್ ಆಗಿ ನಾನು ಇರಬೇಕು ಎಂದಷ್ಟೇ ಅಂದುಕೊಂಡಿದ್ದಾರೆ. ಇಬ್ಬರಿಗೆ ಒಬ್ಬರಿಗೆ ತಂದು ಹಾಕುವ ಕೆಲಸವನ್ನು ಮಾಡುತ್ತಾ ಇದ್ದಾರೆ. ಇದು ಜನರಿಗೆ ಇಷ್ಟವಾಗುತ್ತಿಲ್ಲ ಇದಕ್ಕಾಗಿ ಅವರಿಗೆ ಡೌ ರಾಣಿ ಎಂದು ಹೆಸರನ್ನ ಇಟ್ಟಿದ್ದಾರೆ. ನಾಗಿಣಿ ಬಿಗ್ ಬಾಸ್ ಮನೆಗೆ ಬಂದು ಡವ್ ರಾಣಿಯಂತೆ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.


Click it and Unblock the Notifications











