Geetha: ಪೊಲೀಸರ ಕೈಗೆ ಸಿಕ್ಕಿ ಬಿದ್ದ ವರುಣ್: ಶ್ರುತಿ ಈಗ ನಿರಾಳ
ವರುಣ್, ಶ್ರುತಿಗೆ ಬ್ಲಾಕ್ ಮೇಲ್ ಮಾಡಬೇಕು ಎಂದು ವಿಡಿಯೋವನ್ನು ನಾನು ಈಗ ಪ್ಲೇ ಮಾಡುತ್ತೇನೆ ಎಂದು ಹೇಳಿದ್ದಾನೆ. ಅಷ್ಟರಲ್ಲಿ ಪೊಲೀಸರು ವಿಜಿ ಮನೆಗೆ ಎಂಟ್ರಿ ಕೊಟ್ಟು ವರುಣ್‌ನ ನಿಜ ಸ್ವರೂಪವನ್ನು ಬಯಲು ಮಾಡಿದ್ದಾರೆ. ಯಾವ ಕಾರಣಕ್ಕೆ ವರುಣನನ್ನು ಎಳೆದುಕೊಂಡು ಹೋಗುತ್ತಿದ್ದಾರೆ ಎಂಬುದು ಮನೆಯವರೆಲ್ಲ ಗೊಂದಲವಾಗಿದೆ. ಒಟ್ಟಿನಲ್ಲಿ ಎಲ್ಲಾ ಶಾಕ್ ಆಗಿದ್ದಾರೆ.
ಇದೇ ವೇಳೆ ಪೊಲೀಸರೇ ಇವನು ದೊಡ್ಡ ಫ್ರಾಡ್ ಅವರ ಅಮ್ಮ-ಅಪ್ಪ ಎನಿಸಿಕೊಂಡ ಇವರಿಬ್ಬರು ನಾಗರಬಾವಿಯಲ್ಲಿ ಇಸ್ತ್ರಿ ಅಂಗಡಿಯನ್ನ ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ ಎಂದು ಮನೆಯವರಿಗೆಲ್ಲರಿಗೂ ಶಾಕ್ ಆಗುವ ರೀತಿಯಲ್ಲಿ ಹೇಳಿದ್ದಾರೆ. ಇದೆಲ್ಲವನ್ನು ಕೇಳುತ್ತಿರುವ ಭಾನುಮತಿಗೆ ಶಾಕ್ ಆಗಿದೆ. ವರುಣ್ ಕೆಲಸ ಶ್ರೀಮಂತರ ಮಕ್ಕಳಿಗೆ ಬ್ಲಾಕ್ ಮೇಲ್ ಮಾಡುವುದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ವೇಳೆ ವರುಣ್ ಈ ಮನೆಯಲ್ಲೇ ನನಗಿಂತ ದೊಡ್ಡ ಫ್ರಾಡ್‌ಗಳು ಇದ್ದಾರೆ ಎಂದಿದ್ದಾನೆ. ಪೊಲೀಸರು ವರುಣ್ ಕಪಾಳಕ್ಕೆ ಹೊಡೆದು ಅಲ್ಲಿಂದ ಅವನನ್ನು ಹಾಗೂ ಫೇಕ್ ಅಪ್ಪ-ಅಮ್ಮನನ್ನು ಎಳೆದುಕೊಂಡು ಹೋಗಿದ್ದಾರೆ.
ಗೀತಾ ಬಳಿ ಕ್ಷಮೆ ಕೇಳಿದ ವಿಜಿ
ವಿಜಿ, ಗೀತಾ ಬಳಿ ಕ್ಷಮೆ ಕೇಳಿದ್ದಾನೆ. ನನ್ನ ತಂಗಿಯ ಬದುಕನ್ನು ಉಳಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾನೆ. ನಿನ್ನ ಹಾಗೂ ಅಮ್ಮನನ್ನು ತಪ್ಪು ತಿಳಿದುಕೊಂಡು ನಾನು ದುಡಿಕಿಬಿಟ್ಟೆ ಈ ರೀತಿ ನಾನು ನಿಮಗೆ ಹರ್ಟ್ ಮಾಡಬಾರದಿತ್ತು ಎಂದು ಗಿಲ್ಟಿ ಫೀಲ್ ಅಲ್ಲಿ ವಿಜಿ ಹೇಳಿದ್ದಾನೆ. ಇಬ್ಬರಿಂದಲೂ ಸಹ ನಾನು ಪ್ರಾಮಿಸ್ ಮಾಡಿಸಿಕೊಂಡೆ ನೀನು ಸತ್ಯವನ್ನು ಹೇಳಲಾಗದೆ ಅದೆಷ್ಟೋ ಒದ್ದಾಡಿ ಬಿಟ್ಟಿದ್ದೀಯ ಎಂದು ಹೇಳಿದ್ದಾನೆ. ಇದಕ್ಕೆ ಗೀತಾ ನಿನಗೆ ಇನ್ನಷ್ಟು ಸರ್ಪ್ರೈಸ್ ಕಾದಿವೆ, ಎಲ್ಲದಕ್ಕೂ ಸಿದ್ಧವಾಗು ಎಂದಿದ್ದಾಳೆ.
ಚಂದ್ರಿಕಾಗೆ ಥ್ಯಾಂಕ್ಸ್ ಹೇಳಿದ ಗೀತಾ
ಗೀತಾ, ವಿಜಿ ಮನೆಯಿಂದ ಬಂದು ಚಂದ್ರಿಕಾಗೆ ಥ್ಯಾಂಕ್ಸ್ ಹೇಳುತ್ತಿದ್ದಾಳೆ. ಅಮ್ಮ ನೀವು ಇಲ್ಲದಿದ್ದರೆ ನಾನು ಏನನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹೇಗೂ ಫೋನ್ ಮಾಡಿ ಅವರೆಲ್ಲರ ಮುಂದೆ ಅವನು ಫ್ರಾಡ್ ಎಂದು ತಿಳಿಯುವ ಹಾಗೆ ಮಾಡಿದ್ದೀರಿ ಎಂದು ಹೇಳಿದ್ದಾಳೆ. ಭಾನುಮತಿಯ ಬಗ್ಗೆ ಮಾತನಾಡಿ ಅವಳ ಕೊಬ್ಬು ಸ್ವಲ್ಪವೂ ಕರಗಿಲ್ಲ ಮಗಳ ಜೀವನ ಹೀಗಾಗಿದೆ ಎಂದು ಅವಳೇನು ಯೋಚನೆ ಮಾಡುತ್ತಿಲ್ಲ ಎಂದು ಹೇಳಿದ್ದಾಳೆ.

ಧೈರ್ಯ ಹೇಳಿದ ಚಂದ್ರಿಕಾ
ಇದಕ್ಕೆ ಚಂದ್ರಿಕಾ ನೀನು ಆ ಮನೆಯ ಸೊಸೆಯಾದರೆ ಅವಳ ಅಹಂಕಾರವನ್ನ ಕರಗಿಸಬಹುದು ಎಂದು ಗೀತಾಗೆ ಹೇಳಿದ್ದಾಳೆ. ನಮಗೆ ಇಷ್ಟು ಅನಿಸುತ್ತಿರುವಾಗ ಸುಧಾರಾಣಿ ಅತ್ತೆಗೆ ಹೇಗೆ ಆಗಿರಬೇಡ ಅವಳು ಯಾವ ರೀತಿಯಲ್ಲಿ ಕಾಟ ಕೊಡುತ್ತಿರಬಹುದು ಎಂದು ಗೀತಾ, ಚಂದ್ರಿಕಾ ಬಳಿ ಹೇಳಿದ್ದಾಳೆ, ಇದಕ್ಕೆ ಚಂದ್ರಿಕಾ ಸಹ ವಿಜಿ ಇದ್ದಾನೆ ಎಂದು ಧೈರ್ಯವನ್ನು ಹೇಳಿದ್ದಾಳೆ.
ಭಾನುಮತಿಗೆ ಸೆಡ್ಡು ಹೊಡೆಯಲು ಪ್ಲ್ಯಾನ್
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ನಿರ್ಧಾರ ಮಾಡಿರುವ ಸುಧಾರಾಣಿ, ಭಾನುಮತಿಗೆ ಸೆಡ್ಡು ಹೊಡೆಯಲು ಪ್ಲ್ಯಾನ್ ಮಾಡಿದ್ದಾಳೆ. ವಿಜಿಯ ಮುಂದೆ ನಾನು ಭಾನುಮತಿಯ ಪರವಾಗಿ ನಿಂತು ಅವಳಿಗೆ ಒಳ್ಳೆಯದು ಬಯಸುತ್ತೇನೆ ಎಂದು ಹೇಳಿದ್ದಾಳೆ. ನನಗೂ ಸಾಕಾಗಿ ಹೋಗಿದೆ ಎಂದು ಸುಧಾರಾಣಿ ಹೇಳಿದ್ದು ವಿಜಯ್‌ಗೆ ತುಂಬಾ ಖುಷಿಯಾಗಿದೆ. ನಾನು ಸಹ ನಿಮಗೆ ಬೇಕಾದ ಸಹಾಯವನ್ನು ಮಾಡುತ್ತೇನೆ ಎಂದು ವಿಜಿ, ಸುಧಾರಾಣಿಗೆ ಹೇಳಿದ್ದಾನೆ.


Click it and Unblock the Notifications











