Drishtibottu; ಪ್ರೋಮೋ ಮೂಲಕ ವೀಕ್ಷಕರ ಮನಗೆದ್ದ ಹೊಸ ಧಾರಾವಾಹಿ..!

By ಪ್ರಿಯಾ ದೊರೆ

ಈಗಾಗಲೇ 20 ದಿನಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯ ಪ್ರೊಮೋ ಒಂದು ರಿಲೀಸ್ ಆಗಿದೆ. ವಿನೂತನ ಹೆಸರಿನಿಂದ ಫೇಮಸ್ ಆಗಿದೆ. ದೃಷ್ಟಿಬೊಟ್ಟು ಎಂದು ಈ ಹೊಸ ಧಾರಾವಾಹಿಗೆ ಹೆಸರಿಡಲಾಗಿದೆ. ಪ್ರೋಮೋ ಅಂತೂ ಸಿನಿಮಾ ರೇಂಜ್ ನಲ್ಲಿ ಶೂಟ್ ಮಾಡಿದ್ದು, ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ದೃಷ್ಟಿ ಬೊಟ್ಟು ಧಾರಾವಾಹಿಯನ್ನು ಮಿಸ್ ಮಾಡದೇ ನೋಡಬೇಕು ಎಂದು ಎಲ್ಲರೂ ಕಾತುರಗೊಂಡಿದ್ದಾರೆ. ಆದರೆ, ದೃಷ್ಟಿ ಬೊಟ್ಟು ಧಾರಾವಾಹಿ ಪ್ರಸಾರದ ಸಮಯ ಇನ್ನು ಯಾವಾಗ ಎಂಬುದು ಕಾದು ನೋಡಬೇಕಿದೆ.

ವೀಕ್ಷಕರ ಮನ ಗೆದ್ದ ಹೊಸ ಪ್ರೋಮೋ

ದೃಷ್ಟಿ ಬೊಟ್ಟು ಧಾರಾವಾಹಿಯ ಪ್ರೋಮೋದಲ್ಲಿ ನಟಿ ದೀಪಶ್ರೀ ಹರೀಶ್ ಅವರು ಕಾಣಿಸಿಕೊಂಡಿದ್ದಾರೆ. ನಾಯಕಿಯ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನೀನು ಬಹಳ ಸುಂದರವಾಗಿದ್ದೀಯಾ, ಜಗತ್ತಿನ ಕಣ್ಣಿಗೆ ನಿನ್ನ ಅಂದ ಕಾಣಬಾರದು ಎಂದು ಹೇಳುತ್ತಾಳೆ. ಹೆಣ್ಣು ಮಗುವನ್ನು ಕೆಟ್ಟ ಪ್ರಪಂಚದಿಂದ ಕಾಪಾಡಲು ಒದ್ದಾಡುತ್ತಿರುವಂತಿದೆ. ಇನ್ನು ನಟಿ ದೀಪಶ್ರೀ ಜೊತೆಗೆ ನಟ ಹರೀಶ್ ಪ್ರಭಾತ್ ಕಾಣಿಸಿಕೊಂಡಿದ್ದಾರೆ. ಇನ್ನು ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವುದು ನಟ ಕಮ್ ನಿರ್ಮಾಪಕ ರಕ್ಷ್ ಅವರು.

colors kannada channels Drishtibottu serial promo


ಹೀರೋಗಾಗಿ ಕಾಯುತ್ತಿರುವ ವೀಕ್ಷಕರು

ಈ ಹಿಂದೆ ರಕ್ಷ್ ಅವರು ನಿರ್ಮಾಣ ಮಾಡಿದ್ದ ಗಟ್ಟಿಮೇಳ ಧಾರಾವಾಹಿ ಜೀ ಕನ್ನಡವಾಹಿನಿಯಲ್ಲಿ ನಂಬರ್ ಒನ್ ಧಾರಾವಾಹಿ ಆಗಿತ್ತು. ಗಟ್ಟಿಮೇಳ ಧಾರಾವಾಹಿ ಶುರುವಿನಿಂದ,ಮುಗಿಯುವವರೆಗೂ ಟಾಪ್ ಸ್ಥಾನವನ್ನು ಬೇರೆ ಸೀರಿಯಲ್ ಗಳಿಗೆ ಬಿಟ್ಟು ಕೊಟ್ಟಿರಲಿಲ್ಲ. ರಕ್ಷ್ ಅವರ ಸೀರಿಯಲ್ ಎಂದರೆ ಅದರಲ್ಲಿ ರಿಚ್ ನೆಸ್ ಗೇನು ಕಡಿಮೆ ಇಲ್ಲ. ಈಗ ದೃಷ್ಟಿ ಬೊಟ್ಟು ಧಾರಾವಾಹಿಯ ಪ್ರೋಮೋ ಕೂಡ ಬಹಳ ರಿಚ್ ಆಗಿ ಮೂಡಿ ಬಂದಿದ್ದು, ಪ್ರೋಮೋ ಮೂಲಕವೇ ಜನರನ್ನು ಸೆಳೆದಿದೆ. ಇನ್ನು ಈ ಧಾರಾವಾಹಿಯು ಲಾಗಿ ತುಜ್ಸೆ ಲಗಾನ್ ಎಂಬ ಹಿಂದಿ ಧಾರಾವಿಯ ರಿಮೇಕ್ ಎನ್ನಲಾಗ್ತಿದೆ. ಆದರೆ, ಹಿಂದಿಯ ಈ ಧಾರಾವಾಹಿಯಲ್ಲಿ ಇಬ್ಬರು ಹೀರೋ ಕಾಣಿಸಿಕೊಂಡಿದ್ದು, ಸದ್ಯ ಕನ್ನಡದಲ್ಲಿ ನಟ ವಿಜಯ್ ಸೂರ್ಯ ಹೀರೋ ಆಗಿರಲಿ ಎಂದು ವೀಕ್ಷಕರು ಬಯಸಿದ್ದಾರೆ.

ವೇದಾಂತ್-ಅಮೂಲ್ಯ ಜೋಡಿ

ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ಹಾಗೂ ಅಮೂಲ್ಯ ಜೋಡಿಯನ್ನು ತೆರೆ ಮೇಲೆ ಒಟ್ಟಿಗೆ ನೋಡಲು ಪ್ರೇಕ್ಷಕರು ಈಗಲೂ ಬಯಸುತ್ತಾರೆ. ಇನ್ನು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟರ ಪೈಕಿ ಮುಂಚೂಣಿಯಲ್ಲಿ ನಿಲ್ಲುವುದು ನಟ ರಕ್ಷ್. ರಕ್ಷ್ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸ್ಟಾರ್. ಹಲವಾರು ವರ್ಷಗಳಿಂದ ಸ್ಮಾಲ್ ಸ್ಕ್ರೀನ್ ಮೂಲಕ ಕಲಾದೇವಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಟ ರಕ್ಷ್ 'ಗಟ್ಟಿಮೇಳ' ಸೀರಿಯಲ್ ನಲ್ಲಿ ನಟಿಸುವುದಕ್ಕೂ ಮುನ್ನ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿದ್ದರು.

colors-kannada-channels-drishtibottu-serial-promo

ಕನಸು ನನಸು ಮಾಡಿಕೊಂಡ ಹುಡುಗ

ಪುಟ್ಟ ಗೌರಿ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ನನಗೂ ನಿನಗೂ, ರೆಡ್, ನರಗುಂದ ಬಂಡಾಯ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಸಬೇಕು, ಸ್ಟಾರ್ ಆಗಬೇಕು ಎಂದು ಕನಸು ಕಂಡ ರಕ್ಷ್, ಮೊದ ಮೊದಲು ಬಹಳ ಕಷ್ಟ ಪಟ್ಟರಂತೆ. ಒಂದು ಚಾನ್ಸ್ ಪಡೆಯುವುದಕ್ಕಾಗಿ ಸಾಕಷ್ಟು ಅಲೆದಾಡಬೇಕಾಯ್ತಂತೆ. ಆದರೆ, ಈಗ ರಕ್ಷ್ ಅಭಿಮಾನಿಗಳ ಸ್ಟಾರ್ ಆಗಿದ್ದು, ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಬಿಎ ಎಲ್ ಎಲ್ ಬಿ ಓದಿರುವ ರಕ್ಷ್ ಅವರು ಬಹಕಾಲದ ಗೆಳತಿ ಅನ್ನು ವಿವಾಹವಾಗಿದ್ದಾರೆ. ಒಟ್ಟಿಗೆ ಓದಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾದ ಈ ಜೋಡಿ, ಎಂದಿಗೂ ಲವ್, ಪ್ರೀತಿ ಎಂದು ಸುತ್ತಾಡಿದವರಲ್ಲವಂತೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X