Geetha: ಚಂದ್ರಿಕಾ ಕೈ ಸೇರಿದ ಮೊಬೈಲ್ ಫೋನ್: ಹೊರ ಬೀಳಲಿದ್ಯಾ ಕೊಲೆ ರಹಸ್ಯ?
ಸೀತಾರಾಗೆ ಸುಧಾರಾಣಿ ಟಾರ್ಚರ್ ಕೊಟ್ಟು ಮೆಂಟಲ್ ಶಾಕ್ ರೀತಿ ಮಾಡಿ ಸತ್ಯವನ್ನ ಬಾಯಿ ಬಿಡಿಸಬೇಕು ಎಂದು ಏನೇನು ಮಾಡುತ್ತಿದ್ದಾಳೆ. ಗೀತಾ ಬಳಿ ಹೋದ ಸಿತಾರ ನನ್ನನ್ನು ಸಾಯಿಸಬೇಡಿ ಬೇಗ ಇಂಜೆಕ್ಷನ್ ಕೊಡು ಎಂದು ಚುಚ್ಚಿಕೊಂಡಿದ್ದಾನೆ. ಈಗ ತೆಗೆದುಕೊಂಡಿದ್ದು ಸಾಯುವ ಇಂಜೆಕ್ಷನ್ ಎಂದು ಗೀತಾ ಹೇಳಿದ್ದಾಳೆ. ಸುಧಾರಾಣಿ ಬಳಿ ಬಂದ ಸೀತಾರಾ ನನಗೆ ಔಷಧಿ ಕೊಡು ಎಂದಿದ್ದಾನೆ.
ಎಲ್ಲವನ್ನು ನೋಡುತ್ತಿರುವ ಭಾನುಮತಿಗೆ ಅಣ್ಣನ ಮೇಲೆ ತುಂಬಾ ಕೋಪ ಬಂದಿದೆ. ಇನ್ನು ಭಾನುಮತಿ ಅಲ್ಲೇ ಇರುವುದನ್ನು ನೋಡಿದ ಸುಧಾರಾಣಿ ನನ್ನ ಗಂಡನನ್ನು ಕೊಲೆ ಮಾಡಿದವರು ಯಾರು ಎಂದು ಕೇಳುತ್ತಾಳೆ. ಇದಕ್ಕೆ ಸೀತಾರಾಮ್ ನಾನು ಮತ್ತು ನನ್ನ ತಂಗಿ, ಇದನ್ನು ಎಲ್ಲಿ ಹೇಳಬೇಕು ಎಂದೆಲ್ಲ ಸಿತಾರ ಕೇಳಿದ್ದಾನೆ. ಕೊಲೆ ರಹಸ್ಯವನ್ನು ಬಾಯಿಬಿಟ್ಟ ಸಿತಾರನನ್ನು ನೋಡಿದ ಭಾನುಮತಿಗೆ ತುಂಬಾನೇ ಕೋಪ ಬಂದಿದೆ. ಈ ಅಯೋಗ್ಯನನ್ನು ಕಟ್ಟಿಕೊಂಡು ನಾನು ಏನು ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದಾಳೆ.

ಚಂದ್ರಿಕಾಗೆ ಫೋನ್ ಮಾಡಿ ಸುಧಾರಾಣಿ ಮನೆಗೆ ಕರೆಸಿಕೊಂಡಿದ್ದಾಳೆ. ಇದೇ ವೇಳೆ ಚಂದ್ರಿಕಾ ಕೈಗೆ ವರುಣ್ ಯೂಸ್ ಮಾಡುತ್ತಿದ್ದ ಮೊಬೈಲ್ ಅನ್ನು ಕೊಟ್ಟಿದ್ದಾಳೆ. ಇದು ವರುಣ್ ಯೂಸ್ ಮಾಡುತ್ತಿದ್ದ ಮೊಬೈಲ್ ನೋಡಿದರೆ ಶ್ರುತಿ ತುಂಬಾ ಭಯಪಡುತ್ತಾಳೆ ಎಂದು ಹೇಳಿದ್ದಾಳೆ. ವಿಜಿಗೆ ಏನಾದರೂ ಈ ಕೆಲಸ ವಹಿಸಿದರೆ ಅಸಡ್ಡೆ ತೋರುತ್ತಾನೆ.
ಫೋನ್‌ನಲ್ಲಿ ಸತ್ಯ ಅಡಗಿದೆ
ಗೀತಾಗೆ ಹೇಳಿದರೆ ನೂರೆಂಟು ಪ್ರಶ್ನೆ ಕೇಳುತ್ತಾಳೆ. ಅದಕ್ಕಾಗಿ ನೀನೆ ಈ ಸೆಲ್ ಫೋನ್ ರೆಡಿ ಮಾಡಿಸಿಕೊಂಡು ಇದರಲ್ಲಿ ಏನಿದೆ ಎಂಬುದನ್ನು ನೀನು ನನಗೆ ತಿಳಿಸು ಎಂದು ಹೇಳಿದ್ದಾಳೆ. ವರುಣ್ ಫೋನ್‌ನಲ್ಲಿ ಸೂರ್ಯಪ್ರಕಾಶ್‌ನನ್ನು ಕೊಲೆ ಮಾಡಿದವರ ರಹಸ್ಯವೇ ಅಡಗಿ ಕುಳಿತಿದೆ. ಫೋನ್ ರಿಪೇರಿ ಮಾಡಿದ ನಂತರ ಆಕೆ ನೋಡಿದರೆ ನಿಜವಾದ ಆರೋಪಿಗಳು ಸಿಕ್ಕಿ ಬೀಳಲಿದ್ದಾರೆ.
ಸುಧಾರಾಣಿ ಪ್ಲ್ಯಾನ್ ತಿಳಿದ ಭಾನುಮತಿ
ಸುಧಾರಾಣಿ ಯಾಕೆ ಸೀತಾರಾಮನನ್ನು ಬಿಡಿಸಿಕೊಂಡು ಬಂದಿದ್ದಾಳೆ ಎಂಬ ಪ್ಲಾನ್ ಭಾನುಮತಿಗೆ ಹೇಗೋ ತಿಳಿದು ಹೋಗಿದೆ. ಅವಳು ನಿನ್ನನ್ನ ಮೆಂಟಲ್ ಮಾಡಿ ನೀನು ಸತ್ಯ ಹೇಳುವಂತೆ ಮಾಡುವುದೇ ಅವಳ ಉದ್ದೇಶವಾಗಿದೆ ಎಂದು ಹೇಳಿದ್ದಾಳೆ. ಇದಕ್ಕೆಲ್ಲ ನಾನು ಒಂದು ತಾರ್ಕಿಕ ಅಂತ್ಯವನ್ನು ಕಾಣಿಸುತ್ತೇನೆ ಎಂದು ಅಣ್ಣನಿಗೆ ತಂಗಿ ಸಮಾಧಾನ ಮಾಡಿದ್ದಾಳೆ.

ಸುಧಾರಾಣಿ ಏನೇ ಮಾಡಿದರು ಸಹ ನೀನು ಅವಳು ಹೇಳಿದ ರೀತಿ ಕುಣಿಯಬೇಡ ಎಂದು ಭಾನುಮತಿ ಬುದ್ಧಿ ಹೇಳಿದ್ದಾಳೆ. ಆದರೆ ಸಿತಾರ ನಾನು ಜೈಲಿಗೆ ಹೋಗುತ್ತೇನೆ ನನಗೆ ಜೈಲಲ್ಲೇ ಚೆನ್ನಾಗಿತ್ತು. ಇರೋ ಬರೋ ಕೇಸ್ ಎಲ್ಲಾ ಹಾಕಿ ಮತ್ತೊಮ್ಮೆ ನನ್ನನ್ನು ಜೈಲಿಗೆ ಕಳಿಸು ಎಂದು ಅನ್ನುತ್ತಿದ್ದಾನೆ. ಅಣ್ಣನನ್ನು ಭಾನುಮತಿ ಸಮಾಧಾನ ಪಡಿಸುತ್ತಿದ್ದಾಳೆ.
ಪ್ರೀತಿಯಲ್ಲಿ ಮುಳುಗಿದ ಗೀತಾ ವಿಜಿ..!
ಪಾರ್ಕ್‌ಗೆ ಬಂದಿರುವ ಗೀತಾ ಮತ್ತು ವಿಜಿ ತಮ್ಮ ಪ್ರೀತಿಯಲ್ಲಿ ಮೈಮರೆತು ಹೋಗಿದ್ದಾರೆ. ನಿನ್ನ ಜೊತೆ ಮಾತನಾಡಬೇಕು ಅನಿಸಿತು ಅದಕ್ಕೆ ಕರೆದೆ, ಎಂದು ಗೀತಾ ಹೇಳಿದರೆ ನನಗೂ ಅಷ್ಟೇ ಅದಕ್ಕೇ ನಿನ್ನನ್ನ ಭೇಟಿಯಾದೆ ಎಂದು ವಿಜಿ ಹೇಳುತ್ತಿದ್ದಾನೆ. ಇಬ್ಬರ ನಡುವೆ ನವಿರಾದ ಪ್ರೇಮ ಶುರುವಾಗಿದೆ. ವಿಜಿಗೆ ಆದಷ್ಟು ಬೇಗ ಸತ್ಯ ತಿಳಿಸುವ ಪ್ರಯತ್ನವನ್ನ ಸುಧಾರಾಣಿ ಮಾಡುತ್ತಿದ್ದಾಳೆ.


Click it and Unblock the Notifications











