Drustibottu: ದತ್ತು-ದೃಷ್ಟಿ ಮದುವೆ; ಶರಾವತಿಯ ಕಣ್ಣೀರು ಕಂಡು ವೀಕ್ಷಕರು ಗರಂ!
ಕಲರ್ಸ್ ಕನ್ನಡದಲ್ಲಿ ಬರುತ್ತಿರುವ 'ದೃಷ್ಟಿ ಬೊಟ್ಟು' ಧಾರಾವಾಹಿ ಸಖತ್ ಟರ್ನಿಂಗ್ ತೆಗೆದುಕೊಂಡಿದೆ. ಇಡೀ ಬಳ್ಳಾರಿಯನ್ನೇ ಮುಷ್ಠಿಯಲ್ಲಿಟ್ಟುಕೊಂಡಿದ್ದ ದತ್ತ ಇಂದು ಕಣ್ಣೀರುಡುವಂತೆ ಆಗಿದೆ. ಎರಡನೇ ಬಾರಿಗೆ ತನ್ನ ಪ್ರೀತಿಗೆ ಮೋಸ ಆಗಿದೆ. ಅದು ತನ್ನ ಅಕ್ಕ ಎಂದು ನಂಬಿರುವವಳಿಂದಾನೆ. ಆದರೆ ಶರಾವತಿಗೆ ಸೆಡ್ಡು ಹೊಡೆದು ದೃಷ್ಟಿಯನ್ನ ಮದುವೆಯಾಗಿದ್ದಾನೆ ದತ್ತ.
ಹೊರಗಿನ ಶತ್ರುಗಳನ್ನ ಹೇಗೆ ಬೇಕಾದರೂ ಹುಡುಕಬಹುದು, ಹೇಗೆ ಬೇಕಾದರೂ ಕೊಂದುಬಿಡಬಹುದು. ಆದರೆ ಒಳಗಿನ ಶತ್ರುಗಳನ್ನ ಹುಡುಕುವುದಕ್ಕೇನೆ ಅಸಾಧ್ಯ. ಈ ಮಾತು ದತ್ತ ಭಾಯ್‌ಗೆ ಅತ್ಯಂತ ಪ್ರಿಯವಾಗಿ ಒಪ್ಪುತ್ತದೆ. ಇಂಪನಾಳಿಂದ ಮೋಸ ಹೋದ ದತ್ತು ತನ್ನ ಕಂಟ್ರೋಲ್ ಕಳೆದುಕೊಂಡಿದ್ದಾನೆ. ಎಲ್ಲರನ್ನ ಗಪ್ ಚುಪ್ ಮಾಡಿ ದೃಷ್ಟಿಯನ್ನ ಮದುವೆಯಾಗಿದ್ದಾನೆ.

ಇಂಪನಾ ಜಾಗದಲ್ಲಿ ದೃಷ್ಟಿ
ದತ್ತನ ಮೇಲಿನ ದ್ವೇಷ ಶರಾವತಿಗೆ ಸದಾ ಹಸಿಯಾಗಿಯೇ ಇರುತ್ತದೆ. ಅವನನ್ನ ಯಾವಾಗಲೂ ಅಮ್ಮ ಮುದ್ದು ಮಗ ಎಂದರೆ ಆ ಕೋಪ ಇನ್ನು ಜಾಸ್ತಿಯಾಗುತ್ತದೆ. ದತ್ತನನ್ನ ಕೊಂದೇ ಬಿಡುವ ಪ್ಲ್ಯಾನ್ ಕೂಡ ಮಾಡಿದ್ದಳು. ಆದರೆ ನೋವು ಕೊಡುವುದಕ್ಕೆ ದೊಡ್ಡ ಅಸ್ತ್ರವನ್ನೇ ಹುಡುಕಿದಳು. ದತ್ತನಿಗೆ ಮದುವೆ ಮಾಡಬೇಕೆಂದುಕೊಂಡಿದ್ದ ಇಂಪನಾಳನ್ನ ದಾಳವಾಗಿ ಬಳಸಿಕೊಂಡಳು. ಮದುವೆ ದಿನ ಓಡಿ ಹೋಗುವಂತೆ ಪ್ಲ್ಯಾನ್ ಮಾಡಿದಳು. ಅದು ದೃಷ್ಟಿಯ ಮೇಲೆ ಬರುವಂತೆ ಮಾಡಿದಳು. ಆದರೆ ಈ ಘಟನೆಯಾದ ಮೇಲೆ ಶರಾವತಿ ನಿರೀಕ್ಷೆ ಮಾಡದ ಘಟನೆ ನಡೆದಿದೆ. ದತ್ತು, ದೃಷ್ಟಿಯನ್ನ ಮದುವೆಯಾಗಿದ್ದಾನೆ.
ದತ್ತು ನಡೆಗೆ ಮನೆಯವರು ಶಾಕ್
ದೃಷ್ಟಿಗೆ ಸರಿಯಾದ ರೀತಿಯಲ್ಲಿ ಸತ್ಯ ಹೇಳುವುದಕ್ಕೂ ಆಗಲಿಲ್ಲ. ಆದರೆ ಈ ಸಂದರ್ಭದಲ್ಲಿ ದೃಷ್ಟಿ ಪ್ರಾಣಕ್ಕಿಂತ ಹೆಚ್ಚಾಗಿ ದತ್ತ ಬಾಯ್ ನ ಪ್ರೀತಿಸ್ತಾ ಇದ್ದಳು ಎಂಬುದು ದತ್ತನಿಗೆ ಗೊತ್ತಾಯ್ತು. ಆದ್ರೆ ಆ ಕ್ಷಣದಲ್ಲಿ ದತ್ತನಿಗೆ ದೃಷ್ಟಿಯ ಮೇಲೆ ಪ್ರೀತಿ ಬಂದದ್ದಲ್ಲ ಕೋಪ ಹೆಚ್ಚಾಗಿದ್ದು. ಹಣೆಗೆ ಗನ್ ಇಟ್ಟು ಹಸೆಮಣೆ ಮೇಲೆ ಕೂರಿಸಿದ. ಮನೆಯವರೆಲ್ಲ ಎಷ್ಟೇ ಬೇಡವೆಂದರೂ ಕೇಳದೆ ದೃಷ್ಟಿಗೆ ತಾಳಿ ಕಟ್ಟಿದ. ದತ್ತನ ಈ ನಡೆ ಮನೆಯವರಿಗೆ ಒಂದು ರೀತಿಯ ಶಾಕಿಂಗ್ ಎನಿಸಿತ್ತು.
ಕಣ್ಣೀರು ಹಾಕಿದ ಶರಾವತಿ
ಇಲ್ಲಿ ದೊಡ್ಡ ವಿಲನ್ ಶರಾವತಿ. ಅವಳ ಎಲ್ಲಾ ನಾಟಕ ಆಕೆಯ ಗಂಡನಿಗೆ ಗೊತ್ತು. ಆದರೆ ಹೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಮಗನನ್ನೇ ಕೊಂದು ಬಿಡುವ ಬ್ಲಾಕ್ ಮೇಲ್ ಮಾಡಿದ್ದಳು. ಹೀಗಾಗಿ ಸತ್ಯ ಗೊತ್ತಿರೋ ಶರಾವತಿಯ ಗಂಡ ಗಪ್ ಚಿಪ್ ಆಗಿದ್ದಾನೆ. ಆದರೆ ಈಗ ದತ್ತನ ಮದುವೆಯಲ್ಲಿ ಒಂದು ಕಡೆ ನಿಂತು ಕಣ್ಣೀರು ಹಾಕುತ್ತಿದ್ದಾಳೆ.
ವೀಕ್ಷಕರಿಗೆ ಶರಾವತಿ ಮೇಲಿದ ಕೋಪ
ವೀಕ್ಷಕರಿಗೆ ತೆರೆಯ ಮೇಲೆ, ದತ್ತನಿಗೆ ಗೊತ್ತಾಗದಂತೆ ಶರಾವತಿ ಮಾಡುವ ನಾಟಕವೆಲ್ಲ ಗೊತ್ತಲ್ವಾ, ಅದಕ್ಕೆ ಕೋಪ ಜಾಸ್ತಿ. ಈಗ ಕಣ್ಣೀರು ಹಾಕುತ್ತಿರೋದಕ್ಕೆ ಕಮೆಂಡ್ ಬಾಕ್ಸ್‌ನಲ್ಲಿಯೇ ಕೋಪ ತೀರಿಸಿಕೊಳ್ಳುತ್ತಿದ್ದಾರೆ. ಶರಾವತಿಗೆ ಅಂದ ಚಂದವಾಗಿ ಬೈಗುಳ ಕೇಳಿ ಬರ್ತಾ ಇದೆ. ಶರಾವತಿ ನೀನು ಸ್ಟೇಜ್ ಮೇಲೆ ನಿಂತು ನಾಟಕದ ಕಣ್ಣೀರನ್ನ ಹಾಕಬೇಡ. ಅದು ಚೆನ್ನಾಗಿ ಕಾಣಿಸಲ್ಲ. ನಿನ್ನಿಂದಾನೇ ದತ್ತನಿಗೆ ಮೋಸ ಆಗಿದ್ದು ಅಂತಿದ್ದಾರೆ. ಶರಾವತಿಯ ನಾಟಕಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅತ್ತ ಗನ್ ಹಣೆಗೆ ಇಟ್ಟು ಹ್ಯಾಪಿ ಮ್ಯಾರಿಡ್ ಲೈಫ್ ಎಂದ ದತ್ತನ ಬಗ್ಗೆ ಮುಂದಿನ ಲೈಫ್ ಬಗ್ಗೆ ಕುತೂಹಲವೂ ಮೂಡಿದೆ.


Click it and Unblock the Notifications











