Bigg boss: ಇದಕ್ಕಿದ್ದಂತೆ ರೆಬಲ್ ಆದ ಸ್ನೇಹಿತ್ ಗೌಡ: ನೀವೇನು ಕ್ಲಾಸ್ ಲೀಡರ್ ಅಲ್ಲ ಎಂದು ತನಿಷಾಗೆ ತರಾಟೆ..!

By Shruthi Harish Gowda

ಬಿಗ್ ಬಾಸ್ ಮನೆಯಲ್ಲಿ ಯಾರು ಯಾವಾಗ ಶತ್ರುಗಳಾಗ್ತಾರೆ, ಮಿತ್ರರಾಗ್ತಾರೆ ಎಂಬುವುದು ತಿಳಿಯೋದೇ ಇಲ್ಲ. ಅದಲ್ಲದೆ ಯಾರು ಯಾವಾಗ ಯಾರ ಜೊತೆಗೆ ಜಗಳ ಮಾಡಿಕೊಳ್ಳುತ್ತಾರೆ, ಗುಂಪುಗಾರಿಕೆ ಶುರು ಮಾಡುತ್ತಾರೆ ಅದನ್ನು ಹೇಳೋಕೆ ಆಗಲ್ಲ ಇಷ್ಟು ದಿನ ಸ್ನೇಹಿತರಂತೆ ಇದ್ದಂತಹ ಸ್ನೇಹಿತ್ ಹಾಗೂ ತನಿಷಾ ಇಂದು ಸಣ್ಣದೊಂದು ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್ ಪಂಚಾಯಿತಿ ಮಾಡಿ ಹೋದಮೇಲೆ ಎಲ್ಲರೂ ಶಾಂತರಾಗಿ ಇದ್ದರು. ಆದರೆ ಸ್ನೇಹಿತ್ ಮಾತ್ರ ಇದ್ದಕ್ಕಿದ್ದಂತೆ ಇಂದು ರೆಬಲ್‌ ಆಗಿ ಹೋಗಿದ್ದಾರೆ. ಸ್ನೇಹಿತ್ ಹಾಗೂ ತನಿಷಾ ಇಬ್ಬರು ಸಣ್ಣದೊಂದು ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ. ಸಂಗೀತಾ ಸಹ ತನಿಷಾ ಜೊತೆಗೆ ಇದ್ದು ಅದನ್ನು ವಿರೋಧ ಮಾಡಿದ್ದಾರೆ.

ತನಿಷಾ ಹಾಗೂ ಸ್ನೇಹಿತ್ ಇಬ್ಬರು ಯಾವುದೇ ಕಾರಣಕ್ಕೂ ಯಾವಾಗಲೂ ಜಗಳ ಮಾಡಿಕೊಂಡಿರಲಿಲ್ಲ. ಈಗ ಮಲಗುವ ಟೈಮ್ ವಿಚಾರಕ್ಕೆ ತನಿಷಾ ಹಾಗೂ ಸ್ನೇಹಿತ ನಡುವೆ ಮನಸ್ತಾಪ ಮೂಡಿದ್ದು ಅದು ಜಗಳಕ್ಕೆ ಕಾರಣವಾಗಿದೆ. ಯಾರು ಸಹ ಇವರಿಬ್ಬರ ಮಾತಿನ ನಡುವೆ ಹೋಗದಿರುವುದೇ ಆಶ್ಚರ್ಯವಾಗಿದೆ. ಇಷ್ಟು ದಿನ ಯಾರಾದರೂ ಜಗಳಕ್ಕೆ ಬಂದರೆ ಸಾಕು ಅವರವರ ಗುಂಪಿನಲ್ಲಿರುವವರು ಸಪೋರ್ಟ್ ಮಾಡಿಕೊಂಡು ಬಂದು ಬಿಡುತ್ತಿದ್ದರು. ಈಗ ಸ್ನೇಹಿತ್ ಮಾತನಾಡುತ್ತಿದ್ದರೂ, ಸಹ ಅವರ ಬೆಂಬಲಕ್ಕೆ ಅವರ ಗುಂಪಿನ ತುಕಾಲಿ ಸಂತೋಷ್ ಆಗಲಿ ನಮ್ರತಾ ಆಗಲಿ ಬರಲಿಲ್ಲ. ಅಷ್ಟರಮಟ್ಟಿಗೆ ಕಿಚ್ಚನ ಪಂಚಾಯಿತಿ ಅವರೆಲ್ಲರಿಗೂ ಪಾಠವನ್ನು ಕಲಿಸಿದೆ.

Colors kannada Bigg boss Written Update on Snehith Gowda and Tanisha kuppanda fight

ಬಿಗ್ ಬಾಸ್ ಮನೆಯಲ್ಲಿ ಮಲಗಲು ಹೇಳಿದಾಗ ಎಲ್ಲರೂ ಸಹ ಮಲಗಿಕೊಳ್ಳುತ್ತಾರೆ. ಇದೇ ವೇಳೆ ಸ್ವಲ್ಪ ಸ್ಪರ್ಧಿಗಳು ಪಿಸಿಪಿಸಿ ಎಂದು ಮಾತನಾಡಿಕೊಳ್ಳುತ್ತಾರೆ. ಇನ್ನು ತನಿಷಾ ಇದೇ ವಿಚಾರವನ್ನು ತೆಗೆದಿದ್ದಾರೆ ಅಷ್ಟು ಹೊತ್ತಿಗೆ ಮಲಗಬೇಕು ಬಾಗಿಲು ಹಾಕಿಕೊಳ್ಳಬೇಕು ಎಂದು ಹೇಳಿದ ವಿಚಾರ ಸ್ನೇಹಿತ್‌ಗೆ ಇಷ್ಟವಾಗಲಿಲ್ಲ. ಇದನ್ನೇ ತನಿಷಾ ಬಳಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ನೀವೇನು ಲೀಡರ್ ಆಗಿದ್ದೀರಾ ಎಂದ ಸ್ನೇಹಿತ್

ಅದರಲ್ಲಿ ತಪ್ಪೇನಿದೆ ಎಂದ ತನಿಷಾ..?

ಅಷ್ಟು ಹೊತ್ತಿಗೆ ಮಲಗಬೇಕು, ಇಷ್ಟು ಹೊತ್ತಿಗೆ ಮಲಗಬೇಕು, ಬಾಗಿಲನ್ನು ಹಾಕಿಕೊಂಡು ಮಲಗಬೇಕು ಎಂದು ಹೇಳಲು ನೀವೇನು ಕ್ಲಾಸ್ ಲೀಡರ್ ಅಲ್ಲ ಎಂದು ಸ್ನೇಹಿತ್ ತನಿಷಾಗೆ ಹೇಳಿದ್ದಾರೆ. ಇದೇ ವೇಳೆ ತನಿಷಾ ನಾನು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ವಾಪಸ್ ಸ್ನೇಹಿತ್‌ಗೆ ಪ್ರಶ್ನೆ ಕೇಳಿದ್ದಾರೆ. ಮಾತಿಗೆ ಮಾತು ಬೆಳೆದಾಗ ಮಾತುಗಳು ನೀವೇನು ಬಿಗ್ ಬಾಸ್ ಅಲ್ಲ ರೂಲ್ಸ್ ಮಾಡೋದಕ್ಕೆ ಎಂದು ಸ್ನೇಹಿತ್ ಹೇಳಿದ್ದಾರೆ.

ಕ್ಲಾಸ್ ಲೀಡರ್ ತರ ನಿರ್ಧಾರ ತೆಗೆದುಕೊಳ್ಳುತ್ತಾ ಇದ್ದೀರಾ ನಾವು ಸಹ ಕಂಟೆಸ್ಟೆಂಟ್ ಎಂದು ಕೊಂಡೆ ಬಿಗ್ ಬಾಸ್ ನಮ್ಮನ್ನ ಇಲ್ಲಿಗೆ ಕಳುಹಿಸಿದ್ದಾರೆ ಎಂದು ಸ್ನೇಹಿತ ಹೇಳಿದ್ದಾರೆ. ನೀವು ಬಿಗ್ ಬಾಸ್ ನಂತೆ ವರ್ತಿಸಬೇಡಿ ಎಂದು ಸ್ನೇಹಿತ್ ತನಿಷಾಗೆ ಹೇಳಿದ್ದಾರೆ. ನಾನು ಯಾವತ್ತೂ ಬಿಗ್ ಬಾಸ್ ನಂತೆ ವರ್ತಿಸಿಲ್ಲ ನಾನು ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ತನುಷ ತಮ್ಮ ವಾದವನ್ನು ಮಾಡಿದ್ದಾರೆ ಇವರಿಬ್ಬರ ಜಗಳವನ್ನ ನಿಂತುಕೊಂಡು ಮನೆಯವರು ನೋಡುತ್ತಾ ಇದ್ದಾರೆ.

Colors kannada Bigg boss Written Update on Snehith Gowda and Tanisha kuppanda fight

ಸ್ನೇಹಿತ್ ಮಾತಿಗೆ ಚಪ್ಪಾಳೆ ತಟ್ಟಿದ ಸಂಗೀತಾ... ತನಿಷಾ..

ಮಧ್ಯದಲ್ಲಿ ಬಾಯಿ ಹಾಕದೆ ನಿಂತುಕೊಂಡ ವಿನಯ್!

ನಾನೇನು ಬಿಗ್ ಬಾಸ್ ನಂತೆ ವರ್ತಿಸುತ್ತಿಲ್ಲ. ನೀವು ಯಾಕೆ ಬೀಲೋ ಲೆವೆಲ್ ಸ್ಟೂಡೆಂಟ್ ತರ ಮಾತನಾಡುತ್ತಿದ್ದೀರಾ ಎಂದು ತನಿಷಾ ಸ್ನೇಹಿತ್‌ಗೆ ಹೇಳಿದ್ದಾರೆ . ಆದರೆ ಸ್ನೇಹಿತ್ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿ ಯಾವುದೇ ಬಿಸಿನೆಸ್ ಓಪನ್ ಮಾಡ್ತಾ ಇಲ್ಲ ನೀವು ಎಂಪ್ಲಾಯಿಸ್ ಅಲ್ಲ ಎಂದಿದ್ದಾರೆ. ಸ್ನೇಹಿತ್ ಆ ರೀತಿ ಹೇಳಿದ್ದಕ್ಕೆ ಸಂಗೀತಾಗೆ ಕೋಪ ಬಂದಿದೆ. ಇದಕ್ಕೆ ಸಂಗೀತಾ ಸಹ ದನಿಗೂಡಿಸಿದ್ದು ನಾವು ಯಾವತ್ತೂ ಆ ರೀತಿ ಹೇಳಿಲ್ಲ ಥ್ಯಾಂಕ್ಯು ಸ್ನೇಹಿತ್ ಎಂದು ಚಪ್ಪಾಳೆಯನ್ನ ತಟ್ಟುವ ಮೂಲಕ ಅಲ್ಲಿಂದ ತೆರಳಿದ್ದಾರೆ.

ಎಲ್ಲಾ ವಿಚಾರಕ್ಕೂ ಮೂಗು ತೂರಿಸುತ್ತಿದ್ದ ವಿನಯ್ ಮಾತ್ರ ಸೈಲೆಂಟಾಗಿ ಜಗಳ ಹಾಗೂ ಮಾತುಕತೆಯನ್ನು ಕೇಳುತ್ತಾ ನಿಂತುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಸಹ ಅಲ್ಲಿ ಬಾಯಿ ಹಾಕಿಲ್ಲ. ಕಿಚ್ಚ ಮಾಡಿರುವ ಪಂಚಾಯಿತಿಯಿಂದ ವಿನಯ್ ಬುದ್ದಿ ಕಲಿತಿದ್ದಾರೆಂದು ಅನಿಸುತ್ತಿದೆ.

More from Filmibeat

English summary
Bigg boss season 10: Snehith Gowda and Tanisha kuppanda fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X