Geetha: ಸೂರ್ಯ ಪ್ರಕಾಶ್ ಕೊಲೆ ರಹಸ್ಯ ವರುಣ್ ಬಳಿ..! ಕೈಗೊಂಬೆಯಾದ ಶೃತಿ
ವರುಣ್ ಫೇಕ್ ಅಮ್ಮ ಅಪ್ಪ ಭಯದಿಂದ ಮನೆಬಿಟ್ಟು ಹೊರಟು ನಿಂತಿದ್ದಾರೆ. ಭಾನುಮತಿ ನೋಡಿದರೆ ಗೃಹಮಂತ್ರಿ ನಾವೇನಾದರೂ ಸಿಕ್ಕಿಹಾಕಿಕೊಂಡರೆ ಜೈಲೋಟ ಗ್ಯಾರಂಟಿ ಎಂದು ಅವರಿಬ್ಬರೂ ರಾತ್ರೋರಾತ್ರಿ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಇರುವ ಹಣ ನಮಗೆ ಸಾಕು ಎಂದು ಆಟೋಗಾಗಿ ಕಾಯುತ್ತಿದ್ದಾರೆ. ಆಟೋ ಹತ್ತಿ ಹೊರಟ ಗಂಡ ಹೆಂಡತಿ ಇಬ್ಬರಿಗೂ ವರುಣ್ ಶಾಕ್ ನೀಡಿದ್ದಾನೆ.
ನನಗೆ ತಿಳಿಸದೆ ನೀವಿಬ್ಬರೂ ಎಲ್ಲಿಗೆ ಹೋಗುತ್ತಿದ್ದೀರಾ ? ನಾನು ಬೇರೆ ಅಪ್ಪ ಅಮ್ಮನನ್ನು ತಂದು ಇವರೇ ನನ್ನ ನಿಜವಾದ ಅಪ್ಪ-ಅಮ್ಮ ಎಂದು ಹೇಳಬೇಕಾ ನನ್ನ ಮದುವೆಯಾಗುವವರೆಗೆ ನೀಡಿ ಹೋಗುವ ಹಾಗಿಲ್ಲ ಎಂದು ಅವರಿಗೆ ಷರತ್ತು ವಿಧಿಸಿದ್ದಾನೆ. ವಿಷಯ ಏನಾದರೂ ಗೊತ್ತಾದರೆ ನಾವು ಜೈಲು ಸೇರೋದು ಗ್ಯಾರಂಟಿ ಎಂದು ಫೇಕ್ ಅಪ್ಪ ಅಮ್ಮ ವರುಣ್‌ಗೆ ತಿಳಿಸಿದ್ದಾರೆ. ಅದಕ್ಕೆ ವರುಣ್ ಈ ವಿಡಿಯೋ ನನ್ನ ಬಳಿ ಇರುವವರೆಗೂ ನಾವೆಲ್ಲರೂ ಸೇಫ್ ಎಂದು ಅವರಿಗೆ ಹೇಳಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ವಿಡಿಯೋ ನೋಡಿ ಇಬ್ಬರು ಶಾಕ್ ಆಗಿದ್ದಾರೆ.

ವರುಣ್ ಹಾಗೂ ಶೃತಿ ಇಬ್ಬರೂ ಸಹ ಒಬ್ಬರನ್ನೊಬ್ಬರು ಭೇಟಿಯಾಗಿದ್ದಾರೆ. ಇದೇ ವೇಳೆ ವರುಣ್ ನಿಜ ಬಣ್ಣ ಶ್ರುತಿಯ ಮುಂದೆ ಬಯಲಾಗಿದ್ದು ನನ್ನ ಅಮ್ಮನಿಗೆ ಹೇಳಿ ಮದುವೆಯನ್ನ ಕ್ಯಾನ್ಸಲ್ ಮಾಡಿಸುತ್ತೇನೆ ಎಂದು ಶ್ರುತಿ ಹೇಳಿದ್ದಾಳೆ. ಇದಕ್ಕೆ ವರುಣ್ ನಿಮ್ಮ ಮಾವ ಒಬ್ಬ ಕಾಮಿಡಿ ಟ್ರಾಜಿಡಿ, ನಿಮ್ಮ ಅಮ್ಮ ಕಿಲ್ಲರ್ ಟ್ರಾಜಿಡಿ, ಅದರಲ್ಲಿ ನೀನು ಒಬ್ಬಳು ಎಂದು ಶ್ರುತಿಗೆ ತಮಾಷೆ ಮಾಡಿದ್ದಾನೆ.
ಇದೇ ವೇಳೆ ಕಾವ್ಯಾಳನ್ನು ಕೊಲ್ಲಬೇಕು ಎಂದು ಹೇಳಿದ್ದಕ್ಕೆ ನೀನು ಏನು ಮೋಸ ಮಾಡಿದ್ದೀಯ ಅದಕ್ಕೆ ಕಾವ್ಯಳನ್ನು ಕೊಲ್ಲುವ ಮಾತನ್ನು ಆಡುತ್ತಿದ್ದೀಯ ಎಂದು ಶ್ರುತಿ, ವರುಣ್‌ಗೆ ಹೇಳಿದ್ದಾಳೆ. ಅದಕ್ಕೆ ವರುಣ್ ಹೌದು ಎಂದು ಹೇಳಿದ್ದಕ್ಕೆ ಶೃತಿಗೆ ಶಾಕ್ ಆಗಿದೆ. ನಾನು ಈಗಲೇ ಅಮ್ಮನಿಗೆ ಹೇಳಿ ಮದುವೆಯನ್ನ ಕ್ಯಾನ್ಸಲ್ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ.

ಯಾವಾಗ ಶ್ರುತಿ, ವರುಣ್‌ಗೆ ನಾನು ನಿನ್ನ ಮದುವೆಯಾಗುವುದಿಲ್ಲ ಎಂದಳೋ ಆಗಲೇ ತನ್ನ ಬಳಿ ಇರುವ ವಿಡಿಯೋವನ್ನು ವರುಣ್, ಶ್ರುತಿಗೆ ತೋರಿಸಿದ್ದಾನೆ. ಶೃತಿ ಹಾಗೂ ಭಾನುಮತಿ ಮಾತನಾಡುತ್ತಿದ್ದ ವಿಡಿಯೋವನ್ನು ನೋಡಿದ ಶ್ರುತಿ ಬೆರಗಾಗಿದ್ದಾಳೆ. ಇದೇ ವೇಳೆ ಶೃತಿಗೆ ವರುಣ್ ಹೋಗಿ ಹೇಳು ಮದುವೆ ಆಗೋದಿಲ್ಲ ಎಂದು ನಾನು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದು ಬ್ಲಾಕ್‌ಮೇಲ್ ಮಾಡಿದ್ದಾನೆ.
ಇನ್ನು ನಾನು ಮದುವೆಯಾಗುತ್ತೇನೆ ಎಂದು ಶ್ರುತಿ, ವರುಣ್‌ಗೆ ಹೇಳಿ ಅಲ್ಲಿಂದ ಹೊರಡುವಾಗ ನೀನು ಈ ರೀತಿ ಮಾಡುತ್ತೀಯಾ ಅಂದುಕೊಂಡಿರಲಿಲ್ಲ ಎಂದಿದ್ದಾಳೆ. ವರುಣ್ ನಿಮ್ಮ ಮನೆಯಲ್ಲಿ ಇದ್ದಾಗ ಈ ವಿಡಿಯೋವನ್ನು ಮಾಡಿಕೊಂಡೆ ಈಗ ಉಪಯೋಗಕ್ಕೆ ಬರುತ್ತಿದೆ ಎಂದು ಶ್ರುತಿಗೆ ತಿಳಿಸಿದ್ದಾನೆ. ಈ ವಿಡಿಯೋ ವೈರಲ್ ಆದರೆ ನೀವು ಮೂವರು ಜೈಲಿನಲ್ಲಿ ಇರುವುದು ಗ್ಯಾರಂಟಿ ಎಂದು ಹೇಳಿದ್ದಾನೆ.

ಸುಧಾರಾಣಿ ಹಾಗೂ ಗೀತಾ, ವರುಣ್ ಮನೆಗೆ ಹೋಗಿದ್ದಕ್ಕೆ ಗೀತಾ ಮೇಲೆ ವಿಜಿ ಮುನಿಸಿಕೊಂಡಿದ್ದಾನೆ. ಇದಕ್ಕೂ ಮೊದಲು ಭಾನುಮತಿ, ಗೀತಾಗೆ ವಿಜಿ ನಾನು ಹೇಳುವುದನ್ನೇ ನಂಬುತ್ತಾನೆ. ಒಂದು ಕಲ್ಲಲ್ಲಿ ಎರಡು ಹಕ್ಕಿಯನ್ನು ಹೊಡೆದೆ ಎಂಬ ವಿಷಯವನ್ನು ಸಹ ಸುಧಾರಾಣಿ ಬಳಿ ಗೀತಾ ಹೇಳುತ್ತಿದ್ದಾಳೆ. ಗೀತಾ ಹಾಗೂ ಭಾನುಮತಿ ಸೇರಿ ಒಂದು ಪ್ಲಾನ್ ಮಾಡಿದ್ದಾರೆ. ಭಾನುಮತಿ ಮಾಡುವ ಸಣ್ಣಪುಟ್ಟ ತಪ್ಪುಗಳು ಸಹ ಬೇಗ ಕಣ್ಣಿಗೆ ಬೀಳುವಂತೆ ಮಾಡುವುದೇ ಅವರ ಪ್ಲಾನ್. ಈ ರೀತಿ ಮಾಡಿದರೆ ಭಾನುಮತಿಯನ್ನು ವಿಜಿ ಪ್ರಶ್ನೆ ಮಾಡುತ್ತಾನೆ ಎಂದುಕೊಂಡಿದ್ದಾರೆ.


Click it and Unblock the Notifications











