Geetha: ಗೀತಾ ಮೇಲೆ ವಿಜಿಗೆ ಪ್ರೀತಿ; ಸಿತಾರಾ ಮೇಲೆ ಮೂಡಿತು ಅನುಮಾನ

By ಶೃತಿ ಹರೀಶ್ ಗೌಡ

ವಿಜಿಗೆ ಗೀತಾ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಇದೇ ವೇಳೆ ಗೀತಾ ಹೇಳಿದ ಮಾತಿಗೆ ವಿಜಿಗೆ ಕೋಪ ಬಂದಿದೆ. ನಂತರ ವಿಜಿ ಸಮಾಧಾನ ಮಾಡಿಕೊಂಡು ವಾಪಸ್ ಗೀತಾ ಬಳಿ ಬಂದಿದ್ದಾನೆ. ಒಬ್ಬರಿಗೊಬ್ಬರು ಕ್ಷಮೆಯನ್ನು ಕೇಳಿಕೊಂಡಿದ್ದಾರೆ. ಗೀತಾ ಇದೀಗ ವಿಜಿಗೆ ಟಾಸ್ಕ್ ಕೊಟ್ಟಿದ್ದಾಳೆ. ನೀನು ನನಗೆ ಏನಾದ್ರು ಕೊಡಿಸಬೇಕು ಅಂದ್ರೆ ಅದು ನೀನು ದುಡಿದ ದುಡ್ಡಿನಲ್ಲಿ ಮಾತ್ರ ಎಂದಿದ್ದಾಳೆ.

ಗೀತಾ ಈ ರೀತಿ ಹೇಳಿದ್ದೆ ತಡ ವಿಜಿ ಅಲ್ಲಿಯೇ ಇರುವ ಅಂಗಡಿಗಳಲ್ಲಿ ಕೆಲಸವನ್ನ ಕೇಳಿಕೊಂಡು ಹೋಗಿದ್ದಾನೆ. ಆದರೆ ವಿಜಯ್‌ಗೆ ಮಾತ್ರ ಯಾರು ಕೆಲಸ ಕೊಟ್ಟಿಲ್ಲ. ಇದೆಲ್ಲವನ್ನು ನೋಡುತ್ತಿರುವ ಗೀತಾಗೆ ತುಂಬಾ ಬೇಸರವಾಗಿದೆ. ವಿಜಿ ನನಗಾಗಿ ಕಷ್ಟಪಡುತ್ತಿದ್ದಾನೆ. ನಾನು ಈ ರೀತಿ ಹೇಳಬಾರದಿತ್ತು ಎಂದುಕೊಂಡಿದ್ದಾಳೆ. ವಿಜಿಯನ್ನು ಗೀತಾ ಬಾ ಎಂದರು ಸಹ ಅವನು ಬರುತ್ತಿಲ್ಲ.

Colors Kannada geetha serial Written Update on may 9th episode

ಗೀತಾಗೆ ಏನಾದರೂ ಕೊಡಿಸಬೇಕು ಎಂದು ಹಠಕ್ಕೆ ಬಿದ್ದಿದ್ದು ಗೀತಾಗೆ ಬೊಕ್ಕೆಯನ್ನು ನೀಡಿದ್ದಾನೆ. ಇದರಿಂದ ಗೀತಾಗೆ ತುಂಬಾ ಖುಷಿಯಾಗಿದೆ. ಇದನ್ನು ನಾನೇ ನನ್ನ ಕೈಯಾರೆ ಮಾಡಿದ್ದು ಇದು ನನ್ನ ಅಪ್ಪನ ದುಡ್ಡಿನಿಂದ ತಂದಿದ್ದಲ್ಲ, ಎಂದು ಗೀತಾಗೆ ವಿಜಿ ಹೇಳಿದ್ದಾನೆ.

ಗೀತಾ ಮದುವೆಯಾಗಲ್ಲ ಎಂದ ಭಾನುಮತಿ

ವಿಜಿ ಹಾಗೂ ಗೀತಾ ಮದುವೆ ಬಗ್ಗೆ ಚಂದ್ರಿಕಾ ಹಾಗೂ ಸುಧಾರಾಣಿ ಇಬ್ಬರು ಮಾತನಾಡುತ್ತಾ ಇರುತ್ತಾರೆ. ಅಲ್ಲಿಗೆ ಬಂದ ಭಾನುಮತಿ ನಾನು, ಗೀತಾ ಹಾಗೂ ವಿಜಿ ಮದುವೆ ಮಾಡಲು ಬಿಡೋದಿಲ್ಲ ಎಂದು ಹೇಳಿದ್ದಾಳೆ. ಆದರೆ ಸುಧಾರಾಣಿ ಹಾಗೂ ಚಂದ್ರಿಕಾ ನಿನ್ನ ತಿಥಿ ಮಾಡಿಯಾದರೂ ಸರಿ ನಾವು ಅವರಿಬ್ಬರ ಮದುವೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಾನು ಅದಕ್ಕೆಲ್ಲವೂ ಅನುವು ಮಾಡಿಕೊಡುವುದಿಲ್ಲ ಎಂದು ಭಾನುಮತಿ ಚಾಲೆಂಜ್ ಮಾಡಿದ್ದಾಳೆ. ಇದಕ್ಕೆ ಚಂದ್ರಿಕಾ ಸಹ ನಾವು ನೋಡೇ ಬಿಡುತ್ತೇವೆ ನೀನು ಏನು ಮಾಡುತ್ತೀಯಾ ಎಂದು ಅಂದಿದ್ದಾಳೆ. ಕೋಪ ಮಾಡಿಕೊಂಡು ಸುಧಾರಾಣಿ ಅಲ್ಲಿಂದ ಹೋಗಿದ್ದಾಳೆ. ಇದಕ್ಕೆ ಭಾನುಮತಿ, ಸುಧಾರಾಣಿ ಎಲ್ಲಿ ಸಾಯುತ್ತಾಳೆ ನೋಡು ಎಂದಿದ್ದಾಳೆ.

Colors Kannada geetha serial Written Update on may 9th episode

ಸಿತಾರಾಗೆ ಸುಧಾರಾಣಿ ಟಾರ್ಚರ್

ಸುಧಾರಾಣಿ ಅಲ್ಲಿ ಭಾನುಮತಿ ತನಗೆ ಅಂಗಿಸಿದ್ದಕ್ಕೆ ಅವಳ ಅಣ್ಣನಿಗೆ ಟಾರ್ಚರ್ ನೀಡುತ್ತಿದ್ದಾಳೆ. ನನ್ನ ಮಗನಿಗೆ ಫೋನ್ ಮಾಡಿ ನಿನ್ನ ಮದುವೆ ಆಗುತ್ತದೆ ಅಂತ ಹೇಳು ಎಂದು ದೊಣ್ಣೆಯಲ್ಲಿ ಹೊಡೆಯುತ್ತಿದ್ದಾಳೆ. ಈ ಕಡೆ ಸಿತಾರಾ, ಸುಧಾರಾಣಿ ಕೊಡುವ ಟಾರ್ಚರ್ ತಡೆದುಕೊಳ್ಳಲು ಆಗದೆ ವಿಜಿಗೆ ಫೋನ್ ಮಾಡಿದ್ದಾನೆ.

ಇದೇ ವೇಳೆ ವಿಜಯ ನಿನ್ನ ಮದುವೆ ಆಗುತ್ತದೆ, ನಾನು ಮುಂದೆ ನಿಂತು ನಿನ್ನ ಮದುವೆಯನ್ನು ಮಾಡಿಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ವಿಜಿ ಬೈದು ಫೋನ್ ಇಟ್ಟಿದ್ದಾನೆ. ಈ ವೇಳೆ ವಿಜಿಗೆ ಸಿತಾರಾ ಮೇಲೆ ಅನುಮಾನ ಬಂದಿದ್ದು ಸಿತಾರಾ ಹಿಂದೆ ಯಾರೋ ಇದ್ದಾರೆ ಎಂದು ಯೋಚಿಸಲು ಆರಂಭಿಸಿದ್ದಾರೆ.

ಇದನ್ನು ನೋಡಿ ಗೀತಾಗೆ ತುಂಬಾ ಖುಷಿಯಾಗಿದೆ ನಾನು ಮತ್ತು ಸುಧಾರಾಣಿ ಅತ್ತೆ ಇದರ ಬಗ್ಗೆ ಹೇಳಿದಾಗ ವಿಜಿ ನಂಬುತ್ತಿರಲಿಲ್ಲ ಈಗ ಅವನೇ ನಂಬುವ ಕಾಲ ಬಂದಿದೆ ಎಂದು ಅಂದುಕೊಂಡಿದ್ದಾಳೆ.

More from Filmibeat

English summary
Colors Kannada geetha serial Written Update on may 9th episode. here is details about Geetha given a taks for viji, sudharani torches to sithara. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X