'ಮುದ್ದು ಸೊಸೆ' ಹೊಸ ಪ್ರೋಮೋ; ವಿಕ್ಕಿ ವಾಯ್ಸ್ ಕೇಳಿ ಫುಲ್ ಖುಷ್, ಅಂಥದ್ದೇನಂದ್ರು?
ಕಲರ್ಸ್ ಕನ್ನಡದಲ್ಲಿ ಈಗಾಗಲೇ ಹೊಸ ಧಾರಾವಾಹಿಗಳು ಬ್ಯಾಕ್ ಟು ಬ್ಯಾಕ್ ಮೂಡಿ ಬರ್ತಾ ಇದಾವೆ. ಅದರ ಜೊತೆಗೆ ಇನ್ನು ಒಂದು ಹೊಸ ಧಾರಾವಾಹಿ ಒಂದಷ್ಟು ಕುತೂಹಲವನ್ನ ಹೆಚ್ಚು ಮಾಡಿದೆ. ಅದುವೆ ಮುದ್ದು ಸೊಸೆ. ಪ್ರತಿಮಾ ಹಾಗೂ ತ್ರಿವಿಕ್ರಮ್ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಈಗಾಗಲೇ ಒಂದು ಪ್ರೋಮೋ ಮೊದಲೇ ರಿಲೀಸ್ ಮಾಡಿದ್ದ ವಾಹಿನಿ, ಹೆಣ್ಣು ನೋಡುವ ಶಾಸ್ತ್ರವನ್ನ ಆ ಪ್ರೋಮೋದಲ್ಲಿ ಮುಗಿಸಿದ್ದರು. ಇದೀಗ ಹೊಸದೊಂದು ಪ್ರೋಮೋವನ್ನು ಬಿಟ್ಟಿದ್ದಾರೆ.
ತ್ರಿವಿಕ್ರಮ್‌ಗೆ ಮೊದಲೇ ಫ್ಯಾನ್ಸ್ ಇದ್ದರು. ಆದರೆ ಬಿಗ್ ಬಾಸ್‌ಗೆ ಬಂದ ಮೇಲಂತೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು. ಅವರನ್ನ ಮತ್ತೆ ತೆರೆ ಮೇಲೆ ನೋಡುವುದಕ್ಕೇನೆ ಕಾಯ್ತಾ ಇದ್ದರು. ಇದೀಗ ಆ ದಿನ ಹತ್ತಿರವಾಗಿದೆ. ಮತ್ತೆ ತೆರೆಮೇಲೆ ಬರ್ತಾ ಇದ್ದಾರೆ.

ಹೊಸ ಪ್ರೋಮೋ ನೋಡಿ ಖುಷಿ
ಕಲರ್ಸ್ ಕನ್ನಡದ 'ಮುದ್ದು ಸೊಸೆ' ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ವಿದ್ಯಾ ಹಾಗೂ ತ್ರಿವಿಕ್ರಮ್ ಮದುವೆ ವಿಡಿಯೋ ರಿಲೀಸ್ ಆಗಿದೆ. ಶಾಲೆಗೆ ಹೋಗಬೇಕಾದ ವಿದ್ಯಾ ಈಗ ಹಸೆಮಣೆ ಏರುವ ಪರಿಸ್ಥಿತಿಗೆ ಬಂದು ನಿಂತಿದ್ದಾಳೆ. ಮದುವೆ ಇಷ್ಟ ಇಲ್ಲ ಅಂತ ಹೇಳುವಂತೆಯೂ ಇಲ್ಲ. ಅಪ್ಪನೇ ತನ್ನ ಮಾತನ್ನು ಕೇಳುವುದಕ್ಕೆ ರೆಡಿ ಇಲ್ಲ.
ಪೊಲೀಸರಿಗೆ ಕರೆ ಮಾಡಿ ತಿಳಿಸಿದ ವಧು
ವಿದ್ಯಾಗೆ ತಾನೂ ಹೆಚ್ಚು ಓದಬೇಕು, ದೊಡ್ಡ ಡಾಕ್ಟರ್ ಆಗಬೇಕು ಎಂಬ ಆಸೆ. ಆದ್ರೆ ಆಕೆಯ ತಂದೆ ಒಳ್ಳೆ ಸಂಬಂಧ ಸಿಕ್ಕಿತು ಅಂತ ಓದುವುದನ್ನೇ ಬಿಡಿಸಿ ಮದುವೆ ಮಾಡುವುದಕ್ಕೆ ಹೊರಟಿದ್ದಾನೆ. ಇದನ್ನ ಹೇಗಾದರೂ ತಡೆಯಬೇಕು ಎಂದುಕೊಂಡ ವಿದ್ಯಾ, ಮದುವೆ ಮಂಟಪದಲ್ಲಿ ಗಟ್ಟಿ ಧೈರ್ಯ ಮಾಡಿ ಪೊಲೀಸರಿಗೆ ಕರೆ ಮಾಡಿಯೇ ಬಿಟ್ಟಳು. ಪೊಲೀಸರು ಕೂಡ ಬಂದು ಮದುವೆಯನ್ನು ತಡೆದರು.
ವಿಕ್ರಂ ಧ್ವನಿ ಕೇಳಿ ಫ್ಯಾನ್ಸ್ ಖುಷಿ
ಈ ಹೊಸ ಪ್ರೋಮೋದಲ್ಲಿ ಎಲ್ಲರೂ ಖುಷಿಯಾಗಿದ್ದು, ತ್ರಿವಿಕ್ರಂ ಮಾತು ಕೇಳಿ. ಹಸೆಮಣೆ ಮೇಲೆ ಕೂತಿದ್ದ ತ್ರಿವಿಕ್ರಂಗೆ ದೇವರಿಗೆ ನಮಸ್ಕಾರ ಮಾಡಿ ಎಂದಾಗ, ನನಗೆ ಹಾಗೂ ನಮ್ಮ ನೆರೆಯವರಿಗೆ ನಮ್ಮ ಅಪ್ಪಯ್ಯನ ದೇವರು. ಅವರಿಗೆ ಆಲ್ ರೆಡಿ ನಮಸ್ಕಾರ ಮಾಡಿ ಆಗಿದೆ. ನೀವೂ ಮುಂದುವರೆಸಿ ಎಂದಿದ್ದಾರೆ ತ್ರಿವಿಕ್ರಂ. ಹಾಗೇ ತಾಳಿ ಕಟ್ಟುವ ಸಮಯಕ್ಕೆ ಬಂದ ಪೊಲೀಸರು, ಇಷ್ಟು ಚಿಕ್ಕವಯಸ್ಸಿಗೆನೆ ಮದುವೆ ಮಾಡಿಕೊಳ್ಳುತ್ತಿರುವುದು ಅಪರಾಧ ಎಂದು ತ್ರಿವಿಕ್ರಂ ತಂದೆಯನ್ನ ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ, ಈ ಮದುವೆನಾ ನಿಲ್ಲಿಸೋದಕ್ಕೆ ಪೊಲೀಸರನ್ನ ಕರೆಸಿ, ನಮ್ಮ ಅಪ್ಪಯ್ಯನ ಅರೆಸ್ಟ್ ಆಗುವಂತೆ ಮಾಡಿರೋರು ಇಲ್ಲಿನೇ ಇದ್ದೀರಾ ಅಂತ ಗೊತ್ತು. ಅದು ಯಾವನೇ ಆಗಿದ್ದರು ಸುಮ್ಮನೆ ಬಿಡಕ್ಕಿಲ್ಲ. ಏನಮ್ಮಿ ಈ ಜನ್ಮದಲ್ಲಿ ನೀನೆ ನನ್ನ ಹೆಂಡತಿ ಎಂಬ ಡೈಲಾಗ್ ಹೊಡೆದಿದ್ದಾರೆ.
ಮುದ್ದು ಸೊಸೆಗಾಗಿ ಕಾತರ
ತ್ರಿವಿಕ್ರಮ್ ಡೈಲಾಗ್, ಪ್ರತಿಮಾ ಅವರ ಆಕ್ಟಿಂಗ್‌ಗೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. 'ಮುದ್ದು ಸೊಸೆ' ಕೂಡ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ. ಸದ್ಯ ಪ್ರೋಮೋ ಮೂಲಕವೇ ನಿರೀಕ್ಷೆಯನ್ನ ಹುಟ್ಟು ಹಾಕಿದೆ. ಧಾರಾವಾಹಿ ಶುರುವಾಗುವುದಕ್ಕೆ ವೀಕ್ಷಕರು ಕೂಡ ಕಾಯ್ತಾ ಇದ್ದಾರೆ.


Click it and Unblock the Notifications











