Geetha: ಗೀತಾ ಕೈಗೆ ಸಿಕ್ಕಿ ಬಿದ್ದ ವರುಣ್: ಚಂದ್ರಿಕಾ ಹಣವನ್ನು ‌ಕದ್ದ ಕಳ್ಳರು

By ಶೃತಿ ಹರೀಶ್ ಗೌಡ

ಗೀತಾ ಕೈಗೆ ವರುಣ್ ಸಿಕ್ಕಿ ಬಿದ್ದಿದ್ದಾನೆ. ಆದರೆ ಅವನು ಸಮರ್ಥನೆಯನ್ನು ಮಾಡಿಕೊಳ್ಳುತ್ತಿದ್ದಾನೆ. ವರುಣ್ ಫೇಕ್ ಅಪ್ಪ ಅಮ್ಮ ಇಸ್ತ್ರಿ ಅಂಗಡಿಯನ್ನು ಇಟ್ಟು ಕೊಂಡಿದ್ದು ತಳ್ಳು ಗಾಡಿಯನ್ನು ತಳ್ಳಿಕೊಂಡು ಬರುವ ವೇಳೆ ಗೀತಾ ಸೈಕಲ್ ಅನ್ನು ಅವರಿಗೆ ಗುದ್ದಿದ್ದಾಳೆ. ಈ ಸಂದರ್ಭದಲ್ಲಿ ಅವರಿಬ್ಬರೂ ಸಿಕ್ಕಿಬಿದ್ದಿದ್ದು ಅವರನ್ನು ವರುಣ್ ಮನೆಗೆ ಕರೆದುಕೊಂಡು ಬಂದು ಸತ್ಯ ಏನೆಂದು ಗೀತಾ ತಿಳಿದುಕೊಂಡಿದ್ದಾಳೆ.

ಇದೇ ಸಂದರ್ಭದಲ್ಲಿ ಗೀತಾ ಸತ್ಯವನ್ನು ತಿಳಿದುಕೊಂಡಾಗ ವರುಣ್ ನೀನು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಶೃತಿಗೆ ಫೋನ್ ಮಾಡಿ ಲಾಯರ್ ಕಳಿಸಿ ಬೇಲ್ ತೆಗೆದುಕೊಳ್ಳಲು ಹೇಳು ತಪ್ಪು ಯಾರು ಮಾಡಿದ್ದಾರೆ ಎಂದು ಶ್ರುತಿ ಹೇಳುತ್ತಾಳೆ ಎಂದು ಹೇಳಿದ್ದಾನೆ. ನೀನು ಖಡ್ಗವಾದರೆ ಖಡ್ಗದ ಹಿಂದೆ ಇರುವಂತಹ ಹಿಡಿಕೆ ನಾನು ನಿನ್ನ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ ಎಂದು ವರುಣ್ ವ್ಯಂಗ್ಯವಾಡಿದ್ದಾನೆ.

Colors kannada Geetha Written Update on April 19th episode

ಇನ್ನು ವಿಜಿಗೆ ಫೋನ್ ಮಾಡಿದಂತೆ ಮಾಡಿ ಮಾತನಾಡಿದ್ದಾನೆ. ನೀವು ಹೇಳಿದ್ದೇನು ನಿಮ್ಮ ಭಾವಿ ಪತ್ನಿ ಗೀತಾ ಬಂದು ಮದುವೆ ನಿಲ್ಲಿಸುವ ಮಾತನ್ನು ಆಡುತ್ತಿದ್ದಾರೆ ಎಂದು ನಾಟಕ ಮಾಡಿದ್ದಾನೆ. ಗೀತಾ ಫೋನ್ ಕೊಡು ನಾನು ಮಾತನಾಡುತ್ತೇನೆ ಎಂದಾಗ ನಾನು ಸುಮ್ಮನೆ ಜೋಕ್ ಮಾಡಿದೆ ಎಂದು ವರುಣ್ ಹೇಳಿದ್ದಾನೆ. ವಿಜಿ ನೀನು ಏನೇ ಹೇಳಿದರೂ ಸಹ ನಿನ್ನನ್ನು ನಂಬುವುದಿಲ್ಲ. ನಿನಗೆ ನಂಬಿಸುವ ಹುಚ್ಚು ಅವನಿಗೆ ನಂಬದೇ ಇರುವ ಹುಚ್ಚು ಎಂದು ವಿಜಿಯ ಬಗ್ಗೆ ಸಹ ಮಾತನಾಡಿದ್ದಾನೆ.

ಚಂದ್ರಿಕಾ ಬಳಿ ಇದ್ದ ಹಣ ಕಳವು

ಆಟೋದಲ್ಲಿ ಚಂದ್ರಿಕಾ ಬರುವ ವೇಳೆ ಆಕೆಯ ಗಮನವನ್ನು ಬೇರೆ ಕಡೆ ಸೆಳೆದು 5 ಲಕ್ಷ ಹಣವನ್ನು ಕಳ್ಳರು ಕದ್ದು ಹೋಗಿದ್ದಾರೆ. ಇನ್ನೇನು ಆಟೋ ಇಳಿಯಬೇಕು ಎಂದಾಗ ಅವಳ ಸೀರೆಗೆ ಏನೋ ಆಗಿದೆ ಅದನ್ನು ತೊಳೆದುಕೊಳ್ಳಿ ಎಂದು ಆಟೋ ಚಾಲಕ ಹೇಳಿದ್ದಾನೆ. ಚಂದ್ರಿಕಾ ಹಣದ ಬ್ಯಾಗನ್ನು ಆಟೋ ಒಳಗಡೆ ಇಟ್ಟು ಅದನ್ನು ತೊಳೆದುಕೊಳ್ಳುವ ವೇಳೆ ಅಲ್ಲಿಗೆ ಬಂದ ಕಳ್ಳರು ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಹಣವನ್ನು ಕಳೆದುಕೊಳ್ಳುವ ಚಂದ್ರಿಕಾ ಕಣ್ಣೀರು ಹಾಕಿದ್ದಾಳೆ. ನಾನು ತಂದ ಹಣವನ್ನು ಯಾರು ಕದ್ದರು ಎಂದು ಚಿಂತೆಗೀಡಾಗಿದ್ದಾಳೆ.‌ ಆದರೆ ಹಣವನ್ನು ಭಾನುಮತಿಯೇ ಕಳ್ಳತನ ಮಾಡಿಸಿದ್ದಾಳೆ ಇದು ಚಂದ್ರಿಕಾಗೆ ಗೊತ್ತಿಲ್ಲ.

ಹಣ ಕದ್ದಿದ್ದು ಭಾನುಮತಿ

ಸುಶೀಲಾ ಬಳಿ ಬಂದ ಚಂದ್ರಿಕಾ ಹಣ ಕಳೆದು ಹೋಯಿತು ಎಂದು ಹೇಳಿದ್ದಾಳೆ. ನನಗೆ ಯಾರಾದರೂ ಸಹಾಯ ಮಾಡಲು ಬಂದರೆ ಏನಾದರೂ ಒಂದು ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದಾಳೆ. ಇದೇ ವೇಳೆ ಭಾನುಮತಿ, ಚಂದ್ರಿಕಾಗೆ ಫೋನ್ ಮಾಡಿ ನಾನೇ ಹಣವನ್ನು ಕಳ್ಳತನ ಮಾಡಿಸಿದ್ದು ಎಂದಿದ್ದಾಳೆ. ನಿನಗೆ ಐದು ರೂಪಾಯಿ ಪಡೆಯುವ ಯೋಗ್ಯತೆ ಇಲ್ಲ, ಇನ್ನೂ ಐದು ಲಕ್ಷ ರೂಪಾಯಿ ಕೊಡಬೇಕಾ? ಎಂದು ಕೀಳಾಗಿ ಮಾತನಾಡಿದ್ದಾಳೆ. ನಿನ್ನ ಜೀವವನ್ನು ತೆಗೆಯುವುದು ಸಹ ನನ್ನ ಕೈಯಲ್ಲೇ ಇರುತ್ತದೆ ಎಂದು ಹೇಳಿದ್ದಾಳೆ.

Colors kannada Geetha Written Update on April 19th episode

ವರುಣ್ ಬಗ್ಗೆ ಗೀತಾಗೆ ಕೋಪ

ಮನೆಗೆ ಬಂದಿರುವ ಗೀತಾ, ಚಂದ್ರಿಕಾ ಹಾಗೂ ಸುಶೀಲಾ ಬಳಿ ಮಾತನಾಡುತ್ತಿದ್ದಾಳೆ. ಈಗಿನ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂದಿದ್ದಾಳೆ. ಇಬ್ಬರ ಬಳಿ ಹೀಗೆ ಹೇಳುವಾಗ ಸುಶೀಲಾ ಮತ್ತೆ ಏನು ಮಾಡಿಕೊಂಡು ಬಂದೆ, ಯಾರ ಬಳಿ ಜಗಳವಾಡಿದೆ ಎಂದು ಕೇಳಿದ್ದಾಳೆ. ಇದಕ್ಕೆ ಗೀತಾ, ವರುಣ್ ಒಬ್ಬ ಫ್ರಾಡ್. ಜೊತೆಯಲ್ಲಿ ಬಂದಿರುವ ಅವರ ಅಪ್ಪ ಅಮ್ಮ ಕೂಡ ಫೇಕ್ ಎಂದು ಹೇಳಿದ್ದಾಳೆ. ಗೀತಾ ಮಾತನ್ನು ಕೇಳುತ್ತಿರುವ ಚಂದ್ರಿಕಾ ಹಾಗೂ ಸುಶೀಲಾಗೆ ತುಂಬಾ ಶಾಕ್ ಆಗಿದೆ.

ತಂಗಿಗೆ ಬ್ಲಾಕ್‌ ಮೇಲ್ ಮಾಡಿದ ಸಿತಾರಾ

ನನ್ನ ತುಂಬಾ ದಿನ ಜೈಲಿನಲ್ಲಿ ಬಿಟ್ಟರೇ ಸೂರ್ಯಪ್ರಕಾಶ್ ಕೊಲೆ ಪ್ರಕರಣದಲ್ಲಿ ನಾನು ನೀನು, ನಿನ್ನ ಮಗಳು ಮೂವರು ಜೈಲಿನಲ್ಲಿ ಇರುವಂತೆ ಸತ್ಯವನ್ನು ಹೇಳುತ್ತೇನೆಂದು ಸಿತಾರಾ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ . ಇದನ್ನು ಕೇಳಿಸಿಕೊಂಡ ಮಾದೇಶ ಹಾಗೂ ಭಾನುಮತಿಗೆ ತುಂಬಾನೇ ಶಾಕ್ ಆಗಿದೆ.

More from Filmibeat

English summary
Colors kannada serial Geetha Written Update on April 19th episode.Here is the details about chandrika money robbery, geetha knows about varun fake mom and dad but no use. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X