Geetha: ಗೀತಾ ಮೇಲೆ ರೇಗಾಡಿದ ವಿಜಿ: ಏನಾಯ್ತು ಎಂದು ಯೋಚನೆ ಮಾಡುತ್ತಿರುವ ಭಾನುಮತಿ

By ಶೃತಿ ಹರೀಶ್ ಗೌಡ

ಗೀತಾ ಧಾರಾವಾಹಿ ಈಗ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ರಿಪೋರ್ಟ್ ಬದಲಾದ ಹಿನ್ನೆಲೆಯಲ್ಲಿ ವಿಜಿಗೆ ಕ್ಯಾನ್ಸರ್ ಇದೆ ಎಂದು ಡಾಕ್ಟರ್ ಹೇಳಿದ್ದಾರೆ. ಇದರಿಂದಾಗಿ ವಿಜಿ ಮನಸ್ಸಿಗೆ ಡಿಸ್ಟರ್ಬ್ ಆಗಿದೆ. ಇದನ್ನು ಯಾರ ಬಳಿ ಹೇಳಿಕೊಳ್ಳಲು ಆಗದೇ ತೊಳಲಾಟದಲ್ಲಿದ್ದಾನೆ. ಡಾಕ್ಟರ್ ಹೇಳಿದ ಮಾತಿನಿಂದಾಗಿ ವಿಜಿ ರಾತ್ರಿಯಾದರೂ ಸಹ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರೆಲ್ಲರೂ ಸಹ ಕಂಗಾಲಾಗಿದ್ದರು.

ಇನ್ನು ಗೀತಾ ಬೆಳಿಗ್ಗೆ ಬೇಗನೆ ಎದ್ದು ವಿಜಿ ಹುಡುಕಲು ಹೋಗಿದ್ದಳು. ಆದರೆ ವಿಜಿ ಮನಸ್ಸನ್ನು ಚೇಂಜ್ ಮಾಡಿಕೊಂಡು ಮನೆಗೆ ಬಂದಿದ್ದಾನೆ. ಸುಧಾರಾಣಿ, ಗೀತಾಗೆ ಫೋನ್ ಮಾಡಿ ವಿಜಿ ಮನೆಗೆ ಬಂದಿದ್ದಾನೆ ಎಂಬ ವಿಷಯವನ್ನು ತಿಳಿಸಿದ್ದಾಳೆ. ಗೀತಾ, ವಿಜಿಯನ್ನ ನೋಡಲು ಓಡೋಡಿ ಬಂದಿದ್ದಾಳೆ. ವಿಜಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಭಾನುಮತಿ ಸಹ ವಿಜಿಗೆ ಪ್ರಶ್ನೆ ಮಾಡಿದ್ದಾಳೆ.

Colors Kannada Geetha serial Written Update on may 19th episode

ವಿಜಿ ಮಾತ್ರ ಸುಧಾರಾಣಿ ಹಾಗೂ ಭಾನುಮತಿಯ ಪ್ರಶ್ನೆಗೆ ಉತ್ತರವನ್ನು ನೀಡದೇ ಮಂಕಾಗಿ ಕುಳಿತಿದ್ದಾನೆ. ಗೀತಾ ಬಂದ ತಕ್ಷಣವೇ ವಿಜಿನಾ ತಬ್ಬಿಕೊಂಡು ಎಲ್ಲಿಗೆ ಹೋಗಿದ್ದೆ ಎಂದು ಅಳಲು ಶುರು ಮಾಡಿದ್ದಾಳೆ. ಆದರೆ ವಿಜಿ, ಗೀತಾಗೂ ಯಾವುದೇ ರೆಸ್ಪಾನ್ಸ್ ಅನ್ನು ಮಾಡಿಲ್ಲ ನೀನು ಇಲ್ಲದೆ ಇದ್ದರೆ ನಾನು ಸತ್ತು ಹೋಗುತ್ತೇನೆ ಎಂದು ಗೀತಾ ಹೇಳಿದರೂ ಸಹ ಮೂಕನಂತೆ ಎದ್ದು ವಿಜಿ ರೂಮ್‌ಗೆ ಹೋಗಿದ್ದಾನೆ.

ಯಾಕೆ ಈ ರೀತಿ ವಿಜಿ ಆಡುತ್ತಿದ್ದಾನೆ ಎಂದು ಕೇಳುತ್ತಿರುವ ಸಿತಾರಾಗೆ ಭಾನುಮತಿ ಬೈದಿದ್ದಾಳೆ. ಅಣ್ಣ ನೀನು ಸುಮ್ಮನೆ ಕುಳಿತುಕೋ, ನನಗೆ ಈಗಲೇ ತಲೆ ಕೆಟ್ಟು ಹೋಗಿದೆ ಇಲ್ಲದಿದ್ದರೆ ನಾನೇ ನಿನಗೆ ಒಡೆದು ಹೊರಗೆ ಕಳಿಸುತ್ತೇನೆ ಎಂದು ಹೇಳಿದ್ದಾಳೆ. ಇದೇ ವೇಳೆ ಭಾನುಮತಿ ಯಾಕೆ ಈ ರೀತಿ ವಿಜಿ ಆಡುತ್ತಿದ್ದಾನೆ ತಂದೆ ಸತ್ತು ಹೋದಾಗ ಮಾತ್ರ ಅವನು ಮೌನವಾಗಿ ಇದ್ದ ಈಗ ಏನಾಯಿತು ಎಂದು ಯೋಚನೆ ಮಾಡುತ್ತಿದ್ದಾಳೆ.

ಸಿತಾರಾ ನೀನು ಹೋಗಿ ವಿಜಿಯ ಬಳಿ ಮಾತನಾಡು ಯಾಕೆ ಈ ರೀತಿ ಇದ್ದಾನೆ ಎಂದು ಹೇಳಿದ್ದಾನೆ. ಅದಕ್ಕೆ ಭಾನುಮತಿ ಅಣ್ಣ ನೀನು ಶತ್ರುನ ನನಗೆ ಎಂದು ಕೇಳಿದ್ದಾಳೆ. ಇದಕ್ಕೆ ನಾನು ಹೋಗಿ ಕೇಳಿದರೆ ನನ್ನ ಹಣೆಗೆ ಗನ್ ಇಟ್ಟು ಮಾತನಾಡುತ್ತಾನೆ, ಅದಕ್ಕೆ ನೀನೇ ಹೋಗಿ ಕೇಳು. ಅಷ್ಟು ಹಾರಾಡಿಕೊಂಡು ಇದ್ದವನು ಯಾಕೆ ಮೌನವಾಗಿ ಇದ್ದಾನೆ ಎಂದು ಭಾನುಮತಿಗೆ ಸಿತಾರಾ ಹೇಳಿದ್ದಾನೆ.

Colors Kannada Geetha serial Written Update on may 19th episode

ಗೀತಾ ಮೇಲೆ ವಿಜಿಗೆ ಕೋಪ

ವಿಜಿಗೆ ಏನು ಮಾಡಬೇಕು ಎಂದು ಗೊತ್ತಿಲ್ಲದೆ ಗೀತಾ ಮೇಲೆ ಕೋಪ ಮಾಡಿಕೊಂಡಿದ್ದಾನೆ. ತನಗೆ ಕ್ಯಾನ್ಸರ್ ಬಂದಿದೆ ಎಂದು ಹೇಳಿದರೆ ಮನೆಯವರೆಲ್ಲರೂ ಕೂಡ ಶಾಕ್‌ಗೆ ಒಳಗಾಗಿ ಚಿಂತೆಯನ್ನು ಮಾಡುತ್ತಾರೆ ಎಂದು ವಿಜಿ ಯೋಚನೆಗೀಡಾಗಿದ್ದಾನೆ. ಆದರೆ ಹೇಗಾದರೂ ಮಾಡಿ ಗೀತಾಳನ್ನ ದೂರ ಮಾಡಿಕೊಳ್ಳಬೇಕು ಎಂದು ಯೋಚಿಸಿ ಗೀತಾ ಏನೇ ಮಾತನಾಡುತ್ತಿದ್ದರು ಅದನ್ನು ಕೇಳಿಸಿಕೊಳ್ಳದಂತೆ ಮಾಡುತ್ತಿದ್ದಾನೆ.

ಗೀತಾ ಎಷ್ಟೇ ಮಾತನಾಡುತ್ತಿದ್ದರು ಸಹ ವಿಜಿ ಬಾಯಿ ಬಿಡುತ್ತಿಲ್ಲ. ಇದೇ ವೇಳೆ ಗೀತಾ ಮುಂದುವರಿದು ವಿಜಿ ನಾನು ಏನಾದರೂ ಬೇಜಾರು ಮಾಡಿದರೆ. ನನ್ನನ್ನು ಕ್ಷಮಿಸು ಎಂದು ಹೇಳಿದ್ದಾಳೆ. ಇದಕ್ಕೆ ವಿಜಿ ದಯವಿಟ್ಟು ನನ್ನನ್ನು ಒಂಟಿಯಾಗಿ ಇರಲು ಬಿಡು ಎಂದು ಕೇಳಿದ್ದಾನೆ. ಏನೇ ಸಮಸ್ಯೆ ಬಂದರೂ ನಾವಿಬ್ಬರು ಎದುರಿಸೋಣ ಎಂದು ಹೇಳಿದೆ. ಆದರೆ ಈಗ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗುತ್ತಿದ್ದೀಯಾ ಎಂದು ಗೀತಾ, ವಿಜಿಗೆ ಹೇಳಿದ್ದಾಳೆ. ಆದರೂ ಸಹ ಗೀತಾಗೆ ವಿಜಯ್ ಯಾವುದೇ ರೀತಿಯಲ್ಲಿ ರೆಸ್ಪಾನ್ಸ್ ಮಾಡದೇ ದಯವಿಟ್ಟು ನೀನು ಇಲ್ಲಿಂದ ಹೋಗು ಎಂದು ಹೇಳಿದ್ದಾನೆ. ಇದಕ್ಕೆ ಗೀತಾ ಕಣ್ಣೀರನ್ನು ಹಾಕಿದ್ದಾಳೆ.

ಟೆನ್ಶನ್ ದ ಸುಧಾರಾಣಿ

ಗೀತಾ, ವಿಜಿಯ ಬಳಿ ಮಾತನಾಡಿಕೊಂಡು ಬಂದ ಮೇಲೆ ಹಾಲ್‌ನಲ್ಲಿ ಕುಳಿತು ಕಣ್ಣೀರನ್ನ ಹಾಕಿದ್ದಾಳೆ. ಇದಕ್ಕೆ ಅಲ್ಲಿಗೆ ಬಂದ ಸುಧಾರಾಣಿ ಸಹ ಟೆನ್ಶನ್ ಆಗಿದ್ದಾಳೆ. ಅತ್ತೆ ನಾನು ಕೇಳಿದರೂ ಸಹ ವಿಜಿ ಏನನ್ನು ಹೇಳಲಿಲ್ಲ. ತಾನಾಗಿಯೇ ಫೋನ್‌ನ್ನು ನನಗೆ ಮಾಡಲಿ ಅದರ ಹೊರೆತು ನೀವು ಮಾತನಾಡಿಸಬೇಡಿ ಎಂದು ಗೀತಾ ಹೇಳಿ ಅಲ್ಲಿಂದ ಹೊರಟಿದ್ದಾಳೆ.

More from Filmibeat

English summary
Colors Kannada Geetha serial Written Update on may 19th episode. here is details about vijay says that he doesn't love geetha. That he just pretended to love her as he hates her. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X