Geetha: ಭಾನುಮತಿಯ ಬಳಿ ಹಣ ಕೇಳಿದ ಚಂದ್ರಿಕಾ: ಎದುರಾಯಿತು ಅವಮಾನ

By ಶೃತಿ ಹರೀಶ್ ಗೌಡ

ಗೀತಾ ಅರೆ ಮನಸ್ಸಿನಲ್ಲಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾಳೆ. ಇದೇ ವೇಳೆ ಸುಶೀಲಾ ಅವಳ ಬಳಿ ಬಂದು ನಿನ್ನ ಬಳಿ ಕೇಳುವುದು ಏನೋ ಇದೆ ಎಂದಿದ್ದಾಳೆ. ಇದಕ್ಕೆ ಗೀತಾ ಹೇಳಮ್ಮ ಎಂದು ಹೇಳಿದ್ದಾಳೆ. ಸುಶೀಲಾ ಮಾತ್ರ ಭಯದಿಂದ ಅದು ಅದು ಎಂದು ಹೇಳಿ ಸುಮ್ಮನೆ ಆಗಿದ್ದಾಳೆ. ಇದಕ್ಕೆ ಗೀತಾ, ಸುಶೀಲಾಗೆ ರೇಗಿ ಅಲ್ಲಿಂದ ಬಂದಿದ್ದಾಳೆ.

ಸುಶೀಲಾ ಮಗಳು ಆಡಿದ ಮಾತುಗಳಿಗೆ ಬೇಸರ ಮಾಡಿಕೊಂಡಿದ್ದಾಳೆ. ಚಂದಿಕಾ ಮಾತ್ರ ಗೀತಾಗೆ ಏನೋ ಆಗಿದೆ ಎಂದು ಎಲ್ಲವನ್ನು ವಿಚಾರ ಮಾಡುತ್ತಿದ್ದಾಳೆ. ಇದೇ ವೇಳೆ ಗೀತಾ, ಶ್ರುತಿಗೆ ಈ ಮದುವೆ ಇಷ್ಟವಿಲ್ಲವಂತೆ ವರುಣ್ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎನಿಸುತ್ತಿದೆ. ಒಮ್ಮೆ ಮದುವೆ ಬೇಡ ಎನ್ನುತ್ತಾಳೆ, ಇನ್ನೊಮ್ಮೆ ಅವನನ್ನೇ ಆಗುತ್ತೇನೆ ಎಂದು ಹೇಳುತ್ತಿದ್ದಾಳೆ.

Colors kannada Geetha Written Update on April 18th episode

ಚಂದ್ರಿಕಾ ಈ ವಿಷಯವನ್ನು ವಿಜಿಯ ಬಳಿ ಹೇಳಬೇಕಿತ್ತು ಎಂದು ತಿಳಿಸಿದ್ದಾಳೆ. ಶ್ರುತಿ ಮದುವೆ ಆದ್ರೆ ನಾವ್ಯಾರು ಸಹ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ, ಈ ಮದುವೆಯನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ಚಂದ್ರಿಕಾ ಬಳಿ ಗೀತಾ ಹೇಳುತ್ತಿದ್ದಾಳೆ. ವಿಜಿಗೆ ಹೇಳಿದರೆ ನಾನೇ ಮದುವೆ ನಿಲ್ಲಿಸಲು ಯೋಚನೆ ಮಾಡುತ್ತಿದ್ದೇನೆ ಎಂದು ತಿಳಿದುಕೊಳ್ಳುತ್ತಾನೆ. ನಾನು ಏನನ್ನು ಮಾಡಲಾಗದ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕಿದ್ದೇನೆ ಎಂದು ಗೀತಾ, ಚಂದ್ರಿಕಾ ಬಳಿ ಹೇಳಿದ್ದಾಳೆ.‌

ಮದುವೆ ನಿಲ್ಲಿಸುವ ಮಾತು ಕೊಟ್ಟ ಚಂದ್ರಿಕಾ

ಗೀತಾ ತುಂಬಾ ಬೇಸರ ಮಾಡಿಕೊಂಡಿದ್ದಕ್ಕೆ ವಿಜಿಗೆ ಮಾತು ಕೊಟ್ಟಿರುವುದು ನೀನು ಮತ್ತು ಸುಧಾರಾಣಿ, ನಾನಲ್ಲ ಎಂದು ಗೀತಾಗೆ ಚಂದ್ರಿಕಾ ಹೇಳಿದ್ದಾಳೆ. ನಾನು ಹೇಗಾದರೂ ಮಾಡಿ ಶ್ರುತಿ, ವರುಣ್ ಮದುವೆಯನ್ನು ನಿಲ್ಲುವಂತೆ ಮಾಡುತ್ತೇನೆ ಎಂದು ಗೀತಾಗೆ ಚಂದ್ರಿಕಾ ಧೈರ್ಯ ಹೇಳಿದ್ದಾಳೆ. ಚಂದ್ರಿಕಾ ಹೇಳಿದ ಧೈರ್ಯದ ಮಾತಿನಿಂದ ಗೀತಾ ನಿರಾಳವಾಗಿ ಹೋಗಿ ಮಲಗಿಕೊಂಡಿದ್ದಾಳೆ.

ವಿಜಿಗೆ ಬುದ್ಧಿ ಹೇಳಿದ ಸುಧಾರಾಣಿ

ವಿಜಿ, ಸುಧಾರಾಣಿಯ ಬಳಿ ಕ್ಷಮೆ ಕೇಳುತ್ತಿದ್ದಾನೆ. ನಿನ್ನೆ ನಡೆದ ಘಟನೆಯಿಂದ ನನಗೂ ಸಹ ಬೇಸರವಾಯಿತು. ಅಮ್ಮ ದಯವಿಟ್ಟು ಕ್ಷಮಿಸು ಎಂದು ಕೇಳಿದ್ದಾನೆ. ಇದಕ್ಕೆ ಸುಧಾರಾಣಿ ನನ್ನ ಮೇಲೆ ರೇಗಿದ್ದು ಸರಿ, ಗೀತಾ ಮೇಲೆ ರೇಗಿದ್ದು ತಪ್ಪು ತಾನೇ ಎಂದು ವಿಜಿಗೆ ತಿಳಿಸಿದ್ದಾಳೆ. ಫೋನ್ ಮಾಡಿ ಗೀತಾಗೆ ಸಮಾಧಾನ ಮಾಡುವಂತೆ ಸಲಹೆಯನ್ನು ನೀಡಿದ್ದಾಳೆ.

Colors kannada Geetha Written Update on April 18th episode

ಚಂದ್ರಿಕಾ ಬಳಿ ಸತ್ಯ ಹೇಳಿದ ಸುಶೀಲಾ

ಚಂದ್ರಿಕಾ ಬಳಿ ಸುಶೀಲಾ ತನ್ನ ಗಂಡ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ತಿಳಿಸಿದ್ದಾಳೆ. ಅವರ ಕಂಪನಿಯಲ್ಲಿ ಏನೋ ಹಣದ ಅವ್ಯವಹಾರವಾಗಿದ್ದು ಅದು ಇವರ ತಲೆಗೆ ಬಂದಿದೆ. ನಾಳೆ ಐದು ಲಕ್ಷ ರೂಪಾಯಿಯನ್ನು ಕಟ್ಟಬೇಕಂತೆ ಎಂದು ಚಂದ್ರಿಕಾ ಬಳಿ ಸುಶೀಲ ಹೇಳಿದ್ದಾಳೆ. ಇದಕ್ಕೆ ಚಂದ್ರಿಕಾ ನಾನೇ ಐದು ಲಕ್ಷ ರೂಪಾಯಿಯನ್ನು ಹೊಂದಿಸಿಕೊಡುತ್ತೇನೆ ಎಂದು ಹೇಳಿದ್ದಾಳೆ.

ಭಾನುಮತಿ ಬಳಿ ಸಹಾಯ ಕೇಳಿದ ಚಂದ್ರಿಕಾ

ಭಾನುಮತಿಯ ಬಳಿ ಹೋಗಿ ಚಂದ್ರಿಕಾ ನನಗೆ 5 ಲಕ್ಷ ಬೇಕು ಎಂದು ಕೇಳಿದ್ದಾಳೆ. ಭಾನುಮತಿ ಅವಮಾನ ಮಾಡಿದ್ದಾಳೆ. ಯಾರೇ ಆದರೂ ಸರಿ ನನ್ನ ಕಾಲ ಬಳಿಯೇ ಬರಬೇಕು ಎಂದಿಲ್ಲ ಹೇಳಿದ್ದಾಳೆ.‌ ನನ್ನ ಅಣ್ಣ ಇಟ್ಟಿರುವ ಆಸ್ತಿಯಲ್ಲಿ ನಾನು ಹಣವನ್ನು ಕೇಳಲು ಬಂದಿದ್ದೇನೆ ಎಂದು ಚಂದ್ರಿಕಾ ಹೇಳಿದ್ದಾಳೆ. ನನ್ನ ಗಂಡ ಇಟ್ಟಿರುವ ಆಸ್ತಿಯಲ್ಲಿ ಪಾಲು ಕೇಳಲು ಬಂದರೆ ನಿನಗೆ ಬಿಡಿಗಾಸು ಸಹ ಕೊಡುವುದಿಲ್ಲ. ಬೇಕಾದರೆ ಭಿಕ್ಷೆ ಕೇಳು ಈ ಭಾನುಮತಿ ಇಲ್ಲ ಎನ್ನುವುದಿಲ್ಲ, ಕೇಳಿದಷ್ಟು ಭಿಕ್ಷೆಯನ್ನು ಕೊಡುತ್ತೇನೆ ಎಂದೆಲ್ಲ ಚಂದ್ರಿಕಾಳನ್ನು ಹಂಗಿಸಿದ್ದಾಳೆ. ಕೊನೆಗೆ ಭಾನುಮತಿ, ಚಂದ್ರಿಕಾಗೆ ಹಣ ಕೊಟ್ಟಿದ್ದಾಳೆ.

More from Filmibeat

English summary
Colors kannada serial Geetha Written Update on April 18th episode. Here is the details about shushila speak about her husband demanded money. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X