Geetha: ಭಾನುಮತಿ ಮಾಡಿದ ಪ್ಲ್ಯಾನ್ ಆಕೆಗೆ ತಿರುಮಂತ್ರ ಆಯ್ತು
ಗೀತಾಳನ್ನು ಕೊಲ್ಲಲು ಭಾನುಮತಿ ಇನ್ನಿಲ್ಲದ ಸರ್ಕಸ್‌ನ್ನು ಮಾಡುತ್ತಿದ್ದಾಳೆ. ಇದಕ್ಕಾಗಿ ನಾನಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಇದಕ್ಕೆ ಮಾದೇಶ ಸಹ ಸಾಥ್ ಕೊಡುತ್ತಿದ್ದಾನೆ. ಏನೇನೋ ಪ್ಲ್ಯಾನ್ ಮಾಡುತ್ತಾ ಇದ್ದಾಳೆ. ಇದ್ಯಾವುದು ವರ್ಕ್ ಆಗುವುದಿಲ್ಲ ಎಂದು ಅವಳಿಗೆ ಮಾತ್ರ ಗೊತ್ತಾಗುತ್ತಿಲ್ಲ. ಮನೆಯವರೆಲ್ಲರೂ ಸೇರಿಕೊಂಡು ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಮತ್ತೆ ಗೀತಾಳನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ.
ಗಾರ್ಡನ್‌ಗೆ ಬಂದಿರುವ ಮನೆಯವರು ಮ್ಯೂಸಿಕಲ್ ಚೇರ್ ಮುಂತಾದ ಆಟಗಳನ್ನು ಆಡುತ್ತಿದ್ದಾರೆ. ಇದೆಲ್ಲದರಲ್ಲೂ ಸಹ ಗೀತಾಳೆ ಗೆಲುವನ್ನು ಸಾಧಿಸಿದ್ದಾಳೆ. ಗೀತಾ ಗೆಲುವನ್ನು ಭಾನುಮತಿ ಹಾಗೂ ಮಾದೇಶ ಬಿಟ್ಟು ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಭಾನುಮತಿಗೆ ಸುಧಾರಾಣಿ ಟಾಂಗ್ ನೀಡುತ್ತಿದ್ದಾಳೆ, ಇದು ಭಾನುಮತಿಗೆ ಅರ್ಥವಾಗುತ್ತಿದ್ದರು ಸಹ ಸುಮ್ಮನೆ ನಿಂತಿದ್ದಾಳೆ.

ಶ್ರುತಿ ಸುಮ್ಮನೆ ಇದ್ದಾಳೆ ಎಂದು ಹೇಳುವ ಮೂಲಕ ಮಾದೇಶ ಎಲ್ಲರ ಗಮನವನ್ನು ಆ ಕಡೆ ಹೋಗುವಂತೆ ಮಾಡಿದ್ದಾನೆ. ಇದಕ್ಕೆ ಸೈಕಲ್ ರೇಸ್ ಮಾಡೋಣ ಎಂದಿದ್ದಕ್ಕೆ ಎಲ್ಲರೂ ಒಕೆ ಅಂದಿದ್ದಾರೆ.

ಉಲ್ಟಾ ಹೊಡೆದ ಭಾನುಮತಿಯ ಪ್ಲ್ಯಾನ್
ಸೈಕಲ್ ರೇಸ್‌ನಲ್ಲಿ ಗೀತಾಗೆ ಅಪಘಾತ ಮಾಡಿಸಲು ಭಾನುಮತಿ ಪ್ಲ್ಯಾನ್ ಮಾಡಿದ್ದಾಳೆ. ಇದಕ್ಕಾಗಿ ರೌಡಿಗಳಿಗೂ ಸಹ ಹೇಳಿದ್ದಾಳೆ. ಮುಂದೆ ಬರುವ ಹುಡುಗಿಯನ್ನು ಸಣ್ಣದಾಗಿ ಆಕ್ಸಿಡೆಂಟ್ ಮಾಡಿಸಬೇಕು ಎಂದು ಹೇಳಿದ್ದಾಳೆ. ಮೊದಮೊದಲು ಗೀತಾಳೇ ಸೈಕಲ್ ರೇಸ್‌ನಲ್ಲಿ ಮುಂದೆ ಬಂದಿದ್ದಾಳೆ. ಇದರಿಂದ ಭಾನುಮತಿ ಸಂತೋಷವಾಗಿದ್ದಾಳೆ.
ನಂತರ ರೇಸ್‌ನಲ್ಲಿ ಶ್ರುತಿಯೇ ಮೊದಲು ಬರಲು ಪ್ರಾರಂಭಿಸಿದ್ದಾಳೆ. ಇದನ್ನು ನೋಡಿದ ಭಾನುಮತಿ ರೌಡಿಗಳಿಗೆ ಫೋನ್ ಮಾಡಿ ಏನು ಮಾಡಬೇಡಿ ಎಂದು ಹೇಳಲು ಪ್ರಯತ್ನಿಸಿದ್ದಾಳೆ. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಏಕೆಂದರೆ ಭಾನುಮತಿಯ ಕರೆಯನ್ನು ರೌಡಿಗಳು ಸ್ವೀಕರಿಸಲಿಲ್ಲ. ಕೊನೆಗೆ ಶೃತಿಗೆ ರೌಡಿಗಳು ಆಕ್ಸಿಡೆಂಟ್ ಮಾಡಿಯೇ ಬಿಟ್ಟಿದ್ದಾರೆ.
ಆಕ್ಸಿಡೆಂಟ್ ನೋಡಿ ಗಾಬರಿ
ಆಕ್ಸಿಡೆಂಟ್ ಆಗಿದ್ದನ್ನು ನೋಡಿದ ಮನೆಯವರೆಲ್ಲರೂ ಸಹ ಗಾಬರಿ ಆಗಿದ್ದಾರೆ. ಶೃತಿಗೆ ಏನಾಯಿತೋ ಏನೋ ಎಂದು ವಿಜಿ, ಶೃತಿ ಬಳಿ ಓಡಿ ಹೋಗಿದ್ದಾನೆ. ಶೃತಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆಯಿಂದ ಶ್ರುತಿಯನ್ನು ಮನೆಗೆ ಕರೆದುಕೊಂಡು ಬರಲಾಗಿದೆ. ಶ್ರುತಿಯ ಕಾಲು ಮುರಿದಿದೆ.
ಭಾನುಮತಿಗೆ ತಾನು ಮಾಡಿದ ಪ್ಲ್ಯಾನ್ ತನ್ನ ಮಗಳ ಪ್ರಾಣಕ್ಕೆ ಸಂಚಕಾರ ತಂದಿದೆ ಎಂದು ಬೇಸರವಾಗಿದೆ. ಮಾದೇಶ ನಾವು ನೋಡಿದ ಗುಂಡಿಗೆ ನಾವೇ ಬಿದ್ದುಬಿಟ್ವಿ ಎಂದು ಭಾನುಮತಿಯ ಬಳಿ ಹೇಳುತ್ತಿದ್ದಾನೆ. ಇದಕ್ಕೆ ಭಾನುಮತಿ ಹೇಗೋ ಸ್ವಲ್ಪದಲ್ಲೇ ಶೃತಿ ಪಾರಾದಳು ಎಂದು ಹೇಳಿದ್ದಾಳೆ.
ಕಂಟಕದ ಬಗ್ಗೆ ಸುಧಾರಣೆಗೆ ಭಯ
ಗುರುಗಳು ಹೇಳಿದ ಮೂರು ಕಂಟಕದ ಬಗ್ಗೆ ಸುಧಾರಾಣಿಗೆ ಭಯವಾಗಿದೆ, ಇದನ್ನು ವಿಜಿ ಬಳಿ ಹೇಳುತ್ತಿದ್ದಾಳೆ. ಮೂರನೇ ಕಂಟಕ ಏನಾಗುತ್ತದೆ ಎಂದು ಹೇಳುತ್ತಿದ್ದಾಳೆ. ಏನಾದರೂ ಪೂಜೆ ಮಾಡಿಸೋಣ ಎಂದು ಹೇಳುತ್ತಿದ್ದಾಳೆ. ಈಗ ಎರಡು ಕಂಟಕಗಳು ಶ್ರುತಿಗೆ ಎದುರಾಗಿ ಪರಿಹಾರವಾಗಿದೆ. ಮೂರನೇ ಕಂಟಕದ ಬಗ್ಗೆ ಮನೆಯಲ್ಲಿ ಭಯ ಶುರುವಾಗಿದೆ.
ಗೀತಾಗೆ ಏನಾಗುತ್ತದೆ ಏನೋ ಎಂದು ಚಂದ್ರಿಕಾ ತಳಮಳ ಪಡುತ್ತಿದ್ದಾಳೆ. ಗೀತಾ ಸೇಫಾಗಿ ಮನೆಗೆ ಬರಲಿ ಎಂದು ದೇವರ ಬಳಿ ಹೋಗಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾಳೆ. ಇದಕ್ಕೆ ಗಾದೆ ಹೇಳೋದು ಕರುಳು ಸಂಬಂಧವನ್ನು ಅರಿಯುತ್ತದೆ ಎಂದು, ಎಂದು ತನ್ನಲ್ಲೇ ಮಾತನಾಡಿಕೊಂಡಿದ್ದಾಳೆ. ಗೀತಾ ಹುಷಾರಾಗಿ ಮನೆಗೆ ಬರಲಿ ಎಂದು ಸುಶೀಲಾ ಸಹ ಬೇಡಿಕೊಂಡಿದ್ದಾಳೆ.


Click it and Unblock the Notifications











