Geetha: ಕೊನೆಗೂ ಚಂದ್ರಿಕಾಳ ಮಗಳು ಸಿಕ್ಕೇಬಿಟ್ಟಳು: ಭಾನುಮತಿಗೆ ಇನ್ಮುಂದೆ ಇದೆಯಂತೆ ಮಾರಿ ಹಬ್ಬ!

By ಶೃತಿ ಹರೀಶ್ ಗೌಡ

ಸುಶೀಲಾ ಶ್ರೀನಿವಾಸ್ ಮಾಡಿದ ಎಡವಟ್ಟಿಗೆ ಚನ್ನಾಗಿ ಬೈಯುತ್ತಾ ಇದ್ದಾಳೆ. ಅಯ್ಯೋ ಪಾಪಿ ನನ್ನ ಮಗಳ ಜೀವನದಲ್ಲಿ ಯಾಕೆ ಎಲ್ಲಾ ಸರಿಯಾಗಿದ್ದ ವೇಳೆ ಈ ರೀತಿ ಮಾಡಿ ಬಿಟ್ಟೆ ಎಂದೆಲ್ಲ ಬೈದಿದ್ದಾಳೆ. ಅಪ್ಪ ನನ್ನ ಮೇಲಿನ ಕೋಪಕ್ಕೆ ಈ ರೀರಿಯಾಗಿ ಹೇಳಿದ್ದಾರೆ ಅಲ್ವ ಎಂದು ಗೀತಾ ತನಗೆ ತಾನೇ ಸಮಾಧಾನಪಟ್ಟುಕೊಳ್ಳಲು ಹೋಗಿದ್ದಾಳೆ. ಆದರೆ ನೀನು ನನ್ನ ಮಗಳು ಅಲ್ಲ ಎಂದು ಪದೇ ಪದೇ ಶ್ರೀನಿವಾಸ್ ಹೇಳಿದಾಗ ಅಕ್ಷರ ಸಹ ಗೀತಾ ಕುಸಿದು ಹೋಗಿದ್ದಾಳೆ.

ಸುಶೀಲಾ ಸಹ ಹಣೆ ಮಾಡಲು ಹಿಂದೇಟು ಹಾಕಿದಾಗ ಗೀತಾಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಗಿದೆ. ಗೀತಾ ವಿಜಯನ ಸಮಾಧಾನ ಮಾಡಿದ್ದಾನೆ. ನೀನು ಬಡ ಮನೆಯ ಹುಡುಗಿ ಎಂದ ತಕ್ಷಣವೇ ನಾನು ನಿನ್ನನ್ನ ಪ್ರೀತಿ ಮಾಡಲು ಶುರು ಮಾಡಿದೆ. ಮದುವೆಯಾದ ಮೇಲೆ ನಿನ್ನನ್ನ ಬಿಟ್ಟುಕೊಡುವ ಮಾತೇ ಇಲ್ಲ ಎಂದಿದ್ದಾನೆ. ಆದರೂ ಸಹ ಗೀತಾಗೆ ನಾನು ಯಾರ ಮಗಳು ಎಂಬ ಪ್ರಶ್ನೆ ಕಾಡಲು ಶುರುವಾಗಿದೆ.

Colors Kannada Geetha serial Written Update on july 15th episode

ಇಷ್ಟೇ ಅಲ್ಲದೆ ಗೀತಾಳನ್ನ ಮನೆಯಿಂದ ಕಳಿಸುವ ಶಾಸ್ತ್ರ ನಡೆಯುವಾಗಲೇ ಶ್ರೀನಿವಾಸ್ ಈ ಮಾತನ್ನ ಹೇಳಿದ್ದಕ್ಕೆ ಅಕ್ಕ-ಪಕ್ಕದ ಮನೆಯವರು ಸಹ ಗುಸು-ಗುಸು ಮಾತನಾಡಿಕೊಳ್ಳುತ್ತಿದ್ದಾರೆ.‌ ಇದೆಲ್ಲವನ್ನು ನೋಡುತ್ತಿರುವ ಭಾನುಮತಿಗೆ ತುಂಬಾನೆ ಖುಷಿಯಾಗಿದೆ ನಾನು ಕೊಟ್ಟ ಏಟು ಸರಿಯಾಗಿ ಪೆಟ್ಟನ್ನು ಕೊಟ್ಟಿದೆ ಎಂದುಕೊಂಡು ಸುಮ್ಮನೇ ನಿಂತುಕೊಂಡಿದ್ದಾಳೆ. ಎಲ್ಲರೂ ಏನೇನು ಮಾತನಾಡುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದಾಳೆ.

ಗೀತಾಗೆ ಯಾರೂ ಇಲ್ಲ ಎಂದು ತಿಳಿದುಕೊಳ್ಳಬೇಡಿ ಗೀತಾ ಈಗ ನಮ್ಮ ಮನೆಯ ಸೊಸೆ. ಸೊಸೆ ಮಾತ್ರವಲ್ಲ ನನ್ನ ಮಗಳು ಕೂಡ ಎಂದು ಸುಧಾರಾಣಿ ಗೀತಾ ಬೆಂಬಲಕ್ಕೆ ನಿಂತಿದ್ದಾಳೆ. ಈಗ ನೀನು ನಮ್ಮ ಮನೆಯ ಸೊಸೆಯಾಗಿದ್ದು ಯಾರು ಕೂಡ ನಿನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದ್ದಾಳೆ. ಇದೇ ವೇಳೆ ಸಿತಾರಾ ಮಧ್ಯ ಪ್ರವೇಶ ಮಾಡಿದ್ದಾನೆ. ಆದರೂ ಸಹ ಗೀತಾ ಯಾರ ಮಗಳು ಎಂದು ತಿಳಿದುಕೊಳ್ಳಬೇಕು ತಾನೆ ಎಂದಿದ್ದಾನೆ ಇದಕ್ಕೆ ವಿಜಿ ಸರಿಯಾಗಿ ಬೈದಿದ್ದಾನೆ.

ಭಾನುಮತಿ ಏನನ್ನು ಮಾತನಾಡದೆ ನಿಂತಿದ್ದರೆ ನಾನು ವಿಜಿಯ ಕಣ್ಣಲ್ಲಿ ಕೆಟ್ಟವಳು ಆಗುತ್ತೇನೆ ಎಂದು ತಿಳಿದುಕೊಂಡು. ಹೌದು ಗೀತಾ ಈಗ ನಮ್ಮ ಮನೆಯ ಸೊಸೆ ಅವಳಿಗೆ ಯಾರು ಇಲ್ಲದಿದ್ದರೆ ಏನಂತೆ, ನಾವು ಅವಳನ್ನ ಒಪ್ಪಿಕೊಂಡಿ ಆಗಿದೆ ಎಂದಿದ್ದಾಳೆ. ಎಲ್ಲರ ಮಾತನ್ನ ಕೇಳುತ್ತಿರುವ ಗೀತಾ ಗೆ ಮಾತ್ರ ತಾನು ಯಾರ ಮಗಳು ಎಂಬ ಪ್ರಶ್ನೆ ಎದ್ದಿದೆ ನನಗೆ ಯಾಕೆ ದೇವರು ಈ ರೀತಿಯಲ್ಲ ಮಾಡುತ್ತಾನೆ ಎಂದು ಕಣ್ಣೀರನ್ನು ಹಾಕುತ್ತಿದ್ದಾಳೆ.

ಸಿತಾರಾ ಭಾನುಮತಿಗೆ ಕಿವಿಯನ್ನ ಊದಿದ್ದಾನೆ ನಿನ್ನ ತಂದೆ ಯಾರು, ತಾಯಿ ಯಾರು ಎಂದು ಗೀತಾಗೆ ಕೇಳು ಎಂದಿದ್ದಾನೆ. ಇದಕ್ಕಾಗಿ ಅವಳಿಗೆ ಅವಮಾನವನ್ನ ಮಾಡಲು ಭಾನುಮತಿ ತಯಾರಾಗಿದ್ದಾಳೆ. ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳುವಾಗ ಸುಶೀಲಾಗೆ ಅದನ್ನು ತಡೆದುಕೊಳ್ಳಲು ಆಗಲೇ ಇಲ್ಲ. ಎಲ್ಲರ ಮುಂದೆ ಬಂದಂತಹ ಚಂದ್ರಿಕಾ ಕೊನೆಗೂ ಸಹ ಸತ್ಯವನ್ನು ಬಾಯಿಬಿಟ್ಟಿದ್ದಾಳೆ.

ಗೀತಾ ಇದೇ ಮನೆಯ ರಕ್ತವನ್ನು ಹಂಚಿಕೊಂಡು ಹುಟ್ಟಿರುವ ಕೂಸು, ಈ ಮನೆಯ ಕುಡಿಯಾದ ಸೂರ್ಯಪ್ರಕಾಶ್ ತಂಗಿಯ ಮಗಳು. ಚಂದ್ರಿಕಾಳ ಮಗಳು ಈ ಗೀತಾ ಎಂದು ಕೊನೆಗೂ ಸುಶೀಲ ಸತ್ಯವನ್ನ ಎಲ್ಲರ ಮುಂದೆ ಬಾಯಿಬಿಟ್ಟಿದ್ದಾಳೆ. ಸುಶೀಲ ಹೇಳಿರುವ ಸತ್ಯವನ್ನೆಲ್ಲ ಕೇಳುತ್ತಿರುವವರು ಎಲ್ಲರೂ‌ ಸಹ ಶಾಕ್ ಹಾಕಿದ್ದಾರೆ. ಚಂದ್ರಿಕಾ ನಾನು ಹೇಳುತ್ತಿರುವುದೆಲ್ಲವೂ ಸತ್ಯ ಎಂದಿದ್ದಾಳೆ. ಎಲ್ಲರೂ ಗೀತಾಗೆ ಅವಮಾನ ಮಾಡುತ್ತಿದ್ದಾರೆ ಎಂದ ಕೂಡಲೇ ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಆಗಲಿಲ್ಲ ಅದಕ್ಕಾಗಿ ಸತ್ಯವನ್ನು ಹೇಳಿದ್ದೇನೆ ಎಂದಿದ್ದಾಳೆ.

ಕಳೆದು ಹೋಗಿದ್ದ ಮಗಳು ಸಿಕ್ಕ ಖುಷಿಯಲ್ಲಿ ಚಂದ್ರಿಕಾ ಇದ್ದಾಳೆ ಯಾಕೆಂದರೆ ನನ್ನ ಮಗಳು ಎಲ್ಲಿದ್ದಾಳೋ ಎಂದು ಇಷ್ಟು ದಿನ ಕೊರಗುತ್ತಿದ್ದಳು. ಈಗ ತನ್ನ ಅಳಿಯನನ್ನೇ ಮಗಳು ಮದುವೆಯಾಗಿರುವುದು ಚಂದ್ರಿಕಾಗೆ ತುಂಬಾ ಖುಷಿಯಾಗಿದೆ. ಭಾನುಮತಿ ಗೀತಾಗೆ ಅವಮಾನ ಮಾಡಬೇಕು ಎಂದುಕೊಂಡಿದೆಲ್ಲ ಸಹ ಗೀತಾಗೆ ವರದಾನವಾಗಿದೆ.

More from Filmibeat

English summary
Colors Kannada serial geetha here details about sushila telling truth chandrika's daughter geetha all are shocking
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X