Drustibottu: ದೃಷ್ಟಿಯ ಬಣ್ಣ ಬಯಲು, ಇಷ್ಟು ಫಾಸ್ಟ್ ಆಗಿ ಓಡ್ತಾ ಇರೋದೇಕೆ ಧಾರಾವಾಹಿ?

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಇತ್ತೀಚೆಗಷ್ಟೇ 'ದೃಷ್ಟಿ ಬೊಟ್ಟು' ಎಂಬ ಧಾರಾವಾಹಿ ಶುರುವಾಗಿದೆ. ವಿಜಯ್ ಸೂರ್ಯ ಅವರ ನಾಯಕತ್ವದ ಧಾರಾವಾಹಿ. ಅವನಿಗೆ ಸೌಂದರ್ಯವೆಂದರೆ ಆಗಲ್ಲ.. ಇವಳಿಗೆ ಸೌಂದರ್ಯವೇ ದೊಡ್ಡ ಶಾಪ ಎಂಬ ಸಾಲುಗಳನ್ನು ಧಾರಾವಾಹಿ ಹೇಳಿತ್ತು. ಅಂದ್ರೆ ಧಾರಾವಾಹಿ ಶುರುವಾಗುವ ಮುನ್ನ ಪೋಸ್ಟರ್ ಗಳನ್ನು ನೋಡುಗರಿಗೆ ಈ ಸಾಲನ್ನು ಅರ್ಥ ಮಾಡಿಸಿದ ರೀತಿಯೇ ಬೇರೆ ಆಗಿತ್ತು. ದತ್ತನಿಗೂ ಮತ್ತು ದೃಷ್ಟಿಗೂ ಜೋಡಿಯಾಗುತ್ತೆ ಎಂಬುದು.

ಧಾರಾವಾಹಿ ಶುರುವಾದಾಗ ದತ್ತನ ರಿಯಲ್ ಲೈಫ್ ಬಗ್ಗೆಯೂ ಪರಿಚಯವಾಯ್ತು. ಸೌಂದರ್ಯದ ಅಧಿದೇವತೆಯಂತೆ ಇದ್ದ ಹುಡುಗಿಯನ್ನು ದತ್ತ ಮದುವೆಯಾಗಿದ್ದ. ಆದರೆ ಆಕೆ ಮನಸ್ಸಿನಾಳಕ್ಕೆ ಗಾಯ ಮಾಡಿ, ಮೋಸ ಮಾಡಿ ಹೋಗಿದ್ದಾಳೆ ಎಂಬುದು ಅರ್ಥವಾಯ್ತು. ಅಂದ್ರೆ ಮದುವೆ ಆಗು ಎಂಬ ಬಲವಂತಕ್ಕೆ ಅಥವಾ ದೃಷ್ಟಿಯ ಗುಣ, ನಡವಳಿಕೆಗೆ ದತ್ತ ಫಿದಾ ಆಗುತ್ತಾನೆ ಎಂಬುದೇ ಎಲ್ಲರೂ ಊಹೆ ಮಾಡಿದ ಕಥೆಯಾಗಿತ್ತು. ಆದರೆ ಈಗ ದೃಷ್ಟಿ ಬಣ್ಣ ಬದಲಾಗಿದೆ, ವೀಕ್ಷಕರಿಗೆ ಇದು ಬೇಸರ ತರಿಸಿದೆ.

Colors kannada Drustibottu serial Written Update on September 21st episode

ವಿಚಿತ್ರವಾಗಿ ಕಾಣಿಸುತ್ತಿದ್ದ ದೃಷ್ಟಿ

ದೃಷ್ಟಿಯೇ ಈ ಧಾರಾವಾಹಿಯ ಹೈಲೆಟ್. ಕಪ್ಪಗಿರುವವರೆಲ್ಲಾ ಕೆಟ್ಟದಾಗಿ ಕಾಣಿಸುವುದಿಲ್ಲ. ಆಕ್ಚುಲಿ ಅವರೇ ಲಕ್ಷಣವಾಗಿ ಕಾಣಿಸುವುದು ಎಂಬುದು ಸಾಕಷ್ಟು ಜನರನ್ನು ನೋಡಿದಾಗ ಪ್ರೂವ್ ಆಗಿದೆ. ಅವರನ್ನು ಕೃಷ್ಣ ಸುಂದರಿಯರು ಎಂದೇ ಹೇಳುತ್ತಾರೆ. ಆದರೆ ದೃಷ್ಟಿ ಕಪ್ಪಗಿದ್ದರು ಲಕ್ಷಣವಾಗಿದ್ದಾಳೆ. ಆಕೆಯ ಹೇರ್ ಸ್ಟೈಲ್ ಎಲ್ಲವನ್ನು ಕೆಟ್ಟದಾಗಿ ಮಾಡಿ, ನೋಡುಗರಿಗೆ ಭಯ ಹುಟ್ಟಿಸುವ ರೂಪದಲ್ಲಿ ಕಾಣಿಸುವಂತೆ ಮಾಡಿದ್ದಾರೆ.

ಕೂರೂಪಿ ಅಲ್ಲ ಈಗ ಸ್ಪುರದ್ರೂಪಿ

ದೃಷ್ಟಿಗೆ ಹಣದ ಅವಶ್ಯಕತೆ ಇತ್ತು. ಅಮ್ಮನನ್ನು ಕಾಪಾಡಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ ಎಂದು ಒಪ್ಪಿಕೊಂಡು ಬಿಟ್ಟಳು. ಆಗ ಪೊಲೀಸ್ ಅಧಿಕಾರಿ ಕರೆದುಕೊಂಡು ಹೋಗಿ ಜನರ ಮುಂದೆ ಕೂರಿಸಿದ. ಎಲ್ಲರು ಕಲ್ಲು ಹೊಡೆದರು, ಬೆಂಕಿ ಹೊತ್ತಿಸುವಷ್ಟರಲ್ಲಿ ಮಳೆ ಬಂತು. ಮಳೆರಾಯನಿಂದ ದೃಷ್ಟಿಯ ನಿಜ ಬಣ್ಣ ಬಯಲಾಯ್ತು. ಕಪ್ಪು ಬಣ್ಣ ಕರಗಿ ಹೋಯ್ತು. ಯಾರು ಕೂರೂಪಿ ಎನ್ನುತ್ತಿದ್ದರೋ ಅವರೆಲ್ಲ ಸ್ಪುರದ್ರೂಪಿ ಎನ್ನುವ ಹಾಗೆ ಆಯ್ತು.

Colors kannada Drustibottu serial Written Update on September 21st episode

ದೃಷ್ಟಿಯ ಬಣ್ಣ ಬದಲಾಗಿದ್ದಕ್ಕೆ ಬೇಸರ

ದೃಷ್ಟಿ ನೋಡುವುದಕ್ಕೆ ದೃಷ್ಟಿ ತಾಗಬೇಕು ಅಷ್ಟು ಮುದ್ದಾಗಿದ್ದಾರೆ. ಹಾಲ್ಗೆನ್ನೆಯಂತೆ ಪಳ ಪಳ ಅಂತ ಹೊಳೆಯುತ್ತಿದ್ದಾಳೆ. ಸೀರಿಯಲ್ ನಲ್ಲಿ ಈ ರೀತಿಯಾಗಿ ಕಾಣಿಸಿಕೊಳ್ಳುತ್ತಾಳೆ ಎಂಬ ಕಲ್ಪನೆಯೂ ಯಾರಿಗೂ ಇರಲಿಲ್ಲ. ಆದರೆ ಇಷ್ಟು ಬೇಗ ತಿಳಿದದ್ದು ಕೂಡ ಬೇಸರ ತರಿಸಿದೆ. ಹೊಸ ವಿಡಿಯೋಗೆ ವೀಕ್ಷಕರು ತಮ್ಮ ನಿರೀಕ್ಷೆಗಳನ್ನೆ ಕಮೆಂಟ್ ಹಾಕುತ್ತಿದ್ದಾರೆ.

ಮತ್ತೆ ಕುರೂಪಿ ಮಾಡ್ತಾಳಾ ಅಮ್ಮ?

ಧಾರಾವಾಹಿ ಆರಂಭಕ್ಕೂ ಮುನ್ನ ನೀಡಿದ ಸಾಲುಗಳಿಗೆ ದೃಷ್ಟಿಯನ್ನು ದತ್ತು ನೋಡಬೇಕು. ಆ ಕುರೂಪ ಮ್ಯಾಟರ್ ಆಗುವುದಿಲ್ಲ. ಇಬ್ಬರ ನಡುವೆ ಲವ್ ಆಗುತ್ತೆ ಎಂಬೆಲ್ಲಾ ಊಹೆಗಳಿದ್ದವು. ಈಗ ದಿಢೀರನೇ ದೃಷ್ಟಿಯ ಬಣ್ಣ ಬದಲಾದರೆ ದತ್ತು ಹೇಗೆ ಒಪ್ಪುತ್ತಾನೆ? ಮೊದಲೇ ಸೌಂದರ್ಯ ಎಂದರೆ ದ್ವೇಷ ಮಾಡುವಾತ ಇಷ್ಟು ಸುಂದರವಾಗಿರುವ ಹುಡುಗಿಯನ್ನು ಒಪ್ಪುವುದೇಗೆ ಎಂಬೆಲ್ಲಾ ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿವೆ. ಅಟ್ ಸೇಮ್ ಟೈಮ್, ಈ ಸೌಂದರ್ಯದಿಂದಾನೇ ದೃಷ್ಟಿಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಕುರೂಪ ಮಾಡಿರಬಹುದು. ಆಕೆಯ ತಾಯಿ ಮತ್ತೆ ಬಣ್ಣ ಬಳಿಯುತ್ತಾಳೆ ಅನ್ನಿಸುತ್ತೆ ಎಂದೆಲ್ಲಾ ಕಮೆಂಟ್ ಹಾಕಿದ್ದಾರೆ.

More from Filmibeat

English summary
Colors kannada Drustibottu serial Written Update on September 21st episode. Here is the details about Viewers are upset that the color of drusti has changed in Drishtibottu serial;
Read more about: serial filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X