Drustibottu: ದೃಷ್ಟಿ ಮೇಲೆ ಕಣ್ಣಾಕಿದ ಇನ್ಸ್‌ಪೆಕ್ಟರ್ ಯಾರು? ರಾಜ್ಯಪ್ರಶಸ್ತಿ ವಿಜೇತ ಅಂತ ಗೊತ್ತಾ?

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ 'ದೃಷ್ಟಿ ಬೊಟ್ಟು' ಎಂಬ ಧಾರಾವಾಹಿ ಶುರುವಾಗಿದ್ದು ಈಗಷ್ಟೇ. ಆದರೆ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಯೂ ಅದ್ಭುತವಾಗಿ ಮೂಡಿ ಬರುತ್ತಿದೆ. ಅದರಲ್ಲೂ ಗಟ್ಟಿ ಕಥೆಯನ್ನು ಹೊಂದಿದೆ.

ಬಡತನದಲ್ಲಿದ್ದು, ಅತಿ ಸುಂದರವಾಗಿದ್ದರೆ ಏನೆಲ್ಲಾ ಸಮಸ್ಯೆಗಳು ಕಾಡುತ್ತವೆ, ರಕ್ಷಣೆಗಾಗಿ ಕಷ್ಟಪಡುವ ಕುಟುಂಬದ ಪಾಡುಗಳನ್ನ ತೋರಿಸಲಾಗಿದೆ. ದೃಷ್ಟಿ ನೋಡಿವುದಕ್ಕೆ ಅತಿ ಸುಂದರಿ. ಹಾಲ್ಗೆನ್ನೆಯ ಚೆಲುವೆ. ಆದರೆ ಗಂಡ ಸರಿಯಿಲ್ಲ. ನೋಡುಗರ ದೃಷ್ಟಿ ಸರಿಯಿಲ್ಲ. ಕೆಟ್ಟವರಿಂದ ಕಾಪಾಡಲು ದೃಷ್ಟಿಯ ಅಮ್ಮ ಮಗಳನ್ನೇ ಕುರೂಪ ಮಾಡಿ ಬಿಟ್ಟಿದ್ದಾಳೆ.

Colors kannada Drustibottu serial Fame Raghu Shivamogga s biography

ದೃಷ್ಟಿಗೆ ಹಣದ ಅವಶ್ಯವಿತ್ತು. ಇನ್ಸ್‌ಪೆಕ್ಟರ್‌ಗೆ ಬೇರೊಬ್ಬರಿಂದ ಹೊಗಳಿಕೆಯ ಅಗತ್ಯವಿತ್ತು. ಹೀಗಾಗಿ ದೃಷ್ಟಿಯನ್ನ ಅಲ್ಲಿ ಕೂರಿಸಿದ. ಮಳೆರಾಯನ ಆಶೀರ್ವಾದ, ದೇಹದ ಕಪ್ಪೆಲ್ಲ ತೊಳೆದು, ಅತಿಲೋಕ ಸುಂದರಿಯಂತೆ, ಫಳ ಫಳ ಹೊಳೆಯುತ್ತಿದ್ದಾಳೆ. ಇನ್ಸ್‌ಪೆಕ್ಟರ್ ಕಣ್ಣಿಗೆ ಬಿದ್ದಿರುವ ದೃಷ್ಟಿಯನ್ನು ಕಾಪಾಡಿಕೊಳ್ಳುವುದೇ ಅಮ್ಮನಿಗೆ ಕಷ್ಟವಾಗಿದೆ. ಆದರೆ ಈ ಇನ್ಸ್‌ಪೆಕ್ಟರ್ ಯಾರು ಗೊತ್ತಾ..?

ದೃಷ್ಟಿಬೊಟ್ಟು ಧಾರಾವಾಹಿಗೆ ಬಂದ ರಘು

ಈ ಧಾರಾವಾಹಿ ಆರಂಭವಾದ ಎರಡೇ ದಿನಕ್ಕೆ ರಘು ಶಿವಮೊಗ್ಗ ಎಂಟ್ರಿಯಾಗಿದೆ. ದೃಷ್ಟಿ ಇರುವ ಊರಿಗೆ ಇವರೇ ಪೊಲೀಸ್ ಅಧಿಕಾರಿಯಾಗಿದ್ದಾರೆ. ಈಗ ದೃಷ್ಟಿಯ ಹಿಂದೆ ಬಿದ್ದಿದ್ದಾರೆ.

Colors kannada Drustibottu serial Fame Raghu Shivamogga s biography

ಖಳನಾಯಕನಾಗಿ ರಘು

ಈ ಇನ್ಸ್‌ಪೆಕ್ಟರ್ ದೃಷ್ಟಿ ಅದ್ಯಾವಾಗ ದೃಷ್ಟಿಯ ಮೇಲೆ ಬಿತ್ತೋ ಅಂದಿನಿಂದ ದೃಷ್ಟಿಯ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಕಪ್ಪಾಗಿದ್ದಾಗ ಆಡಿಕೊಂಡು, ಅವಮಾನ ಮಾಡುತ್ತಿದ್ದವ, ಈಗ ದೃಷ್ಟಿಯ ರಿಯಲ್ ಸೌಂದರ್ಯ ಕಂಡು ಅವಳ ಹಿಂದೆ ಬಿದ್ದಿದ್ದಾನೆ. ಪೋಲಿಗಳಿಂದ ಮಗಳನ್ನು ರಕ್ಷಿಸುವುದಕ್ಕೆ ಕಷ್ಟಪಡುತ್ತಿದ್ದ ತಾಯಿಗೆ ಈಗ ಇನ್ಸ್‌ಪೆಕ್ಟರ್ ನಿಂದ ಮಗಳನ್ನು ಕಾಪಾಡುವ ಸವಾಲು ಎದುರಾಗಿದೆ. ರಘು ಶಿವಮೊಗ್ಗ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ಆ ಪಾತ್ರಕ್ಕೆ ಸಖತ್ತಾಗಿಯೇ ಒಪ್ಪಿದ್ದಾರೆ.

ರಂಗಭೂಮಿ ಕಲಾವಿದ

ರಘು ಶಿವಮೊಗ್ಗ ಸಾಮಾನ್ಯ ಕಲಾವಿದರಲ್ಲ. ರಂಗಭೂಮಿಯಿಂದ ಬಂದವರು. ಶಿವಮೊಗ್ಗದ ಗೋಪಾಳದ ಗಲ್ಲಿಯವರು. ಚಿಕ್ಕವಯಸ್ಸಿನಲ್ಲಿಯೇ ಮಿಮಿಕ್ರಿ ಮಾಡಿಕೊಂಡು ಬೆಳೆದವರು ಅನಂತರ ನೀನಾಸಂ ಸೇರಿಕೊಂಡರು. ಅಲ್ಲಿಂದ ನಿರ್ದೇಶನ ಗೀಳು ಹತ್ತಿತ್ತು. ಅಲ್ಲಿಂದ ನಟನಾಗಿ, ‌ನಿರ್ದೇಶಕನಾಗಿ, ಬರಹಗಾರನಾಗಿ ಹೊರಹೊಮ್ಮಿದರು. 'ಮುಕ್ತ' ಧಾರಾವಾಹಿಯಲ್ಲಿ ನಟನೆ ಆರಂಭಿಸಿದರು. ಮೊದಲ ಬಾರಿಗೆ ಮಕ್ಕಳ ರಂಗಭೂಮಿ ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡಿದರು. ಅಲ್ಲಿಂದ ಅವರ ಪಯಣ ಯಶಸ್ವಿ ಹಾದಿಯಲ್ಲಿ ಸಾಗುತ್ತಾ ಹೋಯ್ತು. 'ಚೂರಿಕಟ್ಟೆ' ಎಂಬ ಸಿನಿಮಾವನ್ನು ರಘು ಶಿವಮೊಗ್ಗ ಅವರೇ ನಿರ್ದೇಶನ ಮಾಡಿದರು. ಇಂಥ ನಿರ್ದೇಶಕ, ನಟ ಈಗ ವಿಲನ್ ಆಗಿಯೂ ಎಲ್ಲರನ್ನು ಕಾಡುತ್ತಿದ್ದಾರೆ. 'ಭೀಮ' ಚಿತ್ರದಲ್ಲೂ ಪೊಲೀಸ್ ಆಫೀಸರ್ ಆಗಿ ಗಮನ ಸೆಳೆದಿದ್ದರು.

ಕಿರುಚಿತ್ರಕ್ಕೆ ರಾಜ್ಯ ಪ್ರಶಸ್ತಿ

ಬೇನಾಮಿ ಕರೆಯ ಸುಳಿಯ ಕಥೆ ಹಂದರ ಹೊಂದಿದ್ದ 'ಚೌಕ ಬಾರ' ಕಿರುಚಿತ್ರದ ಕಥೆ ಒಂದು ಅನುಭವದಿಂದ ಹುಟ್ಟಿದ್ದು ಎನ್ನುತ್ತಾರೆ ರಘು. ಇಂಥದ್ದೊಂದು ಕಥೆಯನ್ನು ಮಾಡಬೇಕೆಂದಿದ್ದೇನೆ ಎಂದಾಗ ಬಂಡವಾಳ ಹೂಡಿದವರು ನಾಯಕ ನಟ ಸತೀಶ್ ನೀನಾಸಂ. ಮುಖ್ಯ ಭೂಮಿಕೆಯಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಹಾಗೂ ಘಟಾನುಘಟಿಗಳು, ಒಂದು ರೂಪಾಯಿ ಸಂಭಾವನೆ ನಿರೀಕ್ಷೆ ಇಲ್ಲದೆ ಉತ್ತಮ ಚಿತ್ರಕ್ಕೊಂದು ಬೆಂಬಲವಾಗಿ ನಿಂತರು. ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆಗೊಂಡ ಮೊದಲ ಕಿರುಚಿತ್ರ ೫೨ ಪ್ರದರ್ಶನಗಳನ್ನು ರಾಜ್ಯಾದ್ಯಂತ ಕಂಡಿದ್ದು ದಾಖಲೆಯೇ ಸರಿ. ೨೦೧೫ರ ಸಾಲಿನ 'ಉತ್ತಮ ಕಿರುಚಿತ್ರ' ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಗಳಿಸಿದ್ದು ಇವರ ಕಥೆ ಮತ್ತು ನಿರ್ದೇಶನಕ್ಕೆ ಸಂದ ಗೆಲುವು ತಂದುಕೊಟ್ಟಿತ್ತು.

More from Filmibeat

English summary
Colors kannada Drustibottu serial; Here is the details about Raghu Shimoga Life Story;
Read more about: filmibeat news sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X