ಸದ್ದಿಲ್ಲದೇ ಕನ್ನಡ ಕಿರುತೆರೆಯ ಎರಡು ಧಾರಾವಾಹಿಗಳ ಕತೆ ಮುಕ್ತಾಯ

By ಶೃತಿ ಹರೀಶ್ ಗೌಡ

ಕಲರ್ಸ್ ಕನ್ನಡದಲ್ಲಿ ಮಧ್ಯಾಹ್ನ ಪ್ರಸಾರ ಕಾಣುತ್ತಿದ್ದ ಎರಡು ಧಾರಾವಾಹಿಗಳು ಮುಕ್ತಾಯ ಕಂಡಿವೆ. 'ಗೃಹಪ್ರವೇಶ' ಹಾಗೂ 'ಗಂಡ ಹೆಂಡತಿ' ಧಾರಾವಾಹಿಗಳು ಸಾಕಷ್ಟು ಕುತೂಹಲವನ್ನ ಕೆರಳಿಸಿದವು. ಆದರೆ ಆದಷ್ಟು ಬೇಗನೆ ತಮ್ಮ ಪಯಣವನ್ನು ಮುಗಿಸಿವೆ.

ನಿರುಷಾ, ರವಿಕಿರಣ್, ಶಂಕರ್ ಬಿಲ್ಲೆ, ಪುಷ್ಪಾ ಬೆಳವಾಡಿ, ದಿನಕರ್, ಪದ್ಮಿನಿ, ಸುಪ್ರಿಯಾ 'ಗಂಡ ಹೆಂಡತಿ' ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದರು. 143 ಎಪಿಸೋಡ್ ಪೂರೈಸಿ 'ಗಂಡ ಹೆಂಡತಿ' ಧಾರಾವಾಹಿ ಮುಕ್ತಾಯ ಕಾಣುತ್ತಿದೆ.

Ganda-hendti-gruha-pravesha-serials-end

'ಗೃಹಪ್ರವೇಶ' ಧಾರಾವಾಹಿ ಕೂಡ ವೀಕ್ಷಕರ ಮನ ಸೂರೆಗೊಂಡಿತ್ತು. ಹಳ್ಳಿಯಲ್ಲಿದ್ದ ಮಗಳು ಅಪ್ಪನನ್ನು ಹುಡುಕಿಕೊಂಡು ಬರುವುದೇ ಧಾರಾವಾಹಿ ಕತೆ. ಅಂತೂ ಇಂದು ಕಥಾನಾಯಕಿ ಪಲ್ಲವಿ ತನ್ನ ತಂದೆ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಳು. ಇದೆ ವೇಳೆ ಆತನ ಮನೆಗೆ ಕೆಲಸಕ್ಕೂ ಸಹ ಸೇರಿದಳು. ಆದರೆ ತಾನೇ ಅವನ ಮಗಳು ಎಂದು ಎಲ್ಲೂ ಸಹ ಹೇಳಿಕೊಂಡಿರಲಿಲ್ಲ. ಕೊನೆಗೂ ಪಲ್ಲವಿಯೇ ಸೀತಾರಾಮ್ ಅವರ ಮಗಳು ಎಂಬ ಸತ್ಯವನ್ನು ಎಲ್ಲರಿಗೂ ಸಹ ತಿಳಿಯುವಂತೆ ಮಾಡಲಾಗಿದೆ. ಇದೀಗ ಕತೆ ಕೊನೆಗೊಂಡಿದೆ.

'ಗೃಹಪ್ರವೇಶ' ಹಾಗೂ 'ಗಂಡ ಹೆಂಡತಿ' ಧಾರಾವಾಹಿ ಎರಡು ಒಟ್ಟಿಗೆ ತಮ್ಮ ಜರ್ನಿ ಶುರು ಮಾಡಿ ಒಟ್ಟಿಗೆ ಮುಗಿಸಿವೆ. ಇಷ್ಟು ಬೇಗ ಧಾರಾವಾಹಿ ಮುಕ್ತಾಯ ಆಗುತ್ತದೆ ಎಂದು ವೀಕ್ಷಕರು ಅಂದುಕೊಂಡಿರಲಿಲ್ಲ. ಕಲರ್ಸ್ ಕನ್ನಡದಲ್ಲಿ ಮಧ್ಯಾಹ್ನದ ಹೊತ್ತು ಪ್ರಸಾರವಾದ ಈ ಧಾರಾವಾಹಿಗಳಿಗೆ ತಮ್ಮದೇ ಆದ ಪ್ರೇಕ್ಷಕ ವರ್ಗವಿತ್ತು. ಆದರೆ ದಿಢೀರನೆ ಧಾರಾವಾಹಿಗಳು ಮುಕ್ತಾಯ ಕಂಡಿದ್ದರಿಂದ ಪ್ರೇಕ್ಷಕರಲ್ಲಿ ಸ್ವಲ್ಪ ಬೇಸರವೂ ಇದೆ.

ಕಡಿಮೆ ಅವಧಿಯಲ್ಲೇ ಮುಕ್ತಾಯ

ಯಾವುದೇ ಧಾರಾವಾಹಿ ಶುರುವಾದರೆ ಆ ಧಾರಾವಾಹಿಗಳು ಎರಡು ವರ್ಷವಾದರೂ ನಡೆಯುತ್ತವೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. 'ಪುಟ್ಟಗೌರಿ ಮದುವೆ', 'ಮಂಗಳ ಗೌರಿ ಮದುವೆ' ಸೇರಿದಂತೆ ಹೀಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ಧಾರಾವಾಹಿಗಳು ಕಡಿಮೆ ಅವಧಿಯಲ್ಲಿ ಮುಗಿದ ಉದಾಹರಣೆ ಕಡಿಮೆ. ಆದರೆ ಈಗ ಮಧ್ಯಾಹ್ನದ ವೇಳೆ ಪ್ರಸಾರ ಕಂಡ 'ಗೃಹಪ್ರವೇಶ' ಹಾಗೂ 'ಗಂಡ ಹೆಂಡತಿ' ಎರಡು ಧಾರಾವಾಹಿಗಳು ಬಹಳ ಬೇಗ ಕೊನೆಯಾಗಿದ್ದು ವೀಕ್ಷಕರಿಗೆ ಅಚ್ಚರಿ ಉಂಟು ಮಾಡಿದೆ.

Ganda-hendti-gruha-pravesha-serials-end

ವೀಕ್ಷಕರ ಬೇಸರ

ಎಲ್ಲೂ ಕೂಡ ಕಥೆಯನ್ನು ಎಳೆಯದೆ ಆದಷ್ಟು ಬೇಗ ಧಾರಾವಾಹಿಯನ್ನು ಮುಗಿಸಿರುವುದಕ್ಕೆ ಒಂದಷ್ಟು ಮಂದಿ ಖುಷಿ ವ್ಯಕ್ತಪಡಿಸಿದ್ದಾರೆ. ಇಷ್ಟು ಬೇಗನೇ ಧಾರಾವಾಹಿ ಮುಗಿಸುತ್ತಿದ್ದಾರೆ ಎಂದರೆ ಆಶ್ಚರ್ಯ ಎಂದು ಸಹ ಹೇಳಿದ್ದಾರೆ. ತಂದೆಯನ್ನು ಹುಡುಕಿಕೊಂಡು ಬಂದ ಮಗಳಿಗೆ ಇಷ್ಟು ಬೇಗ ತಂದೆ ಸಿಕ್ಕಿದ್ದು ಕೂಡ ಆಶ್ಚರ್ಯವೇ. ಕೆಲ ಧಾರಾವಾಹಿಗಳಲ್ಲಿ ಇದನ್ನೇ ಬಹಳ ದಿನಗಳ ತನಕ ಎಳೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿ ಆ ತಪ್ಪು ಮಾಡಲಿಲ್ಲ. ವೀಕ್ಷಕರ ತಾಳ್ಮೆ ಪರೀಕ್ಷಿಸಲಿಲ್ಲ.

ಪಲ್ಲವಿ ಆಸೆ ಈಡೇರಿತು

'ಗೃಹಪ್ರವೇಶ' ಧಾರಾವಾಹಿಯಲ್ಲಿ ಕೊನೆಯ ಎಪಿಸೋಡ್‌ನಲ್ಲಿ ಪಲ್ಲವಿ ನಿಜವಾಗಿಯೂ ಸೀತಾರಾಮ್ ಮಗಳು ಎನ್ನುವುದು ಬಹಿರಂಗವಾಗಿದೆ. ಸೀತಾರಾಮ್, ಪಲ್ಲವಿಯನ್ನ ಮಗಳಂತೆ ಕಾಣುತ್ತಿದ್ದರು. ಆದರೆ ಕೊನೆಗೆ ಅದೇ ಸತ್ಯವಾಗಿದೆ. ಮನೆ ಕೆಲಸಕ್ಕೆ ಬಂದದ್ದು ಸೀತಾರಾಮ್ ಮಗಳು ಎನ್ನುವುದು ಮನೆಯವರೆಲ್ಲರಿಗೂ ಗೊತ್ತಾಗಿದೆ. ಇನ್ನು ಮಿಥುನ್ ಯಾಕೆ ರಾಗಿಣಿ ಮದುವೆಯಾಗಲು ಒಪ್ಪಲಿಲ್ಲ? ಅನ್ನೋದು ಬಹಿರಂಗವಾಗಿದೆ. ಈ ಮೂಲಕ 'ಗೃಹಪ್ರವೇಶ' ಧಾರಾವಾಹಿ ಅಂತ್ಯ ಕಂಡಿದೆ.

ಸ್ವಾತಿಯನ್ನು ಸೊಸೆಯಾಗಿ ಒಪ್ಪಿಕೊಂಡ ಕುಟುಂಬ

'ಗಂಡ ಹೆಂಡತಿ' ಧಾರಾವಾಹಿ ಸ್ವಾತಿ ಹಾಗೂ ಮುರುಳಿ ಯಾವ ರೀತಿ ಮದುವೆಯಾದರು ಎನ್ನುವುದು ಕೊನೆಗೆ ಗೊತ್ತಾಗಿದೆ. ಇದೇ ವೇಳೆ ಸ್ವಾತಿಯ ತಂದೆ ಮುರಳಿಯ ಮನೆಗೆ ಬಂದಿದ್ದು ಎಲ್ಲರೂ ಸಹ ಸಂತಸದಿಂದ ಇದ್ದಾರೆ. ನಂತರ ಸ್ವಾತಿಯನ್ನು ಇಡೀ ಮನೆ ಸೊಸೆ ಎಂದು ಒಪ್ಪಿಕೊಂಡಿದೆ. ಈ ಮೂಲಕ 'ಗಂಡ ಹೆಂಡತಿ' ಧಾರವಾಹಿಯು ಸಹ ಮುಕ್ತಾಯವಾಗಿದೆ. ಇಷ್ಟು ಬೇಗ ಧಾರಾವಾಹಿ ಮುಕ್ತಾಯವಾದದ್ದು ಮಾತ್ರ ಕೆಲವರಲ್ಲಿ ಬೇಸರ ತರಿಸಿದೆ.

More from Filmibeat

English summary
Ganda hendti and gruha pravesha serials to go off-air soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X