BBK 10: ಸಂಗೀತಾ ಬಿಟ್ಟು ನಮ್ರತಾ ಹೆಸರೇಳಿದ ಕಾರ್ತಿಕ್: ಕೋಪಗೊಂಡ ಚಾರ್ಲಿ ಬೆಡಗಿಯನ್ನ ಸಮಾಧಾನಪಡಿಸುವುದೇ ಟಾಸ್ಕ್..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಈಗ ಹದಿನಾಲ್ಕು ಮಂದಿ ಇದ್ದಾರೆ. ಇಬ್ಬರು ಎಲಿಮಿನೇಷನ್ ಆಗಿ ಮನೆಗೆ ನಡೆದರೆ, ವರ್ತೂರು ಸಂತೋಷ್ ಪೊಲೀಸರ ಬಂಧನದಲ್ಲಿದ್ದಾರೆ. ಇರುವಷ್ಟು ಮಂದಿಯಲ್ಲಿ ಆಗಾಗ ಕೋಪ, ತಾಪ, ಮನಸ್ತಾಪ, ಜಗಳ ಹೀಗೆ ಹಲವು ರೀತಿಯ ಸಮಸ್ಯೆಗಳು ಕಾಣಿಸುತ್ತಲೆ ಇದಾವೆ. ಸ್ವಲ್ಪ ಸಮಯದ ನಂತರ ಮತ್ತೆ ಮನೆ ಮಂದಿ ಸರಿಯಾಗುತ್ತಾರೆ. ಮನೆ ಎಂದರೆ ಹಾಗೇ ಅಲ್ಲವೆ.

ಬಿಗ್ ಬಾಸ್ ಮನೆಯಲ್ಲಿ ಇಶಾನಿ ಮತ್ತು ಮೈಕೆಲ್ ಜೋಡಿ ಜೊತೆಗೆ ಕಾರ್ತಿಕ್ ಹಾಗೂ ಸಂಗೀತಾ ಜೋಡಿ ಕೂಡ ಇದೆ. ಇಶಾನಿ ಹಾಗೂ ಮೈಕೆಲ್ ಎಲ್ಲರ ಮುಂದೆ ಅಧಿಕೃತವಾಗಿ ನಾವಿಬ್ಬರು ಲವರ್ಸ್ ಎಂಬುದನ್ನು ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಸಂಗೀತಾ ಮತ್ತು ಕಾರ್ತಿಕ್ ಹಾಗಲ್ಲ. ಫ್ರೆಂಡ್ಸ್ ಫ್ರೆಂಡ್ಸ್, ನಮ್ಮಿಬ್ಬರ ನಡುವೆ ಏನಿಲ್ಲ ಅಂತಾನೇ ಓಡಾಡುತ್ತಿದ್ದಾರೆ.

Colors kannada Bigg boss Written Update on new Bigg boss season 10 October 25th show

ಯಾವಾಗಲೂ ಜಗಳ ಮಾಡಿಕೊಳ್ಳುವ ಸಂಗೀತಾ

ಕಾರ್ತಿಕ್ ವಿಚಾರದಲ್ಲಿ ಬೇರೆಯದ್ದೇ ರೀತಿಯ ಮುನಿಸು

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಜಗಳಗಂಟಿ ಯಾರು ಎಂದರೆ ಒಂದು ಲೆಕ್ಕಕ್ಕೆ ಸಂಗೀತಾ ಅವರನ್ನೇ ತೆಗೆದುಕೊಳ್ಳಬಹುದು. ಯಾಕಂದ್ರೆ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಸಣ್ಣ ಪುಟ್ಟ ವಿಷಯಕ್ಕೆ ವಿನಯ್ ಬಳಿ ಜಗಳವಾಡುತ್ತಲೇ ಇದ್ದರು. ಸದ್ಯಕ್ಕೆ ಆ ಜಗಳ ನಿಂತು, ಇಬ್ಬರು ಬೆಸ್ಟ್ ಫಲಕ ಕೊಡುವಷ್ಟು ಒಳ್ಳೆಯವರಾಗಿ ಬಿಟ್ಟಿದ್ದಾರೆ. ಈಗ ಏನಿದ್ದರು ಸಂಗೀತಾ ಜಗಳ ನೀತೂ ಜೊತೆಗೆ. ಟಾಸ್ಕ್ ಬರಲಿ, ನಾಮಿನೇಷನ್ ಬರಲಿ ಸಂಗೀತಾ ಮತ್ತು ನೀತೂ ನಡುವೆ ಒಂದು ಜಗಳ ಇದ್ದೇ ಇರುತ್ತದೆ.

ವಿನಯ್‌ಗೆ ಸಪೋರ್ಟ್ ಮಾಡಿದ್ದಾಗಲೂ ಬೇಸರ

ಕಾರ್ತಿಕ್ ಸದಾ ನನ್ನ ಪರ ಇರಲಿ ಎನ್ನುವ ಸಂಗೀತಾ

ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಮತ್ತು ಕಾರ್ತಿಕ್ ನಡುವೆ ಒಂಥರ ಸೆಳೆತವಿದೆ. ಆದರೆ ಇಬ್ಬರು ಹೇಳುವುದು ಮಾತ್ರ ನನ್ನ ಬೆಸ್ಟ್ ಫ್ರೆಂಡ್ ಅಂತ. ಆದರೆ ಅದು ನೋಡುಗರ ಕಣ್ಣಿಗೆ ಸ್ನೇಹವನ್ನು ಮೀರಿದ ಭಾವವೆಂಬುದು ಅರ್ಥವಾಗದೆ ಇರುವುದಕ್ಕೆ ಹೆಚ್ಚು ಸಮಯವೇನು ಬೇಕಿಲ್ಲ. ಈ ಹೆಚ್ಚಿನ ಸ್ನೇಹದಲ್ಲಿ ಸ್ವಾರ್ಥವೂ ಹೆಚ್ಚಾಗಿದೆ. ಕಾರ್ತಿಕ್ ಯಾವಾಗಲೂ ಸಂಗೀತಾಗೆ ಸಪೋರ್ಟ್ ಮಾಡಬೇಕು. ವಿನಯ್‌ಗೆ ಸಪೋರ್ಟ್ ಮಾಡಿದ ಎಂಬ ಕಾರಣಕ್ಕಾಗಿಯೇ ಸಂಗೀತಾ ಕೋಪ ಮಾಡಿಕೊಂಡಿದ್ದರು. ಅಷ್ಟು ಸ್ವಾರ್ಥದ ಫ್ರೆಂಡ್ಶಿಪ್ ಅದು.

ನಮ್ರತಾ ಹೆಸರು ಆಯ್ಕೆ ಮಾಡಿಕೊಂಡ ಕಾರ್ತಿಕ್

ನಮ್ರತಾ ಬೆಸ್ಟ್ ಎನಿಸಿದ್ಯಾಕೆ ಕಾರ್ತಿಕ್‌ಗೆ..?

ಮನೆಯಲ್ಲಿ ಮತ್ತೆ ಕ್ಯಾಪ್ಟನ್ಸಿ ಟಾಸ್ಕ್ ಬಂದಿದೆ. ರಕ್ಷಕ್‌ನ ಕ್ಯಾಪ್ಟನ್ಸಿ ಟಾಸ್ಕ್ ಮುಗಿಯುತ್ತೆ. ಮನೆಯವರೆಲ್ಲಾ ಸೇರಿ ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ನಮ್ರತಾ ಮೊದಲ ಬಾರಿಗೇನೆ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಭಾಗವಹಿಸಿ, ಕೊನೆಯ ಮೂಮೆಂಟ್‌ನಲ್ಲಿ ಸೋತಿದ್ದರು. ಎರಡನೇ ಬಾರಿ ಕಷ್ಟವಿರಬಹುದೇನೋ ಅಂತ ಸುಮ್ಮನೆ ಆಗಿಬಿಟ್ಟಿದ್ದರು. ಆದರೆ ಅದು ಸುಲಭವಾಗಿತ್ತು. ಈ ಬಾರಿ ಸಂಗೀತಾ ಕೂಡ ಮತ್ತೆ ರೇಸ್ ನಲ್ಲಿದ್ದಾರೆ. ಆದರೆ ಕಾರ್ತಿಕ್ ಆಯ್ಕೆ ನಮ್ರತಾ ಆಗಿತ್ತು.

Colors kannada Bigg boss Written Update on new Bigg boss season 10 October 25th show

ಕಾರ್ತಿಕ್ ಜೊತೆ ಜಗಳಕ್ಕೆ ನಿಂತ ಸಂಗೀತಾ..?

ಈ ಬಾರಿ ಫ್ರೆಂಡ್ಶಿಪ್ ಉಳಿಯುವುದು ಕಷ್ಟನಾ..?

ಕಾರ್ತಿಕ್ ವಿಚಾರದಲ್ಲಿ ಸಂಗೀತಾ ಜಲಸ್ ಫೀಲ್ ಮಾಡುತ್ತಾರೆ. ತನ್ನ ಪರವಾಗಿಯೇ ಇರಬೇಕು ಎಂದು ಬಯಸುತ್ತಾರೆ. ಅಷ್ಟೇ ಅಲ್ಲ ಮನೆಯವರು ಕೂಡ ಯಾರು ತನ್ನ ವಿರುದ್ಧವಾಗಿ ವೋಟ್ ಮಾಡಬಾರದು ಅಂತ ಕೂಡ ಬಯಸುತ್ತಾರೆ. ಅದರಲ್ಲೂ ತಾನೂ ರೇಸ್‌ನಲ್ಲಿದ್ದರೂ ಕಾರ್ತಿಕ್, ನಮ್ರತಾಗೆ ವೋಟ್ ಹಾಕಿದರೆ ಸುಮ್ಮನೆ ಬಿಡುತ್ತಾರಾ..? ನೋವೇ.. ಕಾರ್ತಿಕ್ ತಲೆ ಕೆಡಿಸಿಕೊಳ್ಳಬೇಕು ಅಷ್ಟು ಬೇಸರದಲ್ಲಿ ಮಾತು ಶುರು ಮಾಡಿದ್ದಾರೆ ಸಂಗೀತಾ. ನಮ್ಮವರೇ ನಮಗೆ ದ್ರೋಹ ಮಾಡುತ್ತಾರಲ್ಲ ಅಂತ ಚುಚ್ಚಿ ಮಾತನಾಡುತ್ತಿದ್ದಾರೆ.

More from Filmibeat

English summary
Bigg boss season 10 Written Update on October 25th show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X