Geetha: ಕೊನೆಗೂ ಗೀತಾಗೆ ಯಾರ ಮಗಳು ಎಂಬ ಸತ್ಯ ತಿಳಿಯುವ ಕಾಲ ಬಂದೇ ಬಿಡ್ತು!

By ಶೃತಿ ಹರೀಶ್ ಗೌಡ

ಗೀತಾ ಧಾರಾವಾಹಿ ಈಗ ಕುತೂಹಲದ ಘಟ್ಟವನ್ನು ತಲುಪಿದೆ. ಯಾಕೆಂದರೆ ಗೀತಾಗೆ ತಾನು ಸುಶೀಲಾ ಹಾಗೂ ಶ್ರೀನಿವಾಸ್ ಮಗಳು ಅಲ್ಲ ಎಂಬ ಸತ್ಯ‌ ಗೊತ್ತಾಗುವ ಕಾಲ ಬಂದಿದೆ. ಗೀತಾ ಅತ್ತೆಯ ಮನೆಯಲ್ಲಿ ಶಾಸ್ತ್ರ ಎಲ್ಲವನ್ನು ಮುಗಿಸಿಕೊಂಡು ತಂದೆಯ ಮನೆಗೆ ಬಂದಿದ್ದಾಳೆ. ತಂದೆಯ ಮನೆಯಲ್ಲಿರುವ ಗೀತಾ ಹಾಗೂ ವಿಜಿಗೆ ಅತಿಥಿ ಸತ್ಕಾರ ಜೋರಾಗಿಯೇ ನಡೆದಿದೆ.

ಆದರೆ ಭಾನುಮತಿ ಮಾತ್ರ ಹೇಗಾದರೂ ಮಾಡಿ ಗೀತಾ, ಚಂದ್ರಿಕಾ ಹಾಗೂ ಸುಧಾರಾಣಿಗೆ ನೋವನ್ನು ಕೋಡಬೇಕು ಎಂದು ಕೊಂಡು ಶ್ರೀನಿವಾಸ್ ಕಡೆಯಿಂದ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿಸಿದ್ದಾಳೆ. ಮೊದಲೇ ಶ್ರೀನಿವಾಸ್ ಭಾನುಮತಿಗೆ ಗೀತಾ ನನ್ನ ಮಗಳಲ್ಲ ಎಂದು ಹೇಳಿದ್ದನು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭಾನುಮತಿ ಸತ್ಯವನ್ನು ಎಲ್ಲರಿಗೂ ತಿಳಿಸುವ ರೀತಿ ಮಾಡುತ್ತಿದ್ದಾಳೆ.

Colors Kannada Geetha serial written Update on July 14th episode

ಸುಧಾರಾಣಿಗೆ ಭಾನುಮತಿ ಏನು ಮಾಡುತ್ತಿದ್ದಾಳೆ ಎಂಬುದು ಅರ್ಥವಾಗುತ್ತಿಲ್ಲ ಇದರಿಂದಾಗಿ ಕಂಗಾಲಾಗಿ ಹೋಗಿದ್ದಾಳೆ. ಕೊನೆಯ ತನಕವೂ ಸಹ ಸುಧಾರಾಣಿಗೆ ಭಾನುಮತಿ ಪ್ಲಾನ್ ಏನು ಎಂಬುವುದೇ ಅರ್ಥವಾಗಿಲ್ಲ. ಇನ್ನು ಚಂದ್ರಿಕಾ ನಾನು ಇದೆಲ್ಲವನ್ನು ನೋಡಿಕೊಳ್ಳುತ್ತೇನೆ ಎಂದು ಸಮಾಧಾನ ಮಾಡಿದ್ದಾಳೆ. ಸುಶೀಲ ಗೆ ತನ್ನ ಮಗಳು ಆ ಮನೆಯಲ್ಲಿ ಹೇಗೆ ಇದ್ದಾಳೆ ಎಂಬ ಬಗ್ಗೆ ಚಿಂತೆಯಾಗಿದೆ.

ಭಾನುಮತಿ ಈಗ ಒಂದು ಪ್ಲಾನ್ ಮಾಡಿದ್ದಾಳೆ, ಯಾಕೆಂದರೆ ಮಾಡಿರುವ ಎಲ್ಲಾ ಪ್ಲಾನ್ ಗಳು ಸಹ ವರ್ಕೌಟ್ ಆಗದೇ ಇರುವ ಹಿನ್ನೆಲೆಯಲ್ಲಿ. ಒಂದು ದೊಡ್ಡ ಆಘಾತವನ್ನು ಕೊಡಬೇಕು ಎಂದುಕೊಂಡಿದ್ದಾಳೆ. ಇದಕ್ಕಾಗಿ ಶ್ರೀನಿವಾಸ್ ಕೈಯಲ್ಲಿ ಇರುವ ಸತ್ಯವಾನ್ನ ಹೇಳಿಸಬೇಕು ಎಲ್ಲರೂ ಸಹ ಶಾಕ್‌ಗೆ ಒಳಗಾಗಬೇಕು ಎಂದುಕೊಂಡಿದ್ದಾಳೆ.

ಗೀತಾ ಗೆ ಶಾಸ್ತ್ರವೆನ್ನೆಲ್ಲಾ ಮಾಡಿ ಗಂಡನ ಮನೆಗೆ ಕಳುಹಿಸಲು ಸಿದ್ಧತೆಯನ್ನು ನಡೆಸಲಾಗಿದೆ. ಇನ್ನು ಮನೆಗೆ ಬಂದಂತಹ ಶ್ರೀನಿವಾಸ್ ಗೀತಾ ಬಳಿ ನೀನು ನನ್ನ ಮಗಳಲ್ಲ ಸಾಕು ಮಗಳು ಎಂಬ ಸತ್ಯವನ್ನ ಹೇಳಿದ್ದಾನೆ. ಈ ಸತ್ಯವನ್ನು ಗೀತಾ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿರುವ ವಿಜಿ, ಚಂದ್ರಿಕಾ ಹಾಗೂ ಸುಧಾರಣೆ, ಶ್ರೀನಿವಾಸ್ ಹೇಳಿದ ಮಾತುಗಳನ್ನ ಕೇಳಿ ಶಾಕ್‌ಗೆ ಒಳಗಾಗಿದ್ದಾರೆ.

ನಾನು ನೀವು ಹೇಳುವ ಯಾವುದೇ ಮಾತನ್ನು ನಂಬುವುದಿಲ್ಲ ನನ್ನ ತಾಯಿ ಸುಶೀಲನೆ ಎಂದು ಗೀತಾ ಪದೇ ಪದೇ ಹೇಳುತ್ತಿದ್ದಾಳೆ. ಆದರೆ ಶ್ರೀನಿವಾಸ್ ನಾವು ನಿನ್ನನ್ನು ಸಾಕಿದ್ದೇವೆ ನೀನು ನಮ್ಮ ಸಾಕು ಮಗಳೇ ಹೊರೆತು ನಾವು ಹೆತ್ತ ಮಗಳಲ್ಲ ಇದು ಸತ್ಯ ಎಂದು ಹೇಳಿದ್ದಾನೆ. ಗೀತಾ ಮಾತ್ರ ಶ್ರೀನಿವಾಸ ಮಾತನ್ನ ನಂಬುತ್ತಿಲ್ಲ.

ಶ್ರೀನಿವಾಸ್ ಮಾತನ್ನು ನಂಬದ ಗೀತಾಗೆ ಶ್ರೀನಿವಾಸ್ ಸುಶೀಲಾ ಬಳಿ ಹೋಗಿ ನೀನು ಆಣೆ ಮಾಡಿ ಕೇಳು. ಅವಳೇ ನಿನ್ನ ಬಳಿ ಎಲ್ಲಾ ಸತ್ಯವನ್ನು ಹೇಳುತ್ತಾಳೆ ಎಂದು ಹೇಳಿದ್ದಾನೆ. ಗೀತಾ ಸುಶೀಲಾ ಬಳಿ ಬಂದು ಅಮ್ಮ ಅಪ್ಪ ಹೇಳುತ್ತಿರುವುದು ಸತ್ಯನ ಎಂದು ಕೇಳಿದ್ದಾಳೆ. ಸುಶೀಲಾಗೆ ಮಾತ್ರ ಏನನ್ನ ಹೇಳಬೇಕು ಹೇಗೆ ಸಮಾಧಾನ ಮಾಡಬೇಕು ಎಂಬುದು ಮಾತ್ರ ತಿಳಿದಿಲ್ಲ. ಚಂದ್ರಿಕಾ ಹಾಗೂ ಸುಧಾರಾಣಿ ಸುಶೀಲಾ ಮಾತಿಗಾಗಿ ಕಾಯುತ್ತಾ ಇದ್ದಾರೆ.

ಈಗ ಗೀತಾಳ ಭವಿಷ್ಯ ಸುಶೀಲ ಕೈನಲ್ಲಿ ಇದೆ. ಚಂದ್ರಿಕಾನೇ ಗೀತಾಳ ತಾಯಿ ನನಗೆ ಚಂದ್ರಿಕಾ ಮಗುವನ್ನ ಕೊಟ್ಟಿದಳು ಎಂದು ಸತ್ಯವಣ್ಣ ಹೇಳಿಬಿಟ್ಟರೆ. ಹೇಗೋ ಅತ್ತೆಯ ಮಗಳನ್ನು ಮದುವೆಯಾದೆ ಎಂಬ ಸಂತೋಷ ವಿಜಿಗೆ ಒದಗಿ ಬರುತ್ತದೆ. ಚಂದ್ರಿಕಾಗೆ ಗೀತಾಳೆ ನನ್ನ ಮಗಳು ಎಂಬ ಸತ್ಯ ತಿಳಿಯಲಿದೆ. ಕಳೆದು ಹೋದ ನನ್ನ ಮಗಳು ತಿರುಗಿ ಸಿಕ್ಕಿದಳು ಎಂಬ ಸಂತೋಷವಾಗುತ್ತದೆ. ಈಗ ಸುಶೀಲ ಏನನ್ನ ಹೇಳುತ್ತಾಳೆ ಎಂಬುದರ ಮೇಲೆ ಗೀತಾ ಧಾರಾವಾಹಿಯ ಕುತೂಹಲ ಅಡಗಿ ನಿಂತಿದೆ.

More from Filmibeat

English summary
Colors Kannada serial geetha here details about geetha knows the truth, bhanumati starts the new game, chandrika, sudharani shocks about Truth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X