ವಿನಯ್ ಟೀಂ ಬಗ್ಗೆ ಸತ್ಯವನ್ನೇ ಹೇಳಿದ ವರ್ತೂರು ಸಂತೋಷ್: ಯಾರಿಗೋ ಕನಿಕರವೇ ಇಲ್ಲ ಎಂದ ತುಕಾಲಿ..!
ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ವರ್ತೂರು ಸಂತೋಷ್ ಯಾವುದೇ ಜಗಳವನ್ನು ಮಾಡಿಕೊಳ್ಳದೆ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇನ್ನು ಗೇಮ್ ವಿಷಯ ಬಂದಾಗಲೂ ಸಹ ತಮ್ಮ ಟೀಮ್‌ದಲ್ಲಿ ಎಷ್ಟೇ ಮನಸ್ತಾಪವಿದ್ದರು ಸಹ ಟೀಂಗೋಸ್ಕರ ಆಟ ಆಡಿದ್ದಾರೆ. ಗುಂಪಿನ ಜೊತೆಯಲ್ಲೂ ಅಷ್ಟೇ ಚೆನ್ನಾಗಿ ಮಾತನಾಡುತ್ತಾರೆ. ಆದರೆ ಯಾರ ಜೊತೆಗೂ ಜಗಳವನ್ನು ಮಾಡಿಕೊಳ್ಳುವುದಿಲ್ಲ ಮನೆಯಲ್ಲಿ ಎಲ್ಲರಿಗೂ ಸಹ ಗೌರವವಿದೆ. ವರ್ತೂರು ಸಂತೋಷ್ ಅವರು ಬಂದ ದಿನದಿಂದಲೂ ಯಾರ ಯಾರ ಮನಸ್ಸು ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್ ವರ್ತೂರು ಸಂತೋಷ್ ಬಳಿ ಸ್ವಲ್ಪ ಕ್ಲೋಸ್ ಆಗಿ ಇದ್ದಾರೆ. ಏನಾದರೂ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಬೇಕು ಎಂದರೆ ವರ್ತೂರು ಸಂತೋಷ್ ಬಳಿ ಬಂದು ಹೇಳಿಕೊಳ್ಳುತ್ತಾರೆ. ಈಗ ತಮ್ಮ ಟೀಮ್ ಮೇಲೆ ಸ್ಪಲ್ವ ಬೇಸರವನ್ನು ಸಹ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ತುಕಾಲಿ ಸಂತೋಷ್ ವಿನಯ್‌ಗೆ ಸಪೋರ್ಟ್ ಮಾಡುತ್ತಾರೆ. ಈಗ ಯಾಕೋ ಅವರ ಟೀಮ್ ಮೇಲೆ ಅವರಿಗೆ ಬೇಸರ ಬಂದಂತೆ ಕಾಣುತ್ತಿದೆ.

ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ನೇರ ಮಾತುಗಳಿಂದಲೇ ಸಹ ಹೆಸರುವಾಸಿಯಾದವರು. ಇದಕ್ಕಾಗಿ ತುಕಾಲಿ ಸಂತೋಷ್ ಬಳಿಯಲ್ಲಿ ಅವರ ಟೀಮ್‌ನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಸಹ ಹೇಳುತ್ತಾ ಇದ್ದಾರೆ. ತುಕಾಲಿ ಸಂತೋಷ್ ಇಲ್ಲಿ ನಮ್ರತಾ ಬಗ್ಗೆ ಮಾತನಾಡಿದ್ದಾರೆ. ನಮ್ರತಾ ನನ್ನನ್ನೇ ಸುಮ್ಮನೇ ಇರು ಎಂದರು. ಈ ಮಾತು ನನಗೆ ಬೇಸರವಾಗಿದೆ ಎಂದು ತಮ್ಮ ಟೀಮ್‌ನವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಎಂದಿಗೂ ಕೂಡ ತುಕಾಲಿ ಸಂತೋಷ್ ತಮ್ಮ ಟೀಮ್‌ನವರನ್ನು ಬೆಂಬಲಿಸುತ್ತಾ ಬಂದಿದ್ದರು ಆದರೆ ಈಗ ಬೇಸರ ಮಾಡಿಕೊಂಡಂತೆ ಕಾಣುತ್ತಿದೆ.
ತನಿಷಾ ಸಂಗೀತಾನೇ ಬೆಸ್ಟ್ ಎಂದ ವರ್ತೂರ್
ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಇಬ್ಬರು ಸಹ ಮಾತನಾಡುವಾಗ ಸಂಗೀತ ಹಾಗೂ ತನಿಷಾನೇ ಬೆಸ್ಟ್ ಎಂದು ಹೇಳಿದ್ದಾರೆ. ನೇರವಾಗಿ ಮನಸ್ಸಿಗೆ ಬಂದದ್ದನ್ನು ಅವರು ಅಲ್ಲಿಯೇ ಎಲ್ಲವನ್ನು ಹೇಳಿಬಿಡುತ್ತಾರೆ. ಆದರೆ ನಿಮ್ಮ ಟೀಮ್‌ನವರು ರೀತಿ ಆಡುವುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತುಕಾಲಿ ಸಂತೋಷ್ ವರ್ತೂರು ಸಂತೋಷ್ ಮಾತನಾಡುತ್ತಿರುವ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದಾರೆ. ಇನ್ನು ಇದೇ ವೇಳೆ ತುಕಾಲಿ ಸಂತೋಷ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ತುಕಾಲಿ ಸಂತೋಷ್ ಅವನು ಯಾರಿಗೋ ಕನಿಕರವಿಲ್ಲ ಎಂದು ಮಾತನಾಡಿದ್ದಾರೆ. ಅದು ಡ್ರೋಣ್ ಪ್ರತಾಪ್ ಅಥವಾ ಮತ್ಯಾರಿಗೋ ಎಂಬುವುದು ಮಾತ್ರ ತಿಳಿಯಲೇ ಇಲ್ಲ. ನಾನು ಇಷ್ಟು ದಿನ ಸಂಗೀತಾ ಹಾಗೂ ತನಿಷಾರನ್ನು ಏನೋ ಎಂದು ತಿಳಿದುಕೊಂಡಿದ್ದೆ. ಆದರೆ ಅವನಿಗಿಂತ ಇವರೇ ಪರವಾಗಿಲ್ಲ ಎಂದು ಸಂಗೀತಾ ಹಾಗೂ ತನಿಷಾ ಬಗ್ಗೆ ತುಕಾಲಿ ಸಂತೋಷ್ ಅಭಿಪ್ರಾಯ ಹೊರಹಾಕಿದಾಗ ವರ್ತೂರು ಸಂತೋಷ್, ತನಿಷಾ ಹಾಗೂ ಸಂಗೀತಾನೇ ಬೆಸ್ಟ್ ಎಂದು ಹೇಳಿದ್ದಾರೆ.
ಪ್ರೇಕ್ಷಕರ ಅಭಿಪ್ರಾಯ ವರ್ತೂರು ಅಭಿಪ್ರಾಯ ಒಂದೇ..!
ವರ್ತೂರು ಸಂತೋಷ್ ವಿನಯ್ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಟೀಮ್ ನೋಡಲಿಕ್ಕೆ ಚೆನ್ನಾಗಿದೆ. ಆಟವನ್ನು ಚೆನ್ನಾಗಿಯೇ ಆಡುತ್ತಿದೆ. ಆದರೆ ಜನರ ಕಣ್ಣಲ್ಲಿ ಬೇರೆ ರೀತಿ ಕಾಣುತ್ತಾ ಇದೆ ಎಂದು ತಮ್ಮ ಮನಸ್ಸಿನಲ್ಲಿದ್ದ ಸತ್ಯವನ್ನ ಹೊರ ಹಾಕಿದ್ದಾರೆ. ವರ್ತೂರು ಸಂತೋಷ್ ಮಾತು ಪ್ರೇಕ್ಷಕರಿಗಂತು ಬಹಳ ಹಿಡಿಸಿದೆ. ಹೀಗಾಗಿ ಪ್ರೇಕ್ಷಕರು ಸಹ ನಾವು ಇದನ್ನೇ ಹೇಳುತ್ತಾ ಇದ್ದದ್ದು ಎಂದಿದ್ದಾರೆ.
ವಿನಯ್ ಟೀಮ್ ಯಾರ ಗೆಲುವನ್ನ ಸಹಿಸುವುದಿಲ್ಲ. ಅವರು ಮಾತ್ರ ಗೆಲುವು ಪಡೆಯಬೇಕು ಎಂದು ಕೊಳ್ಳುತ್ತಾರೆ. ಅದು ತಪ್ಪು ಎಲ್ಲರಿಗೂ ಸಹ ಗೌರವ ಕೊಟ್ಟು ಮಾತನಾಡಬೇಕು ಎಂದು ಹೇಳಿದ್ದಾರೆ. ವರ್ತೂರು ಸಂತೋಷ್ ಕೂಡ ಅದನ್ನೇ ಹೇಳಿದ್ದಾರೆ. ಅವರು ಆಟವಾಡುವುದೇ ಒಂದು ಇರುವುದೇ ಒಂದು. ಮತ್ತೊಂದು ಟೀಮ್‌ನಲ್ಲಿರುವ ಕೆಲವರನ್ನು ಇನ್ಫಾರ್ಮಶನ್ ಕಲೆಕ್ಟ್ ಮಾಡಿಕೊಂಡು ಬನ್ನಿ ಎಂದು ಕಳಿಸುತ್ತಾರೆ ಇದ್ಯಾವುದು ಸರಿಯಲ್ಲ ಎಂದು ವರ್ತೂರು ಸಂತೋಷ್ ಬಳಿ ಸತ್ಯವನ್ನ ಹೇಳಿದ್ದಾರೆ.


Click it and Unblock the Notifications











