Vinay Gowda: ನನ್ನದು ಹೊರಗೆ 35 ಕಂಪನಿ ಇದೆ..! ಟ್ರೋಲರ್‌ಗಳಿಗೆ ಹಬ್ಬವಾದ ವಿನಯ್ ಗೌಡ ಮಾತು

By Shruthi Harishgowda

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ ಅನ್ನು ಎಲ್ಲರೂ ಸಹ ಕುತೂಹಲದಿಂದ ನೋಡುತ್ತಿದ್ದಾರೆ. ಕೆಲವರಿಗೆ ವಿನಯ್ ಅವರ ವರ್ತನೆ ಸ್ವಲ್ಪವೂ ಸಹ ಇಷ್ಟವಾಗುತ್ತಿಲ್ಲ. ಇನ್ನೂ ಕೆಲವರು ವಿನಯ್‌ಗೆ ಆಟಿಟ್ಯೂಡ್ ಜಾಸ್ತಿ ಅದು ಬಿಟ್ಟರೆ ಉತ್ತಮ ಸ್ಪರ್ಧಿ ಎನ್ನುತ್ತಿದ್ದಾರೆ.‌ ಒಂದು ವಿಷಯದ ಬಗ್ಗೆ ಪರ- ವಿರೋಧ ಚರ್ಚೆ ಇದ್ದಿದ್ದೆ. ಆದರೆ ಈಗ ವಿನಯ್ ಆಡಿದ ಒಂದೇ ಒಂದು ಮಾತಿನಿಂದಾಗಿ ಸಾಕಷ್ಟು ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅದು ಸಹ ಡ್ರೋನ್ ಪ್ರತಾಪ್ ಮುಂದೆ ವಿನಯ್ ಆಡಿದ ಆ ಒಂದೇ ಒಂದು ಮಾತು ಈಗ ಎಲ್ಲೆಡೆ ಟ್ರೋಲ್ ಆಗುವಂತೆ ಮಾಡುತ್ತಿದೆ. ಕೆಲವರು ಕಾಮಿಡಿಯಾಗಿ ಟ್ರೋಲ್ ಮಾಡುತ್ತಿದ್ದರೆ ಇನ್ನೂ ಕೆಲವರು ವಿನಯ್ ವಿರುದ್ಧ ಟ್ರೊಲ್ ಮಾಡುತ್ತಿದ್ದಾರೆ. ಎಲ್ಲಾ ಟ್ರೋಲ್ ಫೇಜ್‌ಗಳಲ್ಲೂ ಸಹ ವಿನಯ್‌ಯದ್ದೆ ಮಾತಾಗಿದೆ.

ವಿನಯ್ ಮೊದಲಿನಿಂದಲೂ ಡ್ರೋನ್ ಪ್ರತಾಪ್‌ರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂದು ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಈಗ ಡ್ರೋನ್ ಪ್ರತಾಪ್ ವಿರುದ್ಧವೇ ಮಾತನಾಡಿ ಟ್ರೋಲ್ ಆಗುವ ಮಟ್ಟಕ್ಕೆ ಬಂದಿದ್ದಾರೆ. ಇನ್ನೂ ಸಂಗೀತ ಹಾಗೂ ತನಿಶಾ ಜೊತೆಯಲ್ಲಿ ಜಗಳವಾಡಿದ್ದು ಸಹ ವಿನಯ್‌ಗೆ ಎಲ್ಲೋ ಒಂದು ಕಡೆ ನೆಗೆಟಿವ್ ಅನಿಸಿದೆ. ಅದರ ಬಗ್ಗೆಯೂ ಸಹ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ. ವಿನಯ್ ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಸಹ ಒಬ್ಬರಲ್ಲ ಒಬ್ಬರ ಜೊತೆ ಜಗಳ ಮಾಡಿಕೊಳ್ಳುತ್ತಲೇ ಇದ್ದಾರೆ.

Colors Kannada Bigg Boss: Vinay Gowda trolled by netizens for 35 company issue

ಅದರಲ್ಲೂ ಸಹ ಹೆಣ್ಣು ಮಕ್ಕಳ ಜೊತೆಯೇ ಸಾಕಷ್ಟು ಬಾರಿ ಜಗಳ ಮಾಡಿಕೊಂಡಿದ್ದು, ಹೆಣ್ಣು ಮಕ್ಕಳ ಬಗ್ಗೆ ಮರ್ಯಾದೆ ಇಲ್ಲದೆ ಮಾತನಾಡುವ ವಿನಯ್‌ಗೆ ಸಂಗೀತ ಹಾಗೂ ತನಿಷಾ ಇಬ್ಬರೂ ಸಹ ಮುಟ್ಟಿ ನೋಡಿಕೊಳ್ಳುವ ರೀತಿ ಮಾತನಾಡುತ್ತಿದ್ದಾರೆ. ಅವನು ಆನೆಯಾದರೆ ಆನೆಗೆ ಅಂಕುಶ ಹಾಕುವ ಹೆಣ್ಣು ಮಕ್ಕಳು ಅಂದರೆ ಇವರೇ ಇರಬೇಕು ಎಂದೆಲ್ಲಾ ನೆಟ್ಟಿಗರು ವಿನಯ್ ಬಗ್ಗೆ ಟ್ರೋಲ್ ಮಾಡುತ್ತಾ ಇದ್ದಾರೆ.

ಸಾಕಷ್ಟು ಟ್ರೋಲ್‌ಗೆ ಒಳಗಾದ ವಿನಯ್ ಮಾತು

ನನ್ನದು ಹೊರಗೆ 35 ಕಂಪನಿ ಇದೆ..!

ಬಿಗ್ ಬಾಸ್ ಮನೆಗೆ ಬಂದ ಮೇಲೆ ವಿನಯ್ ಗೌಡ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಎಲ್ಲಾ ಮಾತುಗಳು ಸಹ ಟ್ರೋಲಿಗರಿಗೆ ಆಹಾರವೇ ಆಗುತ್ತಿದೆ. ವಿನಯ್ ಏನಾದರೂ ಒಂದು ಹೆಚ್ಚು ಕಮ್ಮಿ ಮಾತನಾಡಿದರೆ ಅದು ಟ್ರೋಲ್ ಆಗಿ ಬರುತ್ತಿದೆ. ಒಂದಷ್ಟು ಟ್ರೋಲ್ ಗಳು ಮನರಂಜನೆಯ ನೀಡಿದರೆ ಇನ್ನೊಂದು ವಿನಯ್‌ಗೆ ಎಚ್ಚರಿಕೆಯ ಪಾಠವಾಗಿವೆ. ಈಗ ವಿನಯ್ ಪ್ರತಾಪ್ ಮಾತನಾಡುವ ವೇಳೆ ಮಧ್ಯ ಮಾತನಾಡಿ ನನ್ನದು ಸಹ 35 ಕಂಪನಿಗಳಿವೆ. ಅದನ್ನು ಬಿಟ್ಟು ಹೇಳು ಎಂಬ ಮಾತು ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ. ಇವನೇನು 35 ಕಂಪನಿಗಳ ಓನರ್ ಆಗಿ ಬಿಗ್ ಬಾಸ್‌ಗೆ ಗೆಣಸು ಕೀಳಲು ಬಂದಿದ್ದಾನಾ ಎಂದೆಲ್ಲ ಟ್ರೋಲರ್ ಟ್ರೋಲ್ ಮಾಡಿದ್ದಾರೆ.

ಹೆಣ್ಣು ಮಕ್ಕಳು ಬಳೆ ತೊಟ್ಟುಕೊಳ್ಳುತ್ತಾರೆ ಎಂಬ ವಿಚಾರದ ಬಗ್ಗೆಯೂ ಸಹ ಟ್ರೋಲ್‌ಗೆ ಒಳಗಾಗಿದ್ದಾರೆ. ವಿನಯ್ ಸಂಗೀತಾರನ್ನು ಬಳೆಯ ವಿಷಯವನ್ನು ಮಾತನಾಡಿದ್ದರು. ಇದಕ್ಕೂ ಸಹ ಟ್ರೋಲಿಗರು ಸರಿಯಾದ ರೀತಿಯಲ್ಲಿ ಏಟನ್ನು ಕೊಟ್ಟಿದ್ದಾರೆ. ವಿನಯ್ ಒಂದು ಕಂಪನಿಯಲ್ಲಿ ಬಳೆ ಮಾರುವ ಕಂಪನಿಯೂ ಸಹ ಹೊಂದಿದೆ ಎಂದು ಕುಹಕವಾಡಿದ್ದಾರೆ. ಜೊತೆಗೆ ಈ ವಾರ ಕಿಚ್ಚ ಸುದೀಪ್ ರವರು ಆ ಬಳೆಪೇಟೆಯ ಬಳೆಗಾರ ಎಲ್ಲಿ ಹೋದ ಎಂದು ಕರೆಯಬಹುದೇನೋ ಎಂದು ಸಹ ಕೆಣಕಿದ್ದಾರೆ.

Colors Kannada Bigg Boss: Vinay Gowda trolled by netizens for 35 company issue

ವಿನಯ್‌ಗೆ ಕಿಚ್ಚ ಕ್ಲಾಸ್ ತೆಗೆದುಕೊಳ್ಳಬೇಕಂತೆ.?

ಇಲ್ಲದಿದ್ರೆ ಈ ಬಿಗ್ ಬಾಸ್ ಸ್ಕ್ರಿಪ್ಡೆಂಡ್ ಅಂತೆ.. !

ವಿನಯ್‌ಗೆ ಕಿಚ್ಚ ಸುದೀಪ್ ರವರು ಸರಿಯಾದ ರೀತಿಯಲ್ಲಿ ಕ್ಲಾಸ್ ತೆಗೆದುಕೊಳ್ಳಲಿಲ್ಲ ಎಂದು ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದರ ಬಗ್ಗೆ ಜನರು ವಿರೋಧ ವ್ಯಕ್ತಪಡಿಸಿದ್ದರು. ಮನೆಯಲ್ಲಿ ಅಷ್ಟೆಲ್ಲ ಮಾತನಾಡುವ ವಿನಯ್‌ಗೆ ಯಾಕೆ ನೀವು ಸಾಫ್ಟ್ ಕಾರ್ನರ್ ತೋರುತ್ತ ಇದ್ದೀರಾ. ಈ ವಾರವಾದರೂ ನೀವು ಕ್ಲಾಸ್ ತೆಗೆದುಕೊಳ್ಳುತ್ತೀರಾ ಎಂದು ನಾವು ಕಾಯುತ್ತಿದ್ದೇವೆ. ನೀವೇನಾದರೂ ಕ್ಲಾಸ್ ತೆಗೆದುಕೊಳ್ಳಲಿಲ್ಲ ಅಂದ್ರೆ ಬಿಗ್ ಬಾಸ್‌ ಸಹ ಸ್ಕ್ರಿಪ್ಡೆಂಡ್ ಕಾರ್ಯಕ್ರಮ ಎಂದು ಸಾಬೀತಾಗುತ್ತದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಮದವೇರಿರುವ ವಿನಯ್ ಅಹಂಕಾರವನ್ನು ಕಿಚ್ಚ ಸುದೀಪ್ ಇಳಿಸುತ್ತಾರಾ ನೋಡಬೇಕಿದೆ.

More from Filmibeat

English summary
Bigg Boss Kannada Season 10: Vinay Gowda trolled by netizens
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X