Bigg Boss: ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ರಿಯಲ್ ಆಟ: ಟಾಸ್ಕ್‌ಗಾಗಿ ತಲೆ ಬೋಳಿಸಿಕೊಂಡ ಕಾರ್ತಿಕ್!

By Shruthi Harishgowda

ಬಿಗ್ ಬಾಸ್ ಮನೆಯಲ್ಲಿ ಈಗ ನಿಜವಾದ ಆಟ ಶುರುವಾಗಿದೆ. ಇಷ್ಟು ದಿನ ಫ್ರೆಂಡು ಫ್ರೆಂಡು ಅಂದುಕೊಂಡೆ ಕಾರ್ತಿಕ್ ಹಾಗೂ ತನಿಷಾ ಜೊತೆಯಲ್ಲಿದ್ದ ಸಂಗೀತ ಈಗ ವಿನಯ್ ಟೀಂ ಸೇರಿಕೊಂಡಿದ್ದಾರೆ. ಇನ್ನು ಎಲಿಮಿನೇಷನ್ ಮುಗಿದಿದ್ದು ಈಗ ಟಾಸ್ಕ್ ಆಡಲು ಮನೆಯ ಸದಸ್ಯರು ಟೊಂಕ ಕಟ್ಟಿ ನಿಂತು ಕೊಂಡಿದ್ದಾರೆ. ಬ್ರಹ್ಮಾಂಡ ಗುರೂಜಿ ಅವರ ನೇತೃತ್ವದಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಯುತ್ತಿದೆ. ನೆನ್ನೆ ಕೂಡ ಯಾರು ರಿಯಲ್ ಯಾರು ಫೇಕ್ ಎಂಬ ಆಟ ನಡೆದಿತ್ತು, ಅದರಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ವಿರುದ್ಧದ ಸ್ಪರ್ಧಿಗಳಿಗೆ ಅವರ ಮೇಲೆ ಎಂತಹ ಅಭಿಪ್ರಾಯವಿದೆ ಎಂಬುವುದು ಕೂಡ ಹೊರಗಡೆ ಬಂತು ಅದು ಕೂಡ ಆಕ್ರೋಶದಿಂದ ಕೂಡಿತ್ತು.

ಇನ್ನು ಈಗ ವಿನಯ್ ತಮ್ಮ ವಿರೋಧಿ ತಂಡವನ್ನು ಮಾತಿನಲ್ಲೇ ಕುಗ್ಗಿಸಬೇಕು ಎಂದು ನಿರ್ಧಾರವನ್ನು ಮಾಡಿದ್ದಾರೆ. ಇದರ ಬಗ್ಗೆ ಚರ್ಚೆಯು ಕೂಡ ನಡೆದಿತ್ತು. ನಮ್ರತಾ, ವಿನಯ್ ಹಾಗೂ ಸ್ನೇಹಿತ್ ಮೂವರು ಸೇರಿಕೊಂಡು ನಮ್ಮ ಟೀಮ್ ನಲ್ಲಿರುವ ಯಾರದ್ದೇ ಮೇಲೆ ಎದುರಾಳಿ ಟೀಮ್ ನವರು ಮಾತನಾಡಿದರೆ ನಾವು ಕೂಡ ಮಾತನಾಡೋಣ ಎಂದು ಅಂದುಕೊಂಡಿದ್ದರು ಈಗ ಅದೇ ರೀತಿ ನಡೆಯುತ್ತಿದೆ ಸಂಗೀತ ಜೊತೆ ಮಾತನಾಡಿದರೆ ನಮ್ರತ ಸಂಗೀತ ಬೆಂಬಲಕ್ಕೆ ನಿಂತುಕೊಂಡು ತನಿಷಾ ಮೇಲೆ ಕೂಗಾಡಿದ್ದಾರೆ. ಅಂದು ಮಾವ ಅಳಿಯ ಆಗಿದ್ದ ತುಕಾಲಿ ಸಂತೋಷ್ ಹಾಗೂ ವಿನಯ್ ರವರು ಈಗ ಎದುರಾಳಿ ಸ್ಪರ್ಧಿಗಳಾಗಿದ್ದಾರೆ.

Colors kannada Bigg boss season 10 Written Update on sangeetha, tanisha and namratha

ಬಿಗ್ ಬಾಸ್ ಮನೆಯಲ್ಲಿ ಯಾರು ಶತ್ರುಗಳಲ್ಲ ಯಾರು ಮಿತ್ರರು ಅಲ್ಲ ಎಂಬ ಮಾತು ಪದೇ ಪದೇ ಸತ್ಯವಾಗುತ್ತಲೇ ಇದೆ ಅದು ತುಕಾಲಿ ಸಂತೋಷ್ ಹಾಗೂ ಸಂಗೀತ ಇವರಿಬ್ಬರೇ ತಮ್ಮ ವರ್ತನೆಯ ಮೂಲಕ ಅದನ್ನ ನಿರೂಪಿಸಿದ್ದಾರೆ. ಸಂಗೀತ ಹಾಗೂ ವಿನಯ್ ಬೇರೆ ಬೇರೆ ತಂಡಗಳಾಗಿ ಆಟ ಆಡುತ್ತಿದ್ದರು. ಆದರೆ ಈಗ ಸಂಗೀತ ವಿನಯ್ ಟೀಮ್ ಗೆ ಸೇರಿಕೊಂಡು ಎಷ್ಟು ದಿನ ಫ್ರೆಂಡ್‌ ಆಗಿದ್ದ ಟೀಮ್ ಮೇಲೆ ಜಂಬೂಸವಾರಿ ಮಾಡಲು ಹೊರಟಿದ್ದಾರೆ. ಸಂಗೀತ ಕಾರ್ತಿಕ್ ಆಗಿ ತುಕಾಲಿ ಸಂತೋಷ್ ಇಬ್ಬರಿಗೂ ಕೂಡ ಒಂದು ಟಾರ್ಕ್ ನೀಡಿದ್ದು ಅದರಲ್ಲಿ ಇಬ್ಬರು ತಲೆ ಬೋಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ ಆದರೆ ಸಂಗೀತ ಕೊಟ್ಟ ಟಾಸ್ಕ್ ತನಿಷಾಗೆ ಮಾತ್ರ ಇಷ್ಟವಾಗಿಲ್ಲ. ಟಾಸ್ಕ್ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದೆ.

ಟಾಸ್ಕ್ ಗೆಲ್ಲಲು ನೇರ ಪೈಪೋಟಿ, ತಲೆ ಬೋಳಿಸಿಕೊಂಡ ಕಾರ್ತಿಕ್

ಬಿಗ್ ಬಾಸ್ ಮನೆಯಲ್ಲಿ ಈಗ ರಿಯಲ್ ಆಟ ಶುರುವಾಗಿದೆ ಇಂದು ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಿಗೆ ಹೊಸ ಟಾಸ್ಕ್ ನೀಡಿದ್ದಾರೆ. ವಿನಯ್ ಟೀಂ ಗಜಕೇಸರಿಯಾಗಿದ್ದು, ಕಾರ್ತಿಕ್ ಟೀಮ್ ಸಂಪತ್ತಿಗೆ ಸವಾಲ್ ಆಗಿದೆ. ಗಜಕೇಸರಿ ಹಾಗೂ ಸಂಪತ್ತಿಗೆ ಸವಾಲ್ ತಂಡಗಳ ನಡುವೆ ಪೈಪೋಟಿ ಎದುರಾಗಿದೆ. ತಮ್ಮ ತಂಡಕ್ಕೋಸ್ಕರ ಯಾವ ಟಾಸ್ಕನ್ನು ಮಾಡಲು ಸಿದ್ಧವಾಗಿದ್ದಾರೆ ಕಾರ್ತಿಕ್. ಎದುರಾಳಿ ತಂಡದ ಸಂಗೀತ ಕಾರ್ತಿಕ್ ಹಾಗೂ ತುಕಾಲಿ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಟಾಸ್ಕ್ ನೀಡಿದ್ದಾರೆ. ಆದರೆ ಇದು ತನಿಷಾಗೆ ಸ್ವಲ್ಪವು ಇಷ್ಟವಾಗಿಲ್ಲ ಇದಕ್ಕಾಗಿ ಒಬ್ಬರಿಗೆ ಮಾತ್ರ ಕೊಡಬಹುದಾಗಿತ್ತು ಎಂದು ಎದುರಾಳಿ ತಂಡಕ್ಕೆ ಹೇಳಿದ್ದಾರೆ.

Colors kannada Bigg boss season 10 Written Update on sangeetha, tanisha and namratha

ಈ ವೇಳೆ ಸಂಗೀತ ನೀವು ಹೇಳಿದಂತೆ ಕೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ವಿಷಯಕ್ಕಾಗಿ ಸಂಗೀತ ಹಾಗೂ ತನಿಷಾ ನಡುವೆ ಜಗಳವಾಗಿದೆ. ಇನ್ನೂ ಸಂಗೀತರನ್ನು ವಹಿಸಿಕೊಂಡು ನಮ್ರತಾ ಬಂದಿದ್ದು ತನಿಷಾ ಮೇಲೆ ಮುಗಿಬಿದ್ದಿದ್ದಾರೆ.‌ ಬಾಯಿ ಮುಚ್ಚಿಕೊಂಡು ಇರಬೇಕು ಎಂದೆಲ್ಲ ಮಾತನಾಡಿದ್ದಾರೆ. ಸಂಗೀತಾ, ತನಿಷಾ, ನಮ್ರತಾ ಮೂವರ ನಡುವೆ ಜಗಳವೇ ನಡೆದಿದೆ.‌ ತಂಡಕೋಸ್ಕರ ಕಾರ್ತಿಕ್ ನಾನು ಏನು ಬೇಕಾದರೂ ಮಾಡುತ್ತೇನೆ ಇದಕ್ಕಾಗಿ ತಲೆ ಬೋಳಿಸಿಕೊಳ್ಳಲು ಸಿದ್ದ ಎಂದು ಕಾರ್ತಿಕ್ ಎಂದಿದ್ದಾರೆ. ಕೂದಲು ಮತ್ತೊಮ್ಮೆ ಬರುತ್ತದೆ ಇಲ್ಲಿ ಗೆಲುವು ಮುಖ್ಯವಾಗಿದೆ ಎಂದು ಕಾರ್ತಿಕ್ ಉತ್ಸಾಹದಿಂದ ಮಾತನಾಡಿದ್ದಾರೆ.

ಕಾರ್ತಿಕ್ ತಲೆ ಬೋಳಿಸಿದ ನೀತು, ಸಂಗೀತ ಅವಕಾಶವಾದಿಯಂತೆ?

ಸಂಗೀತ ನೀಡಿದ ಟಾಸ್ಕ್ ಅನ್ನ ಕಾರ್ತಿಕ್ ಪೂರೈಸಿದ್ದಾರೆ. ನೀತು ಕಾರ್ತಿಕ್ ತಲೆಯನ್ನ ನುಣ್ಣಗೆ ಬೋಳಿಸಿದ್ದಾರೆ. ಫ್ರೆಂಡು ಅಂದುಕೊಂಡೆ ಸಂಗೀತ ಚೆನ್ನಾಗಿ ಕಾರ್ತಿಕ್‌ಗೆ ಗುಂಡಿ ತೋಡಿದ್ದಾರೆ. ಸಂಗೀತ ಇದಕ್ಕಿದ್ದಂತೆ ಬದಲಾಗಿದ್ದಕ್ಕೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಕಾಶವಾದಿಯಂತೆ ಸಂಗೀತ ಹೋಗಿದ್ದಾರೆ. ಇದು ಒಳ್ಳೆಯ ಲಕ್ಷಣವಲ್ಲ ಫ್ರೆಂಡ್ ಆದವರು ಏನೇ ಕಷ್ಟ ಬರಲಿ ಜೊತೆಗೆ ನಿಂತು ಎದುರಿಸಬೇಕು. ತಂಡದಲ್ಲಿ ಒಂದು ಮಾತು ಬರುತ್ತದೆ ಒಂದು ಮಾತು ಹೋಗುತ್ತದೆ ಆದರೆ ಸಂಗೀತ ಮಾಡಿದ್ದು ಸರಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

More from Filmibeat

English summary
Bigg boss season 10: details about sangeetha, tanisha, namratha fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X