BBK 10: ಸದಾ ನಗುತ್ತಿದ್ದ, ನಗಿಸುತ್ತಿದ್ದ ತುಕಾಲಿ ಕಣ್ಣಲ್ಲಿ ನೀರು: ಅಮ್ಮನ ನೆನಪಿಗೆ ಎಲ್ಲರೂ ಮೌನ

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ಮನರಂಜಿಸುತ್ತಿರುವುದು ತುಕಾಲಿ ಸಂತು. ಆರಂಭದಲ್ಲಿ ಯಾವ ವಿಚಾರ, ಯಾರ ಮನಸ್ಸನ್ನು ನೋಯಿಸುತ್ತದೆ ಎಂಬುದು ತುಕಾಲಿ ಗಮನಕ್ಕೆ ಬಂದಿರಲಿಲ್ಲ. ಆದರೆ ಮೊದಲ ಪಂಚಾಯತಿಯಲ್ಲಿ ಅದ್ಯಾವಾಗ ಕಿಚ್ಚ ಸುದೀಪ್, ಪ್ರತಾಪ್ ವಿಚಾರವಾಗಿ ಪಾಠ ಮಾಡಿದರೋ ಅಂದಿನಿಂದ, ಮತ್ತೊಬ್ಬರನ್ನ ಹೀಯಾಳಿಸಿ ಕಾಮಿಡಿ ಮಾಡುವುದು ತಪ್ಪಿತ್ತು.

ಅರ್ಥವಾದರೂ ಕೆಲವೊಮ್ಮೆ ಅದನ್ನೇ ಕಾಮಿಡಿಯಾಗಿ ತೆಗೆದುಕೊಳ್ಳುತ್ತಾರೆ. ಅತಿಯಾದರೆ ಅಮೃತಾ ಕೂಡ ವಿಷ ಅಂತಾರೆ. ಸಿಹಿ ಇಷ್ಟ ಅಂತ ಅತಿ ಹೆಚ್ಚು ತಿನ್ನುವುದಕ್ಕೆ ಆಗಲ್ಲ. ಸಂತೋಷ್ ವಿಚಾರದಲ್ಲೂ ಅದೇ. ಯಾವಾಗಲೂ ಕಾಮಿಡಿಯನ್ನೇ ಮಾಡುವುದರಿಂದ ಕೆಲವೊಮ್ಮೆ ಸಾಕು ಎನಿಸಿ ಬಿಡುತ್ತದೆ. ಆದರೆ ಇವತ್ತೇ ಫಸ್ಟ್ ಟೈಮ್ ಸಂತೋಷ್ ಎಲ್ಲರನ್ನು ಮೌನವಾಗಿಸಿದ್ದಾರೆ.

Colors kannada Bigg Boss season 10 Written Update on Tukali Santhu


ಕಷ್ಟದ ದಿನಗಳನ್ನು ನೆನೆದ ಸಂತೋಷ್ ಭಾವನೆಗೆ ಸ್ಪಂದಿಸಿದ ಮನೆ ಮನ

ಮನೆಯವರೆಲ್ಲಾ ಇವತ್ತು ಒಂದೇ ಕಡೆ ಕೂತಿದ್ದರು. ಸಿರಿ, ನೀತೂ,‌ ನಮ್ರತಾ, ಇಶಾನಿ, ಸ್ನೇಹಿತ್, ವರ್ತೂರ್ ಸಂತೋಷ್, ರಕ್ಷಕ್, ಸ್ನೇಹಿತ್ ಎಲ್ಲರ ಕಿವುಗಳು ತುಕಾಲಿ ಸಂತೋಷ್ ಹೇಳುತ್ತಿದ್ದ ಮಾತುಗಳ ಮೇಲೆ ಇತ್ತು. ಯಾಕಂದ್ರೆ ಸದಾ‌ ನಗುತ್ತಿದ್ದ, ನಗಿಸುತ್ತಿದ್ದ ಸಂತೋಷ್ ಇವತ್ತು ಅಮ್ಮನ ಬಗ್ಗೆ ತುಂಬಾ ಭಾವುಕರಾಗಿದ್ದಾರೆ. ಇದನ್ನು ಕೇಳುತ್ತಿದ್ದ ಬಿಗ್ ಬಾಸ್ ಮನೆಯ ಮಂದಿಗೆಲ್ಲಾ ಮನಸ್ಸಲ್ಲಿ ತುಂಬಾ ನೋವಾಗಿದೆ.

ಸಂತೋಷ್ ಕಾರು ತಗೊಂಡಿದ್ದೆ ಅಮ್ಮನಿಗಾಗಿ, ಸಂತೋಷಕ್ಕಾಗಿ ಅಲ್ಲ

ಸಂತೋಷ್ ಬೆಳೆದು ಬಂದಿದ್ದು ತೀರಾ ಕಷ್ಟದ ದಿನಗಳಲ್ಲಿಯೇ. ಸದ್ಯಕ್ಕೆ ಅವರ ಅಮ್ಮ ದೈಹಿಕವಾಗಿ ಇಲ್ಲ. ಆದರೆ ಅವರ ಅಮ್ಮನ ನೆನಪುಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಮನೆಯ ಸದಸ್ಯರ ಜೊತೆಗೆ ಕೂತು ಸಂತೋಷ್, 'ನಾನು ಅಮ್ಮ ಇಬ್ಬರು ಪುಟ್ ಪಾತ್ ಮೇಲೆ ಮಲಗುತ್ತಿದ್ದೆವು. ಕಷ್ಟ ಕಷ್ಟ ಕಷ್ಟ. ಅಮ್ಮನಿಗೆ ಹುಷಾರು ಇರಲಿಲ್ಲ. ಕಾರನ್ನ ತಗೊಂಡೆ. ಅದು ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕಾಗಿ. ಅಮ್ಮ ಕಾರು ತೆಗೆದುಕೊಂಡಿದ್ದನ್ನು ನೋಡಿ, ಏನೋ ಮಗ ಕಾರು ತೆಗೆದುಕೊಳ್ಳುವಷ್ಟು ದೊಡ್ಡವನಾಗಿ ಬಿಟ್ಟ ಅಂದಿದ್ದರು' ಅಂತ ಸಂತೋಷ್ ಅಮ್ಮನನ್ನು ನೆನೆದಿದ್ದಾರೆ.

Colors kannada Bigg Boss season 10 Written Update on Tukali Santhu

ಅಮ್ಮನ ಕೊನೆಯ ದಿನಗಳು ಹೇಗಿತ್ತು..?

ಸಾಯುವ ಮುನ್ನ ಸಂತೂ ಅಮ್ಮ ಹೇಗಿದ್ರು..?

ಸಂತೋಷ್ ತಾಯಿಗೆ ಆರೋಗ್ಯ ಸರಿ ಇರಲಿಲ್ಲ. ಹಳ್ಳಿಗಳಲ್ಲಿ ಆಸ್ಪತ್ರೆಗಳು ಎಷ್ಟೋ ದೂರ ಇರುತ್ತದೆ. ಆಗ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಬಸ್ ಆಗಲಿ, ಆಟೋದಲ್ಲಿಯೇ ಆಗಲಿ ಕಷ್ಟವಾಗುತ್ತದೆ. ಸಂತೋಷ್ ಅವರ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಅಂತಾನೇ ಕಾರನ್ನು ತೆಗೆದುಕೊಂಡಿದ್ದರು. ಕಾರನ್ನ ನೋಡಿದ ಸಂತೋಷ್ ಅಮ್ಮ 'ನನ್ನ ಉಳಿಸಿಕೊಳ್ಳುತ್ತೀಯಾ ಅಲ್ವಾ' ಎಂದಿದ್ದರಂತೆ. ಆದರೆ ಕಡೆಗೂ ಉಳಿಸಿಕೊಳ್ಳುವುದಕ್ಕೆ ಆಗಲೇ ಇಲ್ಲ. ಜೀವ ಹೋಗಿತ್ತು. ಆದರೆ ಸಂತೋಷ್ ಬರುವ ತನಕ ಅವರ ಅಮ್ಮನ ಉಸಿರು ಆಡುತ್ತಾ ಇತ್ತಂತೆ. ಸಂತೋಷ್ ಬಂದು ನೋಡಿದಾಗ ಕಣ್ಣೀರು ಹರಿದು ಹೋಗಿದೆ. ಆಗಲೇ ಜೀವ ಹೋಗಿದೆ.

ಸಂತೂ ತಾಯಿ ಬಗ್ಗೆ ಕೇಳಿದ ಮನೆಯವರೆಲ್ಲ ಮೌನ

ಮನೆಯವರಿಗೂ ಕಣ್ಣೀರು ತರಿಸಿದ ಸಂತೋಷ್ ಕಥೆ

ಅಮ್ಮ ಯಾವತ್ತಿಗೂ ಅಮ್ಮನೇ. ಅದೆಷ್ಟೋ ಮಕ್ಕಳು ಅಮ್ಮನ ಮೇಲೆ ಪ್ರಾಣವನ್ನೆ ಇಟ್ಟುಕೊಂಡಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿರುವವರು ಅಭಿಪ್ರಾಯ ಹೇಳುವಾಗೆಲ್ಲ ಹೆಚ್ಚು ನೆನೆದದ್ದು ಅಮ್ಮನನ್ನೇ. ಹೀಗಿರುವಾಗ ಸಂತೋಷ್ ಅಮ್ಮನ ಸಾವಿನ ಕಥೆ ಹೇಳಿದರೆ ನೋವಾಗದೇ ಇರುತ್ತದೆಯೇ. ಸದಾ ನಗಿಸುವ ಸಂತೋಷ್ ಮನಸ್ಸಲ್ಲೂ ಅಮ್ಮನ ಸಾವಿನ ನೋವು ಇನ್ನೂ ಹಾಗೆಯೇ ಇದೆ. ಆ ನೋವಿನಿಂದ ಇನ್ನು ಹೊರ ಬಂದಂತೆ ಕಂಡಿಲ್ಲ. ಮನೆಯ ಸದಸ್ಯರ ಕೂಡ ಅಮ್ಮಂದಿರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

More from Filmibeat

English summary
Colors kannada Bigg Boss contestant Tukali Santhu mother death details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X