Drustibottu: ದತ್ತನನ್ನು ಮನಸ್ಸಲ್ಲೆ ಲವ್ ಮಾಡ್ತೀರೋ 'ಕಪ್ಪು ಸುಂದರಿ' ಇವರೇನಾ?
ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಶುರುವಾದ ಧಾರವಾಹಿಗಳು ಎಲ್ಲರನ್ನು ಹಿಡಿದಿಟ್ಟಿವೆ. ಅದರಲ್ಲೂ ಕಮ್ ಬ್ಯಾಕ್ ಮಾಡಿದ ವಿಜಯ್ ಸೂರ್ಯ ಕೆರಿಯರ್‌ಗೆ 'ದೃಷ್ಟಿ ಬೊಟ್ಟು' ಧಾರಾವಾಹಿ ಒಳ್ಳೆಯ ಗ್ರೋಥ್ ಕೊಡುತ್ತಿರುವ ಧಾರಾವಾಹಿಯಾಗಿದೆ. ಆರಂಭದಿಂದಾನೂ 'ದೃಷ್ಟಿ ಬೊಟ್ಟು' ಕಥೆಯಲ್ಲಿ ಇಂಟ್ರೆಸ್ಟಿಂಗ್ ಪಾತ್ರಗಳನ್ನೇ ಪರಿಚಯ ಮಾಡಿಕೊಡುತ್ತಿದೆ. ಪ್ರೀತಿಯ ಗುಟ್ಟು 'ದೃಷ್ಟಿಬೊಟ್ಟು' ಎಂಬ ಟ್ಯಾಗ್ ಲೈನ್‌ನಂತೆಯೇ ಒಳಗೊಂದು ಪ್ರೀತಿ ಶುರುವಾಗಿದೆ.
ಈಗಾಗಲೇ ಜೀ ಕನ್ನಡದಲ್ಲಿ 'ಗಟ್ಟಿಮೇಳ' ಎಂಬ ಕೌಟುಂಬಿಕ ಧಾರಾವಾಹಿಯನ್ನು ವರ್ಷಾನುಗಟ್ಟಲೇ ಯಶಸ್ವಿಯಾಗಿ ನಡೆಸಿದ ಮಾಡಿದ ಖ್ಯಾತಿ ರಕ್ಷ್ ಅವರದ್ದು. ಈಗ ಅನುಷಾ ಅವರ ಸಾರಥ್ಯದಲ್ಲಿ 'ದೃಷ್ಟಿಬೊಟ್ಟು' ಧಾರಾವಾಹಿ ಪ್ರಸಾರವಾಗ್ತಿದೆ. ಒಳ್ಳೆ ಕಥೆಯನ್ನು ಪ್ರೊಡಕ್ಷನ್ ತಂಡ ಆಯ್ಕೆ ಮಾಡಿಕೊಂಡಿದ್ದು, ಈಗ ಕಥೆಯ ಟರ್ನಿಂಗ್ ಕೂಡ ಅದ್ಭುತವಾಗಿದೆ. ಅದರಲ್ಲೂ ಧಾರಾವಾಹಿಯಲ್ಲಿ ಸುಂದರಿಯನ್ನು ಕುರೂಪಿಯಂತೆ ತೋರಿಸಿರುವುದು ಕಥೆಯ ಹೈಲೇಟ್.

ಫೋಟೋ ಹಂಚಿಕೊಂಡ ಅಮೃತಾ
'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ಅಮೃತಾ ಮುಖ್ಯ ಪಾತ್ರ ಮಾಡಿದ್ದಾರೆ. ಅದರಲ್ಲೂ ಗ್ಲಾಮರಸ್ ಆಗಿರುವ ಅಮೃತಾ ಡಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ರಿಯಲ್ ಲೈಫ್‌ನಲ್ಲಿ ತಾವೆಷ್ಟು ಬ್ಯೂಟಿಫುಲ್ ಅನ್ನೋದು ಅವರ ಸೋಷಿಯಲ್ ಮೀಡಿಯಾದಲ್ಲಿಯೇ ಅರ್ಥವಾಗಿದೆ. ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದು, ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಬ್ಯೂಟಿ ಕಂಡು ದಂಗಾದ ಫ್ಯಾನ್ಸ್
ವೈಟ್ ಟಾಪ್ ಅಂಡ್ ಜೀನ್ಸ್‌ನಲ್ಲಿ ಪೋಸ್ ಕೊಟ್ಟಿದ್ದು, ಪಡ್ಡೆ ಹೈಕ್ಳ ಹಾರ್ಟ್ ಹಾಕಿದ್ದಾರೆ. ಅಮೃತಾ ಫ್ಯಾನ್ಸ್ ಅಂತು ಕಣ್ಣು ಮಿಟುಕಿಸದೆ ನೋಡುವಂತ ಬ್ಯೂಟಿ ಅದು. ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಫೋಟೊ ನೋಡಿ ಫಾಲೋವರ್ಸ್ ಬೇಸರ ಮಾಡಿಕೊಂಡಿದ್ದಾರೆ. ಇಷ್ಟೊಳ್ಳೆ ಸುಂದರಿ, ಹಾಲ್ಗೆನ್ನೆಯ ಚೆಲುವೆ, ಧಾರಾವಾಹಿಯಲ್ಲಿ ಮಾತ್ರ ಕಪ್ಪು ಸುಂದರಿಯಂತೆ ಕಾಣಿಸಿರೋದು ಸ್ವಲ್ಪವೂ ಇಷ್ಟವಿಲ್ಲ. ರಿಯಲ್ ಫೋಟೊಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ.
ದತ್ತನ ನಂಬಿಕಸ್ಥ ಹುಡುಗಿ ಈ ದೃಷ್ಟಿ
ದೃಷ್ಟಿ ಹಾಗೂ ಕುಟುಂಬ ಕಟುಕನ ಕೈನಿಂದ ತಪ್ಪಿಸಿಕೊಂಡು ಹುಬ್ಬಳ್ಳಿಯಲ್ಲಿ ದತ್ತನ ಮನೆ ಸೇರಿಕೊಂಡಿದ್ದಾರೆ. ಇಲ್ಲಿ ಒಂದಂತಕ್ಜೆ ದೃಷ್ಟಿ ಫ್ಯಾಮಿಲಿ ಸೇಫ್ ಆಗಿದೆ. ಯಾರಿಂದಾನೂ ದತ್ತನನ್ನು ದಾಟಿ ಬರುವುದಕ್ಜೆ ಸಾಧ್ಯವಿಲ್ಲ. ಹೀಗಾಗಿ ದತ್ತನ ಮನೆಯಲ್ಲಿಯೇ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಇನ್ನು ದತ್ತನ ಟೇಸ್ಟ್ ಗೆ ರುಚಿಯಾಗಿ ಅಡುಗೆ ಮಾಡುವುದೆಂದರೆ ಸುಲಭದ ಕೆಲಸವಲ್ಲ. ಆದರೆ ಆ ಜಯ ದೃಷ್ಟಿಯ ಪಾಲಾಗಿದೆ. ದತ್ತನ ದತ್ತನ ಟೇಸ್ಟ್‌ಗೆ ರುಚಿಯಾಗಿ ಅಡುಗೆ ವಿಚಾರದಲ್ಲೂ ದೃಷ್ಟಿ, ದತ್ತನ ಮನಸ್ಸು ಗೆದ್ದಾಗಿದೆ. ಇನ್ನೂ ಪ್ರೀತಿ ವಿಚಾರದಲ್ಲಿ ಗೆಲ್ಲಬೇಕು ಅಷ್ಟೇ
ಸತ್ಯಾ ಗೊತ್ತಾದರೆ ಎಂಬ ಭಯ ಅಮ್ಮನಿಗೆ
ದತ್ತನನ್ನು ನೋಡಿ, ಅವನ ಗುಣಗಳಿಗೆ ದೃಷ್ಟಿ ಎಂದೋ ಕಳೆದು ಹೋಗಿದ್ದಾಳೆ. ಮನಸ್ಸೋಳಗೆ ಪ್ರೀತಿ ಮಾಡುವುದಕ್ಕೆ ಶುರು ಮಾಡಿದ್ದಾಳೆ. ಇದು ದೃಷ್ಟಿ ತಾಯಿಗೂ ಅರ್ಥವಾಗಿ ಮಗಳ ಮನಸ್ಸಲ್ಲಿ ಹುಟ್ಟಿರೋ ಪ್ರೀತಿಯನ್ನ ಹಾಗೆ ಅದುಮಿಟ್ಟುಕೊಳ್ಳುವಂತೆ ಮಾಡಿದ್ದಾಳೆ. ಅಮ್ಮನ ಮಾತು, ದತ್ತನ ಅಂತಸ್ತು ಎರಡನ್ನು ಅರ್ಥ ಮಾಡಿಕೊಂಡ ದೃಷ್ಟಿ ಈಗ ದತ್ತನಿಗೆ ನೋಡಿರುವ ಹುಡುಗಿಯ ಮೇಲೆಯೇ ಪ್ರೀತಿಯಾಗುವುದಕ್ಕೆ ದೃಷ್ಟಿಯೇ ದಾರಿ ಮಾಡಿಕೊಡುತ್ತಿದ್ದಾಳೆ. ಆದರೆ ಈಗ ದೃಷ್ಟಿಯ ಹೊಸ ಫೋಟೋಸ್ ನೋಡಿ ಫ್ಯಾನ್ಸ್ ಅಂತು ದಿಲ್ ಖುಷ್ ಆಗಿದ್ದಾರೆ.


Click it and Unblock the Notifications











