Geetha: ವಿಜಿ ಜೀವಕ್ಕೆ ಆಪತ್ತು: ಚಿಂತೆಯಲ್ಲಿ ಮುಳಗಿದ ಸುಧಾರಾಣಿ-ಗೀತಾ
ಭಾನುಮತಿಗೆ ಬುದ್ಧಿ ಕಲಿಸಿ ಜೈಲಿಗೆ ಕಳಿಸಬೇಕು ಎನ್ನುವ ಸುಧಾರಾಣಿ ಹಠ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಭಾನುಮತಿಯ ಅಣ್ಣ ಸಿತಾರಾಗೆ ಕಾಟವನ್ನು ಕೊಡುತ್ತಿದ್ದಾಳೆ. ಸಿತಾರಾ ಉಯ್ಯಾಲೆಯ ಒಳಗೆ ಮಲಗಿದ್ದಾಗ ತಿಂಡಿಯನ್ನು ತಂದು ಕೊಟ್ಟಿರುವ ಸುಧಾರಾಣಿ ತಿನ್ನು ಎಂದು ಹೇಳಿದ್ದಾಳೆ. ಕಾಫಿಯಲ್ಲಿ ವಿಷವನ್ನು ಬೆರೆತಿದ್ದೇನೆ ಎಂದು ಹೇಳಿದಾಗ ಸಿತಾರಾಗೆ ಶಾಕ್ ಆಗುತ್ತದೆ.
ಇದೇ ವೇಳೆ ಸುಧಾರಾಣಿ ಏನು ಇಲ್ಲ ಎಂದು ತಿಂಡಿ ಕೊಟ್ಟಿದ್ದಾಳೆ. ತಿಂಡಿ ತಿನ್ನುವಾಗ ತನ್ನ ತಂಗಿ ಭಾನುಮತಿ ಬಗ್ಗೆ ಬೈಯುತ್ತಿದ್ದಾನೆ. ಸುಧಾರಾಣಿ ದೊಣ್ಣೆಯನ್ನು ತಗೆದುಕೊಂಡು ಈ ಮನೆಯಲ್ಲಿ ವಿಜಿ, ಗೀತಾ ಮದುವೆಯಾಗುವಷ್ಟರಲ್ಲಿ ಏನಾಗಬೇಕು ಎಂದು ಕೇಳಿದ್ದಾಳೆ.

ಸಿತಾರಾ ವಿಜಿ ಗೀತಾಗೆ ತೊಂದರೆ ಕೊಡುವವರು ಈ ಮನೆಯಲ್ಲಿ ಇರಬಾರದು ಎಂದು ಹೇಳುತ್ತಾನೆ. ಇದನ್ನೇ ನೀನು ಜಪವನ್ನು ಮಾಡುತ್ತಾ ಇರಬೇಕು ಎಂದು ಸುಧಾರಾಣಿ ಹೇಳಿದ್ದಾಳೆ. ಸುಧಾರಾಣಿ ಹೋದ ಮೇಲೆ ಇವಳು ವೈರೈಟಿಯಾಗಿ ಹೊಡೆಯುತ್ತಾ ಇದ್ದರೆ ನಾವು ಸಾಯೋದು ಗ್ಯಾರಂಟಿ ಎಂದು ಅಂದುಕೊಂಡು ಇದ್ದಾನೆ. ಮೊದಲೇ ಲಾಯರ್, ಕಲಾತ್ಮಕವಾಗಿ ಹೊಡೆಯೋದನ್ನು ಕಲಿತುಕೊಂಡಿದ್ದಾಳೆ ಎಂದು ಸುಧಾರಾಣಿಗೆ ಬೈಯುತ್ತಿದ್ದಾನೆ.
ಭಾನುಮತಿ ಬಳಿ ಕಂಪ್ಲೇಟ್
ಮೆಟ್ಟಿಲನ್ನು ಇಳಿಯುತ್ತಾ ಇರುವಾಗ ಸಿತಾರ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದಾನೆ. ಇದೇ ವೇಳೆಗೆ ಭಾನುಮತಿ ಸಹ ಅಲ್ಲಿಗೆ ಬಂದಿದ್ದು ಅಣ್ಣ ನಿಧಾನ ಎಂದು ಹಿಡಿದುಕೊಂಡಿದ್ದಾಳೆ. ಭಾನುಮತಿಯ ಬಳಿ ಸುಧಾರಾಣಿಯ ಬಗ್ಗೆ ಸೀತಾರಾ ಚಾಡಿಯನ್ನ ಹೇಳುತ್ತಿದ್ದಾನೆ. ನಾನು ಜೈಲಿನಲ್ಲಿ ಹೇಗೋ ರಾಜನ ಹಾಗೆ ಬದುಕುತ್ತಿದ್ದೆ, ಇಲ್ಲಿಗೆ ಬಂದು ನಾನು ಸಾಯುವ ಪರಿಸ್ಥಿತಿಗೆ ಬಂದಿದ್ದೇನೆ ಇದೆಲ್ಲ ಏನು ತಂಗಮ್ಮ ಎಂದು ಕೇಳಿದ್ದಾನೆ.
ಭಾನುಮತಿ ನಮ್ಮ ಪರಿಸ್ಥಿತಿಯು ಅದೇ ರೀತಿ ಇದೆ ದಯವಿಟ್ಟು ನೀನು ನಮಗೂ ಒಂದು ಕಾಲ ಬರುವವರೆಗೂ ತಾಳ್ಮೆಯಿಂದ ಇರು ಎಂದು ಹೇಳುತ್ತಿದ್ದಾಳೆ. ನೀನು ಸಹ ಹೀಗೆ ಹೇಳುತ್ತಿದ್ದೀಯ ನನ್ನನ್ನು ಆದಷ್ಟು ಬೇಗ ಜೈಲಿಗೆ ಕಳಿಸು ಬಿಡು ನಾನು ಅಲ್ಲಿಗೆ ಇರುತ್ತೇನೆ ಎಂದು ಹೇಳಿದ್ದಾನೆ. ಭಾನುಮತಿ ತನ್ನ ಅಣ್ಣನಿಗೆ ಸುಮ್ಮನೆ ಇರು ಎಂದು ಹೇಳಿದ್ದಾಳೆ.

ದೇವಸ್ಥಾನಕ್ಕೆ ಹೊರಟ ಗೀತಾ
ಗೀತಾ ಹಾಗೂ ಸುಧಾರಾಣಿ ಇಬ್ಬರೂ ಸಹ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ವಿಜಯ್ ಸಹ ದೇವಸ್ಥಾನಕ್ಕೆ ಹೋಗಲು ತಯಾರಿ ನಡೆಸಿದ್ದನು. ಇದೇ ವೇಳೆ ಆತನ ಸ್ನೇಹಿತ ಫೋನ್ ಮಾಡಿ ಇವತ್ತು ಒಂದು ಮಹತ್ವದ ಕೆಲಸ ಇದೆ ನನಗೆ ನಿನ್ನ ಸಹಾಯ ಬೇಕು ಎಂದು ಹೇಳಿದ್ದಾನೆ. ಇದಕ್ಕೆ ವಿಜಿ ಸಹ ನೀನು ನನಗೆ ಎಂತೆಂತಹ ಸಮಯದಲ್ಲಿ ಕೆಲಸ ಮಾಡಿ ಕೊಟ್ಟಿದ್ದೀಯಾ ನಾನು ಸಹಾಯ ಮಾಡುತ್ತೇನೆ ಜೊತೆಗೆ ಬರುತ್ತೇನೆ ಎಂದು ಅಂದಿದ್ದಾನೆ. ಸುಧಾರಾಣಿ ಹಾಗೂ ಗೀತಾ ಜೊತೆಗೆ ವಿಜಿ ದೇವಸ್ಥಾನಕ್ಕೆ ಹೋಗುತ್ತಿಲ್ಲ.
ವಿಜಿ ಜೀವಕ್ಕೆ ಆಪತ್ತು
ದೇವಸ್ಥಾನಕ್ಕೆ ಹೋಗಿರುವ ಸುಧಾರಾಣಿ ಹಾಗೂ ಗೀತಾಗೆ ಅರ್ಚಕರು ವಿಜಿ ಜೀವಕ್ಕೆ ಆಪತ್ತು ಇದೆ ಎಂದು ಹೇಳಿದ್ದಾರೆ. ಈ ವಿಷಯವನ್ನು ಕೇಳಿದ ಸುಧಾರಾಣಿ ಹಾಗೂ ಗೀತಾ ಗೆ ತುಂಬಾ ಭಯವಾಗುತ್ತಿದೆ. ದುಷ್ಟ ಗ್ರಹಗಳು ವಿಜಿಯ ಮಾನಹಾನಿ ಹಾಗೂ ಜೀವ ಹಾನಿ ಎರಡನ್ನು ಮಾಡಲಿವೆ ಎಂದು ಹೇಳಿದ್ದಾರೆ. ಇದೆಲ್ಲವನ್ನು ಕೇಳುತ್ತಿರುವ ಹತ್ತೆ ಹಾಗೂ ಸೊಸೆ ಇಬ್ಬರಿಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ವಿಜಿ ಹೆಸರಲ್ಲಿ ಏನು ಆಗಬಾರದು ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಗಾಡಿಯಲ್ಲಿ ಹೋಗುತ್ತಿರುವ ವಿಜಿ
ಸ್ನೇಹಿತನ ಜೊತೆಯಲ್ಲಿ ಗಾಡಿಯಲ್ಲಿ ಹೋಗುತ್ತಿದ್ದಾನೆ, ಇದೇ ವೇಳೆ ನಿಧಾನವಾಗಿ ಓಡಿಸು ಎಂದು ಸ್ನೇಹಿತನಿಗೆ ಹೇಳಿದ್ದಾನೆ. ಆದರೆ ವಿಜಿಗೆ ತನ್ನ ಸ್ನೇಹಿತ ತಮಾಷೆ ಮಾಡುತ್ತಿದ್ದಾನೆ ನೋಡು ಮದುವೆಯಾಗುವ ಸಂದರ್ಭ ಬರುತ್ತಿದ್ದಂತೆ ನೀನು ಚೇಂಜ್ ಆಗಿಬಿಟ್ಟೆ. ನನಗೆ ಸುಮ್ಮನೆ ಡಿಎಲ್ ಕೊಟ್ಟಿದ್ದಾರಾ? ನಾನು ಓಡಿಸುತ್ತೇನೆ ಸುಮ್ಮನೆ ಕುಳಿತುಕೋ ಎಂದು ಹೇಳಿದ್ದಾನೆ ಈ ವೇಳೆ ಮುಂದೆ ಆಪತ್ತು ಕಾದಿದ್ಯಾ ಎಂದು ನೋಡಬೇಕಿದೆ.


Click it and Unblock the Notifications











