For Quick Alerts
  ALLOW NOTIFICATIONS  
  For Daily Alerts

  ಕಲರ್ಸ್ ಕನ್ನಡ, ಸೂಪರ್ ನಂತರ ಈಗ 'ಸಿನಿಮಾ ಚಾನಲ್' ಬರ್ತಿದೆ

  |

  ಟಿವಿ ಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ. ಸದ್ಯ ಸಿನಿಮಾಗಳಾಗಿಗಾಗಿಯೇ ಕನ್ನಡದಲ್ಲಿ ಹಲವು ವಾಹಿನಿಗಳಿವೆ. ಈಗ ಇನ್ನೊಂದು ಹೊಸ ಚಾನಲ್ ಆರಂಭವಾಗುತ್ತಿದೆ.

  ಈಗಾಗಲೇ ಸಿನಿಮಾಗೋಸ್ಕರ ಉದಯ ಮೂವೀಸ್, ಪಬ್ಲಿಕ್ ಮೂವೀಸ್, ಸ್ಟಾರ್ ಸುವರ್ಣ ಪ್ಲಸ್ ವಾಹಿನಿಗಳು ಕನ್ನಡದಲ್ಲಿವೆ. ಈಗ ಕಲರ್ಸ್ ಕುಟುಂಬದಿಂದ ಹೊಸ ವಾಹಿನಿ ಬರ್ತಿದೆ. ಅದರ ಹೆಸರು ಕಲರ್ಸ್ ಕನ್ನಡ ಸಿನಿಮಾ.

  ಕಲರ್ಸ್ ಕನ್ನಡ ಸಿನಿಮಾದ ಡೆಮೋ ಪ್ರಸಾರವಾಗ್ತಿದೆ. ಸೆಪ್ಟೆಂಬರ್ 24 ರಿಂದ ಅಧಿಕೃತವಾಗಿ ಎಲ್ಲಾ ಕಡೆಯೂ ಪ್ರಸಾರವಾಗಲಿದೆ. ದಿನದ 24 ಗಂಟೆಯೂ ಸಿನಿಮಾ ಪ್ರದರ್ಶನ ಮಾಡುವ ಉದ್ದೇಶವನ್ನ ಈ ವಾಹಿನಿ ಹೊಂದಿದೆ.

  ಸೆಪ್ಟೆಂಬರ್ 24 ರಿಂದ ಪ್ರತಿ ದಿನ ಸಂಜೆ 7 ಗಂಟೆಗೆ ಹೊಸದಾಗಿ ಬಿಡುಗಡೆಯಾಗಿದ್ದ ಚಿತ್ರಗಳು ಪ್ರದರ್ಶನವಾಗಲಿದೆ. ಸೋಮವಾರ ಸಂಜೆ 7ಕ್ಕೆ 'ವಾಸು ನಾನ್ ಪಕ್ಕಾ ಕಮರ್ಷಿಯಲ್', ಮಂಗಳವಾರ 'ಕಿಚ್ಚು', ಬುಧವಾರ 'ಮಾರ್ಚ 22', ಗುರುವಾರ 'ಹುಚ್ಚ 2', ಶುಕ್ರವಾರ 'ಗುಳ್ಟು' ಸಿನಿಮಾ ಮೂಡಿಬರಲಿದೆ.

  English summary
  Launching on September 24, the channel is Viacom18’s second regional launch in 2018 after Colors Tamil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X