Geetha: ಗೀತಾ ಬಳಿ ಸತ್ಯ ಹೇಳ್ತಾನಾ ವಿಜಿ? ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲು ನಿರ್ಧಾರ
ಗೀತಾ ಧಾರಾವಾಹಿಯಲ್ಲಿ ನಾಯಕನಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಹೊಸ ಟ್ವಿಸ್ಟ್ ನೀಡಲಾಗಿದೆ. ಇದು ಟ್ವಿಸ್ಟೋ ಅಥವಾ ಭಾನುಮತಿಯ ಕುತಂತ್ರವೋ ಎಂಬುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ. ಯಾಕೆಂದರೆ ವಿಜಿಯ ಮದುವೆಯನ್ನ ಗೀತಾ ಜೊತೆಗೆ ಮಾಡಿಸಲು ಭಾನುಮತಿಗೆ ಸ್ವಲ್ಪವೂ ಸಹ ಇಷ್ಟವಿಲ್ಲ. ಆದರೆ ಸುಧಾರಾಣಿ ಮಗನನ್ನು ಗೀತಾಳಿಗೆ ಕೊಟ್ಟು ಮದುವೆ ಮಾಡಿಸುವ ಲೆಕ್ಕಾಚಾರದಲ್ಲಿ ಇದ್ದಾಳೆ.
ಭಾನುಮತಿಗೆ ಸುಧಾರಾಣಿ ಚಾಲೆಂಜ್ ಹಾಕಿದ್ದಳು. ನಾನು ನಿನ್ನ ಮಗನ ಮದುವೆಯನ್ನ ಮಾಡಲು ಬಿಡುವುದಿಲ್ಲ ಎಂದು ಭಾನುಮತಿ ಸುಧಾರಾಣಿಗೆ ಚಾಲೆಂಜ್ ಹಾಕಿದಾಗ. ಇದಕ್ಕೆ ಪ್ರತ್ಯುತ್ತರವಾಗಿ ಸುಧಾರಾಣಿ ಸಹ ನನ್ನ ಮಗನ ಮದುವೆಯನ್ನ ನಾನು ಗೀತಾ ಜೊತೆ ಮಾಡಿ ತೀರುತ್ತೇನೆ ಎಂದು ಹೇಳಿದಳು. ಇದಕ್ಕೆ ಕೋಪಗೊಂಡ ಭಾನುಮತಿ ಈಗ ವಿಜಿ ಹಾಗೂ ಗೀತಾ ಮದುವೆಯನ್ನ ಮುರಿಯಲು ನಾನಾ ತಂತ್ರಗಳನ್ನ ಮಾಡುತ್ತಾ ಬಂದಿದ್ದಾಳೆ.

ವಿಜೆಗೆ ಈಗ ಯಾವುದೋ ಕಾಯಿಲೆ ಬಂದಿದೆ ಎಂಬ ರಿಪೋರ್ಟ್ ಕೊಡಲಾಗಿದೆ. ಅದರಂತೆ ಡಾಕ್ಟರ್ ವಿಜಿಗೆ ನೀನು ಮೂರು ತಿಂಗಳು ಮಾತ್ರ ಬದುಕುವುದು ಎಂದು ಹೇಳಿದ್ದಾರೆ. ಕ್ಯಾನ್ಸರ್ ಲಾಸ್ಟ್ ಸ್ಟೇಜ್‌ನಲ್ಲಿ ಇದ್ದು ಅದನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ವಿಜಿಗೆ ದಿಗ್ಭ್ರಾಂತಿ ಉಂಟಾಗಿದೆ. ನಾನು ಪ್ರೀತಿ ಮಾಡುವವರಿಂದ ದೂರ ಹೋಗುತ್ತಿದ್ದೇನೆ ಎಂದು ವಿಜಿ ಬೇಸರ ಮಾಡಿಕೊಂಡಿದ್ದಾನೆ.

ಆತ್ಮವಿಶ್ವಾಸವನ್ನು ಬಿಟ್ಟು ಕೊಡದ ಗೀತಾ
ಗೀತಾ, ವಿಜಿ ಬಳಿ ಬೈಸಿಕೊಂಡು ಮನೆಯಿಂದ ಹೊರಡುವಾಗ ಭಾನುಮತಿ ತಡೆದು ನಿಲ್ಲಿಸಿ ನನ್ನ ಮಗ ನಿನಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾನೆ ಎಂದು ಅವಮಾನವನ್ನು ಮಾಡಿದ್ದಾಳೆ. ನನ್ನ ಮಗ ಅಷ್ಟು ಬೈದರು ಸಹ ನಿನಗೆ ಬುದ್ದಿ ಇಲ್ಲ ಆದರೂ ನೀನು ಮನೆಗೆ ಬರುತ್ತೀಯಾ ಅವನನ್ನೇ ಮದುವೆಯಾಗಬೇಕು ಎಂದೆಲ್ಲಾ ಕನಸು ಕಾಣುತ್ತಿದ್ದೀಯಾ ಎಂದು ಗೀತಾಗೆ ಭಾನುಮತಿ ಬೈದಿದ್ದಾಳೆ.
ಕಾಲ್ ಮಾಡಿ ವಿಜಿ ಸಾರಿ ಕೇಳುತ್ತಾನೆ. ಆ ಭರವಸೆ ನನಗೆ ಇದೆ ಎಂದು ಆತ್ಮವಿಶ್ವಾಸವನ್ನ ಗೀತಾ ವ್ಯಕ್ತಪಡಿಸಿದ್ದಾಳೆ. ಅದನ್ನು ಬಿಟ್ಟರೆ ವಿಜಯ್‌ಗೆ ನನ್ನ ಮೇಲೆ ಪ್ರೀತಿ ಇದೆ ಎಂದು ಭಾನುಮತಿಗೆ ಗೀತಾ ಹೇಳಿದ್ದಾಳೆ. ಆದಷ್ಟು ಬೇಗ ನಾವು ಮದುವೆ ಮಾಡಿಕೊಳ್ಳುತ್ತೇವೆ ಎಂದು ಗೀತಾ ಭಾನುಮತಿಗೆ ಹೇಳಿ ಅಲ್ಲಿಂದ ಮನೆಗೆ ಹೊರಟಿದ್ದಾಳೆ. ಸುಧಾರಾಣಿ ಸಹ ಗೀತಾಳನ್ನು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದಾಳೆ.
ಎಲ್ಲರ ಮೇಲೆ ಕೂಗಾಡಿದ ಗೀತಾ
ಮನೆಗೆ ಬಂದ ಗೀತಾಗೆ ಅಮ್ಮ ಯಾಕೆ ಇಷ್ಟು ಲೇಟ್ ಆಗಿ ಬಂದೆ ಎಂದು ಕೇಳಿದ್ದಕ್ಕೂ ಸಹ ರೇಗಾಡಿದ್ದಾಳೆ. ನನಗೆ ನನ್ನದೇ ಆಗಿದೆ ನೀನು ಬೇರೆ ಎಂದು ಕೂಗಾಡಿದ್ದಾಳೆ. ನಿನ್ನ ಅಪ್ಪ ಈಗ ಕೇಳುತ್ತಿದ್ದಾರೆ ಅಪ್ಪ ಇರುವ ಸಮಯದಲ್ಲಾದರೂ ಮನೆಗೆ ಬೇಗ ಬರಬೇಕು ತಾನೇ ಎಂದು ಸುಶೀಲ ಹೇಳಿದ್ದಕ್ಕೆ ಗೀತಾಗೆ ತುಂಬಾ ಬೇಸರವಾಗಿದೆ. ನನ್ನನ್ನು ಸುಮ್ಮನೆ ಇರಲು ಬಿಟ್ಟು ಬಿಡಿ ಎಂದು ಗೀತಾ ರೇಗಾಡಿ ಮನೆ ಒಳಗೆ ಹೋಗಿದ್ದಾಳೆ.
ಗೀತಾ ಇರುವ ರೂಮಿಗೆ ಬಂದ ಚಂದ್ರಿಕಾ, ಗೀತಾಗೆ ಸಮಾಧಾನ ಮಾಡಿದ್ದಾಳೆ. ನೀನು ಈ ರೀತಿ ಕೂಗಾಡಿದ್ದಕ್ಕೆ ಸುಶೀಲಾಗೆ ತುಂಬಾ ಬೇಸರವಾಗಿದೆ. ಸಮಾಧಾನದಿಂದ ನೀನು ಸುಶೀಲಾಗೆ ಹೇಳಬಹುದಿತ್ತು. ಅವಳು ನಿನ್ನನ್ನ ತುಂಬಾ ಪ್ರೀತಿಯಿಂದ ಸಾಕಿದ್ದಾಳೆ. ಈ ರೀತಿಯಾಗಿ ಮಾತನಾಡಬಾರದು ಎಂದಿದ್ದಾಳೆ.
ಫೋನ್ ಮಾಡಿದ ವಿಜಿ
ವಿಜಿ ಕ್ಯಾನ್ಸರ್ ಇದೆ ಎಂಬ ಸತ್ಯವನ್ನು ಗೀತಾ ಬಳಿ ಮುಚ್ಚಿಟ್ಟಿದ್ದಾನೆ. ಸುಧಾರಾಣಿ ಹೋಗಿ ನೀನು ಈ ರೀತಿಯಾಗಿ ಗೀತಾಗೆ ಮಾತನಾಡಬಾರದಿತ್ತು ಅವಳು ನಿನ್ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾಳೆ ಎಂದೆಲ್ಲ ಹೇಳಿದ್ದಕ್ಕೆ. ಡಾಕ್ಟರ್‌ಗೆ ಫೋನ್ ಮಾಡಿದ ವಿಜಿ ನನಗೆ ಟ್ರೀಟ್ಮೆಂಟ್ ಕೊಡಲು ಸಾಧ್ಯವಾಗುತ್ತಾ ಎಂದು ಕೇಳಿದ್ದಾನೆ. ಆದರೆ ಡಾಕ್ಟರ್ ಆಗೋದಿಲ್ಲ ಎಂದು ಹೇಳಿದ್ದಕ್ಕೆ ವಿಜಿ ನಾನೇ ಹೋಗಿ ಇನ್ನೊಮ್ಮೆ ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದಾನೆ.
ಗೀತಾಗೆ ಫೋನ್ ಮಾಡಿದ ವಿಜಿ ನಾನು ಆಸ್ಪತ್ರೆಗೆ ಹೋಗಿದ್ದೆ ಎಂದು ಹೇಳಿದ್ದಾನೆ. ಆಸ್ಪತ್ರೆಗೆ ಹೋಗಿದ್ದೆ ಎಂಬ ಮಾತನ್ನು ಕೇಳಿದ ಗೀತಾಗೆ ಒಮ್ಮೆಲೇ ಶಾಕ್ ಆಗಿದೆ. ತನಗೆ ಕ್ಯಾನ್ಸರ್ ಇದೆ ಎಂಬ ಸತ್ಯವನ್ನ ಗೀತಾ ಬಳಿ ಹೇಳುತ್ತಾನಾ ಕಾದು ನೋಡಬೇಕಿದೆ.


Click it and Unblock the Notifications











