BBK 10: ವಿನಯ್ ಮಾಡಿದ ತಪ್ಪಿನಿಂದ ಮನೆಯವರಿಗೆಲ್ಲಾ ಶಿಕ್ಷೆ : ಆದರೆ ವಿನಯ್ ನಡವಳಿಕೆಯೇ ಗೊಂದಲ..!
ಬಿಗ್ ಬಾಸ್ ಮನೆಯಲ್ಲಿ ಯಾವ ಸೀಸನ್‌ನಲ್ಲೂ ಬ್ರೇಕ್ ಆಗದಷ್ಟು ರೂಲ್ಸ್ ಈ ಬಾರಿಯ ಸೀಸನ್‌ನಲ್ಲಿ ಬ್ರೇಕ್ ಆಗಿದೆ. ಪ್ರತಿ ಸೀಸನ್‌ನಲ್ಲೂ ಮನೆ ಮಂದಿ ಏನಾದ್ರೂ ರೂಲ್ಸ್ ಬ್ರೇಕ್ ಮಾಡಿದರೆ, ಅದರ ಬಗ್ಗೆ ಬಿಗ್ ಬಾಸ್ ಎಚ್ಚರಿಸುತ್ತಾ ಇದ್ದರು. ಆದರೆ ಈ ಬಾರಿ ಆ ರೀತಿಯ ಎಚ್ಚರಿಕೆಯನ್ನು ಬಿಗ್ ಬಾಸ್ ಕೂಡ ನೀಡುತ್ತಿಲ್ಲ. ಆದರೆ ಲಕ್ಸುರಿ ಬಜೆಟ್ ಆಡುವಾಗ ಪ್ರತಿ ಸಲ ಪಾಯಿಂಟ್ಸ್ ಕಟ್ ಮಾಡುವ ಮೂಲಕ, ರೂಲ್ಸ್ ಬ್ರೇಕ್ ಎಚ್ಚರಿಕೆ ನೀಡುತ್ತಾ ಇದೆ.
ಸದ್ಯದ ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಅಂತ ಹೆಚ್ಚು ಗಮನ ಕೊಡುತ್ತಾ ಇದ್ದದ್ದೆ ವಿನಯ್. ಆದರೆ ಈ ಬಾರಿ ವಿನಯ್ ಯಾಮಾರಿದ್ದಾರೆ. ಸ್ಮೋಕಿಂಗ್ ಝೋನ್ ಯಾಕೆ ತೆಗೆದಿಲ್ಲ ಎಂಬ ಗೊಂದಲದಲ್ಲಿ ಇದ್ದರು. ಬಿಗ್ ಬಾಸ್‌ಗೆ ಈ ಬಗ್ಗೆ ಮನವಿಯನ್ನು ಮಾಡಿಕೊಂಡರು. ಅದಕ್ಕೆ ಕ್ಲಾರಿಟಿ ಆಮೇಲೆ ಕೊಟ್ಟಿದೆ ಬಿಗ್ ಬಾಸ್.

ಸಿಗರೇಟ್ ವಿಚಾರಕ್ಕೆ ಮೈಕೆಲ್ ಅಂಡ್ ವಿನಯ್ ಕಡೆಯಿಂದ ರೂಲ್ಸ್ ಬ್ರೇಕ್
ಬಿಗ್ ಬಾಸ್ ಮನೆಯಲ್ಲಿ ಅದರದ್ದೇ ಆದ ರೂಲ್ಸ್ ಇದೆ. ಆ ರೂಲ್ಸ್ ಬ್ರೇಕ್ ಮಾಡಿದರೆ ಶಿಕ್ಷೆ ನೀಡುತ್ತೆ. ಒಂದು ವೇಳೆ ಆ ತಪ್ಪನ್ನು ಮನೆಯವರು ನೋಡಿಯೂ ಸುಮ್ಮನೆ ಇದ್ದರೆ, ಅಲ್ಲಿಗೆ ಇಡೀ ಮನೆಯವರಿಗೂ ಶಿಕ್ಚೆ ಸಿಗುತ್ತದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ವಿನಯ್ ಮತ್ತು ಮೈಕೆಲ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಅದುವೇ ಸ್ಮೋಕಿಂಗ್ ಝೋನ್‌ನಲ್ಲಿ ಒಬ್ಬರಿಗಿಂತ ಹೆಚ್ಚಾಗಿ ಹೋಗಬಾರದು ಎಂಬ ರೂಲ್ಸ್ ಇದೆ. ಆದರೆ ವಿನಯ್ ಮತ್ತು ಮೈಕೆಲ್ ಆ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಕ್ಷಮೆ ಕೇಳಿದ ವಿನಯ್, ಬಿಗ್ ಬಾಸ್‌ಗೆ ಇಷ್ಟವಿಲ್ಲ ಈ ಕ್ಷಮೆ!
ವಿನಯ್ ಮತ್ತು ಮೈಕೆಲ್ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದರು. ಗೊತ್ತಾದ ಕೂಡಲೇ ಇಬ್ಬರು ಕ್ಷಮೆ ಕೇಳಿದ್ದಾರೆ. ಆದರೆ ಈ ಕ್ಷಮೆಯನ್ನು ಬಿಗ್ ಬಾಸ್ ಒಪ್ಪಿಲ್ಲ. ಸಮಯ ಮೀರಿದೆ ಅನ್ನಿಸ್ತಾ ಇಲ್ವಾ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ್ದು ಅಪರಾಧ. ತಪ್ಪು ಮಾಡಿದ್ದಾರೆ ಎಂಬುದು ಗೊತ್ತಿದ್ದರೂ ಮನೆಯವರು ಸುಮ್ಮನೆ ಇದ್ದರೂ. ಈಗಲೂ ಸುಮ್ಮನೆ ಕೂತಿದ್ದಾರೆ. ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಈಗ ಪಾಲುದಾರರ ಸರದಿ. ಅವರಿಬ್ಬರು ಮಾಡಿದ ತಪ್ಪನ್ನು ಮನೆಯವರೆಲ್ಲರು ಹೊರಬೇಕು ಎಂದು ಬಿಗ್ ಬಾಸ್ ಆರ್ಡರ್ ಮಾಡಿದ್ದಾರೆ.

ವಿನಯ್ ಮತ್ತು ಮೈಕೆಲ್ ತಪ್ಪಿನಿಂದ ಮನೆಯವರಿಗೆ ಶಿಕ್ಷೆ
ಬಿಗ್ ಬಾಸ್ ತನ್ನ ಮುಂದಿನ ಆದೇಶದವರೆಗೂ ಮನೆಯವರಿಗೆ ಒಂದು ಶಿಕ್ಷೆಯನ್ನು ನೀಡಿದ್ದಾರೆ. ತೂಕ ಇರುವ ಚೀಲಗಳನ್ನು ನೀಡಿ, ತಮ್ಮ ಬೆನ್ನಿಗೆ ಬ್ಯಾಗ್ ರೀತಿಯಲ್ಲಿಯೇ ಹಾಕಿಕೊಂಡು, ಕೆಲಸಗಳನ್ನು ಮಾಡಬೇಕಿದೆ. ಈ ಶಿಕ್ಷೆಗೆ ಮನೆಯವರೆಲ್ಲಾ ವಿನಯ್ ಮೇಲೆ ಗರಂ ಆದರು. ಅದರಲ್ಲಿ ನಮ್ರತಾ, ಸಂತೋಷ್, ರಕ್ಷಕ್, ಸ್ನೇಹಿತ್, ಇಶಾನಿ ವಿನಯ್ ಪರವಾಗಿಯೇ ಇದ್ದರು. ಆದರೆ ಕಾರ್ತಿಕ್, ಇನ್ನುಳಿದ ಸ್ಪರ್ಧಿಗಳಿಗೆ ಪ್ರಶ್ನೆ ಮಾಡುವಂತೆ ಹೇಳಿ ಕೊಡುತ್ತಿದ್ದರು.
ಮನೆಯವರ ಕೆಂಗಣ್ಣಿಗೆ ಗುರಿಯಾದ ವಿನಯ್
ಫ್ರೆಂಡ್ ಅಂದುಕೊಂಡಿದ್ದ ಕಾರ್ತಿಕ್ ಈಗ ಸ್ಪರ್ಧಿ
ವಿನಯ್ ಬಹಳ ಸಂಯಮದಿಂದಾನೇ. ಹೌದು ನಾನು ತಪ್ಪು ಮಾಡಿದ್ದೀನಿ. ಅದು ಗೊತ್ತಿಲ್ಲದೆ ಆಗಿರುವುದು. ಎಲ್ಲರೂ ಹೈಡ್ರಾಮಾ ಮಾಡಬೇಡಿ. ಅಡುಗೆಯನ್ನ ಕುಳಿತು ಮಾಡಬಹುದು. ಇಲ್ವಾ ನಾನೇ ಮಾಡಿಕೊಡುತ್ತೀನಿ. ಹೇಗೆ ಎಂಬುದನ್ನ ಹೇಳಿ ಎಂದು ಕೇಳಿದ್ದಾರೆ. ಜೊತೆಗೆ ಕಾರ್ತೀಕ್ ಎರಡು ಕಡೆ ಆಟ ಆಡಿದ್ದಕ್ಕೂ ವಿನಯ್ ಕ್ಲಾಸ್ ತೆಗೆದುಕೊಂಡಿದ್ದಾರೆ. ತಪ್ಪನ್ನ ಒಪ್ಪಿಕೊಂಡ ವಿನಯ್, ಬೇರೆಯವರ ಟಾರ್ಗೆಟ್‌ಗೂ ಬುದ್ದಿ ಹೇಳಿದ್ದಾರೆ. ಇದನ್ನ ನೋಡಿದಾಗ ವಿನಯ್ ಅವರ ನಡವಳಿಕೆ ಕೊಂಚ ಗೊಂದಲವಾಗುತ್ತಿದೆ.


Click it and Unblock the Notifications











