Geetha: ಎಲ್ಲಾ ವಿಘ್ನಗಳನ್ನು ಮೀರಿ ನೆರವೇರಿತು ಗೀತಾ -ವಿಜಿ ಮದುವೆ: ಭಾನುಮತಿಗೆ ಮಾತ್ರ ಸಂಕಟ

By ಶೃತಿ ಹರೀಶ್ ಗೌಡ

ಗೀತಾ ಹಾಗೂ ವಿಜಿಯ ಮದುವೆ ಸುಸೂತ್ರವಾಗಿ ನೆರವೇರಿದೆ.‌ ರಾಮಾಚಾರಿಯ ಸಾರಥ್ಯದಲ್ಲಿ ಮದುವೆ ನಡೆದಿದೆ. ಭಾನುಮತಿ ಮಾಡಿದ ಪ್ಲ್ಯಾನ್ ಫ್ಲಾಪ್ ಆಗಿದೆ. ಈಗ ಏನಿದ್ದರೂ ಭಾನುಮತಿಗೆ ಗೀತಾ ಕಾಟ ಕೊಡುವ ಕಾಲ ಬಂದಿದೆ. ಹೇಗೋ ರೌಡಿಗಳನ್ನೆಲ್ಲ ಒಡೆದು ಹಾಕಿರುವ ರಾಮಾಚಾರಿ, ವಿಜಿಯನ್ನು ಮೇಲಕ್ಕೆ ಎತ್ತಿ ಮದುವೆ ಮಂಟಪಕ್ಕೆ ಕರೆದುಕೊಂಡು ಬಂದಿದ್ದಾನೆ. ಭಾನುಮತಿಗೆ ಬಹಳ ಬೇಸರವಾಗಿದೆ.

ಸಿತಾರಾಗೂ ಸಹ ಇನ್ಮುಂದೆ ಮನೆಯಲ್ಲಿ ಎನು ಆಗುತ್ತದೋ ಎಂಬ ಆತಂಕ ಹೆಚ್ಚಾಗಿದೆ. ಭಾನುಮತಿ ಹೇಗಿದ್ದರೂ ಸಹ ವಿಜಿ ಬರುವುದಿಲ್ಲ ಎಂದು ಖುಷಿಯಾಗಿ ಇದ್ದಳು. ಇನ್ನು ಮದುವೆ ಮಂಟಪದಲ್ಲಿ ಸುಧಾರಾಣಿಗೆ ಚುಚ್ಚಿ ಮಾತನಾಡಿದ್ದಳು. ಮದುವೆ ನಡೆಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದವರು ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ‌ ಇಲ್ಲವೋ ಎಂದು‌ ಸಹ ಹೇಳಿದ್ದಳು.

Geetha-Kannada-serial

ಸುಧಾರಾಣಿ ಇದೇ ವೇಳೆ ನಾನು ದೇವರ ಮೇಲೆ ನಂಬಿಕೆಯನ್ನು ಇಟ್ಟಿದ್ದೇನೆ . ನನ್ನ ಮಗ ಮುಹೂರ್ತ ಮೀರುವ ಸಮಯಕ್ಕೆ ಮುಂಚೆ ಬಂದು ತಾಳಿಯನ್ನ ಕಟ್ಟುತ್ತಾನೆ ಎಂದು ಭಾನುಮತಿ ಬಳಿ‌ ಹೇಳಿದ್ದಳು. ಅದರಂತೆ ರಾಮಾಚಾರಿ ತಾನು ಸುಧಾರಣಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾನೆ. ತನ್ನದೇ ಪೌರೋಹಿತ್ಯದಲ್ಲಿ ವಿಜಿ ಹಾಗೂ ಗೀತಾಗೆ ಮದುವೆ ಮಾಡಿಸಿದ್ದಾನೆ. ಸದ್ಯಕ್ಕೆ ವಿಜಿ ಹಾಗೂ ಗೀತಾ ಮದುವೆ ಸುಖಾಂತ್ಯ ಕಂಡಿದೆ.

ಕೊನೆಗೂ ಗೀತಾ ವಿಜಿ ಮದುವೆ

ಗೀತಾ ಮತ್ತು ವಿಜಿ ಮದುವೆ ಎಷ್ಟೋ ಸಲ ಡೇಟ್ ಫಿಕ್ಸ್ ಆಗಿ ನಿಂತು ಹೋಗಿತ್ತು. ಇನ್ನು ವಿಜಿ, ಗೀತಾ ಬೇಡ ಎಂದು ದೂರವಾಗಿದ್ದನು. ಎಲ್ಲಾ ಅಡೆ ತಡೆಗಳನ್ನು ದಾಟಿ ಈಗ ಗೀತಾ ಹಾಗೂ ವಿಜಿ ಮದುವೆ ಸುಖಾಂತ್ಯವನ್ನು ಕಂಡಿದೆ. ಭಾನುಮತಿ, ಗೀತಾ ಜೊತೆ ವಿಜಿ ಮದುವೆಯಾಗಬಾರದು ಎಂದು ವಿಜಿಯನ್ನೇ ಕಿಡ್ನ್ಯಾಪ್ ಮಾಡಿಸಿದ್ದಳು. ಆದರೆ ರಾಮಾಚಾರಿ, ಭಾನುಮತಿಯ ಪ್ಲಾನ್ ಎಲ್ಲಾ ಉಲ್ಟಾ ಮಾಡಿದ್ದಾನೆ.

Geetha-Kannada-serial

ಇಬ್ಬರ ಮದುವೆ ಮಾಡಿಸಿದ ರಾಮಾಚಾರಿ

ಮದುವೆ ಮನೆಗೆ ಬಂದಂತಹ ರಾಮಾಚಾರಿ ತನ್ನ ಮಧ್ಯಸ್ಥಿಕೆಯಲ್ಲೇ ಮದುವೆ ಮಾಡಿಸಿದ್ದಾನೆ. ಕೊನೆಗೂ ಗೀತಾ, ವಿಜಯ ಮೇಲೆ ಇಟ್ಟಿದ್ದ ನಂಬಿಕೆ ಸಹ ಉಳಿದುಕೊಂಡಿದೆ. ವಿಜಿ ಹಾಗೂ ಗೀತಾ ಇಬ್ಬರೂ ದೊಡ್ಡವರ ಆಶೀರ್ವಾದವನ್ನು ತೆಗೆದುಕೊಂಡಿದ್ದು ಖುಷಿಯಿಂದ ಇದ್ದಾರೆ. ಈ ವೇಳೆ ವಿಜಿ, ತಂದೆ ಶ್ರೀನಿವಾಸ್ ಆಶೀರ್ವಾದವನ್ನು ಮಾಡಲು ಹಿಂಜರಿದಾಗ ಅಲ್ಲೇ ಇದ್ದಂತಹ ಸುನಂದ ಕೈಹಿಡಿದು ಎಳೆದಾಗ ನವಜೋಡಿಗೆ ಶುಭ ಹಾರೈಸಿದ್ದಾರೆ.

ಸಿತಾರಾಗೆ ಶುರುವಾಯ್ತು ಭಯ

ಭಾನುಮತಿ ಮಾಡಿದ ಪ್ಲ್ಯಾನ್ ಎಲ್ಲಾ ಉಲ್ಟಾ ಆಗಿ ಗೀತಾ ಹಾಗೂ ವಿಜಿ ಮದುವೆ ಆಗಿದ್ದಾರೆ. ಇನ್ಮುಂದೆ ನಮಗೆ ಏನಿದ್ದರೂ ಸಹ ಜೈಲೂಟವೇ ಗ್ಯಾರಂಟಿ ಎಂದು ಸಿತಾರಾ ಭಯಪಟ್ಟುಕೊಂಡಿದ್ದಾನೆ. ಇಷ್ಟು ದಿನ ಹೊರಗಿನಿಂದಲೇ ಇದ್ದು ನಮ್ಮನ್ನ ಆಟ ಆಡಿಸುತ್ತಿದ್ದಳು. ಈಗ ನಮ್ಮ ಮನೆಗೆ ಬಂದು ನಮ್ಮನ್ನ ಆಟ ಆಡಿಸುತ್ತಾಳೆ. ಯಾವುದಕ್ಕೂ ನಾವು ಗಂಟುಮೂಟೆ ಕಟ್ಟೋಣ ಎಂದು ತನ್ನ ತಂಗಿ ಬಳಿ ಸಿತಾರಾ ಹೇಳಿದ್ದಾನೆ.

ಮನೆ ತುಂಬಿಸಿಕೊಳ್ಳುವ ಶಾಸ್ತ್ರ

ವಿಜಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ತಿಳಿದು ಮನೆಯವರು, ‌ಸ್ನೇಹಿರತರೆಲ್ಲರೂ ಸಹ ಬೇಸರ ಮಾಡಿಕೊಂಡಿದ್ದರು. ಈಗ ವಿಜಿಯ ಮದುವೆ ಸುಸೂತ್ರವಾಗಿ ನೆರವೇರಿದೆ. ವಿಜಿ ಹೇಗೋ ರಾಮಾಚಾರಿಯ ಸಹಾಯದಿಂದ ಮದುವೆ ಮಂಟಪಕ್ಕೆ ತಲುಪಿ ಗೀತಾಳ ಕುತ್ತಿಗೆಗೆ ತಾಳಿಯನ್ನ ಕಟ್ಟಿದ್ದಾನೆ. ಈ ವೇಳೆ ಅವನ ಸ್ನೇಹಿತರ ಹರ್ಷ ಮುಗಿಲು ಮುಟ್ಟಿತ್ತು.

ವಿಜಿ ಎಂದರೆ ಸರ್ವಸ್ವ ಎಂದ ಗೀತಾ

ಮನೆ ತುಂಬಿಸಿಕೊಳ್ಳುವ ಶಾಸ್ತ್ರದ ವೇಳೆ ವಿಜಿ ಹಾಗೂ ಗೀತಾಳ ಕಾಲನ್ನು ಸ್ನೇಹಿತರು ಎಳೆದಿದ್ದಾರೆ. ನಿನಗೆ ವಿಜಿ ಎಂದರೆ ಏನು ಎಂದು ಹೇಳು ಎಂದಾಗ, ‌ ವಿಜಿ ಎಂದರೆ ನನಗೆ , ಜೀವ ಸರ್ವಸ್ವ ಎಂದು ಗೀತಾ ಹೇಳಿದ್ದಾಳೆ. ಇದೇ ವೇಳೆ ತುಂಬಾ ಇಷ್ಟ ಎಂದು ಹೇಳಿದ್ದಾಳೆ. ವಿಜಿ ಸಹ ಗೀತಾ ಎಂದರೆ ನನಗೆ ತುಂಬಾ ಇಷ್ಟ. ನಾನು ಅವಳನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಸ್ನೇಹಿತರ ಬಳಿ ಹೇಳಿದ್ದಾನೆ.

More from Filmibeat

English summary
Colors Kannada Geetha serial Written Update on july 3rd episode. here is details about finally Geetha and Viji got Married. Bhanumathi's plan flop. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X