Drustibottu: ಸುಂದರ ಹುಡುಗಿಯೆಂದರೆ ದ್ವೇಷಿಸುತ್ತಿದ್ದ ದತ್ತ ಮದುವೆಗೆ ರೆಡಿ; ತಾಳಿ ಕಟ್ಟುವ ವೇಳೆ ಟ್ವಿಸ್ಟ್!

By ಎಸ್ ಸುಮಂತ್

ಹುಬ್ಬಳ್ಳಿಯಲ್ಲಿ ದತ್ತ ಬಾಯ್ ಎಂದು ಕರೆದರೆ ಸಾಕು ಪುಡಿ ರೌಡಿಗಳೆಲ್ಲಾ ನಡುಗಿ ಹೋಗುತ್ತಾರೆ. ಅಂಥ ಹೆಸರು ದತ್ತಾತ್ರೇಯನದ್ದು. ಆದರೆ ಅವನ ಮನಸ್ಸು ಒಂದು ಸುಂದರ ಹುಡುಗಿಯ ಹಿಂದೆ ಬಿದ್ದು ಕುಗ್ಗಿ ಹೋಗಿತ್ತು. ಒಬ್ಬ ಸಾಫ್ಟ್ ಹುಡುಗನಾಗಿ, ಅಂದಿನ ಜೀವನಕ್ಕಾಗಿ ದುಡಿಯುತ್ತಿದ್ದ ಮುಗ್ಧ ಹುಡುಗ ಈ ದತ್ತಾತ್ರೇಯ. ಆದರೆ ಮನಸ್ಸಲ್ಲಿ ಪ್ರೀತಿ ಹುಟ್ಟಿಸಿ, ಹೆಮ್ಮರವಾಗಿ ಬೆಳೆದ ಮೇಲೆ ನಾನಿನ್ನ ಪ್ರೀತಿಸಿಲ್ಲ ಎಂದು ಹೇಳಿದವಳ ಮೋಸದಿಂದ ದತ್ತಾತ್ರೇಯ ದತ್ತಾ ಬಾಯ್ ಆಗಿ ಬದಲಾದ.‌

ದತ್ತನ ತಾಯಿಗೆ ಅವನದ್ದೇ ಚಿಂತೆ. ದತ್ತನ ಜೀವನ ಸರಿ ಮಾಡಿಬೇಕೆಂಬ ಹೆಬ್ಬಯಕೆ‌. ಆದರೆ ಶರಾವತಿ ದತ್ತನ ಸಾವನ್ನೇ ಬಯಸುವ ಅಕ್ಕ. ದತ್ತ ತುಂಬಾ ನಂಬಿರುವ ಅಕ್ಕ. ಈಗ ಅಮ್ಮನ ಒತ್ತಾಯಕ್ಕೆ ಮದುವೆಗೆ ಒಪ್ಪಿದ್ದಾನೆ. ಶರಾವತಿಯ ಕಿತಾಪತಿ ಅವನ ಮನಸ್ಸಲ್ಲಿ ಮತ್ತೊಮ್ಮೆ ಪ್ರೀತಿಗೆ ಜಾಗವಿಲ್ಲದಂತೆ ಮಾಡಬಹುದು, ಮದುವೆಯೆಂದರೆ ಅಸಹ್ಯ ಹುಟ್ಟುವಂತೆ ಮಾಡಬೇಕು. ಇದೇ ಶರಾವತಿಯ ಉದ್ದೇಶ. ಆದರೆ ಮದುವೆಯ ಕ್ಷಣದಲ್ಲಿ ಆಗುವ ಬದಲಾವಣೆಯೇ ಬೇರೆ.

Colors kannada Drustibottu Written Update on Jan 15th episode

ಚಪ್ಪರ, ಬಳೆ ಶಾಸ್ತ್ರ ಮುಗೀತು

ದತ್ತ ಮದುವೆಯಾಗಲು ಒಪ್ಪಿಕೊಂಡದ್ದೇ ತಾಯಿಗೆ ಖುಷಿ ಕೊಟ್ಟಿದೆ. ಅದರಲ್ಲೂ ಇಂಪನಾಳನ್ನ ಆಯ್ಕೆ ಮಾಡಿದ್ದೇ ದತ್ತನ ತಾಯಿ. ಹೀಗಾಗಿ ಒಪ್ಪಿಕೊಂಡ. ದತ್ತನ ಮದುವೆಯೆಂದರೆ ಸುಮ್ಮನೆ ಆಗೋದಿಲ್ಲ. ಸುತ್ತೂರಿನ ಜನ ಕೂಡ ಈ ಮದುವೆಗೆ ಸೇರುತ್ತಾರೆ. ಮನೆಯೂ ಶೃಂಗಾರಗೊಂಡಿದೆ. ಚಪ್ಪರದ ಶಾಸ್ತ್ರ, ಬಳೆ ಶಾಸ್ತ್ರವೂ ಮುಗಿದಿದೆ.

ಮಂಟಪದಿಂದ ಓಡಿ ಹೋಗಲು ಪ್ಲ್ಯಾನ್

ಇಂಪನಾ ಹಾಗೂ ಮನೆಯಲ್ಲಿ ಸೆಕ್ಯೂರಿಟಿ ತಿಲಕ್ ಪ್ರೀತಿ ಮಾಡುತ್ತಾ ಇದ್ದ ವಿಚಾರ ಶರಾವತಿಗೆ ಗೊತ್ತಾಗಿದ್ದೆ ತಡ, ತನ್ನ ದ್ವೇಷ ತೀರಿಸಿಕೊಳ್ಳಲು ಅವರನ್ನು ಬಳಸಿಕೊಂಡಳು. ನಿಮ್ಮಿಬ್ಬರಿಗೆ ಮದುವೆ ಮಾಡಿಸ್ತೀನಿ, ಆದ್ರೆ ನಾನೇಳಿದಂತೆ ನಾಟಕವಾಡಬೇಕು ಎಂದು ಹೇಳಿದಳು. ಬೇರೆ ದಾರಿ ಇಲ್ಲದೆ ದತ್ತನನ್ನು ಪ್ರೀತಿ ಮಾಡುವ ನಾಟಕವನ್ನೇನೋ ಆಡಿದಳು. ಆದರೆ ಈಗ ಮದುವೆ ಹತ್ತಿರವಾಗ್ತಾ ಇದೆ, ಶರಾವತಿ ಪ್ಲ್ಯಾನ್ ಮಾಡಿ ತಿಲಕ್ ನನ್ನು ಹೊರಗೆ ಕಳುಹಿಸಿದ್ದಾಳೆ.

ದತ್ತನಿಗೆ ನೋವು ಕೊಡುವ ಉದ್ದೇಶ

ಶರಾವತಿಗೆ ದತ್ತನನ್ನ ಕೊಂದೇ ಬಿಡುವಷ್ಟು ಕೋಪವಿದೆ. ನಮ್ಮ ಆಸ್ತಿಗೆ ಇವನೇಕೆ ಒಡೆಯನಾಗಬೇಕು ಎಂಬುದು. ಅಮ್ಮ ಎಲ್ಲಾ ಆಸ್ತಿಯನ್ನು ಅವನ ಹೆಸರಿಗೆ ಬರೆದಿರೋದು ಸ್ವಲ್ಪವೂ ಇಷ್ಟವಿಲ್ಲ. ಮೊದಲ ಪ್ರೀತಿ ಫೇಲ್ ಆಗಿದ್ದಕ್ಕೆ ಮೊದಲೇ ನೊಂದಿರುವ ದತ್ತನಿಗೆ ಮತ್ತೆ ಪ್ರೀತಿಯಲ್ಲಿಯೇ ನೋವು ಕೊಡುವ ಪ್ಲ್ಯಾನ್ ಮಾಡಿದ್ದಾಳೆ ಶರಾವತಿ. ಅದಕ್ಕೆ ಈಗ ಇಂಪನಾಳನ್ನ ಬಳಸಿಕೊಳ್ಳುತ್ತಿದ್ದಾಳೆ.

ಟ್ವಿಸ್ಟ್‌ಗಾಗಿ ಕಾಯ್ತಿದ್ದಾರೆ ಫ್ಯಾನ್ಸ್

ಶರಾವತಿ ಪ್ಲ್ಯಾನ್ ಫೇಲ್ ಆಗಿ ದತ್ತ, ದೃಷ್ಟಿಯ ಕೈ ಹಿಡಿಯುವ ಸಾಧ್ಯತೆಯೂ ಬರಬಹುದು. ದೃಷ್ಟಿಗೆ ದತ್ತನ ಮೇಲೆ ಪ್ರೀತಿ ಇದೆ. ದತ್ತನಿಗೆ ದೃಷ್ಟಿ ಎಂದರೆ ಫ್ರೆಂಡ್ ಆಗಿ ತುಂಬಾ ಇಷ್ಟ. ದತ್ತನ ಜೊತೆಗೆ ದೃಷ್ಟಿ ಇದ್ದರೆ ನೆಮ್ಮದಿಯಾಗಿರ್ತಾನೆ. ಆದರೆ ದೃಷ್ಟಿಯ ಮನೆಯವರು ಇದನ್ನ ಒಪ್ಪಬೇಕಲ್ಲ. ವಿಧಿ ನೊಯಮವೇ ಹಾಗಿದೆ. ಅಂದ್ರೆ ಡೈರೆಕ್ಟರ್ ಎಂಬ ವಿಧಿ ನಿಯಮ. ವೀಕ್ಷಕರು ಕಾಯುತ್ತಿದ್ದ ಗಳಿಗೆ ಈಗ ಬಂದಿದೆ. ಆದರೆ ಟರ್ನ್ ಹೇಗೆ ತೆಗೆದುಕೊಳ್ಳುತ್ತೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Drustibottu serial today episode. Here is the details about Twist in datta's marriage;
Read more about: tv sumanth kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X