ಮೇಕಪ್‌ಕ್ಕಿಂತ ಕಪ್ಪಗಿರೋರನ್ನೇ ತಗೋಬಹುದಿತ್ತಲ್ವಾ; 'ದೃಷ್ಟಿಬೊಟ್ಟು' ಧಾರಾವಾಹಿಗೆ ವೀಕ್ಷಕರ ಪ್ರಶ್ನೆ, ಆದರೆ?

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಶುರುವಾದ 'ದೃಷ್ಟಿಬೊಟ್ಟು' ಧಾರಾವಾಹಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ಕಥೆ ಕೂಡ ಕುತೂಹಲಕ್ಕೆ ಕಾರಣವಾಗಿದೆ. ದೃಷ್ಟಿಯನ್ನು ಊರಲ್ಲಿರುವ ಜನ ನೋಡುವುದಕ್ಕೇನೆ ಭಯ ಪಡುತ್ತಾರೆ. ಮಕ್ಕಳಿಗೆ ಗುಮ್ಮ ತೋರಿಸಬೇಕು ಅಂದ್ರೆ ದೃಷ್ಟಿಯನ್ನು ತೋರಿಸಿ ಹೆದರಿಸುತ್ತಾರೆ. ಅಮಾವಾಸ್ಯೆಯ ಕಗ್ಗತ್ತಲು ಎಂದೇ ಅವಳನ್ನು ಕರೆಯುತ್ತಾರೆ. ರಸ್ತೆಯಲ್ಲಿ ಓಡಾಡುವಾಗೆಲ್ಲ ಆಡಿಕೊಳ್ಳುತ್ತಿದ್ದವರೇ ಹೆಚ್ಚು.

ಅದ್ಯಾವಾಗ ದೃಷ್ಟಿಯ ನಿಜ ಬಣ್ಣ ಬಯಲಾಯಿತೋ, ಚೆನ್ನಮ್ಮನ ಮನೆ ಮುಂದೆ ಹುಡುಗರು ಕ್ಯೂ ನಿಂತಿದ್ದಾರೆ. ಬ್ಯೂಟಿಯನ್ನ ನೋಡಬೇಕು ಕಳ್ಸಿ ಆಂಟಿ ಎಂದು ವಿಚಿತ್ರವಾಗಿ ಆಡುತ್ತಿದ್ದಾರೆ. ಇದೇ ಕಾರಣಕ್ಕೆ ಚನ್ನಮ್ಮ ತನ್ನ ಮಗಳ ಸೌಂದರ್ಯವನ್ನು ಮಸಿಯಿಂದ ಅಡಗಿಸಿಟ್ಟಿದ್ದಿದ್ದು. ಈಗ ಅದೇ ಬಯಲಾಗಿದೆ. ಆದರೆ ಹಾಲ್ಗೆನ್ನೆಯ ಚೆಲುವೆಗೆ ಆ ರೀತಿಯ ಮೇಕಪ್ ಮಾಡೋದು ಎಷ್ಟು ಕಷ್ಟ ಗೊತ್ತಾ..?

Colors kannada Drustibottu serial actress makeup video goes viral

ದೃಷ್ಟಿಯ ರಿಯಲ್ ಬಣ್ಣವೇ ಬೇರೆ

ಆರಂಭದಿಂದ ದೃಷ್ಟಿಯನ್ನು ಯಾರೇ ನೋಡಿದರು ಭಯವಾಗುವ ರೀತಿಯೇ ಕಾಣಿಸಿಕೊಂಡಿದ್ದಾಳೆ. ಮುಖ-ದೇಹವೆಲ್ಲಾ ಕಪ್ಪು ಬಣ್ಣ, ಜಡೆಯನ್ನು ಹೆಣೆದು, ಇರುವ ಸೌಂದರ್ಯವನ್ನು ಎಷ್ಟು ಕುರೂಪವಾಗುತ್ತದೆಯೋ ಅಷ್ಟು ಕುರೂಪಕ್ಕೆ ತಿರುಗಿಸಿದ್ದದ್ದು. ಆದರೆ ಈಗ ಮಳೆಯಿಂದಾಗಿ ಕಪ್ಪೆಲ್ಲ ಕರಗಿ, ದೃಷ್ಟಿ ಈಗ ಅಮೃತ ಶಿಲೆಯಂತೆ ಹೊಳೆಯುತ್ತಿದ್ದಾಳೆ. ಸೌಂದರ್ಯದ ಅಧಿದೇವತೆಯಂತೆ ಕಾಣಿಸುತ್ತಿದ್ದಾಳೆ.

ಮೇಕಪ್ ಮಾಡುವ ವಿಡಿಯೋ ವೈರಲ್

ದೃಷ್ಟಿ ಅಲಿಯಾಸ್ ಅಮೃತಾ ನೋಡುವುದಕ್ಕೆ ತುಂಬಾ ಬ್ಯೂಟಿಫುಲ್ ಆಗಿದ್ದಾರೆ. ಹಾಲ್ಗೆನ್ನೆಯ ಚೆಲುವೆಯನ್ನು ಕಪ್ಪಗೆ ಮಾಡುವುದು ಸುಲಭವಲ್ಲ. ಅದಕ್ಕೆ ಮೇಕಪ್ ಮ್ಯಾನ್ ಶ್ರಮ ಸಾಕಷ್ಟು ಇರುತ್ತದೆ. ಇಲ್ಲಿ ಅದೇ ಆಗಿರುವುದು. ಮೇಕಪ್ ಮ್ಯಾನ್, ದೃಷ್ಟಿಯ ಸೌಂದರ್ಯವನ್ನು ಕೂರೂಪಿ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿ ಆಕೆಯ ಮುಖಕ್ಕೆ ಎಷ್ಟು ಕೋಟ್ ಹಾಕುತ್ತಾರೆ, ಎಷ್ಟೆಲ್ಲಾ ಸಮಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಆ ವಿಡಿಯೋ ನೋಡಿದರೆ ಪಾಪ ದೃಷ್ಟಿ ಎನಿಸುತ್ತದೆ.

ವೇದಿಕೆಯಲ್ಲಿ ದೃಷ್ಟಿ ಕಂಡು ಬೇಸರ

ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ 'ಅನುಬಂಧ ಅವಾರ್ಡ್ಸ್' ನಡೆದಿದೆ. ಪ್ರತಿವರ್ಷ ನಡೆಯುವ ಈ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಕಲಾವಿದರು ಪಾತ್ರದಿಂದ ಹೊರ ಬಂದು, ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಾರೆ. ಮೇಕಪ್‌ನಿಂದ ಹಿಡಿದು ಡ್ರೆಸ್ ತನಕವೂ ಕೂಡ. ಇದೆ ಅವಾರ್ಡ್ಸ್ ಕಾರ್ಯಕ್ರಮಕ್ಕೆ ದೃಷ್ಟಿಬೊಟ್ಟು ತಂಡ ಕೂಡ ಬಂದಿತ್ತು.

Colors kannada Drustibottu serial actress makeup video goes viral

ಡಿ-ಗ್ಲಾಮರಸ್ ಆಗಿ ಎಂಟ್ರಿ

ವೇದಿಕೆಗೆ ಕಪ್ಪು ಬಣ್ಣದಲ್ಲಿಯೇ, ಸ್ವಲ್ಪವೂ ಗ್ಲಾಮರ್ ಇಲ್ಲದೆ, ಧಾರಾವಾಹಿಯಲ್ಲಿ ತನ್ನ ಪಾತ್ರ ಹೇಗಿರುತ್ತೋ ಅದೇ ರೀತಿ ಬಂದಿದ್ದಳು. ಇದು ನೋಡುಗರಿಗೆ ಬೇಸರ ತರಿಸಿತ್ತು. ಆದರೆ ಅವಾರ್ಡ್ಸ್ ಕಾರ್ಯಕ್ರಮಕ್ಕೂ ಮುನ್ನ ದೃಷ್ಟಿಯ ರಿಯಲ್ ಬಣ್ಣ ಬಯಲಾಗಿರಲಿಲ್ಲ. ಹೀಗಾಗಿ ದೃಷ್ಟಿ, ಅದೇ ವೇಷಭೂಷಣದಲ್ಲಿ ಬರಬೇಕಾಯ್ತು ಎನಿಸುತ್ತದೆ.

ಹೀಗೊಂದು ವೀಕ್ಷಕರ ಪ್ರಶ್ನೆ

ಮೇಕಪ್ ವಿಡಿಯೋ ಅಪ್ಲೋಡ್ ಆದ ಬೆನ್ನಲ್ಲೇ ವೀಕ್ಷಕರು ಕಮೆಂಟ್ ಹಾಕಿದ್ದಾರೆ. ಕಪ್ಪಗಿನ ಹುಡುಗಿ ಬೇಕು ಅಂದ್ರೆ ಕಪ್ಪು ಬಣ್ಣದಲ್ಲಿದ್ದವರನ್ನೇ ತೆಗೆದುಕೊಳ್ಳಬಹುದು, ಮೇಕಪ್ ಹಾಕಿ ಯಾಕೆ ಈ ರೀತಿ ತೋರಿಸಬೇಕಿತ್ತು ಎಂದೆಲ್ಲಾ ಕಮೆಂಟ್ ಹಾಕಿದ್ದಾರೆ. ಆದರೆ ಇಲ್ಲಿ ದೃಷ್ಟಿಯ ಬಣ್ಣ ಕಪ್ಪು ಎಂಬುದಷ್ಟೇ ಅಲ್ಲ ಅವಳು ಸೌಂದರ್ಯವತಿ ಎಂಬುದನ್ನು ಈಗ ತೋರಿಸಿದ್ದಾರೆ. ಕಮೆಂಟ್‌ ಬಂದಂತೆ ಕಪ್ಪಗಿರುವವರನ್ನೇ ತೆಗೆದುಕೊಂಡಿದ್ದರೆ ಕಥೆಗೆ ಟರ್ನಿಂಗ್ ಪಾಯಿಂಟ್ ಹೇಗೆ ಸಿಗ್ತಿತ್ತು. ಮತ್ತೆ ಅವರಿಗೆ ಬೆಳ್ಳಗಿನ ಅಲಂಕಾರದ ಮೇಕಪ್ ಮಾಡಬೇಕಾಗಿತ್ತು. ಹೀಗಾಗಿ ಕಥೆಗೆ ಬೇಕಾದ ಮೇಕಪ್ ಮಾಡಿದ್ದಾರೆ ಅಷ್ಟೇ. ಇಲ್ಲಿ ಬಣ್ಣದ ಬಗೆಗಿನ ತಾತ್ಸಾರವಲ್ಲ ಎಂದು ಇನ್ನು ಹಲವರು ಸಮಜಾಯಿಷಿ ನೀಡಿದ್ದಾರೆ.

More from Filmibeat

English summary
Colors kannada Drustibottu serial Written Update on drusti makeup video. Here is the details about Viewer's Question for Drishti Bottu serial;
Read more about: serial filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X