Geetha: ಗೀತಾಳನ್ನು ಮರ್ಡರ್ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ ಭಾನುಮತಿ
ವಿಜಿ ಫೋನ್ ಮಾಡಿದ್ದಾನೆ ಎಂದು ಗೀತಾ ಗಡಿಬಿಡಿಯಲ್ಲಿ ಹೊರಟಿದ್ದಾಳೆ. ಸುಶೀಲಾ ಕಾಫಿ ಕುಡಿದು ಹೋಗು ಎಂದರು ಸಹ ಬೇಡ ಅಮ್ಮ ಲೇಟ್ ಆಗಿದೆ ವಿಜಿ ಬೈಯ್ಯುತ್ತಾನೆ ಎಂದು ಬೇಸರವನ್ನು ವ್ಯಕ್ತಪಡಿಸಿ ಅಲ್ಲಿಂದ ಹೊರಟಿದ್ದಾಳೆ. ಇದೇ ವೇಳೆ ಗೀತಾ ಕಾಲಿಗೆ ಟೇಬಲ್ ತಾಕಿದೆ ಮನೆಯವರು ಗಾಬರಿಯಾಗಿದ್ದಾರೆ. ಚಂದ್ರಿಕಾ, ಗೀತಾಳನ್ನು ಕುಳಿತುಕೊಂಡು ನೀರು ಕುಡಿದು ಹೋಗು ಎಂದು ಹೇಳಿದ್ದಾಳೆ. ಆದರೆ ಗೀತಾ ಮಾತ್ರ ಯಾರ ಮಾತನ್ನು ಕೇಳದೆ ಹೊರಟ್ಟಿದ್ದಾಳೆ.
ಗೀತಾ ಹೊರಟಿದ್ದು ನೋಡಿದ ಸುಶೀಲ ಹಾಗೂ ಚಂದ್ರಿಕಾ ಇಬ್ಬರಿಗೂ ಸಹ ಬೇಸರವಾಗಿದೆ ಏನಾದರೂ ಅಪಶಕುನ ನಡೆದರೆ ಏನು ಗತಿ ಎಂದು ಇಬ್ಬರೂ ಸಹ ಯೋಚನೆ ಮಾಡುತ್ತಿದ್ದಾರೆ. ಈ ಕಡೆ ಸುಶೀಲನ ಗಂಡ ಶ್ರೀನಿವಾಸ್ ಫೋನ್ ಮಾಡಿ ನನಗೆ ಐದು ಲಕ್ಷ ಹಣ ಬೇಕು ಎಂದು ಕೇಳಿದ್ದೆ ಅದನ್ನು ನೀನು ಹೊಂದಿಸಿದ್ದೀಯಾ ಎಂದು ಕೇಳಿದ್ದಾನೆ. ಇದಕ್ಕೆ ಸುಶೀಲಾ ಇಲ್ಲ ಎಂದು ಹೇಳಿದ್ದಾಳೆ. ನಿನಗೆ ಗಂಡನಿಗಿಂತ ಹಣವೇ ಹೆಚ್ಚಾಯ್ತು ಎಂದು ಫೋನ್ ಇಟ್ಟಿದ್ದಾನೆ.

ವಿಜಿ ಕೈಗೆ ಸಿಕ್ಕಿದ ಮೊಬೈಲ್
ಈ ಕಡೆ ಶೃತಿ ದೋಸೆ ತಿನ್ನದೇ ವರುಣ್ ರೆಕಾರ್ಡ್ ಮಾಡಿದ ವಿಡಿಯೋ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ. ಅಮ್ಮ ಏನು ಬರವಣಿಗೆ ಪೊಲೀಸರ ಕೈಯಲ್ಲಿ ಸರಿಯಾಗಿ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ ವರುಣ್ ಮೊಬೈಲ್ ಸಿಕ್ಕರೆ ನಾವು ಕೊಲೆ ಮಾಡಿರುವ ವಿಚಾರ ಹೊರಗಡೆ ಬರುತ್ತದೆ ಎಂದು ಗಾಬರಿಯಾಗಿದ್ದಾಳೆ. ಮನೆ ಕೆಲಸದವಳ ಕೈಗೆ ವರುಣ್ ಮೊಬೈಲ್ ಸಿಕ್ಕಿದೆ, ಅಲ್ಲಿಗೆ ಬಂದ ವಿಜಿ ಕೈಗೆ ಮನೆ ಕೆಲಸದವಳು ಮೊಬೈಲ್‌ನ್ನು ನೀಡಿದ್ದಾಳೆ. ಚಾರ್ಜ್ ಇಲ್ಲದ್ದರಿಂದ ವಿಜಿ ತೆಗೆದುಕೊಂಡು ಹೋಗಿ ಚಾರ್ಜ್‌ಗೆ ಹಾಕಿದ್ದಾನೆ. ಮೊಬೈಲ್‌ನಲ್ಲಿ ಇರುವ ಸತ್ಯ ವಿಜಿಗೆ ತಿಳಿಯುತ್ತಾ ನೋಡಬೇಕಿದೆ.
ವಿಜಿ - ಗೀತಾ ಮಧ್ಯೆ ಸುಧಾರಾಣಿ ಪ್ರವೇಶ
ವಿಜಿ ಹಾಗೂ ಗೀತಾ ಮಧ್ಯೆ ಸುಧಾರಾಣಿ ಪ್ರವೇಶ ಮಾಡಿದ್ದಾಳೆ. ಗೀತಾಗೆ ವಿಜಿ ನಾವಿಬ್ಬರು ಶ್ರುತಿ ಮದುವೆಯಾದ ಮೇಲೆ ಮದುವೆಯಾಗೋಣ ಎಂದು ಹೇಳಿದ್ದಾನೆ. ಇದಕ್ಕೆ ಗೀತಾ ಕೂಡ ತನ್ನ ಒಪ್ಪಿಗೆಯನ್ನ ಸೂಚಿಸಲು ಹಿಂದೆ ಮುಂದೆ ನೋಡಿದಾಗ ವಿಜಿ ನೋಡು ನಿನ್ನ ಮುಖದಲ್ಲಿ ಬದಲಾವಣೆ ಕಾಣುತ್ತಿದೆ ಎಂದು ಹೇಳಿದ್ದಾನೆ.
ಗೀತಾ ವಿಜಿಗೆ ನಾನು ಈ ಮನೆಗೆ ಒಳ್ಳೆಯದನ್ನು ಬಯಸುತ್ತೇನೆ. ನಿನ್ನ ಮಾತಿನಂತೆ ಆಗಲಿ ಇದಕ್ಕೆ ಪ್ರಾಮಿಸ್ ಮಾಡಬೇಕಾ ಎಂದು ಕೇಳಿದ್ದಾಳೆ. ಇದಕ್ಕೆ ವಿಜಿ ನನ್ನ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀಯ ನೋಡು ಎಂದು ಹೇಳಿದ್ದಾನೆ. ಇನ್ನು ಅಲ್ಲಿಗೆ ಬಂದ ಸುಧಾರಾಣಿ ಮಧ್ಯ ಪ್ರವೇಶಿಸಿ ಗೀತಾ ನಿಲ್ಲಿಸು ಎಂದು ಹೇಳಿ ವಿಜಿಗೆ ಬೈದಿದ್ದಾಳೆ. ನಂತರ ಗೀತಾಳನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದಾಳೆ.

ಗೀತಾ ಕೊಲ್ಲಲು ಮಾಸ್ಟರ್ ಪ್ಲಾನ್
ಭಾನುಮತಿ, ಗೀತಾಳನ್ನು ಕೊಲ್ಲಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾಳೆ. ಇದಕ್ಕಾಗಿ ವಿಜಿಯ ಮುಂದೆ ಬಂದು ಮರಳಾಗುವ ಮಾತುಗಳನ್ನ ಆಡಿದ್ದಾಳೆ. ವಿಜಿ ಯಾಕೋ ಮನಸೇ ಸರಿ ಇಲ್ಲ ಮನೆಯವರೆಲ್ಲರೂ ಸೇರಿ ಹೊರಗೆ ಹೋಗೋಣ ಎಂದಿದ್ದಾಳೆ. ನಾನು ಹೇಳಿದೆ ಎಂದು ಯಾರ ಬಳಿಯೂ ಹೇಳಬೇಡ ಯಾಕೆಂದರೆ ಸುಧಾರಾಣಿ ಅಕ್ಕ ಬರೋದಿಲ್ಲ ಎಂದು ಪೀಠಿಕೆ ಹಾಕಿದ್ದಾಳೆ.
ಇದೇ ವೇಳೆ ವಿಜಿ ಬೆಣ್ಣೆಯ ಮಾತುಗಳಿಗೆ ಕರಗಿ ಹೋಗಿದ್ದಾನೆ ಮನೆಯವರೆಲ್ಲರನ್ನು ಸಹ ಹೊರಗೆ ಕರೆದುಕೊಂಡು ಬಂದಿದ್ದಾನೆ. ಭಾನುಮತಿ ಹಾಗೂ ಮಾದೇಶ ಒಂದು ಕಡೆ ಇದ್ದರೆ ಗೀತಾ, ಶ್ರುತಿ, ವಿಜಿ ಇನ್ನೊಂದು ಕಡೆ ಹೋಗುತ್ತಿದ್ದಾರೆ. ಅಲ್ಲಿ ರೌಡಿಗಳು ವಿಜಿ ಹಾಗೂ ಗೀತಾಗಾಗಿ ಕಾಯುತ್ತಿದ್ದಾರೆ. ಹೇಗಾದರೂ ಮಾಡಿ ಗೀತಾಳನ್ನ ಕೊಲ್ಲಬೇಕು ಎಂದು ಭಾನುಮತಿ ಪ್ಲ್ಯಾನ್ ಮಾಡಿದ್ದಾಳೆ.


Click it and Unblock the Notifications











