BBK 10: ತಾರಾ ಎಂಟ್ರಿ : ಅಡಗಿದ್ದ ಲವ್ ಸ್ಟೋರಿ ಓಪನ್.. ದೂರವಾಗಿದ್ದ ಫ್ರೆಂಡ್ಶಿಪ್ ಮತ್ತೆ ಕನೆಕ್ಟ್!

By ಎಸ್ ಸುಮಂತ್

ನಾಡಿನಾದ್ಯಂತ ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ‌ ಮಾಡಲಾಗಿದೆ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಆಚರಣೆ ಇಲ್ಲದೆ ಹೋದರೆ ಹೇಗೆ. ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಗೆ ಇರಬಹುದು. ಆದರೆ ಹಬ್ಬಹರಿದಿನಗಳಿಂದ ಅಲ್ಲ. ಬಿಗ್ ಬಾಸ್ ಕೂಡ ಎಲ್ಲಾ ಸಂತೋಷಗಳನ್ನು ನೀಡುತ್ತಲೇ ಇರುತ್ತದೆ.

ಇವತ್ತು ಬಿಗ್ ಬಾಸ್ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಸದಸ್ಯರ ಸಂತಸವನ್ನು ದುಪ್ಪಟ್ಟು ಮಾಡಲು ಬಂದಿದ್ದು, ತಾರಾ ಅನುರಾಧ. ಮನೆಯ ಕಳೆ ಮತ್ತಷ್ಟು ಹೆಚ್ಚಾಗಿತ್ತು. ತಾರಾ ಮನೆಗೆ ಬಂದೊಡನೆ ಮನೆ ಮಂದಿಯೆಲ್ಲಾ ಫುಲ್ ಖುಷಿಯಾಗಿದ್ದಾರೆ.

Colors kannada bigg boss Written Update on new Biggboss season 10 October 24th show.

ತಾರಾ ಕೇಳಿದ ಕೂಡಲೇ ತರಕಾರಿಯೂ ಬಂತು

ಹಬ್ಬದ ವಿಶೇಷತೆಗಾಗಿ ತಾರಾ ಮನೆಯೊಳಗೆ ಬಂದಿದ್ದರು.‌ ಮನೆಗೆ ಬಂದ ಅತಿಥಿಯನ್ನು ಎಲ್ಲರು ಖುಷಿಯಿಂದಾನೇ ಸ್ವಾಗತ ಮಾಡಿದರು. ಬಳಿಕ ಮನೆ ಮಂದಿಯ ಸಮಸ್ಯೆ ನೋಡಿ ತಾರಾ ಅವರೇ ಬಿಗ್ ಬಾಸ್ ಬಳಿ ತರಕಾರಿ, ಉಪ್ಪು, ಕಾಫಿ ಪುಡಿ ಕೇಳಿದರು. ಆದರೆ ಕಾಫಿ ಪುಡಿ ಕಾಸ್ಟ್ಲಿ ಆಗಿದ್ದರಿಂದ ತರಕಾರಿ, ಉಪ್ಪನ್ನ ಕೊಟ್ಟರು. ಅದಷ್ಟೇ ಅಲ್ಲ ಬಿಗ್ ಬಾಸ್ ಅತಿಥಿಗೆ ಸೇರಿ ಮನೆ ಮಂದಿಗೆ ಹಬ್ಬದ ಊಟ ಕಳುಹಿಸಿದ್ದಾರೆ.

ಪ್ರತಾಪ್ ತಂದೆ ತಾಯಿಗೂ ಕಿವಿ ಮಾತು

ಮನೆಯಲ್ಲಿ ಯಾರಿಗೆ ಏನೆಲ್ಲಾ ಸಮಸ್ಯೆ ಇದೆ ಅನ್ನುವುದು ತಾರಾ ಅವರ ಗಮನಕ್ಕೂ ಇತ್ತು. ಹೀಗಾಗಿ ಪ್ರತಾಪ್‌ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಏನಾಗುತ್ತಿದೆ ಎಂದು ಕೇಳಿದರು. ನೀನು ಮೊದಲು ಮಾತನಾಡು ಎಂದರು. ಮನೆಯವರಿಂದ ಆದ ನೋವಿಗೆ ಪ್ರತಾಪ್ ಅದಾಗಲೇ ನೊಂದಿದ್ದ ಕಾರಣ ಕಣ್ಣೀರು ತಾನಾಗಿಯೇ ಬಂತು. ಅಪ್ಪ, ಅಮ್ಮ, ತಂಗಿಯನ್ನು ನೆನದು ಕಣ್ಣೀರು ಹಾಕಿದ. ನಾನು ನಿನ್ನ ತಾಯಿ ಇದ್ದಂತೆ ಸಮಾಧಾನ ಮಾಡಿಕೊಳ್ಳಪ್ಪ ಎಂದು ತಾರಾ ಅವರು ಸಮಾಧಾನ ಮಾಡಿದ್ದಾರೆ.

ಸ್ನೇಹಿತ್ ಮನದ ಮಾತು ಬಂತು ಹೊರಗೆ

ಇನ್ನು ಮನೆಗೆ ಬಂದ ಅತಿಥಿಗೆ ಮನರಂಜನೆ ಬೇಕೆ ಬೇಕು ಅಲ್ವಾ. ಹೀಗಾಗಿ ಮನೆಯವರೆಲ್ಲಾ ಬಿಗ್ ಬಾಸ್ ಹಾಕಿದ ಹಾಡಿಗೆ ಡ್ಯಾನ್ಸ್ ಮಾಡಿದರು. ಅದರಲ್ಲಿ ಪೋಲಿ ಇವನು ಹಾಡಿಗೆ ನಮ್ರತಾ ಡ್ಯಾನ್ಸ್ ಮಾಡಿದರು. ಆ ಪೋಲಿ ಸ್ನೇಹಿತ್ ಎಂದು ಹೇಳಿದರು. ಬಳಿಕ ಸ್ನೇಹಿತ್ ಸರದಿ ಬಂದಾಗ ಅವರು ನಮ್ರತಾ ಅವರೇ ಎಂದಾಗ ಎಲ್ಲರೂ ನಕ್ಕು ಬಿಟ್ಟರು. ತಾರಾ ಅವರು ಗೊತ್ತಾಯ್ತಲ್ಲ ಯಾರು ಯಾರಿಗೆ ಕಾಳು ಹಾಕುತ್ತಿದ್ದಾರೆ ಎಂಬುದು ಗೊತ್ತಾಗ್ತಾ ಇದೆ ಎಂದಿದ್ದಾರೆ.

Colors kannada bigg boss Written Update on new Biggboss season 10 October 24th show.

ಹಾಡಿನಿಂದ ಒಂದಾದ್ರೂ ವಿನಯ್ ಕಾರ್ತಿಕ್

ಈಗಾಗಲೇ ಯಾವುದೋ ಒಂದು ವಿಚಾರಕ್ಕೆ ಕಾರ್ತಿಕ್ ಹಾಗೂ ವಿನಯ್ ನಡುವೆ ಮಾತುಕತೆ ಮುರಿದು ಬಿದ್ದಿದೆ. ಆದರೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ಹಾಕಿದ ಫ್ರೆಂಡ್ಶಿಪ್ ಹಾಡಿನಿಂದ ಇಬ್ಬರು ಕುಣಿದಿದ್ದಾರೆ. ಬಳಿಕ ವಿನಯ್, ಕಾರ್ತಿಕ್ ಬಗ್ಗೆ ಹೇಳಿದ್ದಾರೆ. ಸಾಕಷ್ಟು ಒಳ್ಳೊಳ್ಳೆ ಕೆಲಸ ಜೊತೆಗೆ ಮಾಡಿದ್ದೀವಿ. ಕಾಂಪಿಟೇಷನ್ ಕಾಂಪಿಟೇಷನ್ ಥರನೇ ಮಾಡ್ತೀವಿ ಅಂತ ಮತ್ತೆ ಒಂದಾಗಿದ್ದಾರೆ. ಆದರೆ ಇದೇ ಸಮಯದಲ್ಲಿ ಡ್ರೋನ್ ಪ್ರತಾಪ್ ಗೆ ಹಾಕಿದ ಹಾಡು ಮನೆ ಮಂದಿಗೆ ಶಾಕ್ ಎನಿಸಿದೆ. ಡ್ರೋನ್ ಸುಳ್ಳುಗಾರ ಅಂತಾನೇ ಫೇಮಸ್ ಆಗಿದ್ದಾರೆ. ಅದಕ್ಕೆ ತಕ್ಕಂತೆ ಹಾಡನ್ನು ಹಾಕಿದ್ದು ಎಲ್ಲರಿಗೂ ನಗು ತರಿಸಿದೆ.

ಮಹಿಳಾ ಮಣಿಯರದ್ದೇ ಅಬ್ಬರ

ಇನ್ನು ಇದು ದಸರಾ ಹಬ್ಬ ಆಗಿರುವ ಕಾರಣ ಮಹಿಳೆಯರಿಗೆ ಪ್ರಾಶಸ್ತ್ಯ ಜಾಸ್ತಿಯಾಗಿದೆ. ಅಡುಗೆ ಮಾಡುವ ವಿಚಾರದಲ್ಲೂ ಅಷ್ಟೇ ಹಬ್ಬಕ್ಕಾಗಿ ಗಂಡು ಮಕ್ಕಳೇ ಅಡುಗೆ ಮಾಡಲಿ ಎಂದು ತಾರಾ ಅವರು ತಿಳಿಸಿದ್ದಾರೆ. ಇನ್ನು ಕೊನೆಯಲ್ಲಿ ತಾರಾ ಅವರ ಜೊತೆಗೆ ಮಹಿಳಾ ಮಣಿಗಳು ಕುಣಿದು ಕುಪ್ಪಳಿಸಿದ್ದಾರೆ.

More from Filmibeat

English summary
Colors kannada Bigg boss season 10 Written Update on October 24th show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X