Geetha: ವರುಣ್‌ ಬ್ಲಾಕ್‌ಮೇಲ್: ವಿಷ ಕುಡಿದ ಶ್ರುತಿ ಜೀವ ಕಾಪಾಡಿದ ಗೀತಾ

By ಶೃತಿ ಹರೀಶ್ ಗೌಡ

ಗೀತಾ ಹಾಗೂ‌ ಚಂದ್ರಿಕಾ ಭಾನುಮತಿಯ ಎಡೆಮುರಿ ಕಟ್ಟವುದು ಹೇಗೆ ಎಂಬ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದಾರೆ.‌ ಅಲ್ಲಿಗೆ ಬಂದ ಸುಶೀಲಾ ಯಾರ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಕೇಳಿದ್ದಾಳೆ.‌ ಇದ್ದಕ್ಕೆ ಯಾರಿಲ್ಲ ಎಂದು ಗೀತಾ ಹಾಗೂ ಚಂದ್ರಿಕಾ ಹೇಳಿದ್ದಾಳೆ. ‌ಅಷ್ಟರಲ್ಲಿ ಅಲ್ಲಿಗೆ ಶ್ರುತಿಗೆ ಬಂದು ಗೀತಾ ಬಳಿ ಪರ್ಸನಲ್ ಆಗಿ ಮಾತನಾಡಬೇಕು ಎಂದಿದ್ದಾಳೆ.

ಗೀತಾ ಎಲ್ಲರ ಮುಂದೆ ಮಾತನಾಡು ಅಂದಾಗ ಇಲ್ಲ ಅತ್ತಿಗೆ ಪರ್ಸನಲ್ ಆಗಿ ಮಾತನಾಡಬೇಕು ಎಂದು‌ ಹೇಳಿದ್ದಾಳೆ. ನಂತರ ಮನೆಯ ಹಿಂದೆ ಕರೆದುಕೊಂಡು ಗೀತಾ ಮಾತನಾಡುತ್ತಾ ಏನಾಯ್ತು ಎಂದು ಕೇಳಿದಾಗ ನಾನು ಮೋಸ ಮಾಡಿಬಿಟ್ಟೆ ಎಂದು ಹೇಳಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಗೀತಾ ಜೋರಾಗಿ ಕೂಗಿಕೊಂಡು ಎಲ್ಲರನ್ನು ಕರೆದಿದ್ದಾಳೆ.

Colors kannada Geetha Written Update on April 17th episode

ಚಂದ್ರಿಕಾ ಹಾಗೂ ಸುಶೀಲಾ ಬಂದು ಏನಾಯ್ತು ಎಂದು ಕೇಳಿದ್ದಾರೆ ಇದೆ ವೇಳೆ ಗೀತಾ ಆಟೋ ಅಥವಾ ಕ್ಯಾಬ್‌ಗೆ ಫೋನ್ ಮಾಡಿ ಎಂದು ಹೇಳಿದ್ದಾಳೆ. ಚಂದ್ರಿಕಾ ಫೋನ್ ಮಾಡಿ ಶ್ರುತಿಯನ್ನು ಆಸ್ಪತ್ರೆಗೆ ಸೇರಿಸಿ ವಿಷವನ್ನು ಹೊರಗೆ ತೆಗೆಯಲಾಗಿದೆ. ಗೀತಾ ಶ್ರುತಿಯ ಬಳಿ ಯಾಕೆ ಹೀಗೆ ಮಾಡಿಕೊಂಡೆ ಎಂದು ಕೇಳಿದ್ದಾಳೆ.

ಶೃತಿ ಮಾತಿಗೆ ಶಾಕ್ ಆದ ಗೀತಾ

ವರುಣ್ ಸರಿಯಾಗಿ ಇಲ್ಲ ನಾನು ಪ್ರೀತಿ ಮಾಡಿ ಮೋಸ ಹೋದೆ ಎಂದು ಶ್ರುತಿ ಗೀತಾ ಬಳಿ ಹೇಳುತ್ತಿದ್ದಾಳೆ. ಹೇಗಾದರೂ ಮಾಡಿ ಮದುವೆಯನ್ನ ನಿಲ್ಲಿಸಿ ಅತ್ತಿಗೆ ಎಂದು ಗೀತಾ ಬಳಿ ಶ್ರುತಿ ಮಾತನಾಡುತ್ತಿದ್ದಾಳೆ. ಅಷ್ಟರಲ್ಲಿ ಮನೆಯವರೆಲ್ಲ ಬಂದಿದ್ದಾರೆ. ಶ್ರುತಿಯ ಆರೋಗ್ಯವನ್ನು ವಿಚಾರಿಸಿ ಹೋಗಿದ್ದಾರೆ. ನೀನೆ ಪ್ರೀತಿ ಮಾಡಿ ಈಗ ಯಾಕೆ ಮದುವೆ ಬೇಡ ಎನ್ನುತ್ತಿದ್ದೀಯಾ ಎಂದು ಗೀತಾ ಕೇಳಿದ್ದಾಳೆ. ಹೌದು ನಾನೇ ಪ್ರೀತಿಸಿ ಈಗ ವಿಲವಿಲ ಎಂದು ಒದ್ದಾಡುವ ಹಾಗೆ ಹಾಗಿದೆ, ಹೇಗಾದರೂ ಮಾಡಿ ಅಣ್ಣನ ಬಳಿ ಹೇಳಿ ನೀವು ಮದುವೆಯನ್ನು ಕ್ಯಾನ್ಸಲ್ ಮಾಡಿಸಿ ಎಂದು ಶ್ರುತಿ, ಗೀತಾ ಬಳಿ ಕೇಳಿ ಕೊಂಡಿದ್ದಾಳೆ.

Colors kannada Geetha Written Update on April 17th episode

ಬ್ಲಾಕ್ ಮೇಲ್‌ಗೆ ಗೆ ಹೆದರಿದ ಶ್ರುತಿ

ಗೀತಾ ಜ್ಯೂಸ್ ತರಲು ಹೋಗಿದ್ದನ್ನೇ ಕಾಯ್ದುಕೊಂಡಿದ್ದ ವರುಣ್, ಶ್ರುತಿಯ ಬಳಿ ಬಂದು ಹಾಯ್ ಎಂದು ಹೇಳಿ ಅವಳನ್ನು ಬೆಚ್ಚಿಬೀಳಿಸಿದ್ದಾನೆ. ನೀನು ನನ್ನನ್ನು ಮದುವೆಯಾಗದೇ ಸಾಯುವ ಯೋಚನೆ ಮಾಡಿದರೆ ನಿಮ್ಮ ಅಮ್ಮ ಹಾಗೂ ಮಾವ ಮುದ್ದೆ ಮುರಿಯಬೇಕಾಗುತ್ತದೆ ಎಂದು ಹೇಳಿದ್ದಾನೆ. ಈ ಮಾತಿನಿಂದ ಶ್ರುತಿಗೆ ಮತ್ತಷ್ಟು ಬೇಸರವಾಗಿದೆ. ಅಷ್ಟರಲ್ಲಿ ಗೀತಾ ಬಂದು ವರುಣ್ ಕೆನ್ನೆಗೆ ಹೊಡೆದಿದ್ದಾಳೆ. ನಮ್ಮ ಹುಡುಗಿಗೆ ನಿನ್ನನ್ನು ಕಂಡರೆ ಇಷ್ಟ ಇಲ್ಲ. ಆದರೂ ಯಾಕೆ ಈ ರೀತಿ ಮಾಡ್ತಿದ್ದೀಯಾ ಎಂದಿದ್ದಾನೆ. ಅಷ್ಟರಲ್ಲಿ ಶ್ರುತಿ ಬಾಯಿಂದಲೇ ನಾನು ಮದುವೆಯಾಗುತ್ತೇನೆ ಎಂದು ಹೇಳಿಸಿದ್ದಾನೆ.

ವಿಜಿಗೆ ಹೇಳುವ ಧೈರ್ಯ ಮಾಡಿದ ಗೀತಾ

ಗೀತಾ ವರುಣ್ ಕೆನ್ನೆಗೆ ಬಾರಿಸಿದ್ದಾಳೆ. ಇದಕ್ಕೆ ವರುಣ್ ನಾನು ಯಾವುದನ್ನು ಇಟ್ಟುಕೊಳ್ಳುವುದಿಲ್ಲ, ವಾಪಸ್ ಕೊಡುತ್ತೇನೆ ಎಂದು ಗೀತಾಗೆ ಹೇಳಿದ್ದಾನೆ. ಇದರಿಂದ ಗೀತಾ ವರುಣ್ ಏನೋ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದುಕೊಂಡಿದ್ದಾಳೆ. ಇದನ್ನು ಹೇಗಾದರೂ ಮಾಡಿ ವಿಜಿಯ ಬಳಿ ಹೇಳಬೇಕು ಎಂದು ಯೋಚನೆ ಮಾಡುತ್ತಿದ್ದಾಳೆ. ಈ ಕಡೆ ಸುಶೀಲಾಗೆ ಅವಳ ಗಂಡ ಫೋನ್ ಮಾಡಿ ನನಗೆ ಹಣ ಬೇಕು ಹೇಗಾದರೂ ಮಾಡಿ ಕಳಿಸು ಇಲ್ಲದಿದ್ದರೆ ನನ್ನ ಕೆಲಸ ಹೋಗುತ್ತದೆ ಎಂದಿದ್ದಾನೆ. ಗೀತಾ ಹೂವು ಕಟ್ಟಿ ಮಾರುವ ಹಣದಿಂದ ನಾವು ಜೀವನ ಮಾಡುತ್ತೇವೆ ಎಂದರೂ ಕೇಳದೆ ಆದಷ್ಟು ಬೇಗ ದುಡ್ಡನ್ನು ಕಳುಹಿಸು ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ.

More from Filmibeat

English summary
colors kannada serial Geetha Written Update on April 17th episode. Here is the details about varun is blackmailing shruthi, she decides to end her life.know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X