Geetha: ಗೀತಾಗೆ ಉಂಗುರ ಹಾಕಿದ ವಿಜಿ: ಭಾನುಮತಿಗೆ ಸವಾಲ್ ಹಾಕಿದ ಸುಧಾರಾಣಿ

By ಶೃತಿ ಹರೀಶ್ ಗೌಡ

'ಗೀತಾ' ಧಾರಾವಾಹಿಯಲ್ಲಿ ಸೂರ್ಯನಾರಾಯಣ ಕೊಲೆಗೆ ಸಂಬಂಧ ಪಟ್ಟಂತೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಾ ಇದೆ. ಆದರೆ ವಿಜಿಗೆ ಮಾತ್ರ ತನ್ನ ತಂದೆಯನ್ನು ಕೊಂದವರು ಯಾರು ಎಂಬುದನ್ನು ಹುಡುಕಾಡಲು ಬಹಳಷ್ಟು ಸಮಯವೇ ಬೇಕಾಗಿದೆ. ಇದೆಲ್ಲದರ ನಡುವೆ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಮೊದಲಿಗೆ ಶ್ರುತಿ ಮದುವೆ ನಿಂತು ಹೋಯಿತು. ಸುಧಾರಾಣಿ ವಿಜಿ ಹಾಗೂ ಗೀತಾ ಮದುವೆಯನ್ನ ಪ್ರಯತ್ನಿಸಿದಳು.

ಸುಧಾರಾಣಿ ಗೀತಾ ಮದುವೆಯ ಬಗ್ಗೆ ವಿಚಾರ ಎತ್ತಿದಾಗ ಎಲ್ಲಾ ಭಾನುಮತಿ ಏನಾದರೂ ಒಂದು ಕಿತಾಪತಿಯನ್ನು ಮಾಡಿ ವಿಜಿ ಹಾಗೂ ಗೀತಾಳನ್ನು ಒಂದಾಗದಂತೆ ತಡೆಯುತ್ತಿದ್ದಳು. ಇದೀಗ ಚಂದ್ರಿಕಾ ಹಾಗೂ ಸುಧಾರಾಣಿ ಮಾಡುತ್ತಿರುವ ಪ್ಲ್ಯಾನ್‌ಯಿಂದಾಗಿ ಭಾನುಮತಿಯ ಆಟ ನಡೆಯುತ್ತಿಲ್ಲ. ಈ ಕಡೆ ಅಧಿಕಾರವನ್ನು ಕಳೆದುಕೊಂಡು ಭಾನುಮತಿ, ಹಲ್ಲು ಕಿತ್ತ ಹಾವಿನಂತೆ ಆಗಿದ್ದಾಳೆ. ಈಗ ಸುಧಾರಾಣಿ ದಿನಕ್ಕೊಂದು ಆಟವನ್ನು ಆಡುತ್ತಿದ್ದು ಇದು ಭಾನುಮತಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

Colors Kannada Geetha serial Written Update on may 10th episode

ಹಾರ ಬದಲಿಸಿಕೊಂಡ ಜೋಡಿ

ಸುಧಾರಾಣಿ, ಭಾನುಮತಿ ಹಾಗೂ ವಿಜಿ- ಗೀತಾ ದೇವಸ್ಥಾನಕ್ಕೆ ಬಂದಿದ್ದಾರೆ. ಇದೇ ವೇಳೆ ಅರ್ಚಕರು ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆದರೆ ಅಡ್ಡಲಾಗಿ ಇರುವಂತಹ ಅಶುಭಗಳೆಲ್ಲವೂ ಸಹ ಓಡಿ ಹೋಗುತ್ತದೆ ಎಂದು ಹೇಳಿದ್ದಾರೆ. ಇಂದು ದಿನ ವಾರಗಳಿಗೆ ನಕ್ಷತ್ರ ಎಲ್ಲವೂ ಸಹ ಚೆನ್ನಾಗಿ ಇದ್ದು ಇಂದೇ ಶುಭ ಕಾರ್ಯಕ್ಕೆ ಮುನ್ನಡೆ ಬರೆಯಿರಿ ಎಂದು ಹೇಳಿದ್ದಾರೆ. ಸುಧಾರಾಣಿ ಹಾಗೂ ವಿಜಿ ಚಿಂತೆ ಮಾಡುತ್ತಿರುವಾಗ ವಿಜಿಗೆ ಒಂದು ಐಡಿಯಾ ಹೊಳೆದಿದೆ.

ತನ್ನ ಕೈಲಿದ್ದ ಉಂಗುರವನ್ನು ಗೀತಾ ಕೈಗೆ ತೊಡಿಸಲು ನಿರ್ಧಾರ ಮಾಡಿದ್ದಾನೆ. ಅಮ್ಮ ಇದು ನಮಗೆ ಚಂದ್ರಿಕಾ ಅತ್ತೆ ಕೊಟ್ಟ ಉಂಗುರ ಎಂದು ಹೇಳಿ ಇದು ಗೀತಾಗೆ ಮದುವೆಯಾದ ಮೇಲೆ ಕೊಡೋಣ ಎನ್ನುತ್ತಿದ್ದೆ ಈಗ ತೊಡಿಸುತ್ತೇನೆ ಎಂದಿದ್ದಾನೆ. ಇದಕ್ಕೆ ಸುಧಾರಾಣಿ ಸಮ್ಮತಿ ನೀಡಿದ್ದಾಳೆ.‌ ಗೀತಾ ಬೆರಳಿಗೆ ಉಂಗುರವನ್ನು ಹಾಕಿ ನಂತರ ಪರಸ್ಪರ ಇಬ್ಬರು ಸಹ ಹಾರವನ್ನ ಬದಲಿಸಿಕೊಂಡಿದ್ದಾರೆ. ಇದನ್ನೆಲ್ಲಾ ನೋಡುತ್ತಿರುವ ಭಾನುಮತಿಗೆ ಕೆಂಡದಂತ ಕೋಪ ಬರುತ್ತಿದೆ. ಆದರೆ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಭಾನುಮತಿ ಇದ್ದಾಳೆ.

ಶೀತಲ ಸಮರ ಶುರು

ಸುಧಾರಾಣಿ ಹಾಗೂ ಭಾನುಮತಿ ನಡುವೆ ಶೀತಲ ಸಮರ ಏರ್ಪಟ್ಟಿದೆ. ದೇವಸ್ಥಾನದಲ್ಲಿ ಯೋಚನೆ ಮಾಡುತ್ತಾ ನಿಂತಿರುವ ಭಾನುಮತಿ ಬಳಿ ಸುಧಾರಾಣಿ ಬಂದು ನಿನಗೆ ಎಲ್ಲರನ್ನು ಸಾಯಿಸುವಷ್ಟು ಕೋಪ ಬಂದಿದೆ ಎಂದು ನನಗೆ ತಿಳಿದಿದೆ ಎಂದಿದ್ದಾಳೆ. ಇದಕ್ಕೆ ಭಾನುಮತಿ ನೀನು ಏನೇ ಮಾಡಿದರು ಸಹ ಅದರಿಂದ ನನಗೆ ಒಳ್ಳೆಯದೇ ಆಗುತ್ತದೆ. ಕುರಿ ಕೊಬ್ಬಿದಷ್ಟು ನನಗೆ ಲಾಭ ಎಂದು ಸುಮ್ಮನೆ ಇದ್ದೇನೆ. ಯಾವುದೇ ಕಾರಣಕ್ಕೂ ಗೀತಾ ಹಾಗೂ ವಿಜಿ ಮದುವೆಯಾಗಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾಳೆ.

Colors Kannada Geetha serial Written Update on may 10th episode

ಭಾನುಮತಿ ಮಾತನ್ನ ಕೇಳಿದ ಸುಧಾರಾಣಿ ನಾನು ನೋಡಿಯೇ ಬಿಡುತ್ತೇನೆ. ಗೀತಾ ಹಾಗೂ ವಿಜಿ ಮದುವೆಯಲ್ಲಿ ನಿನಗೆ ಎಂಜಲು ಎತ್ತುವ ಕೆಲಸವನ್ನ ನೀಡುತ್ತೇನೆ. ಇಲ್ಲವಾದರೆ ನಾನು ಪ್ರಾಣವನ್ನೇ ಬಿಡುತ್ತೇನೆ ಎಂದು ಪರಸ್ಪರರು ಸವಾಲನ್ನ ಹಾಕಿಕೊಂಡಿದ್ದಾರೆ. ಇದೆ ವೇಳೆ ಭಾನುಮತಿ ನಾನು ನಿನ್ನ ತಿಥಿಯನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತೇನೆ ಹೇಗಿದ್ದರೂ ಸಹ ನೀನು ಸವಾಲಿನಲ್ಲಿ ಸೋಲುತ್ತೀಯಾ ಎಂದು ಸುಧಾರಾಣಿಗೆ ಹೇಳಿದ್ದಾಳೆ.

ಪ್ರಣಯ ಪಕ್ಷಿಗಳಾದ ಗೀತಾ-ವಿಜಿ

ಯಾವುದೇ ಯೋಚನೆ ಇಲ್ಲದೇ ಗೀತಾ ಹಾಗೂ ವಿಜಿ ಪ್ರಣಯ ಪಕ್ಷಿಗಳಾಗಿದ್ದಾರೆ. ತಮ್ಮ ಮುಂದಿನ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಗೀತಾ ವಿಜಿ ತೋಡಿಸಿದ ಉಂಗುರವನ್ನು ನೋಡುತ್ತಾ ವಿಜಿ ನಾನು ನಿನ್ನ ಬಳಿ ಮಾತನಾಡಬೇಕು ನಿನ್ನ ನೋಡಬೇಕು ಎನ್ನುವಷ್ಟರಲ್ಲಿ ವಿಜಿಯೇ ಗೀತಾ ಕಣ್ಮುಂದೆ ಪ್ರತ್ಯಕ್ಷವಾಗಿದ್ದಾನೆ.‌

ಇದು ಕನಸೋ ನನಸೋ ಎಂದು ಗೀತಾ ನೋಡುತ್ತಿದ್ದರೆ ನೀನು ಕರೆದ ತಕ್ಷಣ ನಾನು ಬಂದೆ ಎಂದು ವಿಜಿ ಗೀತಾಗೆ ಹೇಳಿದ್ದಾನೆ. ಪರಸ್ಪರರು ಬೆಳಗ್ಗೆ ನಡೆದ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಒಬ್ಬರಿಗೊಬ್ಬರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

More from Filmibeat

English summary
Colors Kannada Geetha serial Written Update on may 10th episode. here details about sudharani doing geetha and viji Small engagement, bhanumati and sudharani both are taken challenge. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X